ಕೃಷ್ಯುತ್ಪನ್ನ ಸಾಗಣೆಗೆ ಹಸುರು ಬಸ್‌! ಕೆಎಸ್ಸಾರ್ಟಿಸಿ ವಿನೂತನ ಹೆಜ್ಜೆ

Team Udayavani, Jul 17, 2021, 7:10 AM IST

ಕೃಷ್ಯುತ್ಪನ್ನ ಸಾಗಣೆಗೆ ಹಸುರು ಬಸ್‌! ಕೆಎಸ್ಸಾರ್ಟಿಸಿ ವಿನೂತನ ಹೆಜ್ಜೆ

ಮಂಗಳೂರು: ರೈತರ ಕೃಷ್ಯುತ್ಪನ್ನಗಳಾದ ತರಕಾರಿ, ಹಣ್ಣುಗಳನ್ನು ಅಗತ್ಯ ಮಾರುಕಟ್ಟೆಗಳಿಗೆ ಸಾಗಿಸಲು ಅನುಕೂಲವಾಗುವಂತೆ “ಹಸುರು ಬಸ್‌’ ಸೇವೆಯನ್ನು ಒದಗಿಸಲು ಕರ್ನಾಟಕ ರಸ್ತೆ ಸಾರಿಗೆ ನಿಗಮವು ಮುಂದಾಗಿದೆ.

ಕೃಷಿ ಉತ್ಪನ್ನಗಳನ್ನು ಒಂದು ಕಡೆಯಿಂದ ಮತ್ತೂಂದೆಡೆಗೆ ಸಾಗಿಸಲು ರೈಲ್ವೇಯು ಕಿಸಾನ್‌ ರೈಲು ಸೇವೆಯನ್ನು ಆರಂಭಿಸಿದೆ. ಅದೇ ಮಾದರಿಯಲ್ಲಿ ಜಿಲ್ಲೆಯಿಂದ ಜಿಲ್ಲೆಗೆ ಹಣ್ಣು, ತರಕಾರಿ ಸರಬರಾಜು ಮಾಡಲು ಹಸುರು ಬಸ್‌ ಆರಂಭಿಸಿ ಹಂತಹಂತವಾಗಿ ರಾಜ್ಯ ವ್ಯಾಪಿಯಾಗಿ ವಿಸ್ತರಿಸುವ ಯೋಜನೆ ಕೆಎಸ್ಸಾರ್ಟಿಸಿಯದು.

ಸದ್ಯ ತರಕಾರಿ ಸಾಗಾಟಕ್ಕೆ ಹೆಚ್ಚಾಗಿ ಲಾರಿ ಬಳಕೆಯಾಗುತ್ತಿದೆ. ಇದರಿಂದ ಸಾಗಾಟ ವೆಚ್ಚ ಹೆಚ್ಚು. ಆದರೆ “ಗ್ರೀನ್‌ ಬಸ್‌’ ಮೂಲಕ ವಿಶೇಷ ರಿಯಾಯಿತಿ ದರದಲ್ಲಿ ಸಾಗಿಸಲು ಕೆಎಸ್ಸಾರ್ಟಿಸಿ ಅವಕಾಶ ಒದಗಿಸಲಿದೆ. ಈಗಾಗಲೇ 10 ಲಕ್ಷ ಕಿ.ಮೀ. ಕ್ರಮಿಸಿದ ಸುರಕ್ಷಿತ ಬಸ್‌ಗಳ ಒಳ ಭಾಗ ವನ್ನು ನವೀಕರಿಸಿಕೊಂಡು ಇದಕ್ಕಾಗಿ ಬಳಸಲಾಗುತ್ತದೆ.

10 ವರ್ಷ ಮೇಲ್ಪಟ್ಟ 565 ಬಸ್‌ಗಳು
ಕೆಎಸ್ಸಾರ್ಟಿಸಿ ಬಳಿ 8,738 ಬಸ್‌ಗಳಿದ್ದು, 10 ವರ್ಷ ಮೇಲ್ಪಟ್ಟ 565 ಬಸ್‌ಗಳಿವೆ. ಬೆಂಗಳೂರು ಕೇಂದ್ರೀಯ ವಿಭಾಗದಲ್ಲಿ 11, ತುಮಕೂರಿನಲ್ಲಿ 57, ಕೋಲಾರ- 18, ಚಿಕ್ಕಬಳ್ಳಾಪುರ= 32, ಮೈಸೂರು ನಗರ ಸಾರಿಗೆ- 188, ಮೈಸೂರು ಗ್ರಾಮಾಂತರ- 76, ಮಂಡ್ಯ- 36, ಚಾಮರಾಜನಗರ -33, ಹಾಸನ- 312, ಮಂಗಳೂರು- 44, ಪುತ್ತೂರು- 20, ದಾವಣಗೆರೆ -2, ಶಿವಮೊಗ್ಗ- 13, ಚಿತ್ರದುರ್ಗದಲ್ಲಿ 4 ಬಸ್‌ಗಳಿವೆ.

ಕೆಎಸ್ಸಾರ್ಟಿಸಿ ವಿನೂತನ ಹೆಜ್ಜೆ
ಲಾಕ್‌ಡೌನ್‌, ಸಿಬಂದಿ ಮುಷ್ಕರ ಸಹಿತ ಹಲವು ಕಾರಣಗಳಿಂದ ಕೆಎಸ್ಸಾರ್ಟಿಸಿಯ ಆದಾಯಕ್ಕೆ ಪೆಟ್ಟು ಬಿದ್ದಿದ್ದು, ಅದನ್ನು ಸರಿ ದೂಗಿಸುವ ನಿಟ್ಟಿನಲ್ಲಿ ಒಂದೊಂದೇ ವಿನೂತನ ಹೆಜ್ಜೆಗಳನ್ನು ಇಡುತ್ತಿದೆ. ಈಗಾಗಲೇ ಹಳೆಯ ಬಸ್‌ಗಳನ್ನು ಉಪಯೋಗಿಸಿಕೊಂಡು ಆಮ್ಲ ಜನಕ ಬಸ್‌, ಸಂಚಾರಿ ಶೌಚಾಲಯ, ಸಂಚಾರಿ ಗ್ರಂಥಾಲಯ ಸಹಿತ ವಿನೂತನ ಯೋಜನೆ ಗಳನ್ನು ಪರಿಚಯಿಸಿದೆ.

ಒಂದು ಕಡೆಯಿಂದ ಮತ್ತೂಂದು ಕಡೆಗೆ ತರಕಾರಿ ಒಯ್ಯುವುದಕ್ಕಾಗಿ ಈಗಾಗಲೇ ಕಿಸಾನ್‌ ರೈಲು ಸೇವೆ ಇದ್ದು, ಅದೇ ರೀತಿ ಹಸುರು ಬಸ್‌ ಪರಿಚಯಿಸಲು ಮುಂದಾಗಿದ್ದೇವೆ. ಸದ್ಯದಲ್ಲೇ ಈ ಯೋಜನೆಯನ್ನು ಆರಂಭಿಸಲಾಗುವುದು.
– ಶಿವಯೋಗಿ ಕಳಸದ, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ

ಟಾಪ್ ನ್ಯೂಸ್

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.