ಮಿಲ್ಖಾ ಎಂಬ ಬಂಗಾರದ ನೆನಪುಗಳು


Team Udayavani, Jun 20, 2021, 6:50 AM IST

ಮಿಲ್ಖಾ ಎಂಬ ಬಂಗಾರದ ನೆನಪುಗಳು

ಭಾರತದ ಕ್ರೀಡಾಜಗತ್ತು ಎಂದೆಂದಿಗೂ ಮರೆಯಬಾರದ ರತ್ನಸದೃಶರಲ್ಲಿ ಮಿಲ್ಖಾ ಸಿಂಗ್‌ ಕೂಡಾ ಒಬ್ಬರು. ಅವರು ದೇಹ ಬಿಟ್ಟು ಹೊರ ನಡೆದಿರಬಹುದು, ಆದರೆ ತಮ್ಮ ಬಂಗಾರದಂತಹ ನೆನಪುಗಳನ್ನು ಇಲ್ಲಿಯೇ ಬಿಟ್ಟುಬಿಟ್ಟಿದ್ದಾರೆ. ಅವೆಂದಿಗೂ ಅಳಿಸಿ ಹೋಗದಷ್ಟು ಚಿರಸ್ಥಾಯಿ, ಬಲಿಷ್ಠ ಗುರುತುಗಳು. ಮಿಲ್ಖಾ ಬದುಕಿನಲ್ಲಿ ಸಂಭ್ರಮವಿತ್ತು, ಛಲವಿತ್ತು, ಸಾಧನೆಯಿತ್ತು, ನೋವಿತ್ತು, ಹತಾಶೆಯಿತ್ತು. ಅವರಿಲ್ಲದ ಈ ಹೊತ್ತಿನಲ್ಲಿ ಅವರ ಬದುಕಿನ ಪುಟಗಳನ್ನು ತೆರೆಯುತ್ತಾ ಹೋದರೆ, ಈ ನೆನಪುಗಳು ಕೇವಲ ನೆನಪಲ್ಲ, ಬಂಗಾರದ ಅಚ್ಚುಗಳೆನಿಸುತ್ತವೆ. ಬದುಕಿನುದ್ದಕ್ಕೂ ಎಲ್ಲ ಸವಾಲುಗಳನ್ನು ಹಿಂದಕ್ಕೆ ತಳ್ಳುತ್ತಾ, ಅಸಾಮಾನ್ಯ ವೇಗದಲ್ಲಿ ಮುಂದಕ್ಕೆ ಓಡಿದ “ಜೀವಂತ ಚಿನ್ನ’ ಅವರು. ಅವರು ಎಷ್ಟೇ ಚಿನ್ನಗಳನ್ನು ಗೆದ್ದಿರಲಿ, ಇನ್ನೆಷ್ಟೋ ಚಿನ್ನಗಳನ್ನು ಕಳೆದುಕೊಂಡಿರಲಿ… ಅವರ ಬದುಕು ಮಾತ್ರ ಪುಟಕ್ಕಿಟ್ಟ ಚಿನ್ನ.

1929ರಲ್ಲಿ ಹುಟ್ಟಿ 2021ರಲ್ಲಿ ಬದುಕಿನ ಓಟ ಮುಗಿಸಿದ ಅವರು ಮೃತಪಟ್ಟಿದ್ದಾರೆ ಎಂದು ಎಂದಾದರೂ ಒಪ್ಪಲು ಸಾಧ್ಯವೇ? 91 ವರ್ಷದ ಅವರ ಬದುಕು ಎಷ್ಟು ದೀರ್ಘ‌ವಾಗಿದೆ ಎಂದರೆ ಇನ್ನು ಮತ್ತೆ 91 ವರ್ಷ ಕಳೆದರೂ; ಅವರು ಬದುಕಿಯೇ ಇರುತ್ತಾರೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಕೂಟಗಳಲ್ಲಿ ಅವರು ಓಡುವುದನ್ನು ನಿಲ್ಲಿಸಿ ಎಷ್ಟೋ ದಶಕಗಳು ಕಳೆದಿರಬಹುದು, ಅವರು ನೀಡಿದ ಸ್ಫೂರ್ತಿಯಿಂದಲೇ ಓಟವನ್ನು ಆರಂಭಿಸಿರುವ, ಮುಂದುವರಿಸಿರುವ ಆ್ಯತ್ಲಿಟ್‌ಗಳಿಗೆ ಲೆಕ್ಕವಿದೆಯೇ?
ಮಿಲ್ಖಾ ಎಂಬ ಅಪರಂಜಿ ಚಿನ್ನ ಶುಕ್ರವಾರ ರಾತ್ರಿ 11.30ಕ್ಕೆ ಚಂಡೀಗಢದ ಪಿಜಿಐಎಂಇಆರ್‌ ಆಸ್ಪತ್ರೆಯಲ್ಲಿ ಕೊರೊನಾ ಕಾರಣಕ್ಕೆ ದೇಹದ ಹಂಗು ಕಳಚಿಕೊಂಡರು. ಆದರೆ ನಮ್ಮ ಭಾವಕೋಶಗಳಲ್ಲಿ ಅವರು ಅಚ್ಚೊತ್ತಿರುವ ನೆನಪುಗಳಿಂದ ಭಾರತೀಯರು ಎಂದೂ ಕಳಚಿಕೊಳ್ಳಲು ಸಾಧ್ಯವಿಲ್ಲ.

