ಸಾರ್ವಜನಿಕ ಗಣೇಶೋತ್ಸವ ನಿಷೇಧ ಎಷ್ಟು ಸರಿ?


Team Udayavani, Aug 29, 2021, 6:40 AM IST

ಸಾರ್ವಜನಿಕ ಗಣೇಶೋತ್ಸವ ನಿಷೇಧ ಎಷ್ಟು ಸರಿ?

ರಾಜ್ಯ ಸರಕಾರವು ಕೊರೊನಾ ಮಹಾಮಾರಿಯ 3ನೇ ಅಲೆಯ ಭೀತಿಯ ಕಾರಣವನ್ನು ನೀಡಿ, ಸಾರ್ವಜನಿಕ ಗಣೇಶೋತ್ಸವದ ಆಚರಣೆಯ ಮೇಲೆ ಕೊನೆಯ ಕ್ಷಣದಲ್ಲಿ ರಾಜ್ಯಾದ್ಯಂತ ನಿಷೇಧವನ್ನು ಹಾಕಿದೆ. ಇದರ ವಿರುದ್ಧ ಅನೇಕ ಗಣೇಶೋತ್ಸವ ಮಂಡಳಿಗಳು, ಹಿಂದೂ ನಾಯಕರು ಮತ್ತು ಸ್ವತಃ ಆಡಳಿತ ಪಕ್ಷದ ಶಾಸಕರು ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಸರಕಾರವು ಉತ್ಸವದ ಮೇಲೆ ನಿಷೇಧ ಹಾಕಿದರೂ ಸಹ ನಾವು ಗಣೇಶನ ಹಬ್ಬವನ್ನು ಮಾಡಿಯೇ ಸಿದ್ಧ ಎಂದು ಶ್ರೀರಾಮ ಸೇನೆಯ ಪ್ರಮೋದ್‌ ಮುತಾಲಿಕ್‌ ಇವರು ಪಣ ತೊಟ್ಟಿದ್ದಾರೆ. ತದನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಎಚ್ಚೆತ್ತು ಈ ಬಗ್ಗೆ ಕ್ಯಾಬಿನೆಟ್‌ ಸಭೆಯಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುವು ದಾಗಿ ತಿಳಿಸಿದ್ದಾರೆ. ಕಳೆದ ವರ್ಷವೂ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರಕಾರವು ಏಕಾಏಕಿ ಉತ್ಸವ ವನ್ನು ನಿಷೇಧ ಮಾಡಿ, ವಿರೋಧದ ಅನಂತರ ಆದೇಶವನ್ನು ವಾಪಸು ಪಡೆದಿತ್ತು.

ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿಯ ಕಾರಣದಿಂದ ನಿರಂತರ ಲಾಕ್‌ಡೌನ್‌ ಆಗಿದ್ದು ಈಗ ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಸರಕಾರವು ಸಹ ಸಮಾಜ ಸಹಜ ಸ್ಥಿತಿಗೆ ಬರಬೇಕು ಮತ್ತು ಜನರಲ್ಲಿ ಭಯ ದೂರವಾಗಬೇಕು ಹಾಗೂ ಆರ್ಥಿಕತೆ ಚೇತರಿಕೆಯಾ ಗಬೇಕು ಎಂದು ಕೈಗಾರಿಕೆ, ಉದ್ಯಮ, ಮಾರುಕಟ್ಟೆ, ಸಂತೆ, ಬಸ್‌ ಪ್ರಯಾಣ, ಮೆಟ್ರೋ, ಮಾಲ್‌, ಹೊಟೇಲ್‌, ಕಲ್ಯಾಣ ಮಂಟಪ, ಮದುವೆ ಹೀಗೆ ಎಲ್ಲದರ ಮೇಲಿನ ನಿಷೇಧವನ್ನು ಶೇ.100 ತೆಗೆದು ಹಾಕಿದೆ. ರಾಜ್ಯದಲ್ಲಿ ಸಹ ಕೊರೊನಾ ಅಲೆಯು ಇಳಿಮುಖವಾಗಿದೆ.

