ಪರಸ್ಪರ ಮಜ್ಜಿಗೆ ಮೈಮೇಲೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

Team Udayavani, Oct 16, 2021, 8:16 PM IST

ಹಸನ್ಮಾಳದಲ್ಲಿ ಗೌಳಿಗರಿಂದ ಬುಡಕಟ್ಟು ಸಂಸ್ಕೃತಿಯ ವೈಶಿಷ್ಟ್ಯಪೂರ್ಣ ದಸರಾ ಆಚರಣೆ

ದಾಂಡೇಲಿ : ನಗರದ ಸಮೀಪದ ಹಸನ್ಮಾಳದಲ್ಲಿರುವ ಗೌಳಿ ಬುಡಕಟ್ಟು ಸಮುದಾಯವರು ಒಂದಾಗಿ ತಮ್ಮ ಪರಂಪರಗತವಾಗಿ ಬಂದ ಗೌಳಿ ಸಂಪ್ರದಾಯದಂತೆ ದಸರಾ ಹಬ್ಬವನ್ನು ಆಚರಿಸಿ ಗಮನ ಸೆಳೆದರು.

ಹಸನ್ಮಾಳದ ಗೌಳಿ ಸಮುದಾಯದವರು ಎಲ್ಲರು ಸೇರಿ ಹತ್ತಿರದ ಕಾಡಿಗೆ ಹೋಗಿ, ತಮ್ಮ ಆರಾಧ್ಯ ದೇವರಾದ ವಿಠೋಭ ದೇವರನ್ನು ಭಜಿಸಿ ಸಾಮೂಹಿಕವಾಗಿ ಪೂಜೆ ಮಾಡುವುದರ ಮೂಲಕ ದಸರಾ ಹಬ್ಬವನ್ನು ಆಚರಿಸಿಕೊಂಡರು. ಅವರವರ ಮನೆಯಿಂದ ಮಾಡಿಕೊಂಡು ಬಂದ ನೈವೈದ್ಯವನ್ನು ಈ ಸಂದರ್ಭದಲ್ಲಿ ದೇವರ ಹೆಸರಲ್ಲಿ ಬಡಿಸಿ, ಪೂಜಿಸಿ ಸಮರ್ಪಿಸಲಾಯ್ತು. ತಮ್ಮ ತಮ್ಮ ಮನೆಗಳಿಂದ ಮಣ್ಣಿನ ಮಡಕೆಯಲ್ಲಿ ತಂದಿದ್ದ ಮಜ್ಜಿಗೆಯನ್ನು ಕುಡಿದು ಪರಸ್ಪರ ಒಬ್ಬರ ಮೇಲೊಬ್ಬರು ಎರಚಿ ವಿಶಿಷ್ಟ ಆರಾಧನೆಯಲ್ಲಿ ತೊಡಗಿಕೊಂಡರು. ಇಲ್ಲಿ ಪ್ರತಿಯೊಬ್ಬರು ಕಂಬಳಿಯನ್ನು ಹೊದ್ದಿರಬೇಕಾಗಿದ್ದು, ಹೊದ್ದಿರುವ ಕಂಬಳಿಯ ಮೇಲೆ ಮಜ್ಜಿಗೆಯನ್ನು ಎರೆಯಲಾಗುತ್ತದೆ.

ತಮ್ಮ ತಮ್ಮ ಮನೆಗಳಿಂದ ತಂದ ನೈವೈಧ್ಯಗಳನ್ನು ಬಡಿಸಿ, ತಮ್ಮ ತಮ್ಮ ಅಬೀಷ್ಟೆಗಳನ್ನು ಪ್ರಾರ್ಥಿಸಿ ಕಾಯಿ ಒಡೆದು ಪೂಜೆ ಸಲ್ಲಿಸಲಾಗುತ್ತದೆ. ಸರಿ ಸುಮಾರು 5 ರಿಂದ 6 ಗಂಟೆಗಳ ಅವಧಿಯವರೆಗೆ ಹಸನ್ಮಾಳದ ಕಾಡಿನಲ್ಲೆ ಗೌಳಿ ಸಮಾಜ ಬಾಂಧವರು ಪೂಜಾರಾಧನೆಯಲ್ಲಿ ತೊಡಗಿಸಿಕೊಂಡು, ಬಳುವಳಿಯಾಗಿ ಬಂದ ಸಂಸ್ಕೃತಿ ಮತ್ತು ಸಂಸ್ಕಾರಗಳ ಆಚರಣೆಯನ್ನು ಮುಂದುವರೆಸಿ ಎಲ್ಲರ ಗಮನ ಸೆಳೆದಿದ್ದಾರೆ. ಕಾರ್ಯಕ್ರಮದಲ್ಲಿ 150 ಕ್ಕೂ ಅಧಿಕ ಗೌಳಿ ಸಮುದಾಯದವರು ಭಾಗವಹಿಸಿದ್ದರು.

