Health: ಆರೋಗ್ಯಯುತ ಪಿತ್ತಕೋಶಕ್ಕೆ ಆರೋಗ್ಯಕರ ಜೀವನ ಶೈಲಿ..ಪಿತ್ತಕೋಶದ ಸಾಮಾನ್ಯ ಕಾಯಿಲೆ

ಆರೋಗ್ಯಯುತ ಜೀವನಶೈಲಿಗಾಗಿ ಕೆಲವು ಸಲಹೆಗಳು

Team Udayavani, May 31, 2023, 6:29 PM IST

Health: ಆರೋಗ್ಯಯುತ ಪಿತ್ತಕೋಶಕ್ಕೆ ಆರೋಗ್ಯಕರ ಜೀವನ ಶೈಲಿ..ಪಿತ್ತಕೋಶದ ಸಾಮಾನ್ಯ ಕಾಯಿಲೆ

ಮನುಷ್ಯ ದೇಹದ ಅತಿ ದೊಡ್ಡ ಘನ ಅಂಗ ಪಿತ್ತಕೋಶ. ಅದು ಸುಮಾರು 1.5 ಕಿ.ಗ್ರಾಂ ತೂಗುತ್ತದೆ. ಅದು ದೇಹದ ಜೀವಧಾರಕ ಅಂಗಗಳಲ್ಲಿ ಒಂದಾಗಿದ್ದು, ಮನುಷ್ಯ ದೇಹ ವ್ಯವಸ್ಥೆ ನಡೆಯುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಪಿತ್ತಕೋಶದ ಕಾರ್ಯಚಟುವಟಿಕೆಗಳನ್ನು ಹಲವು ವಿಧವಾಗಿ ವರ್ಗೀಕರಿಸಲಾಗಿದೆ. ಸ್ರಾವಕ (ಕೊಬ್ಬಿನ ಪಚನಕ್ಕೆ ಅಗತ್ಯವಾದ ಪಿತ್ತದ್ರವ ಅಥವಾ ಬೈಲ್‌ ಸ್ರವಿಸುವುದು), ಸಿಂಥೆಟಿಕ್‌ (ಅಲುಮಿನ್‌, ಹೆಪ್ಪುಗಟ್ಟಿಸುವ ಅಂಶಗಳು), ಚಯಾಪಚಯ (ಕೊಬ್ಬು, ಪ್ರೊಟೀನ್‌ ಮತ್ತು ಕಾಬೊìಹೈಡ್ರೇಟ್‌ ಚಯಾಪಚಯ), ಎಕ್ಸ್‌ಕ್ರೇಟರಿ (ಬಿಲಿರುಬಿನ್‌), ರೋಗ ಪ್ರತಿರೋಧಕ (ಕರುಳಿನ ಮೂಲಕ ಉಂಟಾಗುವ ಸೋಂಕು/ ವಿಷಕಾರಕಗಳು) ಮತ್ತು ದಾಸ್ತಾನು (ವಿಟಮಿನ್‌ ಎ) – ಇವು ಪಿತ್ತಕೋಶದ ಪ್ರಧಾನಕ ಕಾರ್ಯಗಳು.

ಪಿತ್ತಕೋಶವನ್ನು ಆರೋಗ್ಯಯುತವಾಗಿ ಕಾಪಾಡಿಕೊಳ್ಳಲು ಸಲಹೆಗಳು ಪಿತ್ತಕೋಶವನ್ನು ಆರೋಗ್ಯಪೂರ್ಣವಾಗಿ ಕಾಪಾಡಿಕೊಳ್ಳುವುದು ಉತ್ತಮ ಆರೋಗ್ಯದ ರಹಸ್ಯವಾಗಿದೆ. ಪಿತ್ತಕೋಶವನ್ನು ಆರೋಗ್ಯಪೂರ್ಣವಾಗಿ ಇರಿಸಿಕೊಳ್ಳಲು ಆರೋಗ್ಯಯುತ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದು ಅಗತ್ಯ. ಪಿತ್ತಕೋಶವನ್ನು ಆರೋಗ್ಯವಾಗಿ ಇರಿಸಿಕೊಳ್ಳುವುದಕ್ಕಾಗಿ ಆರೋಗ್ಯಯುತ ಜೀವನಶೈಲಿಗಾಗಿ ಕೆಲವು ಸಲಹೆಗಳು ಇಲ್ಲಿವೆ.