ಹೀಗಿರುವಾಗ ಕೇವಲ ಗಣೇಶೋತ್ಸವದ ಆಚರಣೆಯ ಮೇಲೆ ನಿಷೇಧ ಹಾಕುವುದು ಎಷ್ಟು ಸರಿ? ಅದರಲ್ಲಿಯೂ ಮಾಲ್‌, ಮೆಟ್ರೋ ಇವು ಹವಾನಿಯಂತ್ರಿತವಾಗಿದ್ದು, ಕೊರೊನಾ ಸೋಂಕು ಬೇಗನೆ ಹರಡುತ್ತದೆ ಮತ್ತು ಇಲ್ಲಿ ಜನಜಂಗುಳಿ ಇದ್ದರೂ ಸಹ ತೆರೆಯಲಾಗಿದೆ. ಆದರೆ ಸಾರ್ವಜನಿಕ ಗಣೇಶೋತ್ಸವ ತೆರೆದ ಜಾಗದಲ್ಲಿ ಇರುತ್ತದೆ ಮತ್ತು ಜನ ಸಂದ ಣಿಯ ಪ್ರಮಾಣವು ಸಹ ಕಡಿಮೆ ಇರುತ್ತದೆ. ಗಣೇಶೋತ್ಸವ ಮಂಡಳಿಯಲ್ಲಿ ಸಾಮಾ ಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸೇಶನ್‌ ಮಾಡು ವುದು ಎಲ್ಲವೂ ಸಾಧ್ಯವಾ ಗುತ್ತದೆ. ಹಾಗಾಗಿ ಗಣೇಶೋತ್ಸವ ದಿಂದ ಕೊರೊನಾ ಹರಡುತ್ತದೆ ಎಂಬ ಸರಕಾರದ ನಿಲುವು ಅವೈಜ್ಞಾನಿಕವಾಗಿದೆ.

