ಹಿಪ್ಪರಗಿ ಡ್ಯಾಂ ಡೆಡ್‌ ಸ್ಟೋರೇಜ್‌ ನೀರೂ ಖಾಲಿ!

Team Udayavani, May 6, 2019, 3:08 AM IST

hipparagi

ಬಾಗಲಕೋಟೆ: ಉತ್ತರ ಕರ್ನಾಟಕದ ಜೀವಜಲ ಕೃಷ್ಣೆಯ ಒಡಲಲ್ಲಿ ಈಗ ನೀರಿನ ಆತಂಕ ತೀವ್ರವಾಗಿದೆ. ಬೆಳಗಾವಿ-ಬಾಗಲಕೋಟೆ ಜಿಲ್ಲೆಗಳ ಐದು ತಾಲೂಕಿನ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಆಸರೆಯಾಗಿದ್ದ ಜಿಲ್ಲೆಯ ಹಿಪ್ಪರಗಿ ಬ್ಯಾರೇಜ್‌ (ಚಿಕ್ಕ ಡ್ಯಾಂ) ಸಂಪೂರ್ಣ ಖಾಲಿಯಾಗಿದೆ. ಹೀಗಾಗಿ ಮಹಾರಾಷ್ಟ್ರದ ಕೊಯ್ನಾ ನೀರಿನತ್ತ ಮುಖ ಮಾಡುವ ಪರಿಸ್ಥಿತಿ ಬಂದೊದಗಿದೆ.

ಜಿಲ್ಲೆಯ ಜಮಖಂಡಿ, ರಬಕವಿ-ಬನಹಟ್ಟಿ, ತೇರದಾಳ ನಗರ-ಪಟ್ಟಣಗಳು, ಬೆಳಗಾವಿ ಜಿಲ್ಲೆಯ ಕುಡಚಿ, ಅಥಣಿ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆಗೆ ಜಲಮೂಲವೇ ಹಿಪ್ಪರಗಿ ಬ್ಯಾರೇಜ್‌. ಈ ಬಾರಿ ಡೆಡ್‌ ಸ್ಟೋರೇಜ್‌ ನೀರೂ ಸದ್ಯ ಖಾಲಿಯಾಗಿದೆ. ಜಮಖಂಡಿ ತಾಲೂಕು ಹಿಪ್ಪರಗಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಹಿಪ್ಪರಗಿ ಡ್ಯಾಂ 524.87 ಮೀಟರ್‌ ಎತ್ತರವಿದ್ದು, 6.1 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದೆ.

0.8 ಟಿಎಂಸಿ ಅಡಿ ಡೆಡ್‌ ಸ್ಟೋರೇಜ್‌ ಇದೆ. ಆದರೆ, ಈ ಬಾರಿ ನೀರಿನ ತೀವ್ರ ಅಭಾವದಿಂದ ಡೆಡ್‌ಸ್ಟೋರೇಜ್‌ನಲ್ಲಿದ್ದ ನೀರನ್ನೂ ಪೈಪ್‌ ಅಳವಡಿಸಿ ಮೇಲೆತ್ತಲಾಗಿದೆ. ಹೀಗಾಗಿ ಸದ್ಯ ಸಂಪೂರ್ಣ ಖಾಲಿಯಾಗಿದೆ. ಕಳೆದ ವರ್ಷ ಇದೇ ದಿನ ಈ ಡ್ಯಾಂನಲ್ಲಿ 0.8 ಟಿಎಂಸಿ ಅಡಿ (ಡೆಡ್‌ ಸ್ಟೋರೇಜ್‌) ನೀರಿತ್ತು.

ಬಾಗಲಕೋಟೆ ಜಿಲ್ಲೆಯ ಮೂರು ಹಾಗೂ ಬೆಳಗಾವಿ ಜಿಲ್ಲೆಯ ಎರಡು ತಾಲೂಕು ಸಹಿತ, ಎರಡು ಜಿಲ್ಲೆಗಳ ಸುಮಾರು 95ಕ್ಕೂ ಹೆಚ್ಚು ಹಳ್ಳಿಗಳಿಗೆ ಇದೇ ಡ್ಯಾಂನಿಂದ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಇದೆ. ಐದು ತಾಲೂಕು ಕೇಂದ್ರದ ನಗರ-ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆಯ ಪ್ರತ್ಯೇಕ ಯೋಜನೆಗಳಿವೆ.

ಅಲ್ಲದೇ ಸುಮಾರು 15 ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಗೆ ಇದೇ ಡ್ಯಾಂನ ನೀರೇ ಆಧಾರ. ಆದರೆ, ಕಳೆದ ನಾಲ್ಕು ದಿನಗಳಿಂದ ಬ್ಯಾರೇಜ್‌ ಸಂಪೂರ್ಣ ಖಾಲಿಯಾಗಿದ್ದು, ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿ ಮೂಲಕ, ಹಿಪ್ಪರಗಿ ಜಲಾಶಯಕ್ಕೆ ನೀರು ಬಿಡಿಸಬೇಕೆಂಬ ಒತ್ತಡ ಕೇಳಿ ಬಂದಿದೆ.