ದೇಶ ವಿಭಜನೆಯ ಬಿಸಿ…
1929ರ ನ. 20ರಂದು, ಈಗ ಪಾಕಿಸ್ಥಾನಕ್ಕೆ ಸೇರಿರುವ ಗೋವಿಂದಪುರದಲ್ಲಿ ಮಿಲ್ಖಾ ಸಿಂಗ್‌ ಜನನವಾಗಿತ್ತು. ಅದು 15 ಮಂದಿ ಒಡಹುಟ್ಟಿದವರ ದೊಡ್ಡ ಪರಿವಾರ. ದೇಶ ವಿಭಜನೆಗೂ ಮೊದಲು 8 ಮಂದಿ ತೀರಿಹೋಗಿದ್ದರು. ವಿಭಜನೆಯ ವೇಳೆ ಸಂಭವಿಸಿದ ಗಲಭೆಯಲ್ಲಿ ಮಿಲ್ಖಾ ಅವರ ಹೆತ್ತವರು, ಓರ್ವ ಸಹೋದರ ಹಾಗೂ ಇಬ್ಬರು ಸಹೋದರಿಯರು ಬಲಿಯಾದರು. ಅಪಾಯವರಿತ ಮಿಲ್ಖಾ ಪರಿವಾರ ಹೊಸದಿಲ್ಲಿಗೆ ಧಾವಿಸಿ ಬಂತು. ಅಲ್ಲಿನ ನಿರಾಶ್ರಿತರ ಶಿಬಿರದಲ್ಲಿ ಕಾಲ ಕಳೆಯಿತು. ಒಮ್ಮೆ ರೈಲಿನಲ್ಲಿ ಟಿಕೆಟ್‌ ಇಲ್ಲದೆ ಪಯಣಿಸಿದ್ದಕ್ಕೆ ಮಿಲ್ಖಾ ತಿಹಾರ್‌ ಜೈಲನ್ನೂ ಸೇರ ಬೇಕಾಯಿತು. ಆಗ ಸಹೋದರಿ ತನ್ನ ಚಿನ್ನವನ್ನು ಅಡವಿಟ್ಟು ಮಿಲ್ಖಾ ಬಿಡುಗಡೆಗೆ ನೆರವಾಗಿದ್ದರು.

ಪುಸ್ತಕ ಮತ್ತು ಸಿನೆಮಾ
ಮಿಲ್ಖಾ ಸಿಂಗ್‌ ಅವರ ಆತ್ಮಕಥೆ “ದ ರೇಸ್‌ ಆಫ್ ಮೈ ಲೈಫ್’ 2013ರಲ್ಲಿ ಬಿಡುಗಡೆಯಾಗಿತ್ತು. ಮುಂದೆ ಇದು “ಭಾಗ್‌ ಮಿಲ್ಖಾ ಭಾಗ್‌’ ಚಿತ್ರಕ್ಕೂ ಸ್ಫೂರ್ತಿಯಾಯಿತು. ರಾಕೇಶ್‌ ಓಂಪ್ರಕಾಶ್‌ ಮೆಹ್ರಾ ನಿರ್ದೇಶನದ ಈ ಚಿತ್ರದಲ್ಲಿ ಫ‌ರಾನ್‌ ಅಖ್ತರ್‌, ಮಿಲ್ಖಾ ಪಾತ್ರವನ್ನು ನಿಭಾಯಿಸಿದ್ದರು. ಈ ಚಿತ್ರ ಅನೇಕ ಪ್ರಶಸ್ತಿಗಳನ್ನು ಬಾಚಿತು. 100 ಕೋ.ರೂ.ಗಳ ದೊಡ್ಡ ಮೊತ್ತವನ್ನೇ ಗಳಿಸಿತು. ಮಿಲ್ಖಾ ಕೇವಲ ಒಂದು ರೂ.ಗೆ ಇದರ ಹಕ್ಕನ್ನು ಮಾರಾಟ ಮಾಡಿದ್ದರು. ಆದರೆ ಇದರ ಲಾಭಾಂಶದ ಒಂದು ಪಾಲನ್ನು ಮಿಲ್ಖಾ ಸಿಂಗ್‌ ಚಾರಿಟೆಬಲ್‌ ಟ್ರಸ್ಟ್‌’ಗೆ ನೀಡಬೇಕೆಂಬ ಷರತ್ತು ವಿಧಿಸಿದ್ದರು.