ಸಾರ್ವಜನಿಕ ಗಣೇಶೋತ್ಸವಕ್ಕೆ 128 ವರ್ಷಗಳ ಇತಿಹಾಸವಿದೆ ಮತ್ತು ರಾಷ್ಟ್ರದ ಅತೀದೊಡ್ಡ ಹಬ್ಬವಾಗಿದೆ. ಇದರ ತಯಾರಿ ಸರಿ ಸುಮಾರು 9 ತಿಂಗಳುಗಳಿಂದ ಮೂರ್ತಿ ಕಾರರಿಂದ ಪ್ರಾರಂಭವಾಗುತ್ತದೆ. ಇಡೀ ರಾಜ್ಯದಲ್ಲಿ ಹಳ್ಳಿಯಲ್ಲಿ ಆಚರಣೆ ಮಾಡುವ ಚಿಕ್ಕ ಪುಟ್ಟ ಮಂಡಳಿಗಳು ಸೇರಿ, ಸರಿಸುಮಾರು ಒಂದು ಲಕ್ಷಕ್ಕೂ ಅಧಿಕ ಗಣೇಶೋತ್ಸವ ಮಂಡಳಿಗಳು ಇವೆ. ಪ್ರತೀ ವರ್ಷ 100 ಕೋಟಿ ರೂ.ಗೂ ಅಧಿಕ ಆರ್ಥಿಕ ವಹಿವಾಟು ಗಣೇಶೋತ್ಸವ ಸಮಯದಲ್ಲಿ ನಡೆಯುತ್ತದೆ. ಮೂರ್ತಿ ಕಾರರು, ಹೂವು ಬೆಳೆಗಾರರು, ಪೆಂಡಾಲ್‌ನವರು ಸೇರಿ ಸಾವಿರಾರು ಕುಟುಂಬಗಳ ಜೀವನ ಉತ್ಸವಗಳ ಮೇಲೆ ಅವಲಂಬನೆಯಾಗಿದೆ. ರಾಜ್ಯ ಸರಕಾರ ಪ್ರಾರಂಭದಿಂದ ಕಣ್ಣುಮುಚ್ಚಿ ಕುಳಿತು, ಕೊನೆಯ ಕ್ಷಣದಲ್ಲಿ ಮಂಡಳಿ, ಹಿಂದೂ ಮುಖಂಡರ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಾಏಕಿ ಉತ್ಸವವನ್ನು ನಿಷೇಧ ಮಾಡುವ ನಿರ್ಧಾರ ತೆಗೆದುಕೊಳ್ಳುವುದು ಎಷ್ಟು ಸರಿ? ಇದರಿಂದ ಉತ್ಸವದ ಮೇಲೆ ಅವಲಂಬಿತ ಸಾವಿರಾರು ಕುಟುಂಬದ ಆರ್ಥಿಕ ನಿರ್ವಹಣೆ ಏನು ಪರಿಣಾಮ ಬೀರಬಹುದು ಎಂಬುದು ಸರಕಾರಕ್ಕೆ ಗಮನ ಇದೆಯಾ? ಮಹಾರಾಷ್ಟ್ರ ಮತ್ತು ತೆಲಂಗಾಣ ಸರಕಾರಗಳು ಇಂತಹ ದುಷ್ಪರಿಣಾಮ ಗಮನದಲ್ಲಿರಿಸಿಕೊಂಡು ಸರಿಸುಮಾರು 6 ತಿಂಗಳ ಮೊದಲೇ ದೂರದೃಷ್ಟಿಯಿಂದ ಪೂರ್ವಬಾವಿಯಾಗಿ ಗಣೇಶೋತ್ಸವ ಸಂದರ್ಭದಲ್ಲಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿ, ಗಣೇಶೋತ್ಸವ ಆಚರಣೆ ಮಾಡಲು ನಿಯಮಗಳ ಪಾಲನೆ ಯೊಂದಿಗೆ ಅವಕಾಶ ಮಾಡಿ ಕೊಟ್ಟಿದೆ. ಹೀಗಿರುವಾಗ ರಾಜ್ಯ ಸರಕಾರ ಕಳೆದ ವರ್ಷದ ತಪ್ಪಿನಿಂದ ಕಲಿಯದೇ, ಏಕಾ ಏಕಿ ಗಣೇಶನ ಹಬ್ಬದ ಮೇಲೆ ನಿಷೇಧ ಹೇರುವುದು ಸಂವಿ ಧಾನವು ಹಿಂದೂಗಳಿಗೆ ನೀಡಿದ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಮಾಡಿದ ಆಘಾತವಲ್ಲವೇ?