ಹಿಪ್ಪರಗಿ ಜಲಾಶಯ ಸಂಪೂರ್ಣ ಖಾಲಿಯಾಗಿದ್ದು, ಕೂಡಲೇ ಕೊಯ್ನಾದಿಂದ ಕೃಷ್ಣಾ ನದಿಗೆ 5 ಟಿಎಂಸಿ ನೀರು ಬಿಡಿಸಲು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಕುಮಾರಸ್ವಾಮಿ, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಮಹಾರಾಷ್ಟ್ರ ಸರ್ಕಾರ ಶೀಘ್ರವೇ ನೀರು ಬಿಡುವ ವಿಶ್ವಾಸವಿದೆ.
-ಆನಂದ ನ್ಯಾಮಗೌಡ, ಜಮಖಂಡಿ ಶಾಸಕ

ಹಿಪ್ಪರಗಿ ಜಲಾಶಯಕ್ಕೆ ನೀರು ಬಿಡಿಸುವ ವಿಷಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಮೂಲಕ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌ ಅವರೊಂದಿಗೆ ಮಾತನಾಡಿದ್ದೇವೆ. ನಮ್ಮ ಮನವಿಗೆ ಅವರೂ ಸ್ಪಂದಿಸಿದ್ದು, ನೀರು ಬಿಡಲು ಸಮ್ಮತಿಸಿದ್ದಾರೆ.
-ಮುರಗೇಶ ನಿರಾಣಿ, ಬೀಳಗಿ ಶಾಸಕ

* ಶ್ರೀಶೈಲ ಕೆ. ಬಿರಾದಾರ

ಟಾಪ್ ನ್ಯೂಸ್

ಅಗ್ರಸ್ಥಾನ ಅಲಂಕರಿಸಿದ ಬೆಂಗಳೂರು ಬುಲ್ಸ್‌

ಅಗ್ರಸ್ಥಾನ ಅಲಂಕರಿಸಿದ ಬೆಂಗಳೂರು ಬುಲ್ಸ್‌

ಸುಪ್ರಸಿದ್ಧ ಯಕ್ಷಗಾನ ಸ್ತ್ರೀವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್ ನಿಧನ

ಸುಪ್ರಸಿದ್ಧ ಯಕ್ಷಗಾನ ಸ್ತ್ರೀವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್ ನಿಧನ

ಭಾರತವನ್ನು ಕ್ಲೀನ್‌ ಸ್ವೀಪ್‌ ಮಾಡಿದ ದಕ್ಷಿಣ ಆಫ್ರಿಕಾ

ಭಾರತವನ್ನು ಕ್ಲೀನ್‌ ಸ್ವೀಪ್‌ ಮಾಡಿದ ದಕ್ಷಿಣ ಆಫ್ರಿಕಾ

ಉಡುಪಿ: 1,061; ದಕ್ಷಿಣ ಕನ್ನಡ: 770 ಮಂದಿಗೆ ಕೋವಿಡ್‌ ಸೋಂಕು

ಉಡುಪಿ: 1,061; ದಕ್ಷಿಣ ಕನ್ನಡ: 770 ಮಂದಿಗೆ ಕೋವಿಡ್‌ ಸೋಂಕು

ಪಿಂಚಣಿ ಪಡೆಯಲು ಶವವನ್ನೇ ಅಂಚೆ ಕಚೇರಿಗೆ ಒಯ್ದರು!

ಪಿಂಚಣಿ ಪಡೆಯಲು ಶವವನ್ನೇ ಅಂಚೆ ಕಚೇರಿಗೆ ಒಯ್ದರು!

ಕೋವಿಡ್‌ ಪರೀಕ್ಷೆ ಹೆಚ್ಚಳದಿಂದ ಸೋಂಕು ನಿಯಂತ್ರಣ: ಸಚಿವ ಡಾ.ಕೆ. ಸುಧಾಕರ್‌

ಕೋವಿಡ್‌ ಪರೀಕ್ಷೆ ಹೆಚ್ಚಳದಿಂದ ಸೋಂಕು ನಿಯಂತ್ರಣ: ಸಚಿವ ಡಾ.ಕೆ. ಸುಧಾಕರ್‌

ಮೇಕೆದಾಟು ಪಾದಯಾತ್ರೆ ತಡೆಗೆ ಬಿಜೆಪಿ ಕುತಂತ್ರ: ಸತೀಶ ಜಾರಕಿಹೊಳಿ

ಮೇಕೆದಾಟು ಪಾದಯಾತ್ರೆ ತಡೆಗೆ ಬಿಜೆಪಿ ಕುತಂತ್ರ: ಸತೀಶ ಜಾರಕಿಹೊಳಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್‌ ಪರೀಕ್ಷೆ ಹೆಚ್ಚಳದಿಂದ ಸೋಂಕು ನಿಯಂತ್ರಣ: ಸಚಿವ ಡಾ.ಕೆ. ಸುಧಾಕರ್‌

