Udayavni Special

ಮಹಾ ಮಳೆಗೆ ಜನಜೀವನ ಅಸ್ತವ್ಯಸ್ತ: ಗೋಡೆ ಕುಸಿದು ವ್ಯಕ್ತಿ ಸಾವು, ತುಂಬಿ ಹರಿಯುತ್ತಿದೆ ನದಿಗಳು

ಕೊಚ್ಚಿಕೊಂಡು ಹೋಗಿವೆ ಎಮ್ಮೆಗಳು, ಕೊಲ್ಲಾಪುರದಲ್ಲಿ ಅಪಾಯಕಾರಿ ಸ್ಥಿತಿ

Team Udayavani, Jun 18, 2021, 10:36 PM IST

ಮಹಾ ಮಳೆಗೆ ಜನಜೀವನ ಅಸ್ತವ್ಯಸ್ತ: ಗೋಡೆ ಕುಸಿದು ವ್ಯಕ್ತಿ ಸಾವು, ತುಂಬಿ ಹರಿಯುತ್ತಿದೆ ನದಿಗಳು

ಮುಂಬೈ: ದೇಶದಲ್ಲೆಲ್ಲ ಮುಂಗಾರುಮಳೆ ಆರಂಭವಾಗಿದ್ದು, ಅದರ ತೀವ್ರ ಪರಿಣಾಮ ಮಹಾರಾಷ್ಟ್ರದಲ್ಲಿ ಕಂಡುಬಂದಿದೆ. ಗುರುವಾರ, ಶುಕ್ರವಾರ ಸತತವಾಗಿ ಸುರಿದ ಭಾರೀ ಮಳೆಯಿಂದಾಗಿ ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ. ಕೊಲ್ಲಾಪುರದ ಪಂಚಗಂಗಾ ನದಿ ತುಂಬಿ ಹರಿಯುತ್ತಿದೆ. ಅಲ್ಲಿನ ರಾಜಾರಾಮ್‌ ಅಣೆಕಟ್ಟು ನೀರಿನಪ್ರಮಾಣ ತೀವ್ರವಾಗಿದ್ದು, ಅಪಾಯದ ಮಟ್ಟಕ್ಕೆ ಸನಿಹವಾಗಿದೆ. ಥಾಣೆಯಲ್ಲಿ ಮನೆಯೊಂದು ಕುಸಿದಿದೆ, ಮುಲುಂದ್‌ನಲ್ಲಿ ವ್ಯಕ್ತಿಯೊಬ್ಬರು ಮೃತರಾಗಿದ್ದಾರೆ. ಅದರ ಪರಿಣಾಮ, ಉತ್ತರಕರ್ನಾಟಕದ ಕೆಲವು ನದಿಗಳಲ್ಲಿ ಪ್ರವಾಹ ಭೀತಿ ಆವರಿಸಿದೆ.

ಎಲ್ಲೆಲ್ಲಿ ಏನಾಗಿದೆ?
ಕೊಲ್ಲಾಪುರ: ಕರ್ನಾಟಕದ ಗಡಿಭಾಗಕ್ಕೆ ಸಮೀಪದಲ್ಲಿರುವ ಕೊಲ್ಲಾಪುರದಲ್ಲಿ ಕಳೆದ ಮೂರುನಾಲ್ಕು ದಿನಗಳಿಂದ ವಿಪರೀತ ಮಳೆ ಸುರಿಯುತ್ತಿದೆ. ಅಣೆಕಟ್ಟುಗಳ ಜಲಾನಯನ ಪ್ರದೇಶಗಳಲ್ಲಿ ನೀರು ತುಂಬಿಕೊಂಡಿರುವುದರಿಂದ, ಪಂಚಗಂಗಾ ನದಿಯಲ್ಲಿ ನೀರಿನ ಹರಿವು ತೀವ್ರವಾಗಿದೆ. ಗುರುವಾರ ಸಂಜೆಗೇ ರಾಜಾರಾಮ್‌ ಅಣೆಕಟ್ಟೆಯ ನೀರಿನಮಟ್ಟ 31.1 ಅಡಿಗೆ ಮುಟ್ಟಿದೆ. ಅಪಾಯದಮಟ್ಟ 39 ಅಡಿ. ಮಳೆ ಹೀಗೆಯೇ ಮುಂದುವರಿದರೆ ಅಲ್ಲಿ ವಿಪ್ಲವ ಸೃಷ್ಟಿಯಾಗುವುದರಲ್ಲಿ ಸಂದೇಹವೇ ಇಲ್ಲ. ಕಳೆದ 24 ಗಂಟೆಗಳಲ್ಲಿ ಈ ಜಿಲ್ಲೆಯಲ್ಲಿ 104.3 ಎಂಎಂ ಮಳೆಯಾಗಿದೆ. ಗಂಗನ್‌ಬಾವಾx ತಾಲೂಕಿನಲ್ಲಿ ಗರಿಷ್ಠ 182.7 ಮಿಲಿ ಮೀಟರ್‌ ಮಳೆಯಾಗಿದೆ. ಜಿಲ್ಲಾಡಳಿತದ ಪ್ರಕಾರ ಜಿಲ್ಲೆಯ 58 ಅಣೆಕಟ್ಟುಗಳು ಮುಳುಗಿವೆ.