1. ಆರೋಗ್ಯಪೂರ್ಣ ದೇಹತೂಕವನ್ನು ಕಾಪಾಡಿಕೊಳ್ಳಿ
ಆರೋಗ್ಯಪೂರ್ಣ ಆಹಾರ, ನಿಯಮಿತ ವ್ಯಾಯಾಮ ಮತ್ತು ಅನವಶ್ಯಕ ಔಷಧ, ಪೂರಕ ಆಹಾರ ಸೇವನೆಯನ್ನು ವರ್ಜಿಸುವ ಮೂಲಕ ಬಿಎಂಐ (ಬಾಡಿ ಮಾಸ್‌ ಇಂಡೆಕ್ಸ್‌) ಯನ್ನು 18-25ರ ನಡುವೆ ಕಾಪಾಡಿಕೊಳ್ಳಿ.

2. ಸಮತೋಲಿನ ಆಹಾರ ಸೇವಿಸಿ
ಹೆಚ್ಚು ಕ್ಯಾಲೊರಿ ಇರುವ ಆಹಾರ, ಸಂಸ್ಕರಿತ ಕಾಬೊìಹೈಡ್ರೇಟ್‌ (ಬಿಳಿ ಬ್ರೆಡ್‌) ಮತ್ತು ಸಕ್ಕರೆಗಳನ್ನು ವರ್ಜಿಸಿ. ಸಂಸ್ಕರಿತ ಮತ್ತು ಜಂಕ್‌ ಆಹಾರಗಳನ್ನು ಅತಿಯಾಗಿ ಸೇವಿಸಬೇಡಿ. ಉಪ್ಪು ಮತ್ತು ಕೊಬ್ಬಿನ ಸೇವನೆಯನ್ನು ಕಡಿಮೆ ಮಾಡಿ. ನೈಸರ್ಗಿಕ ಆಹಾರಗಳು, ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಹೆಚ್ಚು ಸೇವಿಸಿ.

3. ನಿಯಮಿತ ವ್ಯಾಯಾಮ
ಬಿರುಸಾದ ನಡಿಗೆ, ಸೈಕಲ್‌ ಸವಾರಿ, ಈಜು ಅಥವಾ ಹೊರಾಂಗಣ ಆಟಗಳಲ್ಲಿ ನಿಯಮಿತವಾಗಿ ತೊಡಗಿಕೊಳ್ಳುವುದರಿಂದ ಪಿತ್ತಕೋಶದಲ್ಲಿ ಕೊಬ್ಬು ಸಂಗ್ರಹವಾಗುವುದನ್ನು ತಡೆಯಬಹುದು. ದಿನಕ್ಕೆ 20-30 ನಿಮಿಷಗಳ ಕಾಲ ವಾರಕ್ಕೆ ಐದು ದಿನ ದೈಹಿಕ ಚಟುವಟಿಕೆಗಳಲ್ಲಿ ತೊಡಗುವುದು ಆರೋಗ್ಯಯುತ ದೇಹತೂಕ ಕಾಪಾಡಿಕೊಳ್ಳುವುದಕ್ಕೆ ಅಗತ್ಯ.

4. ಮದ್ಯಪಾನವನ್ನು ವರ್ಜಿಸಿ
ಪಿತ್ತಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಮದ್ಯಪಾನವನ್ನು ವರ್ಜಿಸಿ. ಧೂಮಪಾನವೂ ಪಿತ್ತಕೋಶ ಕಾಯಿಲೆಗಳ ಸಹಿತ ಅನೇಕ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸಬಹುದಾದ್ದರಿಂದ ಅದನ್ನೂ ನಿಲ್ಲಿಸಿ.