ಕೋವಿಡ್‌ ಪರೀಕ್ಷೆ ಹೆಚ್ಚಳದಿಂದ ಸೋಂಕು ನಿಯಂತ್ರಣ: ಸಚಿವ ಡಾ.ಕೆ. ಸುಧಾಕರ್‌

ಚಾಮರಾಜನಗರದಲ್ಲಿ ಕೋವಿಡ್ ಪ್ರಕರಣಗಳ ಸ್ಫೋಟ : 752 ಪ್ರಕರಣ ದೃಢ

ಚಾಮರಾಜನಗರದಲ್ಲಿ ಕೋವಿಡ್ ಪ್ರಕರಣಗಳ ಸ್ಫೋಟ : 752 ಪ್ರಕರಣ ದೃಢ, ಓರ್ವ ಸೋಂಕಿತ ಸಾವು

ಭಟ್ಕಳ : ಮನೆಯ ಬೀಗ ಮುರಿದು ನಗ ನಾಣ್ಯ ದೋಚಿ ಪರಾರಿಯಾದ ಕಳ್ಳರು

ಮನೆಗೆ ಕನ್ನ ಹಾಕಿದ ಕಳ್ಳರು, ಅಪಾರ ಪ್ರಮಾಣದ ಸೊತ್ತು ಕಳವು : ಪೊಲೀಸರಿಂದ ಶೋಧ ಕಾರ್ಯ

ಸೋಡಿಗದ್ದೆ ದೇವಿಯ ವಾರ್ಷಿಕ ಜಾತ್ರೆ ಆರಂಭ : ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಮುಖ

ಸೋಡಿಗದ್ದೆ ದೇವಿಯ ವಾರ್ಷಿಕ ಜಾತ್ರೆ ಆರಂಭ : ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಮುಖ

containment ZOne

ರಾಜ್ಯದಲ್ಲಿ ಇಂದು 50 ಸಾವಿರ ಕೋವಿಡ್ ಕೇಸ್ : 165 ಹೊಸ ಒಮಿಕ್ರಾನ್; 19 ಸಾವು

MUST WATCH

udayavani youtube

ಕೋಲ್ಕತಾದಲ್ಲಿ ಬಿಜೆಪಿ ಮತ್ತು ಟಿಎಂಸಿ ಘರ್ಷಣೆ; ಸಂಸದರ ಮೇಲೆ ಕಲ್ಲು ತೂರಾಟ

udayavani youtube

ಹೆಣ ಸಾಗಿಸಲು ಹೆಣಗಾಟ..!| ಇದು ಹೊಳೆಕೂಡಿಗೆ ಗ್ರಾಮದ ಜನರ ನರಕದ ಬದುಕು

udayavani youtube

ಕತ್ತಲೆ ಬಸದಿಯ ಇತಿಹಾಸ

udayavani youtube

ತೊಕ್ಕೊಟ್ಟು : ಕಂಟೈನರ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಬಾರಿ ಅನಾಹುತ

udayavani youtube

ತಪ್ಪಿಸುಕೊಳ್ಳಲು ಯತ್ನಿಸುವಾಗ ಕಟ್ಟಡದಿಂದ ಬಿದ್ದ ಕಳ್ಳ

ಹೊಸ ಸೇರ್ಪಡೆ

ಅಗ್ರಸ್ಥಾನ ಅಲಂಕರಿಸಿದ ಬೆಂಗಳೂರು ಬುಲ್ಸ್‌

ಅಗ್ರಸ್ಥಾನ ಅಲಂಕರಿಸಿದ ಬೆಂಗಳೂರು ಬುಲ್ಸ್‌

ಸುಪ್ರಸಿದ್ಧ ಯಕ್ಷಗಾನ ಸ್ತ್ರೀವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್ ನಿಧನ

ಸುಪ್ರಸಿದ್ಧ ಯಕ್ಷಗಾನ ಸ್ತ್ರೀವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್ ನಿಧನ

ಭಾರತವನ್ನು ಕ್ಲೀನ್‌ ಸ್ವೀಪ್‌ ಮಾಡಿದ ದಕ್ಷಿಣ ಆಫ್ರಿಕಾ

ಭಾರತವನ್ನು ಕ್ಲೀನ್‌ ಸ್ವೀಪ್‌ ಮಾಡಿದ ದಕ್ಷಿಣ ಆಫ್ರಿಕಾ

ಉಡುಪಿ: 1,061; ದಕ್ಷಿಣ ಕನ್ನಡ: 770 ಮಂದಿಗೆ ಕೋವಿಡ್‌ ಸೋಂಕು

ಉಡುಪಿ: 1,061; ದಕ್ಷಿಣ ಕನ್ನಡ: 770 ಮಂದಿಗೆ ಕೋವಿಡ್‌ ಸೋಂಕು

ಪಿಂಚಣಿ ಪಡೆಯಲು ಶವವನ್ನೇ ಅಂಚೆ ಕಚೇರಿಗೆ ಒಯ್ದರು!

ಪಿಂಚಣಿ ಪಡೆಯಲು ಶವವನ್ನೇ ಅಂಚೆ ಕಚೇರಿಗೆ ಒಯ್ದರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.