ಇದನ್ನೂ ಓದಿ :ಗೂಗಲ್ ಪಿಕ್ಸೆಲ್ಸ್ ಇಯರ್ ಬಡ್ಸ್ – ರಿಯಲ್ ಟೈಮ್ ಟ್ರಾನ್‌ ಸ್ಲೇಶನ್

ಪುಣೆಯಲ್ಲೂ ರಾದ್ಧಾಂತ
ಪುಣೆ ನಗರದ ಖಡಕ್‌ಮಲ್‌ ಅಲಿ ಪ್ರದೇಶದಲ್ಲಿನ ಹಳೆಯಕಾಲದ (ವಾಡೆ) ಭಾರೀ ಮನೆಯೊಂದರ ಗೋಡೆಗಳು ಗುರುವಾರ ಸಂಜೆ ಕುಸಿದಿವೆ. ಪರಿಣಾಮ ಮಹಿಳೆ ಸೇರಿ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ. ಅದೃಷ್ಟವಶಾತ್‌ ಸಾವು ಸಂಭವಿಸಿಲ್ಲ.
ಥಾಣೆ: ಥಾಣೆಯಲ್ಲಿ ಶುಕ್ರವಾರ ಬೆಳಗ್ಗೆ ಕಟ್ಟಡವೊಂದು ಉರುಳಿಬಿದ್ದಿದೆ. ಇದುವರೆಗಿನ ಮಾಹಿತಿ ಪ್ರಕಾರ ಸಾವುನೋವುಗಳು ವರದಿಯಾಗಿಲ್ಲ. ಇನ್ನು ಮುಲುಂದ್‌ ಪ್ರದೇಶದಲ್ಲಿ ಗೋಡೆಯೊಂದು ಕುಸಿದು 35 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಪಾಲ^ರ್‌: ಪಾಲ^ರ್‌ನ ವಿರಾರ್‌ನಲ್ಲಿ ಭಾರೀ ಮಳೆಯಿಂದಾಗಿ ಮೇಯುತ್ತಿದ್ದ ಮೂರು ಎಮ್ಮೆಗಳು ಕೊಚ್ಚಿಕೊಂಡು ಹೋಗಿವೆ. ಅಗ್ನಿಶಾಮಕದಳ ಎರಡನ್ನು ಬಚಾವ್‌ ಮಾಡಿದೆ.

ಅರಬ್ಬಿ ಸಮುದ್ರದ ಚಂಡಮಾರುತವೇ ಕಾರಣ!
ಮುಂಬೈನಲ್ಲಂತೂ ಮಳೆ ಸತತವಾಗಿ ಸುರಿಯುತ್ತಿದೆ. ವಾರಾಂತ್ಯದವರೆಗೂ ಹೀಗೆಯೇ ಮಳೆ ಸಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅರಬ್ಬಿ ಸಮುದ್ರದಲ್ಲಿ ಚಂಡಮಾರುತಗಳು ಬೀಸತೊಡಗಿವೆ. ಅದರ ಪರಿಣಾಮ ದಕ್ಷಿಣ ಕರ್ನಾಟಕದ ಸಮುದ್ರತೀರದಿಂದ ಮಳೆಮಾರುತಗಳು ಉತ್ತರ ಕೇರಳದ ಕರಾವಳಿ ತೀರಕ್ಕೆ ಅಪ್ಪಳಿಸುತ್ತಿವೆ. ಇದರಿಂದ ಕೊಂಕಣ, ಗೋವಾ, ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಮುಂದಿನೆರಡು ದಿನ ಭಾರೀ ಮಳೆಯಾಗಲಿದೆ. ಈ ರಾಜ್ಯದ ಥಾಣೆ, ಪಾಲ್ಘಾರ್, ರಾಯಗಡಗಳು ಭಾರೀ ಮಳೆಯ ಭೀತಿಯಲ್ಲಿವೆ.