5. ಮಾದಕವಸ್ತು/ ವಿಷಕಾರಿಗಳನ್ನು ದೂರ ಇರಿಸಿ
ಮಾದಕ ದ್ರವ್ಯಗಳು ಸೋಂಕುಗಳಿಗೆ ಕಾರಣವಾಗುವ ಮೂಲಕ ಪಿತ್ತಕೋಶಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಹಾನಿ ಉಂಟು ಮಾಡಬಹುದಾದ್ದರಿಂದ ಅವುಗಳನ್ನು ದೂರ ಇರಿಸಿ. ಅನವಶ್ಯವಾಗಿ ಔಷಧಗಳು, ಹೆಲ್ತ್‌ ಸಪ್ಲಿಮೆಂಟ್‌ಗಳು, ಡಿ ಟಾಕ್ಸಿಫ‌ಯಿಂಗ್‌ ಏಜೆಂಟ್‌ಗಳ ಉಪಯೋಗವನ್ನು ದೂರ ಇರಿಸಿ; ಇವು ಪಿತ್ತಕೋಶಕ್ಕೆ ಗಂಭೀರ ಹಾನಿ ಉಂಟು ಮಾಡಬಹುದಾಗಿವೆ.

6. ಲಸಿಕೆ ಹಾಕಿಸಿಕೊಳ್ಳಿ
ಹೆಪಟೈಟಿಸ್‌ ಬಿ ವಿರುದ್ಧ ಲಸಿಕೆ ಹಾಕಿಸಿಕೊಳ್ಳಿ. ರೇಜರ್‌ಗಳು, ಹಲ್ಲುಜ್ಜುವ ಬ್ರಶ್‌ಗಳಂತಹ ವೈಯಕ್ತಿಕ ನೈರ್ಮಲ್ಯ ಸಾಧನಗಳನ್ನು ಇತರರ ಜತೆಗೆ ಹಂಚಿಕೊಳ್ಳದಿರಿ. ಸುರಕ್ಷಿತ ಲೈಂಗಿಕ ಜೀವನವನ್ನು ನಡೆಸಿ, ರಕ್ತ ಅಥವಾ ರಕ್ತ ಉತ್ಪನ್ನಗಳಿಗೆ ತೆರೆದುಕೊಂಡರೆ ವೈದ್ಯಕೀಯ ನೆರವು ಪಡೆಯಿರಿ.ನಿಮ್ಮ ಪಿತ್ತಕೋಶ ಸಹಿತ ಎಲ್ಲ ಅಂಗಾಂಗಗಳು ಆರೋಗ್ಯಪೂರ್ಣವಾಗಿದ್ದು, ಆರೋಗ್ಯಯುತ ಜೀವನ ನಡೆಸುವುದು ನಿಮ್ಮ ಗುರಿಯಾಗಿದ್ದರೆ ಮೇಲೆ ಹೇಳಿರುವ ಸಲಹೆಗಳನ್ನು ಪಾಲಿಸಿ ಸಮಸ್ಯೆಗಳಿಂದ ದೂರವುಳಿಯಿರಿ.

ಪಿತ್ತಕೋಶ ಕಾಯಿಲೆಗಳ ಚಿಹ್ನೆಗಳು
ಹಠಾತ್‌ ಪಿತ್ತಕೋಶ ಕಾಯಿಲೆಯ ಸಾಮಾನ್ಯ ಚಿಹ್ನೆಯೆಂದರೆ, ಜಾಂಡಿಸ್‌ ಅಥವಾ ಅರಸಿನ ಕಾಮಾಲೆ. ದೀರ್ಘ‌ಕಾಲಿಕ ಪಿತ್ತಕೋಶ ಕಾಯಿಲೆಗಳಲ್ಲಿ ಸಾಮಾನ್ಯವಾಗಿ ಯಾವುದೇ ಚಿಹ್ನೆಗಳು ಕಂಡುಬರದೆ ಅವು ರೂಢಿಗತ ಆರೋಗ್ಯ ತಪಾಸಣೆಯ ವೇಳೆ ಪತ್ತೆಯಾಗುತ್ತವೆ. ಆದರೆ ಮುಂದುವರಿದ ಹಂತಗಳಲ್ಲಿ ಕಾಲು-ಪಾದಗಳು ಊದಿಕೊಳ್ಳುವುದು, ಹೊಟ್ಟೆ ಊದಿಕೊಳ್ಳುವುದು, ಹೆಮಾಟೆಮೆಸಿಸ್‌ ಮತ್ತು ಸೆನ್ಸೋರಿಯಂ ಬದಲಾವಣೆಯಂತಹ ಚಿಹ್ನೆಗಳು ಸಾಮಾನ್ಯವಾಗಿರುತ್ತವೆ.

