ಸಕ್ಕರೆ, ಉಪ್ಪು ಬೆರೆಸಬೇಡಿ: ದೈನಂದಿನ ಆಹಾರ ಸೇವನೆಯಲ್ಲಿ ಮೊಸರಿಗೆ ಆದ್ಯತೆ ಇರಲಿ…

ಪ್ರತಿನಿತ್ಯವೂ ಊಟದ ಜೊತೆಯಲ್ಲಿ ಮೊಸರು ಸೇವಿಸುವ ಅಭ್ಯಾಸ ಹಲವರಿಗಿದೆ

Team Udayavani, Aug 19, 2022, 12:47 PM IST

ಸಕ್ಕರೆ, ಉಪ್ಪು ಬೆರೆಸಬೇಡಿ: ದೈನಂದಿನ ಆಹಾರ ಸೇವನೆಯಲ್ಲಿ ಮೊಸರಿಗೆ ಆದ್ಯತೆ ಇರಲಿ…

ಊಟದ ಜೊತೆಗೆ ಮೊಸರು ಇರಲೇಬೇಕು ಅಂತಾರೆ ಕೆಲವರು. ಆಯುರ್ವೇದದ ಪ್ರಕಾರವೂ ಮೊಸರಿನಲ್ಲಿ ಹತ್ತಾರು ಪೋಷಕಾಂಶಗಳು, ಔಷಧೀಯ ಗುಣಗಳು ಅಡಗಿವೆ. ಆದರೆ, ಜೀರ್ಣಕ್ರಿಯೆಯನ್ನು ಪ್ರಚೋದಿಸುವ ಬ್ಯಾಕ್ಟೀರಿಯಾಗಳನ್ನು ಹೊಂದಿರುವ ಮೊಸರನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ ಮಾತ್ರ ಅದರಿಂದ ಉಪಯೋಗವಾಗುತ್ತದೆ. ಹಾಗಾದ್ರೆ, ಮೊಸರನ್ನು ಸೇವಿಸುವ ಸರಿಯಾದ ಕ್ರಮ ಯಾವುದು ಗೊತ್ತಾ?

ಸಕ್ಕರೆ, ಉಪ್ಪು: ಮೊಸರಿನ ಜೊತೆಗೆ ಉಪ್ಪು ಅಥವಾ ಸಕ್ಕರೆ ಬೆರೆಸಿ ತಿನ್ನುವ ಅಭ್ಯಾಸ ಹಲವರಿಗಿದೆ. ಆದರೆ, ಸಂಸ್ಕರಿಸಿದ ಸಕ್ಕರೆ ಹಾಗೂ ಉಪ್ಪಿನಲ್ಲಿರುವ ರಾಸಾಯನಿಕ ಅಂಶಗಳಿಂದ ಮೊಸರಿನ ಪೋಷಕಾಂಶಗಳು ನಷ್ಟವಾಗುತ್ತವೆ. ಅದರ ಬದಲಿಗೆ, ರಾಕ್‌ಸಾಲ್ಟ್/ ಬ್ಲಾಕ್‌ಸಾಲ್ಟ್ ಮತ್ತು ಬೆಲ್ಲ ಬಳಸಿ.

ರಾತ್ರಿ ಊಟದ ಜೊತೆ: ಆಯುರ್ವೇದ ಹೇಳುವಂತೆ, ಸೂರ್ಯಾಸ್ತದ ನಂತರ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಶೀತ ಉಂಟು ಮಾಡುವ ಮೊಸರನ್ನು ಸಂಜೆ ನಂತರ ಸೇವಿಸಿದರೆ ಸೈನಸ್‌, ಜ್ವರ, ಕೆಮ್ಮು ಬರಬಹುದು. ಆ ಸಮಯದಲ್ಲಿ ಮೊಸರಿನ ಬದಲು ಮಜ್ಜಿಗೆ ಬಳಸಿ. ಬೆಳಗ್ಗಿನ ಉಪಾಹಾರದಲ್ಲಿ ಮೊಸರು ಇದ್ದರೆ ಒಳ್ಳೆಯದು.

ಸೌತೆಕಾಯಿ, ಬೂಂದಿಕಾಳು, ವಡೆ: ಮೊಸರಿನ ಜೊತೆ ಸೌತೆಕಾಯಿ ಹಾಕುವುದು ಆಯುರ್ವೇದದ ಪ್ರಕಾರ ಇದು ಒಳ್ಳೆಯದಲ್ಲ. ಸೌತೆಕಾಯಿಯ ಬದಲು ಸೋರೆಕಾಯಿ ಬಳಸಬಹುದಂತೆ. ಇನ್ನು, ಬೂಂದಿಕಾಳು ಅಥವಾ ವಡೆ (ಮೊಸರಲ್ಲಿ ಅದ್ದಿದ ವಡೆ)ಯ ಎಣ್ಣೆಯು, ಮೊಸರಿನೊಡನೆ ಸೇರಿದಾಗ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ.