ಟಾಪ್ ನ್ಯೂಸ್

ಮಾದನಾಯಕನಹಳ್ಳಿ ಪೊಲೀಸರ ಭರ್ಜರಿ ಕಾರ್ಯಚರಣೆ : 46 ಬೈಕ್ ಸಹಿತ ಐವರು ಕಳ್ಳರ ಬಂಧನ

ಮಾದನಾಯಕನಹಳ್ಳಿ ಪೊಲೀಸರ ಭರ್ಜರಿ ಕಾರ್ಯಚರಣೆ : 46 ಬೈಕ್ ಸಹಿತ ಐವರು ಕಳ್ಳರ ಬಂಧನ

ಕೃಷ್ಣಾ ನದಿಯಲ್ಲಿ ತಗ್ಗಿದ ನೀರಿನ ಪ್ರಮಾಣ : ಸಂತ್ರಸ್ತರು ನಿರಾಳ

ಕೃಷ್ಣಾ ನದಿಯಲ್ಲಿ ತಗ್ಗಿದ ನೀರಿನ ಪ್ರಮಾಣ : ಸಂತ್ರಸ್ತರು ನಿರಾಳ

fgdrty

ಸಚಿವ ಸ್ಥಾನಕ್ಕಾಗಿ ಆರಂಭವಾದ ಕಸರತ್ತು

ಬಂಡೀಪುರಕ್ಕೆ “ಹುಲಿ ಸಂರಕ್ಷಣೆ ಮೆಚ್ಚುಗೆ’ : ದೇಶದ 14 ಹುಲಿ ಅಭಯಾರಣ್ಯಗಳಿಗೆ ಈ ಮಾನ್ಯತೆ

ಕರ್ನಾಟಕದ ಬಂಡೀಪುರ ಸೇರಿ ದೇಶದ 14 ಹುಲಿ ಅಭಯಾರಣ್ಯಗಳಿಗೆ CATS ಮಾನ್ಯತೆ

ft44

ರಾಜ್ಯದಲ್ಲಿ ಕೋವಿಡ್ ಕೊಂಚ ಇಳಿಕೆ: ಇಂದು 1890 ಹೊಸ ಪ್ರಕರಣ ಪತ್ತೆ

Why is there a COVID-19 spike in Kerala?

ಕೋವಿಡ್ ಸೋಂಕನ್ನು ನಿಯಂತ್ರಣ ಮಾಡುವಲ್ಲಿ ಮಾದರಿಯಾಗಿದ್ದ ಕೇರಳ ಈಗೇಕೆ ಹೀಗೆ..?!

fgdfgergr

ಕಿರುತೆರೆ ನಟನಿಂದ ಯುವತಿಗೆ ಮೋಸ: ಕೈಗೆ ಮಗು ಕೊಟ್ಟು ಪರಾರಿಯಾದ ‘ವಿಲನ್’ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಂಡೀಪುರಕ್ಕೆ “ಹುಲಿ ಸಂರಕ್ಷಣೆ ಮೆಚ್ಚುಗೆ’ : ದೇಶದ 14 ಹುಲಿ ಅಭಯಾರಣ್ಯಗಳಿಗೆ ಈ ಮಾನ್ಯತೆ

ಕರ್ನಾಟಕದ ಬಂಡೀಪುರ ಸೇರಿ ದೇಶದ 14 ಹುಲಿ ಅಭಯಾರಣ್ಯಗಳಿಗೆ CATS ಮಾನ್ಯತೆ

Why is there a COVID-19 spike in Kerala?

ಕೋವಿಡ್ ಸೋಂಕನ್ನು ನಿಯಂತ್ರಣ ಮಾಡುವಲ್ಲಿ ಮಾದರಿಯಾಗಿದ್ದ ಕೇರಳ ಈಗೇಕೆ ಹೀಗೆ..?!

Thehalka former Editar Tharun Tejpal

ತೇಜ್ ಪಾಲ್ ಅತ್ಯಾಚಾರ ಪ್ರಕರಣ : ಆಗಸ್ಟ್ 9ಕ್ಕೆ ವಿಚಾರಣೆ ಮುಂದೂಡಿದ ಬಾಂಬೆ ಹೈ ಕೋರ್ಟ್

ಬ್ಯಾಂಕ್ ಮ್ಯಾನೇಜರ್ ಗೆ ಚೂರಿಯಿಂದ ಇರಿದು ಹತ್ಯೆಗೈದ ಮಾಜಿ ಬ್ಯಾಂಕ್ ಮ್ಯಾನೇಜರ್!

