ಹೋಮ್ ಐಸೋಲೇಶನ್ ಸೋಂಕಿತರ ನಿಗಾ: ಸಚಿವ ಡಾ| ಕೆ. ಸುಧಾಕರ್
Team Udayavani, Jan 29, 2022, 6:50 AM IST
ಬೆಂಗಳೂರು: ರಾಜ್ಯದಲ್ಲಿ ಹೋಮ್ ಐಸೋಲೇಶನ್‌ನಲ್ಲಿರುವ ಸೋಂಕಿತ ಚಿಕಿತ್ಸೆಗೆ ಹೆಚ್ಚಿನ ಗಮನ ನೀಡುವಂತೆ ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ ಎಂದು ಆರೋಗ್ಯ ಸಚಿವ ಡಾ| ಕೆ. ಸುಧಾಕರ್ ತಿಳಿಸಿದರು.
ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವರ ಜತೆಗೆ ಆರೋಗ್ಯ ಸಚಿವ ಡಾ| ಕೆ. ಸುಧಾಕರ್ ಅವರ ವೀಡಿಯೋ ಸಂವಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಹೋಂ ಐಸೋಲೇಶನ್ ನಲ್ಲಿರುವವರ ಮೇಲೆ ಹೆಚ್ಚು ನಿಗಾ, ಇ-ಸಂಜೀವಿನಿಯಲ್ಲಿ ಎರಡನೇ ಸ್ಥಾನದಲ್ಲಿರುವುದು, ಅದಕ್ಕೂ ಹೆಚ್ಚಾಗಿ ಆಪ್ತಮಿತ್ರ ಮೂಲಕ ಟೆಲಿ ಟ್ರಯಾಜಿಂಗ್ ಮೊದಲಾದ ಮಾಹಿತಿಗಳನ್ನು ಅವರು ಪಡೆದಿದ್ದಾರೆ. ಬಹಳ ಯಶಸ್ವಿಯಾಗಿ ದೂರವಾಣಿ ಮೂಲಕ ನಿರ್ವಹಣೆ ಮಾಡುತ್ತಿರುವುದು ವಿಶೇಷವಾಗಿದೆ. ಶೇ. 95ರಷ್ಟು ಸೋಂಕಿತರು ಮನೆಯಲ್ಲಿದ್ದರೂ ಆತಂಕವಿಲ್ಲ. ಶೇ. 4ರಷ್ಟು ಜನರು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ:10-15 ಜನ ಕಾಂಗ್ರೆಸ್ ತೊರೆಯಲಿದ್ದಾರೆ: ಆರ್.ಅಶೋಕ್
ರಾಜ್ಯದಲ್ಲಿ ಮರಣ ಪ್ರಮಾಣ ಹೆಚ್ಚಾಗುತ್ತಿಲ್ಲ. ಪ್ರಸ್ತುತ ಮರಣ ಪ್ರಮಾಣ ಶೇ. 0.55ಇದೆ. ಸಹ ಅಸ್ವಸ್ಥತೆ ಸೇರಿದಂತೆ ಸಾವಿಗೆ ಹಲವು ಕಾರಣಗಳಿವೆ. ಇದಕ್ಕಾಗಿ ಡೆತ್ ಆಡಿಟ್ ನಡೆಸಲಾಗುತ್ತಿದೆ. ಸಂಪೂರ್ಣ ವರದಿಯ ಸಹ ಲಭ್ಯವಿದೆ.
ಇನ್ನೂ ಕೋವಿಡ್ ನಿಯಮಾವಳಿ ಸಡಿಲಿಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸಿಎಂ ನೇತೃತ್ವದಲ್ಲಿ ಸಭೆ ನಡೆದ ಬಳಿಕವಷ್ಟೇ ಮುಂದಿನ ನಿರ್ಧಾರ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾವಗಡ : ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ
ವರ್ಷದೊಳಗೆ 3.55 ಕೋಟಿ ವೆಚ್ಚದ ರಾಜಕಾಲುವೆ ನಿರ್ಮಾಣ ಭರವಸೆ : ಎಸ್.ಜಯರಾಂ
ಶಿಕ್ಷಣವನ್ನು ಕೇಸರೀಕರಣಗೊಳಿಸಲು ಹೊರಟಿದೆ ಬಿಜೆಪಿ : ಪ್ರಿಯಾಂಕ್ ಖರ್ಗೆ ಆರೋಪ
ಬಿಜೆಪಿ ಕ್ಯಾನ್ಸರ್ ಇದ್ದಂತೆ ಮನುಕುಲ ನಾಶ ಮಾಡಲಿದೆ : ಸಿದ್ದರಾಮಯ್ಯ ವಾಗ್ದಾಳಿ
ಮುಂಗಾರು ಪೂರ್ವ ಬಿತ್ತನೆ ಚಟುವಟಿಕೆ ಆರಂಭ : ರೋಹಿಣಿ ಮಳೆಯ ನಿರೀಕ್ಷೆಯಲ್ಲಿ ರೈತ
MUST WATCH
ಹೊಸ ಸೇರ್ಪಡೆ
ಪಾವಗಡ : ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ
ವರ್ಷದೊಳಗೆ 3.55 ಕೋಟಿ ವೆಚ್ಚದ ರಾಜಕಾಲುವೆ ನಿರ್ಮಾಣ ಭರವಸೆ : ಎಸ್.ಜಯರಾಂ
ಹಿಪ್ಹಾಪ್ ನೃತ್ಯದ ಜೊತೆ ಹೈಬ್ರಿಡ್ ಭರತನಾಟ್ಯ : ನೆಟ್ಟಿಗರಿಂದ ಭಾರಿ ಮೆಚ್ಚುಗೆ
ರೆನ್ಯೂ ಪವರ್ನಿಂದ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ : ಸಿಎಂ ಬೊಮ್ಮಾಯಿ
ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