ಚರ್ಮ ಸಮಸ್ಯೆ: ಮೊಡವೆ, ಕಜ್ಜಿ, ತುರಿಕೆಯಂಥ ಚರ್ಮದ ಸಮಸ್ಯೆಗಳನ್ನು ಹೊಂದಿರುವವರು ಮೊಸರನ್ನು ಅತಿಯಾಗಿ ಸೇವಿಸಬಾರದು. ಬದಲಿಗೆ ಮಜ್ಜಿಗೆ ಬಳಸಬಹುದು ಅಥವಾ ಮೊಸರನ್ನು ಚೆನ್ನಾಗಿ ಚಮಚದಿಂದ ಕಲಸಿ, ಸೇವಿಸಬಹುದು.

ಬಿಸಿ ಮಾಡುವುದು: ಕೆಲವು ಪದಾರ್ಥಗಳನ್ನು ತಯಾರಿಸುವಾಗ, ಮೊಸರನ್ನು ಬಿಸಿ ಮಾಡುವುದಿದೆ. ಹಾಗೆ ಮಾಡಿದಾಗ, ಅದರಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ನಾಶವಾಗಿ, ಪೌಷ್ಟಿಕ ಅಂಶ ನಷ್ಟವಾಗುತ್ತದೆ.

ವರ್ಷಪೂರ್ತಿ ಸೇವಿಸುವುದು: ಪ್ರತಿನಿತ್ಯವೂ ಊಟದ ಜೊತೆಯಲ್ಲಿ ಮೊಸರು ಸೇವಿಸುವ ಅಭ್ಯಾಸ ಹಲವರಿಗಿದೆ. ಆದರೆ, ಚಳಿಗಾಲ ಮತ್ತು ಬೇಸಿಗೆಯಲ್ಲಿ ಮೊಸರು ಸೇವಿಸಿ, ಮಳೆಗಾಲದಲ್ಲಿ ಆದಷ್ಟು ಕಡಿಮೆ ಮಾಡುವುದು ಒಳ್ಳೆ­ಯದು ಅನ್ನುತ್ತದೆ ಆಯುರ್ವೇದ.

ಟಾಪ್ ನ್ಯೂಸ್

ವಿಶ್ವ ಕೆಡೆಟ್ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಸಾಧನೆ: ಚಾರ್ವಿಗೆ 5 ಲಕ್ಷ ನಗದು ಬಹುಮಾನ

ವಿಶ್ವ ಕೆಡೆಟ್ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಸಾಧನೆ: ಚಾರ್ವಿಗೆ 5 ಲಕ್ಷ ನಗದು ಬಹುಮಾನ ಘೋಷಣೆ

6

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆತ್ಮೀಯ ಬೀಳ್ಕೊಡುಗೆ

ಪಿಎಫ್ ಐ ನಿಷೇಧ ಎಲ್ಲ ರಾಷ್ಟ್ರಪ್ರೇಮಿಗಳಿಗೆ ಸಮಾಧಾನ ತಂದಿದೆ:  ಕೆ.ಎಸ್.ಈಶ್ವರಪ್ಪ

ಪಿಎಫ್ ಐ ನಿಷೇಧ ಎಲ್ಲ ರಾಷ್ಟ್ರಪ್ರೇಮಿಗಳಿಗೆ ಸಮಾಧಾನ ತಂದಿದೆ: ಕೆ.ಎಸ್.ಈಶ್ವರಪ್ಪ

ಸೇನಾ ದಂಗೆ, ಗೃಹಬಂಧನ ವದಂತಿಗಳ ನಡುವೆ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಜಿನ್ ಪಿಂಗ್ ಪ್ರತ್ಯಕ್ಷ

ಸೇನಾ ದಂಗೆ, ಗೃಹಬಂಧನ ವದಂತಿಗಳ ನಡುವೆ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಜಿನ್ ಪಿಂಗ್ ಪ್ರತ್ಯಕ್ಷ