ಬ್ಯಾಂಕ್ ಮ್ಯಾನೇಜರ್ ಗೆ ಚೂರಿಯಿಂದ ಇರಿದು ಹತ್ಯೆಗೈದ ಮಾಜಿ ಬ್ಯಾಂಕ್ ಮ್ಯಾನೇಜರ್!

ಸಿಬಿಎಸ್ ಇ 12ನೇ ತರಗತಿ ಫಲಿತಾಂಶ ಪ್ರಕಟ: ಶೇ.99.37 ವಿದ್ಯಾರ್ಥಿಗಳು ತೇರ್ಗಡೆ

ಸಿಬಿಎಸ್ ಇ 12ನೇ ತರಗತಿ ಫಲಿತಾಂಶ ಪ್ರಕಟ: ಶೇ.99.37 ವಿದ್ಯಾರ್ಥಿಗಳು ತೇರ್ಗಡೆ

MUST WATCH

udayavani youtube

ನಿರ್ಬಂಧವಿದ್ದರೂ ಲಂಚ ಪಡೆದು ವಾಹನ ಸಂಚಾರಕ್ಕೆ ಅವಕಾಶ

udayavani youtube

ನನಗೆ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಲು ಬಿಎಸ್‍ ವೈ ಕಾರಣ : ಯತ್ನಾಳ್

udayavani youtube

ನಂಗೋಸ್ಕರ foreignಇಂದ ಚಾಕಲೇಟ್ ಬರ್ತಿದೆ ..!

udayavani youtube

ಪೂರ್ವಜನ್ಮದಲ್ಲಿ ನಾನು ಕನ್ನಡಿಗನಾಗಿ ಹುಟ್ಟಿದ್ದೆ ಅನ್ಸುತ್ತೆ

udayavani youtube

ನಾನು ಹಾಕುವ ಬಟ್ಟೆ ಬರೆಗಳು ಅತೀ ಹೆಚ್ಚು ಹೆಂಗಸ್ರು ಹಾಕುವ ಬಣ್ಣಗಳು !

ಹೊಸ ಸೇರ್ಪಡೆ

ಮಾದನಾಯಕನಹಳ್ಳಿ ಪೊಲೀಸರ ಭರ್ಜರಿ ಕಾರ್ಯಚರಣೆ : 46 ಬೈಕ್ ಸಹಿತ ಐವರು ಕಳ್ಳರ ಬಂಧನ

ಮಾದನಾಯಕನಹಳ್ಳಿ ಪೊಲೀಸರ ಭರ್ಜರಿ ಕಾರ್ಯಚರಣೆ : 46 ಬೈಕ್ ಸಹಿತ ಐವರು ಕಳ್ಳರ ಬಂಧನ

ಕೃಷ್ಣಾ ನದಿಯಲ್ಲಿ ತಗ್ಗಿದ ನೀರಿನ ಪ್ರಮಾಣ : ಸಂತ್ರಸ್ತರು ನಿರಾಳ

ಕೃಷ್ಣಾ ನದಿಯಲ್ಲಿ ತಗ್ಗಿದ ನೀರಿನ ಪ್ರಮಾಣ : ಸಂತ್ರಸ್ತರು ನಿರಾಳ

fgdrty

ಸಚಿವ ಸ್ಥಾನಕ್ಕಾಗಿ ಆರಂಭವಾದ ಕಸರತ್ತು

ಬಂಡೀಪುರಕ್ಕೆ “ಹುಲಿ ಸಂರಕ್ಷಣೆ ಮೆಚ್ಚುಗೆ’ : ದೇಶದ 14 ಹುಲಿ ಅಭಯಾರಣ್ಯಗಳಿಗೆ ಈ ಮಾನ್ಯತೆ

ಕರ್ನಾಟಕದ ಬಂಡೀಪುರ ಸೇರಿ ದೇಶದ 14 ಹುಲಿ ಅಭಯಾರಣ್ಯಗಳಿಗೆ CATS ಮಾನ್ಯತೆ

ft44

ರಾಜ್ಯದಲ್ಲಿ ಕೋವಿಡ್ ಕೊಂಚ ಇಳಿಕೆ: ಇಂದು 1890 ಹೊಸ ಪ್ರಕರಣ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.