ಇದನ್ನೂ ಓದಿ :ಬೆಂಗಳೂರು: ಭಾರಿ ಬಿರುಕಿನಿಂದ ವಾಲಿದ ಪೊಲೀಸ್ ಕ್ವಾರ್ಟರ್ಸ್ ಕಟ್ಟಡ

ಈ ನೆಲದ ಬುಡಕಟ್ಟು ಸಂಸ್ಕೃತಿಯನ್ನು ಉಳಿಸಿ ಬೆಳೆಸಿ, ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಗೌಳಿ ಸಮುದಾಯವು ತನ್ನದೇ ಆದ ರೀತಿಯಲ್ಲಿ ಪರಂಪರಗತವಾಗಿ ಬಂದ ಸಂಸ್ಕೃತಿ, ಸಂಸ್ಕಾರಗಳಿಗೆ ಎಲ್ಲಿಯೂ ಆಧುನಿಕ ಸ್ಪರ್ಷ ನೀಡದೆ ಮುಂದುವರಿಸಿಕೊಂಡು ಹೋಗುತ್ತಿರುವುದು ಗೌಳಿ ಸಮುದಾಯದ ಮಹತ್ವದ ಕಾರ್ಯ ಎಂದೆ ಹೇಳಬಹುದು.

ಟಾಪ್ ನ್ಯೂಸ್

mantri mall

ಆಸ್ತಿ ತೆರಿಗೆ ಬಾಕಿ: ಮಂತ್ರಿಮಾಲ್‌ಗೆ ಬೀಗ..!

ಎರಡೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ; ಒಂದು ತಿಂಗಳೊಳಗೆ ತೀರ್ಪು ನೀಡಿದ ಕೋರ್ಟ್

ಎರಡೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ; ಒಂದು ತಿಂಗಳೊಳಗೆ ತೀರ್ಪು ನೀಡಿದ ಕೋರ್ಟ್

ಚುನಾವಣೆ ವೆಚ್ಚಕ್ಕೆ ಅಭ್ಯರ್ಥಿಗೆ ಹಣ ಕೊಟ್ಟ ಮತದಾರರು

ಚುನಾವಣೆ ವೆಚ್ಚಕ್ಕೆ ಅಭ್ಯರ್ಥಿಗೆ ಹಣ ಕೊಟ್ಟ ಮತದಾರರು

vaccination pending

ಅವಧಿ ಮುಗಿದ್ರೂ ಲಸಿಕೆಗೆ ಬಾರದ 10 ಲಕ್ಷ ಜನ..!

ಶ್ರೀರಂಗಪಟ್ಟಣ: ಗೂಡ್ಸ್ ವಾಹನ ಚಾಲಕನ ಬರ್ಬರ ಹತ್ಯೆ

ಶ್ರೀರಂಗಪಟ್ಟಣ: ಗೂಡ್ಸ್ ವಾಹನ ಚಾಲಕನ ಬರ್ಬರ ಹತ್ಯೆ

9cm-bommai

ಬಿಜೆಪಿ ಗೆಲುವಿಗೆ ಯಾವುದೇ ಸಮಸ್ಯೆಯಿಲ್ಲ: ಸಿಎಂ ಬೊಮ್ಮಾಯಿ

food grains

ಬೇಳೆಕಾಳು, ಆಹಾರ ಧಾನ್ಯಗಳ ಬೆಲೆಯಲ್ಲೂ ಏರಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9cm-bommai