ಪಿತ್ತಕೋಶದ ಕಾಯಿಲೆಗಳನ್ನು ಪತ್ತೆ ಹಚ್ಚಲು ಪರೀಕ್ಷೆಗಳು
ಪಿತ್ತಕೋಶದ ಕಾಯಿಲೆಗಳನ್ನು ಪತ್ತೆ ಮಾಡಲು ಸಾಮಾನ್ಯ ಪರೀಕ್ಷೆಗಳೆಂದರೆ ರಕ್ತ ಪರೀಕ್ಷೆಗಳು (ಪಿತ್ತಕೋಶದ ಕಾರ್ಯಚಟುವಟಿಕೆ ತಪಾಸಣೆಗೆ), ಪಿತ್ತಕೋಶದ ಇಮೇಜಿಂಗ್‌ (ಹೊಟ್ಟೆಯ ಅಲ್ಟ್ರಾಸೌಂಡ್‌, ಸಿಟಿ ಸ್ಕ್ಯಾನಿಂಗ್‌). ಈ ಪರೀಕ್ಷೆಗಳಿಂದ ಪಿತ್ತಕೋಶದ ಕಾಯಿಲೆಗಳು ಇರುವುದು ಗೊತ್ತಾದರೆ ಕಾರಣಗಳನ್ನು ಮತ್ತು ಖಚಿತ ಸ್ಥಿತಿಯನ್ನು ತಿಳಿದುಕೊಳ್ಳಲು ಇನ್ನಷ್ಟು ಪರೀಕ್ಷೆಗಳು ಅಗತ್ಯವಾಗುತ್ತವೆ.

ಚಿಕಿತ್ಸೆ
ಹಠಾತ್‌ ಪಿತ್ತಕೋಶ ಕಾಯಿಲೆಗಳು ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲದೆ ತಾವಾಗಿಯೇ ಗುಣ ಹೊಂದುತ್ತವೆ. ಆದರೆ ಕೆಲವು ಪ್ರಕರಣಗಳಲ್ಲಿ ಅವು ಪಿತ್ತಕೋಶದ ಹಠಾತ್‌ ವೈಫ‌ಲ್ಯಕ್ಕೆ ದಾರಿ ಮಾಡಿಕೊಟ್ಟು ಆಸ್ಪತ್ರೆ ವಾಸ, ಪೂರಕ ಚಿಕಿತ್ಸೆ ಮತ್ತು ಅಪರೂಪಕ್ಕೆ ಪಿತ್ತಕೋಶದ ಕಸಿಯನ್ನು ಅಗತ್ಯವಾಗಿಸಬಹುದು. ದೀರ್ಘ‌ಕಾಲಿಕ ಪಿತ್ತಕೋಶ ಕಾಯಿಲೆಗಳಲ್ಲಿ, ಕಾಯಿಲೆಯ ಹಂತವನ್ನು ಆಧರಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ಪ್ರಾಥಮಿಕ ಹಂತಗಳಲ್ಲಿ (ಪೂರಕ ಪಿತ್ತಕೋಶ ಕಾಯಿಲೆ/ ಸಿರೋಸಿಸ್‌) ಪಿತ್ತಕೋಶ ಕಾಯಿಲೆಯನ್ನು ಶಮನಿಸುವುದು ಚಿಕಿತ್ಸೆಯ ಗುರಿಯಾಗಿರುತ್ತದೆ. ಮುಂದುವರಿದ ಹಂತಗಳಲ್ಲಿ ಶಮನಕಾರಿ ಚಿಕಿತ್ಸೆಯ ಜತೆಗೆ ಪೂರಕ ಚಿಕಿತ್ಸೆ, ಅಪರೂಪದ ಪ್ರಕರಣಗಳಲ್ಲಿ ಕಸಿ ಅಗತ್ಯವಾಗಿರುತ್ತದೆ.

