

Team Udayavani, Jun 20, 2024, 6:51 PM IST
ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ, ಕನ್ನಡಿಗ ವೇಗಿ ಡೇವಿಡ್ ಜಾನ್ಸನ್ (52) ಅಪಾರ್ಟ್ಮೆಂಟ್ ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕೊತ್ತನೂರು ಬಳಿ ಸಂಭವಿಸಿದೆ.
ಡೇವಿಡ್ ಜಾನ್ಸನ್ 1996ರಲ್ಲಿ ಭಾರತ ಪರವಾಗಿ ಟೆಸ್ಟ್ ಪಂದ್ಯ ಆಡಿದ್ದರು. ಕೆಪಿಎಲ್ ನಲ್ಲಿ ಬೆಳಗಾವಿ ಪ್ಯಾಂಥರ್ಸ್ ಪರವಾಗಿ ಆಟವಾಡಿದ್ದರು. ಕಳೆದ ಕೆಲ ಸಮಯದಿಂದ ಅನಾರೋಗ್ಯದಿಂದ ಬಳುತ್ತಿದ್ದ ಡೇವಿಡ್ ಜಾನ್ಸನ್ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳೀಯ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
“ ಬೆಳಗ್ಗೆ ಮಹಡಿಗೆ ಹೋಗಲೇಬೇಕೆಂದು ತೆರಳಿದ್ದ ಜಾನ್ಸನ್ ಮೇಲೆ ನಿಗಾವಹಿಸಲು ಕಾವಲುಗಾರನಿಗೆ ಜಾನ್ಸನ್ ಪತ್ನಿ ಸೂಚಿಸಿದ್ದರು. ಕಳೆದ ವಾರವಷ್ಟೇ ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಂದಿದ್ದರು. ಸರಿಯಾಗಿ ನಡೆಯಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ದೈಹಿಕವಾಗಿಯೂ ಸಾಕಷ್ಟು ಬಳಲಿದ್ದರು. ನಿಜವಾಗಿ ಏನಾಗಿದೆ ಎಂಬುದು ನಮಗೆ ಗೊತ್ತಿಲ್ಲ ಎಂದು ಜಾನ್ಸನ್ ಆಪ್ತ ಸ್ನೇಹಿತ ತಿಳಿಸಿದ್ದಾರೆ.
Ad
Kasaragod: ಸಾರ್ವತ್ರಿಕ ಮುಷ್ಕರ: ಬಸ್ ಕೊರತೆ
ಕೆಂಪುಕಲ್ಲು, ಮರಳು ಸಮಸ್ಯೆ: ಜು.14ರಂದು ಬಿಜೆಪಿಯಿಂದ 8 ಕ್ಷೇತ್ರಗಳಲ್ಲಿ ಪ್ರತಿಭಟನೆ
Uppinangady; ವಾಹನ ಅಪಘಾತ ಪ್ರಕರಣ; ಗಾಯಗೊಂಡಿದ್ದ ವ್ಯಕ್ತಿ ಸಾವು
ಭಾರತ-ಪಾಕ್ ಯುದ್ಧ ನಿಲ್ಸಿದ್ದು ಟ್ರಂಪ್: ಅಮೆರಿಕ ವಿದೇಶಾಂಗ ಸಚಿವ
Nobel Peace Prize: ಶಾಂತಿ ಪ್ರಶಸ್ತಿಗೆ ಟ್ರಂಪ್ ಆಯ್ಕೆ ಶತಮಾನದ ವಿಚಿತ್ರ: ಕಾಂಗ್ರೆಸ್
You seem to have an Ad Blocker on.
To continue reading, please turn it off or whitelist Udayavani.