ಖ್ಯಾತ ಟೆನ್ನಿಸ್ ಆಟಗಾರ ಗ್ರಿಗೋರ್ ಡಿಮಿಟ್ರೋವ್ ನನ್ನು ಬಿಡದ ಕೋವಿಡ್ ಸೋಂಕು
Team Udayavani, Jun 22, 2020, 6:00 PM IST
ಝಾದರ್: ಕಳೆದ ಕೆಲ ದಿನಗಳಿಂದ ರಾಜಕೀಯ ವ್ಯಕ್ತಿಗಳಲ್ಲಿ, ಹಿರಿಯ ಅಧಿಕಾರಿಗಳಲ್ಲಿ ಮತ್ತು ಕೋವಿಡ್ ವಾರಿಯರ್ಸ್ಗಳಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಕ್ರೀಡಾಪಟುಗಳಿಗೂ ಈ ಡೆಡ್ಲಿ ವೈರಸ್ ಕಂಟಕವಾಗಿ ಕಾಡುತ್ತಿದೆ.
ವಿಶ್ವದ 19ನೇ ರ್ಯಾಂಕ್ನ ಟೆನಿಸ್ ಆಟಗಾರ, ಬಲ್ಗೇರಿಯಾದ ಗ್ರಿಗೋರ್ಡಿಮಿಟ್ರೋವ್ಗೆ ಸೋಂಕು ದೃಢಪಟ್ಟಿದ್ದು, ಆಡ್ರಿಯಾ ಟೂರ್ನಲ್ಲಿ ಪಾಲ್ಗೊಂಡಿದ್ದ ವೇಳೆ ಇವರಿಗೆ ಸೋಂಕು ತಗುಲಿದೆ ಎನ್ನಲಾಗಿದೆ.
ಈ ಕುರಿತು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಬರೆದುಕೊಂಡಿರುವ ಡಿಮಿಟ್ರೋವ್ “ನನ್ನಗೆ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದು, ಆಡ್ರಿಯಾ ಟೂರ್ ವೇಳೆ ನನ್ನ ಸಂಪರ್ಕಕ್ಕೆ ಬಂದಿದ್ದವರೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಿ. ನನ್ನಿಂದ ನಿಮಗೇನಾದರೂ ತೊಂದೆಯಾಗಿದ್ದರೆ ಕ್ಷಮಿಸಿ. ನಾನು ಮನೆಗೆ ಬಂದು ಈಗ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದೇನೆ.
ಎಲ್ಲರ ಬೆಂಬಲಕ್ಕೆ ಚಿರಋಣಿ. ಸುರಕ್ಷಿತವಾಗಿರಿ, ಆರೋಗ್ಯವಾಗಿರಿ” ಎಂದು ತನ್ನ ಅಭಿಮಾನಿಗಳಿಗೆ ಮನವಿ ಮಾಡಿಕೊಂಡು ಸಂದೇಶ ರವಾಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