ಪಿತ್ತಕೋಶದ ಸಾಮಾನ್ಯ ಕಾಯಿಲೆಗಳು
ಹೆಪಟೈಟಿಸ್‌ (ಪಿತ್ತಕೋಶದ ಉರಿಯೂತ) ಪಿತ್ತಕೋಶದ ಉರಿಯೂತವು ದೀರ್ಘ‌ಕಾಲಿಕವಾಗಿರಬಹುದು ಅಥವಾ ಹಠಾತ್‌ ಉಂಟಾಗಬಹುದು.
ಎ. ಹಠಾತ್‌ ಉರಿಯೂತ- ಇದು ಉಂಟಾಗುವುದಕ್ಕೆ ಸಂಭಾವ್ಯ ಕಾರಣ
1. ವೈರಸ್‌ಗಳು (ಎ, ಇ, ಬಿಯಂತಹ ಹೆಪೆಟ್ರೊಟ್ರೋಪಿಕ್‌ ವೈರಸ್‌ಗಳು)
2. ವಿಷಕಾರಿಗಳು – ಮದ್ಯ, ಔಷಧಗಳು
ಬಿ. ದೀರ್ಘ‌ಕಾಲಿಕ ಹೆಪಟೈಟಿಸ್‌ – ಮದ್ಯಪಾನ, ಹೆಪಟೈಟಿಸ್‌ ಬಿ ಮತ್ತು ಸಿ, ಔಷಧಗಳು, ಫ್ಯಾಟಿ ಲಿವರ್‌
3. ಪಿತ್ತರಸ ಹರಿವಿಗೆ ತಡೆ – ಪಿತ್ತಕೋಶದ ಕಲ್ಲಿನಂತಹ ಕಾಯಿಲೆಗಳು. ಪಿತ್ತರಸ ಹರಿಯುವ ಜಾಲದಲ್ಲಿ ಹಾನಿ
4. ಪಿತ್ತಕೋಶದ ಹಾನಿಕಾರಕ ಬೆಳವಣಿಗೆ ಕಾಯಿಲೆಗಳು – ಹೆಪಟೊಸೆಲ್ಯುಲಾರ್‌ ಕಾರ್ಸಿನೊಮಾ, ಮೆಟಾಸ್ಟೇಸಿಸ್‌
5. ಪಿತ್ತಕೋಶದ ದ್ವಿತೀಯಕ ಒಳಗೊಳ್ಳುವಿಕೆಯನ್ನು ಹೊಂದಿರುವ ದೈಹಿಕ ವ್ಯವಸ್ಥೆಯ ಕಾಯಿಲೆಗಳು

ಡಾ| ಗಣೇಶ್‌ ಭಟ್‌,
ಅಡಿಶನಲ್‌ ಪ್ರೊಫೆಸರ್‌
ಗ್ಯಾಸ್ಟ್ರೊಎಂಟರಾಲಜಿ ವಿಭಾಗ
ಕೆಎಂಸಿ, ಮಣಿಪಾಲ.

ಟಾಪ್ ನ್ಯೂಸ್

gtd

JDS ಎನ್ ಡಿಎ ಮೈತ್ರಿಕೂಟ ಸೇರ್ಪಡೆಯಿಂದ ಎರಡೂ ಪಕ್ಷಗಳಿಗೂ ಶಕ್ತಿ: ಜಿಟಿಡಿ

supreem

Indian Army ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುವುದು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ICC World Cup ವಿಜೇತರಿಗೆ ಬಹುದೊಡ್ಡ ಮೊತ್ತ ನೀಡಲಿದೆ ಐಸಿಸಿ; ಇಲ್ಲಿದೆ ಬಹುಮಾನದ ವಿವರ

