ನನ್ನನ್ನ ಗೋಮಾತೆ ಕೈ ಬಿಡಲ್ಲ..!: ಸಚಿವ ಪ್ರಭು ಚೌಹಾಣ್
Team Udayavani, Jan 27, 2022, 7:47 PM IST
ಮೈಸೂರು : ಮೊದಲ ಸಲ ಕ್ಯಾಬಿನೆಟ್ ರಚನೆಯಾದಾಗಲೂ ನೀನು ಮಿನಿಸ್ಟರ್ ಆಗುತ್ತೀಯ ಅಂತ ಯಾರೂ ಹೇಳಲಿಲ್ಲ, ಎರಡನೇ ಸಲ ಯಾರೂ ಹೇಳಲಿಲ್ಲ,ಗೋಮಾತೆ ಆಶೀರ್ವಾದ ನನ್ನ ಕೈಹಿಡಿಯುತ್ತದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಸಂಪುಟದಲ್ಲಿ ಮುಂದುವರಿಯುವ ವಿಶ್ವಾಸವನ್ನು ಗುರುವಾರ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರೀತಿ ನಂಬರ್ ಒನ್ ಕೆಲಸ ಯಾರೂ ಮಾಡಿಲ್ಲ, ಗೋ ನಿಷೇಧ ಕಾಯ್ದೆ, ಗೋ ಸಂಜೀವಿನಿ ಸೇರಿದಂತೆ ಅನೇಕ ಯೋಜನೆ ರೂಪಿಸಿದ್ದೇನೆ.ಆದರೆ ಈ ಬಾರಿ ಮಾದ್ಯಮದಲ್ಲಷ್ಟೇ ಕ್ಯಾಬಿನೆಟ್‌ನಿಂದ ಕೈ ಬಿಡ್ತಾರೆ ಅಂತ ಬರ್ತಿದೆ. ನಾನು ಪಕ್ಷದ ಶಿಸ್ತಿನ ಸಿಪಾಯಿ, 32 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ ಎಂದರು.
ಹೊರ ಜಿಲ್ಲೆಗಳ ಉಸ್ತುವಾರಿಗೆ ಅಸಮಧಾನ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೈಕಮಾಂಡ್, ಸಿಎಂ ನಿರ್ಣಯ ಕೈಗೊಂಡೇ ಉಸ್ತುವಾರಿ ನೀಡಿದ್ದಾರೆ.
ಎಲ್ಲಿ ಹೇಳ್ತಾರೋ ಅಲ್ಲಿ ಹೋಗಿ ಕೆಲಸ ಮಾಡುತ್ತೇನೆ. ಸದ್ಯ ಯಾದಗಿರಿ ಜಿಲ್ಲೆ ಉಸ್ತುವಾರಿ ಕೊಟ್ಟಿದ್ದಾರೆ. ನಾನು ಖುಷಿಯಾಗಿದ್ದೇನೆ,ನನಗೆ ಯಾವುದೇ ಬೇಸರ ಇಲ್ಲ. ನಾನು ಕೆಲಸಗಾರ , ಎಲ್ಲಿ ಹಾಕಿದರೂ ಕೆಲಸ ಮಾಡುತ್ತೇನೆ ಎಂದರು.
ಸುತ್ತೂರು ಶ್ರೀ ಭೇಟಿ
400 ಪಶು ವೈದ್ಯಾಧಿಕಾರಿಗಳ ನೇಮಕಾತಿಗೆ ಸಚಿವ ಸಂಪುಟ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿರುವ ಶ್ರೀ ಕ್ಷೇತ್ರ ಸುತ್ತೂರು ಮಠಕ್ಕೆ ಭೇಟಿ ನೀಡಿ, ಶ್ರೀ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿ ಅವರ ಆಶೀರ್ವಾದ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಾರ್ಕೋನಹಳ್ಳಿ ಜಲಾಶಯ ಭರ್ತಿ: ರೈತರಲ್ಲಿ ಮಂದಹಾಸ, ಜಲಾಶಯದ ಒಳಹರಿವು 2200 ಕ್ಯೂಸೆಕ್ಸ್
ಎಸ್ ಎಸ್ ಎಲ್ ಸಿ ಫಲಿತಾಂಶ; ಏನೇ ಬರಲಿ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ: ಸಚಿವ ಸುಧಾಕರ್ ಮನವಿ
ಕಣ್ಣು ಆಪರೇಷನ್ ಮಾಡಿದರೆ ಹಣ ನೀಡುತ್ತೇವೆಂದು ನಂಬಿಸಿ ಮಹಿಳೆಯ 5 ಲಕ್ಷದ ಚಿನ್ನ ದೋಚಿದ ಆಸಾಮಿ
ಪಿಎಸ್ಐ ನೇಮಕಾತಿ ಅಕ್ರಮ : ಮತ್ತಿಬ್ಬರ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ
ವಿಜಯಪುರ : ಸಿಡಿಲಿಗೆ 14 ಕುರಿಗಳು ಸಾವು : ಸೂಕ್ತ ಪರಿಹಾರಕ್ಕೆ ಒತ್ತಾಯ