ಅಬ್ಬಾ..! ಮುಂಬೈನಲ್ಲೇ ದೊಡ್ಡ ಪರೋಟವಂತೆ ಇದು..!
ಮುಂಬೈನ ಅತಿ ದೊಡ್ಡ ಪರೋಟ
Team Udayavani, Mar 2, 2021, 5:30 PM IST
ಮುಂಬೈ : ಭಾರತದಲ್ಲಿ ಸಾಕಷ್ಟು ಸಂಸ್ಕೃತಿ ಆಚಾರ ವಿಚಾರಗಳಿವೆ. ಅದರಂತೆಯೇ ಆಹಾರ ವೈವಿಧ್ಯತೆಯಲ್ಲಿಯೂ ನಮ್ಮ ಭಾರತ ಹಿಂದೆ ಸರಿದಿಲ್ಲ. ಒಂದೊಂದು ಭಾಗದ ಜನ ಒಂದೊಂದು ರೀತಿಯ ತಿಂಡಿ ತಿನಿಸುಗಳನ್ನು ಮಾಡುತ್ತಾರೆ. ಅಲ್ಲದೆ ಕೆಲವು ನಗರ ಪಟ್ಟಣದ ಹೋಟೆಲ್ ಮಂದಿಯಂತೂ ತಮ್ಮ ವಿಶೇಷ ಕೈ ಚಳಕದ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಇದೀಗ ಮುಂಬೈನಲ್ಲಿ ಪರೋಟ ವ್ಯಾಪಾರಿ ತನ್ನ ವಿಭಿನ್ನ ಶೈಲಿಯಿಂದ ನೋಡುಗರ ಮತ್ತು ಸವಿಯುವರ ಗಮನ ಸೆಳೆಯುತ್ತಿದ್ದಾರೆ.
ಹೌದು ಮುಂಬೈನಲ್ಲಿ ಮಹಿಮ್ ಎಂಬುವವರು ಹಲ್ವಾ ಪರೋಟ ಹೆಸರಿನ ಹೋಟೆಲ್ ಮಾಡಿದ್ದಾರೆ. ಇವರು ದೊಡ್ಡ ದೊಡ್ಡ ಪರೋಟ ಮಾಡೋದ್ರಿಂದಲೇ ತುಂಬಾ ಫೇಮಸ್ ಆಗಿದ್ದಾರೆ. ಇತ್ತೀಚೆಗೆ ಇವರು ಪರೋಟ ಮಾಡುವ ವಿಧಾನವನ್ನು ಸ್ಟ್ರೀಟ್ ಫುಡ್ ರೆಸಿಪಿಸ್ ಹೆಸರಿನ ಫೇಸ್‍ಬುಕ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ಶೇರ್ ಆದ ಕೇವಲ ಒಂದು ದಿನಕ್ಕೆ 63 ಸಾವಿರ ಲೈಕ್ ಮತ್ತು 2 ಸಾವಿರ ಕಮೆಂಟ್‍ಗಳು ಬಂದಿವೆ. ಇಷ್ಟೆ ಅಲ್ಲದೆ ಈ ಹಲ್ವಾ ಪರೋಟ ಮುಂಬೈನಲ್ಲಿಯೇ ದೊಡ್ಡ ಪರೋಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮಹಿಮ್ ಈ ಪರೋಟ ಮಾಡಲು ಮೈದಾ ಹಿಟ್ಟು ಬಳಸಿದ್ರೆ ಅದನ್ನು ಬೇಯಿಸಲು ತುಪ್ಪ ಬಳಸುತ್ತಾರೆ. ಪರೋಟದ ಎರಡೂ ಭಾಗವನ್ನು ತುಪ್ಪದಿಂದಲೇ ಬೇಯಿಸುವ ಮಹಿಮ್ ಪರೋಟ ಅಲ್ಲಿನ ಸ್ಥಳೀಯರ ನೆಚ್ಚಿನ ಫುಡ್. ಇನ್ನು ಪರೋಟದ ಜೊತೆಗೆ ದಾಲ್, ಸಂಬಲ್ ಮತ್ತು ಮಟ್ಟನ್ ಕೈಮಾವನ್ನು ಕೊಡಲಾಗುತ್ತದೆಯಂತೆ.
ವಿಡಿಯೋ ನೋಡಲು ಈ ಲಿಂಕ್ ಬಳಸಿ
https://www.facebook.com/street.food.videos/videos/904248356801269/
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೋವಿಡ್ ಅಟ್ಟಹಾಸ: ಕಳೆದ 24ಗಂಟೆಯಲ್ಲಿ ಭಾರತದಲ್ಲಿ 1.60 ಲಕ್ಷ ಕೋವಿಡ್ ಪ್ರಕರಣ ಪತ್ತೆ
ನಿರ್ಬಂಧಗಳ ಬಿಸಿ ಕೈಗಾರಿಕೆಗೆ ತಟ್ಟದಿರಲಿ: ಸಿಇಒಗಳ ಮನವಿ
ಕ್ವಾರಂಟೈನ್ನಲ್ಲಿರುವವರ ಮೇಲೆ ಕಣ್ಣಿಡಲು CCTV ಅಳವಡಿಕೆಗೆ ಸೂಚನೆ
ವಿರಾಟ್ ನೌಕೆಯನ್ನು ಗುಜರಿಗೆ ಹಾಕದಂತೆ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂ
ದೇಶೀಯ ವಿಮಾನಗಳಲ್ಲಿ ಲಂಚ್ಗೆ “ಬ್ರೇಕ್’! ಕೇಂದ್ರ ಸರ್ಕಾರ ಸೂಚನೆ