ICC World Cup ವಿಜೇತರಿಗೆ ಬಹುದೊಡ್ಡ ಮೊತ್ತ ನೀಡಲಿದೆ ಐಸಿಸಿ; ಇಲ್ಲಿದೆ ಬಹುಮಾನದ ವಿವರ

rape

B’luru; ವಿವಾಹವಾಗುವುದಾಗಿ ಮತಾಂತರಕ್ಕೆ ಕಿರುಕುಳ: ಕಾಶ್ಮೀರದ ಯುವಕನ ಬಂಧನ

police crime

Delhi; 40 ಕೋಟಿ ರೂ. ಮೌಲ್ಯದ ಅಫೀಮು ಸಹಿತ ಮೂವರ ಬಂಧನ

1-asdsad

Mangaluru; ಸಿಸಿಬಿ ಕಾರ್ಯಾಚರಣೆ: ಮಾದಕ ವಸ್ತು ಸಹಿತ ಇಬ್ಬರು ಅರೆಸ್ಟ್

prahlad-joshi

Cauvery ವಿಚಾರದಲ್ಲಿ ಕೇಂದ್ರ ಮಧ್ಯಸ್ಥಿಕೆ ವಹಿಸೋ ಪ್ರಶ್ನೆ ಬರುವುದಿಲ್ಲ: ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hepatitis a

Hepatitis A; ಮಕ್ಕಳಲ್ಲಿ ಹೆಚ್ಚುತ್ತಿವೆ ಹೆಪಟೈಟಿಸ್ ಎ ಪ್ರಕರಣಗಳು: ತಡೆಗಟ್ಟುವ ವಿಧಾನವೇನು?

1-sadasdsa

Heart; ಹೆಚ್ಚುತ್ತಿವೆಯೇ ಹೃದಯಾಘಾತಗಳು?: ವೈಜ್ಞಾನಿಕ ಸಮೀಕ್ಷೆ ಕೈಗೊಳ್ಳುವ ಅಗತ್ಯ

6-health

Auditory Neuropathy: ಶಿಶುಗಳಲ್ಲಿ ಆಡಿಟರಿ ನ್ಯುರೋಪತಿ ಸ್ಪೆಕ್ಟ್ರಮ್‌ ತೊಂದರೆಗಳು

5-dengue-fever

Dengue Fever: ಲಕ್ಷಣಗಳು ಮತ್ತು ಮುನ್ನೆಚ್ಚರಿಕೆಗಳು

4-health

Suicide prevention: ಆತ್ಮಹತ್ಯೆ ತಡೆ

MUST WATCH

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

udayavani youtube

69 ಕೆಜಿ ಚಿನ್ನ 336 ಕೆಜಿ ಬೆಳ್ಳಿ ಇದು ಮುಂಬೈನ ಶ್ರೀಮಂತ ಗಣಪತಿ|

udayavani youtube

ಕಾರಂತರ ಹೋಟೆಲ್ ಊಟ ಬೇಕಾದ್ರೆ ಫೋನ್ ಮಾಡಿ ಹೇಳಬೇಕು!

ಹೊಸ ಸೇರ್ಪಡೆ

gtd

JDS ಎನ್ ಡಿಎ ಮೈತ್ರಿಕೂಟ ಸೇರ್ಪಡೆಯಿಂದ ಎರಡೂ ಪಕ್ಷಗಳಿಗೂ ಶಕ್ತಿ: ಜಿಟಿಡಿ

supreem

Indian Army ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುವುದು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ICC World Cup ವಿಜೇತರಿಗೆ ಬಹುದೊಡ್ಡ ಮೊತ್ತ ನೀಡಲಿದೆ ಐಸಿಸಿ; ಇಲ್ಲಿದೆ ಬಹುಮಾನದ ವಿವರ

ICC World Cup ವಿಜೇತರಿಗೆ ಬಹುದೊಡ್ಡ ಮೊತ್ತ ನೀಡಲಿದೆ ಐಸಿಸಿ; ಇಲ್ಲಿದೆ ಬಹುಮಾನದ ವಿವರ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಗ್ರಾಮವಿದು ಜಲ್ಲಿಗುಡ್ಡೆ!

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಗ್ರಾಮವಿದು ಜಲ್ಲಿಗುಡ್ಡೆ!

rape

B’luru; ವಿವಾಹವಾಗುವುದಾಗಿ ಮತಾಂತರಕ್ಕೆ ಕಿರುಕುಳ: ಕಾಶ್ಮೀರದ ಯುವಕನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.