ನಾನೇ ಟಾರ್ಗೆಟ್‌ ನಂಬರ್‌ ಒನ್‌; ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ಹತಾಶೆಯ ಮಾತು

ರಷ್ಯಾ ಬೆಂಬಲಿತ ಚೆಚೆನ್ಯಾ ಹಂತಕರ ಗುಂಪು ಈಗಾಗಲೇ ಕೀವ್‌ ನಗರಕ್ಕೆ ಲಗ್ಗೆ

Team Udayavani, Feb 26, 2022, 7:15 AM IST

ನಾನೇ ಟಾರ್ಗೆಟ್‌ ನಂಬರ್‌ ಒನ್‌; ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ಹತಾಶೆಯ ಮಾತು

ಕೀವ್‌: “ರಷ್ಯಾ ಸರ್ಕಾರದಿಂದ ಪರವಾನಗಿ ಪಡೆದಿರುವ ಚೆಚೆನ್ಯಾ ಮೂಲದ ಹಂತಕರು ಕೀವ್‌ನಲ್ಲಿದ್ದಾರೆ. ನಾನು ಟಾರ್ಗೆಟ್‌ ನಂಬರ್‌ ಒನ್‌ ಎನಿಸಿದ್ದೇನೆ. ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್‌ ಈಗ ಏಕಾಂಗಿಯಾಗಿದೆ” ಎಂದು ಉಕ್ರೇನ್‌ನ ಅಧ್ಯಕ್ಷ ವೊಲೊಮಿಡಿರ್‌ ಝೆಲೆನ್ಸ್ಕಿ ಹತಾಶೆ ತೋಡಿಕೊಂಡಿದ್ದಾರೆ.

ತಾವು ಅಡಗಿರುವ ಬಂಕರ್‌ನಿಂದಲೇ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿರುವ ಅವರು, “”ಚೆಚೆನ್ಯಾ ಮೂಲದ ಹಂತಕರ ಪಡೆಯೊಂದನ್ನು ರಷ್ಯಾ, ಕೀವ್‌ ನಗರದ ಹೊರವಲಯದ ಅರಣ್ಯ ಪ್ರದೇಶಗಳಲ್ಲಿ ಇರಿಸಿದೆ. ಆ ಪಡೆಯ ಪ್ರತಿಯೊಬ್ಬ ಯೋಧನ ಕೈಯ್ಯಲ್ಲಿ ಉಕ್ರೇನ್‌ನ ಪ್ರಮುಖ ರಾಜಕಾರಣಿಗಳು, ಅಧಿಕಾರಿಗಳ ಫೋಟೋ ಸಹಿತ ವಿವರಗಳಿವೆ. ಅವರೆಲ್ಲರನ್ನು ಸೆರೆಹಿಡಿಯುವುದು ಅಥವಾ ಕೊಲ್ಲುವುದು ಅವರ ಉದ್ದೇಶ. ಆ ಮೂಲಕ, ಉಕ್ರೇನನ್ನು ರಾಜಕೀಯವಾಗಿ ಸೋಲಿಸಲು ರಷ್ಯಾ ಮನಸ್ಸು ಮಾಡಿದೆ. ಇಂಥ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಉಕ್ರೇನ್‌ನ ಜನತೆ ಮನೋಸ್ಥೈರ್ಯ ಕಾಪಾಡಿಕೊಳ್ಳಬೇಕು” ಎಂದು ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ ಸಲಹೆ ಮಾಡಿದ್ದಾರೆ.

ಇದನ್ನೂ ಓದಿ :ವಿಶ್ವವನ್ನು ಮೂರನೇ ಮಹಾಯುದ್ಧದ ಮೆಟ್ಟಿಲ ಬಳಿ ನಿಲ್ಲಿಸಿದ‌ ಮಾರ್ಷಲ್ ಹಾಗೂ ವಿದೂಷಕ

“ನಾವು ಏಕಾಂಗಿ, ನಮ್ಮ ಸಹಾಯಕ್ಕೆ ಯಾರೂ ಇಲ್ಲ’
“ನಮ್ಮ ರಾಷ್ಟ್ರವನ್ನು ರಕ್ಷಿಸಿಕೊಳ್ಳುವ ವಿಚಾರದಲ್ಲಿ ನಾವು ಏಕಾಂಗಿಯಾಗಿದ್ದೇವೆ. ನಮ್ಮ ಜೊತೆಗೂಡಿ ಯುದ್ಧ ಮಾಡುವವರು ಯಾರಿದ್ದಾರೆ? ಅಂಥ ಯಾರೊಬ್ಬರೂ ನನಗೆ ಕಾಣುತ್ತಿಲ್ಲ. ನ್ಯಾಟೋ ಸದಸ್ಯತ್ವ ಪಡೆಯಲು ಯಾರು ನಮಗೆ ಖಾತ್ರಿ ಕೊಡುತ್ತಾರೆ? ಎಲ್ಲರಲ್ಲೂ ಭಯ ಕಾಡುತ್ತಿದೆ. ಹಾಗಾಗಿ, ಯಾರೂ ನಮ್ಮ ಬೆಂಬಲಕ್ಕೆ ಬರುತ್ತಿಲ್ಲ” ಎಂದಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಗುರುವಾರ ರಾತ್ರಿ ಹಂಚಿಕೊಳ್ಳಲಾಗಿದೆ.

“ರಷ್ಯಾ ಸರ್ಕಾರ, ಉಕ್ರೇನ್‌ ಮೇಲೆ ದಾಳಿ ಆರಂಭಿಸುತ್ತಲೇ ನಾನು ದೇಶ ಬಿಟ್ಟು ಓಡಿಹೋಗಿದ್ದೇನೆಂದು ವದಂತಿಗಳು ಎದ್ದಿವೆ. ಆದರೆ, ನಾನು ದೇಶ ಬಿಟ್ಟು ಹೋಗಿಲ್ಲ. ನಾನು ಕೀವ್‌ನಲ್ಲೇ ಇದ್ದೇನೆ. ಬಂಕರೊಂದರಲ್ಲಿ ತನ್ನ ಕುಟುಂಬಸ್ಥರು, ಆಪ್ತರೊಡನೆ ಇದ್ದೇನೆ” ಎಂದಿದ್ದಾರೆ.

ಟಾಪ್ ನ್ಯೂಸ್

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.