ಕಾಮಗಾರಿ ಪಡೆಯಲು ಆಯುಕ್ತರ ಸಹಿ ನಕಲಿ ಮಾಡಿದ ಕಾಂಟ್ರಕ್ಟರ್ ವಿರುದ್ಧ ಠಾಣೆಗೆ ದೂರು
Team Udayavani, May 27, 2020, 5:01 PM IST
ಗಂಗಾವತಿ: ಜಲಸಂಪನ್ಮೂಲ ಇಲಾಖೆಯ ಕಾಲುವೆ ದುರಸ್ತಿ ಕಾಮಗಾರಿ ಟೆಂಡರ್ ಪಡೆಯಲು ನಗರಸಭೆಯ ಪೌರಾಯುಕ್ತರ ಸಹಿಯನ್ನು ಪೋರ್ಜರಿ ಮಾಡಿ ದೃಢೀಕರಣ ಪ್ರಮಾಣ ಪತ್ರ ಸೃಷ್ಟಿಸಿದ ಕಾಂಟ್ರಕ್ಟರ್ ವಿರುದ್ಧ ಪೊಲೀಸ ಠಾಣೆಗೆ ದೂರು ನೀಡಲಾಗಿದೆ.
ಸಿಂಧನೂರು ಜಲಸಂಪನ್ಮೂಲ ಇಲಾಖೆಯ ಟಿಎಲ್ ಬಿಸಿ ಕಾಲುವೆಯ ದುರಸ್ತಿ ಕಾಮಗಾರಿ ಪಡೆಯಲು ಕಾಂಟ್ರಕ್ಟರ್ ಎಂ.ಹನುಮಂತಯ್ಯ ಪೌರಾಯುಕ್ತರ ಸಹಿಯನ್ನು ಪೋರ್ಜರಿ ಮಾಡಿ ದೃಢೀಕರಣ ಪ್ರಮಾಣ ಪತ್ರವನ್ನು ಜಲಸಂಪನ್ಮೂಲ ಇಲಾಖೆಗೆ ಸಲ್ಲಿಸಿದ್ದರು ಇದರ ಸತ್ಯಾಸತ್ಯತೆ ಕುರಿತು ನಗರಸಭೆಯ ಪೌರಾಯುಕ್ತರಿಗೆ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಕಾಂಟ್ರಕ್ಟರ್ ಸಲ್ಲಿಸಿದ ದಾಖಲೆ ಸಮೇತ ಪತ್ರ ಬರೆದಿದ್ದರಿಂದ ಸತ್ಯ ಹೊರಬಿದ್ದಿದೆ. ಸಹಿಯನ್ನು ಗಮನಿಸಿ ತಬ್ಬಿಬಾದ ಪೌರಾಯುಕ್ತರು ಸಹಿ ಪೋರ್ಜರಿ ಆಗಿದೆ. ಪೋರ್ಜರಿ ಮಾಡಿದ ಎಂ.ಹನುಮಂತಯ್ಯ ಹಾಗೂ ಇದಕ್ಕೆ ಸಹಕರಿಸಿದ ನಗರಸಭೆಯ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಪೌರಾಯುಕ್ತ ಕೆ.ಸಿ.ಗಂಗಾಧರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.