ಬಿಜೆಪಿ ಗೆಲುವಿಗೆ ಯಾವುದೇ ಸಮಸ್ಯೆಯಿಲ್ಲ: ಸಿಎಂ ಬೊಮ್ಮಾಯಿ

kjjkjkhjh

ಕರಾವಳಿಯ ವಾಜಪೇಯಿ, ಬಿಜೆಪಿಯ ಭೀಷ್ಮ ರಾಮ ಭಟ್‌ ನಿಧನ : ಬೊಮ್ಮಾಯಿ ಸಂತಾಪ

ತಾ.ಪಂ., ಜಿ.ಪಂ. ಕ್ಷೇತ್ರ ನಿಗದಿ ವಿಷಯ ಹೈಕೋರ್ಟ್‌ಗೆ

ತಾ.ಪಂ., ಜಿ.ಪಂ. ಕ್ಷೇತ್ರ ನಿಗದಿ ವಿಷಯ ಹೈಕೋರ್ಟ್‌ಗೆ

ಪ್ರತಿ ತಿಂಗಳು 1 ಲಕ್ಷ ರೇಷ್ಮೆ ಸೀರೆ ಉತ್ಪಾದನೆ ಗುರಿ: ಸಚಿವ ಗೌಡ

ಪ್ರತಿ ತಿಂಗಳು 1 ಲಕ್ಷ ರೇಷ್ಮೆ ಸೀರೆ ಉತ್ಪಾದನೆ ಗುರಿ: ಸಚಿವ ಗೌಡ

ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ ಕೊಲೆಗೆ ಯತ್ನ : ನಾಲ್ವರ ಬಂಧನ

ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ ಕೊಲೆಗೆ ಯತ್ನ : ನಾಲ್ವರ ಬಂಧನ

MUST WATCH

udayavani youtube

ದಾಂಡೇಲಿ : ಅರಣ್ಯ ಇಲಾಖೆಯಿಂದ ಏಕಾಏಕಿ ಬ್ರಿಟಿಷ್ ರಸ್ತೆ ಬಂದ್, ವ್ಯಾಪಕ ಆಕ್ರೋಶ

udayavani youtube

‘ಮರದ ಅರಶಿನ’ದ ವಿಶೇಷತೆ !

udayavani youtube

ತಾಯಿ, ಮಗ ಆರಂಭಿಸಿದ ತಿಂಡಿ ತಯಾರಿ ಘಟಕ ಇಂದು 65 ಮಂದಿಗೆ ಉದ್ಯೋಗ !

udayavani youtube

ಕಳವಾದ ವೈದ್ಯರ ನಾಯಿಯನ್ನು ಗಂಟೆಗಳೊಳಗೆ ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು

udayavani youtube

ಮೃತ ಗೋವುಗಳನ್ನು ವಾಹನಕ್ಕೆ ಕಟ್ಟಿ ಹೆದ್ದಾರಿಯಲ್ಲಿ ಎಳೆದೊಯ್ದ ಸಿಬ್ಬಂದಿ : ಆಕ್ರೋಶ

ಹೊಸ ಸೇರ್ಪಡೆ

mantri mall

ಆಸ್ತಿ ತೆರಿಗೆ ಬಾಕಿ: ಮಂತ್ರಿಮಾಲ್‌ಗೆ ಬೀಗ..!

ಎರಡೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ; ಒಂದು ತಿಂಗಳೊಳಗೆ ತೀರ್ಪು ನೀಡಿದ ಕೋರ್ಟ್

ಎರಡೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ; ಒಂದು ತಿಂಗಳೊಳಗೆ ತೀರ್ಪು ನೀಡಿದ ಕೋರ್ಟ್

11vaccine

ಮೂರನೇ ಅಲೆ ಭೀತಿಗೆ 2ನೇ ಡೋಸ್‌ಗೆ ಬೇಡಿಕೆ!

ಚುನಾವಣೆ ವೆಚ್ಚಕ್ಕೆ ಅಭ್ಯರ್ಥಿಗೆ ಹಣ ಕೊಟ್ಟ ಮತದಾರರು

ಚುನಾವಣೆ ವೆಚ್ಚಕ್ಕೆ ಅಭ್ಯರ್ಥಿಗೆ ಹಣ ಕೊಟ್ಟ ಮತದಾರರು

vaccination pending

ಅವಧಿ ಮುಗಿದ್ರೂ ಲಸಿಕೆಗೆ ಬಾರದ 10 ಲಕ್ಷ ಜನ..!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.