ಯುವತಿಗೆ ಸರ್ ಪ್ರೈಸ್ ಪ್ರಪೋಸ್ ಮಾಡಲು ಕ್ಯಾಂಡೆಲ್ ಹಚ್ಚಿ ಮನೆಯನ್ನೇ ಸುಟ್ಟ ಪ್ರೇಮಿ
Team Udayavani, Aug 16, 2020, 4:27 PM IST
ಲಂಡನ್ ; ತನ್ನ ಯುವತಿಗೆ ವಿಶೇಷ ರೀತಿಯಲ್ಲಿ ಪ್ರೀತಿ ನಿವೇದನೆ ಮಾಡಬೇಕೆಂದು ಹೋಗಿ ತನ್ನ ಮನೆಯೇ ಸುಟ್ಟು ಹೋದ ಪ್ರಸಂಗ ಲಂಡನ್ ನ ಯಾರ್ಕ್ ಶೈರ್ ನಲ್ಲಿ ನಡೆದಿದೆ.
ಯುವತಿಗೆ ಪ್ರೀತಿ ನಿವೇದನೆ ಮಾಡಲು ಹೋಗಿ ಮನೆಗೆ ಬೆಂಕಿ ಹತ್ತಿದ್ದು ಹೇಗೆ ಅಂದುಕೊಂಡಿರಾ ಇಲ್ಲಿದೆ ನೋಡಿ ವಿವರ
ಘಟನೆ ನಡೆದದ್ದು ಇಷ್ಟೇ : ಯುವಕ ತನ್ನ ಯುವತಿಗೆ ಪ್ರೀತಿಯ ನಿವೇದನೆಯನ್ನು ಮಾಡಲು ತನ್ನ ಮನೆಯ ಕೊಣೆಯನ್ನು ಚೆನ್ನಾಗಿ ಅಲಂಕರಿಸಿ ನೂರಾರು ಮೇಣದಬತ್ತಿ ಹಾಗೂ ಬಲೂನುಗಳಿಂದ ಜೋಡಿಸಿ ಶೃಂಗಾರಗೊಳಿಸಿದ್ದಾನೆ ಇನ್ನೇನು ಪ್ರಿಯತಮೆಯನ್ನು ಕರೆತರುವುದಷ್ಟೇ ಬಾಕಿ, ಹಾಗಾಗಿ ಕೊನೆಯಲ್ಲಿ ಅಲಂಕರಿಸಿದ್ದ ಮೇಣದ ಬತ್ತಿಗಳನ್ನು ಹಚ್ಚಿ ಯುವತಿಯನ್ನು ಕರೆತರಲು ತೆರಳಿದ್ದಾನೆ.
ಆದರೆ ಯುವಕನ ದುರಾದೃಷ್ಟ ಪ್ರೀತಿಯ ಯುವತಿಗೆ ಸರ್ ಪ್ರೈಸ್ ಕೊಡಬೇಕೆಂದು ಅಲಂಕರಿಸಿದ ಮೊಂಬತ್ತಿಯ ಕಿಡಿಯಿಂದ ಬೆಂಕಿ ಹತ್ತಿಕೊಂಡು ಯುವಕ ಯುವತಿ ಬರುವಷ್ಟರಲ್ಲಿ ಮನೆ ಸುಟ್ಟು ಕರಕಲಾಗಿದೆ. ಅದನ್ನು ಕಂಡ ಯುವಕ ಒಂದು ಕ್ಷಣ ದಂಗಾಗಿದ್ದಾನೆ, ಆದರೆ ಯುವಕನ ಪ್ರೀತಿ ನಿಜವಾಗಿದ್ದ ಕಾರಣ ಯುವತಿಯು ಯುವಕನನ್ನು ಒಪ್ಪಿಕೊಂಡಿದ್ದಾಳೆ.
ಆದರೆ ಯುವತಿಗೆ ಸರ್ ಪ್ರೈಸ್ ಕೊಡುವ ಬರದಲ್ಲಿ ಯುವಕ ತನ್ನ ಮನೆಯನ್ನು ಕಳೆದುಕೊಂಡಿರುವುದು ನಿಜ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baltimore bridge: ಬಾಲ್ಟಿಮೋರ್ ಸೇತುವೆ ಕುಸಿತ: ಇಬ್ಬರ ಮೃತದೇಹ ಹೊರತೆಗೆದ ರಕ್ಷಣಾ ತಂಡ
America: ಕಾನೂನು ಸಮರದಲ್ಲಿ ಹೈರಾಣ-ಹಣ ಸಂಗ್ರಹಕ್ಕಾಗಿ ಟ್ರಂಪ್ ಬೈಬಲ್ ಮಾರಾಟ!
Baltimore bridge collapse; ಆರು ಕಾರ್ಮಿಕರು ನಾಪತ್ತೆ: ಪತ್ತೆ ಕಾರ್ಯ ಸ್ಥಗಿತ
Anjali Chakra – Sufi Malik; ಮದುವೆಗೂ ಮುನ್ನ ಭಾರತ-ಪಾಕ್ ಸಲಿಂಗಿ ಜೋಡಿ ಬ್ರೇಕಪ್!
H5N1: ವಿಯೆಟ್ನಾಂನಲ್ಲಿ ಹಕ್ಕಿಜ್ವರಕ್ಕೆ ಮೊದಲ ಬಲಿ!