ಆಧ್ಯಾತ್ಮಿಕ ಶಕ್ತಿಯ ಬಲ
ಆಧ್ಯಾತ್ಮಿಕ ದೃಷ್ಟಿಯಿಂದ ಅಭ್ಯಾಸ ಮಾಡಿದರೆ, ಭಾದ್ರಪದ ಶುಕ್ಲ ಚತುರ್ಥಿಯ ದಿನ ಪೃಥ್ವಿಯ ಮೇಲೆ ಸಾವಿರ ಪಟ್ಟು ಅಧಿಕ ಆನಂದಮಯ ಮತ್ತು ಉತ್ಸಹ ವರ್ಧಕ ಗಣೇಶ ಲಹರಿಗಳು, ತಣ್ತೀಗಳು (ವೈಬ್ರೇಶನ್‌) ಪೃಥ್ವಿಯ ಮೇಲೆ ಬರುತ್ತದೆ. ಮಣ್ಣಿನ ಮೂರ್ತಿಯಲ್ಲಿ ಈ ಲಹರಿಗಳನ್ನು ಸಂಗ್ರಹಿಸಿ, ಅದನ್ನು ಭಾವಿಕರು ಪೂಜೆ ಮಾಡುವುದರಿಂದ ಸಕಾರಾತ್ಮಕ ಶಕ್ತಿ, ದೈವೀ ಚೈತನ್ಯ, ಆಧ್ಯಾತ್ಮಿಕ ಶಕ್ತಿಯು ಪ್ರಾಪ್ತವಾಗುವುದು. ಈ ಆಧ್ಯಾತ್ಮಿಕ ಶಕ್ತಿಯಿಂದ ಕಳೆದ 2 ವರ್ಷ ಕೊರೊನಾ ಮಹಾಮಾರಿ ಯಿಂದ ನಮ್ಮವರನ್ನು ಕಳೆದುಕೊಂಡು ಚಿಂತೆ, ಭಯ, ನಿರಾಶೆಯಿಂದ ಕೂಡಿದ ಸಮಾಜಕ್ಕೆ ಹೊಸ ಚೈತನ್ಯ, ಉತ್ಸಾಹ, ಪ್ರೇರಣೆ ಸಹ ಸಿಗುವುದು. ಈ ಉತ್ಸಾಹದಿಂದ ಜನರಲ್ಲಿ ಕೊರೊನಾ ಮಹಾಮಾರಿಯ ವಿರುದ್ದ ಹೋರಾಡಲು ಆಧ್ಯಾತ್ಮಿಕ ಶಕ್ತಿಯು ಪ್ರಾಪ್ತವಾಗುವುದು. ಅದರಿಂದ ಜನಸಾಮಾನ್ಯರ ಜೀವನ ಇನ್ನೂ ಸಹಜ ಸ್ಥಿತಿಗೆ ಬರಲು ಸಹಾಯವಾಗಬಲ್ಲದು.

ಹಿಂದೂ ಸಮಾಜವನ್ನು ಸಂಘಟಿಸುವ, ಸ್ವಾಂತ್ರಂತ್ರ್ಯ ಹೋರಾಟಗಾರರಾದ ಲೋಕಮಾನ್ಯ ಬಾಲಗಂಗಾಧರ ತಿಲಕ್‌ ಅವರು 128 ವರ್ಷಗಳ ಹಿಂದೆ ಪ್ರಾರಂಭಿಸಿದ ಗಣೇಶೋತ್ಸವದ ಪರಂಪರೆಯ ಮೇಲೆ ನಿಷೇಧ ಹೇರುವುದು ತಿಲಕರಿಗೆ ಮಾಡಿದ ಅವಮಾನವಲ್ಲವೇ? ಕಳೆದ ಎರಡು ವರ್ಷಗ ಳ ಕೊರೊನಾ ಮಹಾಮಾರಿಯಿಂದ ಜನರಲ್ಲಿ ಆರೋಗ್ಯದ ಬಗ್ಗೆ ಸಾಕಷ್ಟು ಜಾಗೃತಿ, ಜವಾಬ್ದಾರಿ, ಅರಿವು ಮೂಡಿದೆ. ಅಷ್ಟೇ ಅಲ್ಲದೇ ಸಾಕಷ್ಟು ಪ್ರಮಾಣದಲ್ಲಿ ವ್ಯಾಕ್ಸಿನೇಶನ್‌ ಸಹ ಆಗಿರುವಾಗ ರಾಜ್ಯ ಸರಕಾರ ಗಣೇಶೋತ್ಸವದ ಮೇಲೆ ನಿಷೇಧ ಹೇರುವುದು ಎಷ್ಟು ಸರಿ? ಈಗಲಾದರೂ ರಾಜ್ಯ ಸರಕಾರ ಎಚ್ಚೆತ್ತುಕೊಂಡು ಹಿಂದೂಗಳ ಸರ್ವಶ್ರೇಷ್ಠ ಧಾರ್ಮಿಕ ಉತ್ಸವದ ಮೇಲೆ ನಿಷೇಧವನ್ನು ಹಿಂದೆಗೆಯಬೇಕು ಮತ್ತು ನಿಯಮಪಾಲನೆ ಯೊಂದಿಗೆ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕು.

– ಮೋಹನ ಗೌಡ, ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.