5

ಕಾಂಗ್ರೆಸ್ ಮುಖಂಡರು ಜನರ ಕ್ಷಮೆ ಕೇಳಬೇಕು: ಅರುಣ್ ಸಿಂಗ್ ಆಗ್ರಹ

ಗದಗ: ಕಂದಕಕ್ಕೆ ಬಿದ್ದು ಇಬ್ಬರು ಬೈಕ್ ಸವಾರರ ಸಾವು

ಗದಗ: ಕಂದಕಕ್ಕೆ ಬಿದ್ದು ಇಬ್ಬರು ಬೈಕ್ ಸವಾರರ ಸಾವು

4

ಪ್ರವೀಣ್ ನೆಟ್ಟಾರ್ ಸೇರಿದಂತೆ ಇತರ ಕೆಲವು ಹತ್ಯೆಗಳಿಗೂ ಪಿಎಫ್ಐ ಕಾರಣ..?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anatomy, Body health, Health tips, Eyes, Udayavani News, ದೇಹ ಮತ್ತು ಸಂಬಂಧ, ಜೀರ್ಣಾಂಗ, ಆರೋಗ್ಯ ಟಿಪ್ಸ್

ದೇಹ ಮತ್ತು ಸಂಬಂಧ; ಜೀರ್ಣಾಂಗದಲ್ಲಾಗುವ ಬದಲಾವಣೆಗಳು

ಸೆಪ್ಟೆಂಬರ್ 18-25; ಅಂತಾರಾಷ್ಟ್ರೀಯ ಸಮತೋಲನ ಅರಿವು ಸಪ್ತಾಹ

ಸೆಪ್ಟೆಂಬರ್ 18-25; ಅಂತಾರಾಷ್ಟ್ರೀಯ ಸಮತೋಲನ ಅರಿವು ಸಪ್ತಾಹ

3

ಗರ್ಭಕೋಶ ಕಂಠದ ಕ್ಯಾನ್ಸರ್‌

2

ಹಾವು ಕಡಿತ ನಾವು ತಿಳಿದುಕೊಳ್ಳಬೇಕಾದ ವಿಚಾರಗಳು

ಸೌಂದರ್ಯವರ್ಧಕ; ಕಹಿಯಾದರೂ ಮೆಂತೆ ಕಾಳು ಸೇವನೆ ಆರೋಗ್ಯಕ್ಕೆ ಉತ್ತಮ…

ಸೌಂದರ್ಯವರ್ಧಕ; ಕಹಿಯಾದರೂ ಮೆಂತೆ ಕಾಳು ಸೇವನೆ ಆರೋಗ್ಯಕ್ಕೆ ಉತ್ತಮ…

MUST WATCH

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

ಹೊಸ ಸೇರ್ಪಡೆ

ವಿಶ್ವ ಕೆಡೆಟ್ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಸಾಧನೆ: ಚಾರ್ವಿಗೆ 5 ಲಕ್ಷ ನಗದು ಬಹುಮಾನ

ವಿಶ್ವ ಕೆಡೆಟ್ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಸಾಧನೆ: ಚಾರ್ವಿಗೆ 5 ಲಕ್ಷ ನಗದು ಬಹುಮಾನ ಘೋಷಣೆ

6

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆತ್ಮೀಯ ಬೀಳ್ಕೊಡುಗೆ

ಪಿಎಫ್ ಐ ನಿಷೇಧ ಎಲ್ಲ ರಾಷ್ಟ್ರಪ್ರೇಮಿಗಳಿಗೆ ಸಮಾಧಾನ ತಂದಿದೆ:  ಕೆ.ಎಸ್.ಈಶ್ವರಪ್ಪ

ಪಿಎಫ್ ಐ ನಿಷೇಧ ಎಲ್ಲ ರಾಷ್ಟ್ರಪ್ರೇಮಿಗಳಿಗೆ ಸಮಾಧಾನ ತಂದಿದೆ: ಕೆ.ಎಸ್.ಈಶ್ವರಪ್ಪ

ಸೇನಾ ದಂಗೆ, ಗೃಹಬಂಧನ ವದಂತಿಗಳ ನಡುವೆ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಜಿನ್ ಪಿಂಗ್ ಪ್ರತ್ಯಕ್ಷ

ಸೇನಾ ದಂಗೆ, ಗೃಹಬಂಧನ ವದಂತಿಗಳ ನಡುವೆ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಜಿನ್ ಪಿಂಗ್ ಪ್ರತ್ಯಕ್ಷ

5

ಕಾಂಗ್ರೆಸ್ ಮುಖಂಡರು ಜನರ ಕ್ಷಮೆ ಕೇಳಬೇಕು: ಅರುಣ್ ಸಿಂಗ್ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.