ಹಾರುವ ಸಿಕ್ಖ್, ಪದ್ಮಶ್ರೀ ಗೌರವ
ಮಿಲ್ಖಾ ಸಿಂಗ್‌ ಅವರನ್ನು ಫ್ಲೈಯಿಂಗ್‌ ಸಿಕ್ಖ್’ (ಹಾರುವ ಸಿಕ್ಖ್) ಎಂಬ ಹೆಸರಿನಿಂದ ಕರೆದವರು ಪಾಕಿಸ್ಥಾನದ ದ್ವಿತೀಯ ಅಧ್ಯಕ್ಷ, ಫೀಲ್ಡ್‌ ಮಾರ್ಷಲ್‌ ಅಯೂಬ್‌ ಖಾನ್‌. 1960ರಲ್ಲಿ ಪಾಕಿಸ್ಥಾನದಲ್ಲಿ ನಡೆದ ಕೂಟದಲ್ಲಿ ಅಲ್ಲಿನ ಖ್ಯಾತ ಓಟಗಾರ ಅಬ್ದುಲ್‌ ಖಲಿಖ್‌ ಅವರನ್ನು ಮಿಲ್ಖಾ ಹಿಂದಿಕ್ಕುತ್ತಾರೆ. ಅಂದಿನ ಪ್ರಶಸ್ತಿ ಸಮಾರಂಭದಲ್ಲಿ ಅಯೂಬ್‌ ಖಾನ್‌ ಭಾರತೀಯ ಓಟಗಾರನನ್ನು ಫ್ಲೈಯಿಂಗ್‌ ಸಿಕ್ಖ್’ ಎಂಬ ಹೆಸರಿನಿಂದ ಕರೆಯುತ್ತಾರೆ. ಇದಕ್ಕೂ ಒಂದು ವರ್ಷ ಮೊದಲು ಭಾರತ ಸರಕಾರ ಹೆಮ್ಮೆಯ ಕ್ರೀಡಾ ಸಾಧಕನಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಆದರೆ 40 ವರ್ಷ ವಿಳಂಬವಾಗಿ (2001) ಅರ್ಜುನ ಪ್ರಶಸ್ತಿ ನೀಡಿದ್ದು ಮಿಲ್ಖಾ ಗೆ ಮಾಡಿದ ಅವಮಾನವೇ ಸೈ.

ವಿಶ್ವದಾಖಲೆ ನಿರ್ಮಿಸಿದ್ದರೇ?
ಒಂದು ಮೂಲದ ಪ್ರಕಾರ, ರೋಮ್‌ ಒಲಿಂಪಿಕ್‌ಗೂ ಮುನ್ನ ನಡೆದ ಫ್ರಾನ್ಸ್‌ ಕೂಟವೊಂದರಲ್ಲಿ ಮಿಲ್ಖಾ ಸಿಂಗ್‌ 45.8 ಸೆಕೆಂಡ್‌ಗಳ ಸಾಧನೆಯೊಂದಿಗೆ 400 ಮೀ. ಓಟದಲ್ಲಿ ವಿಶ್ವದಾಖಲೆ ನಿರ್ಮಿಸಿದ್ದರು ಎಂಬ ಮಾತೂ ಇದೆ. ಆದರೆ 1956ರ ಲಾಸ್‌ ಏಂಜಲೀಸ್‌ ಒಲಿಂಪಿಕ್‌ನಲ್ಲಿ ಅಮೆರಿಕದ ಲೂ ಜಾನ್ಸ್‌ ಅವರಿಂದ ದಾಖಲೆ ನಿರ್ಮಾಣಗೊಂಡಿತ್ತು ಎಂದು ಅಧಿಕೃತ ದಾಖಲೆ ಹೇಳುತ್ತವೆ. ಹಾಗಾಗಿ ಇಲ್ಲಿ ಮಿಲ್ಖಾ ಹೆಸರಿನಿಂದ ಈ ದಾಖಲೆ ತಪ್ಪಿಹೋಗಿದೆ.

ಸರಕಾರಿ ಗೌರವ ಸಲ್ಲಿಕೆ
ಭಾರತದ ಮಹಾನ್‌ ಆ್ಯತ್ಲಿಟ್‌ಮಿಲ್ಖಾ ಸಿಂಗ್‌ ಅವರ ಅಂತ್ಯಕ್ರಿಯೆ ಶನಿವಾರ ಸಂಜೆ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತು. ಪುತ್ರ ಜೀವ್‌ ಮಿಲ್ಖಾ ಸಿಂಗ್‌ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಅಗಲಿದ ಓಟಗಾರನ ಗೌರವಾರ್ಥ ಪಂಜಾಬ್‌ ಸರಕಾರ ಒಂದು ದಿನದ ಶೋಕಾಚರಣೆಯನ್ನೂ ಘೋಷಿಸಿತು. ಭಾರತ ಮತ್ತು ಪಂಜಾಬ್‌ ಪಾಲಿಗೆ ಇದು ಅತ್ಯಂತ ದುಃಖದ ದಿನ ಎಂದು ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.