ಆಂಧ್ರಪ್ರದೇಶ-ಸಂಕ್ರಾಂತಿ ಆಚರಣೆ: ಕುಡಿದ ಅಮಲಿನಲ್ಲಿ ಮೇಕೆ ಬದಲು ಮನುಷ್ಯನ ತಲೆಯನ್ನೇ ಕಡಿದ!
ಮಕರ ಸಂಕ್ರಾಂತಿಯಂದು ಸ್ಥಳೀಯ ಯೆಲ್ಲಮ್ಮಾ ದೇವಾಲಯ ಪ್ರಾಣಿ ಬಲಿಯನ್ನು ಆಯೋಜಿಸಿತ್ತು
Team Udayavani, Jan 18, 2022, 1:39 PM IST
ನವದೆಹಲಿ:ಮಕರ ಸಂಕ್ರಾಂತಿ ಹಬ್ಬದಂದು ಪ್ರಾಣಿ ಬಲಿ ನೀಡುವ ಸಂದರ್ಭದಲ್ಲಿ ಪ್ರಾಣಿಯ ಬದಲು ಮನುಷ್ಯನ ತಲೆಯನ್ನು ಕಡಿದ ಭೀಭತ್ಸ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಭಾನುವಾರ(ಜನವರಿ 16) ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡಲು ಕಾಂಗ್ರೆಸ್ ತೀರ್ಮಾನ: ಏನಿದು ಡಿಕೆಶಿ ಪ್ಲ್ಯಾನ್
ಆರೋಪಿ ಛಲಪತಿ ಪ್ರಾಣಿಬಲಿ ವೇಳೆ ಮೇಕೆ(ಆಡು)ಯ ತಲೆ ಕಡಿಯಬೇಕಾಗಿತ್ತು. ಆದರೆ ಛಲಪತಿ ವಿಪರೀತ ಮದ್ಯಪಾನ ಮಾಡಿದ್ದು, ಮೇಕೆಯ ತಲೆಯ ಬದಲು ಅದನ್ನು ಹಿಡಿದುಕೊಂಡಿದ್ದ ಸುರೇಶ್ ಎಂಬಾತನ ತಲೆ ಕತ್ತರಿಸಿರುವುದಾಗಿ ವರದಿ ಹೇಳಿದೆ.
ಮಕರ ಸಂಕ್ರಾಂತಿಯಂದು ಸ್ಥಳೀಯ ಯೆಲ್ಲಮ್ಮಾ ದೇವಾಲಯ ಪ್ರಾಣಿ ಬಲಿಯನ್ನು ಆಯೋಜಿಸಿತ್ತು. ಸುರೇಶ್ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ರಕ್ತದ ಕೋಡಿ ಹರಿದು ಹೋಗಿದ್ದು, ಘಟನೆಯಿಂದ ನೆರೆದಿದ್ದ ಭಕ್ತರು ಆಘಾತಕ್ಕೊಳಗಾಗಿರುವುದಾಗಿ ವರದಿ ತಿಳಿಸಿದೆ.
ಅರೋಪಿ ಛಲಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಮದನಪಲ್ಲಿ ಗ್ರಾಮೀಣ ಪ್ರದೇಶವಾದ ವಲಸಪಲ್ಲಿ ಎಂಬಲ್ಲಿ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಿಪ್ಹಾಪ್ ನೃತ್ಯದ ಜೊತೆ ಹೈಬ್ರಿಡ್ ಭರತನಾಟ್ಯ : ನೆಟ್ಟಿಗರಿಂದ ಭಾರಿ ಮೆಚ್ಚುಗೆ
ಆತ್ಮಹತ್ಯೆ ಪ್ರಕರಣ: ವಿಸ್ಮಯಾ ಪತಿಗೆ 10 ವರ್ಷ ಜೈಲುಶಿಕ್ಷೆ ವಿಧಿಸಿದ ಕೇರಳ ಕೋರ್ಟ್
ಅಮರನಾಥ ಯಾತ್ರೆಗೆ ಹೆಚ್ಚುವರಿ ಭದ್ರತಾ ಕ್ರಮ: ಸಿಆರ್ಪಿಎಫ್
ಜಮ್ಮು- ಕಾಶ್ಮೀರ: ಹಳ್ಳಕ್ಕೆ ಬಿದ್ದ ಸಮಂತಾ-ವಿಜಯ್ ದೇವರಕೊಂಡ ವಾಹನ
ಸಿಂಧುದುರ್ಗ: ಪ್ರವಾಸಿಗರ ದೋಣಿ ಮುಳುಗಿ ಇಬ್ಬರ ಸಾವು; ಮತ್ತಿಬ್ಬರ ಸ್ಥಿತಿ ಗಂಭೀರ
MUST WATCH
ಹೊಸ ಸೇರ್ಪಡೆ
ವರ್ಷದೊಳಗೆ 3.55 ಕೋಟಿ ವೆಚ್ಚದ ರಾಜಕಾಲುವೆ ನಿರ್ಮಾಣ ಭರವಸೆ : ಎಸ್.ಜಯರಾಂ
ಹಿಪ್ಹಾಪ್ ನೃತ್ಯದ ಜೊತೆ ಹೈಬ್ರಿಡ್ ಭರತನಾಟ್ಯ : ನೆಟ್ಟಿಗರಿಂದ ಭಾರಿ ಮೆಚ್ಚುಗೆ
ರೆನ್ಯೂ ಪವರ್ನಿಂದ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ : ಸಿಎಂ ಬೊಮ್ಮಾಯಿ
ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ
ಶಿಕ್ಷಣವನ್ನು ಕೇಸರೀಕರಣಗೊಳಿಸಲು ಹೊರಟಿದೆ ಬಿಜೆಪಿ : ಪ್ರಿಯಾಂಕ್ ಖರ್ಗೆ ಆರೋಪ