- Sunday 15 Dec 2019
ಪ್ರತಿಯೊಬ್ಬರ ಕೈಯಲ್ಲಿ ಕ್ಯಾಮೆರಾ ಇದೆ : ಆದರೆ ಸಿನಿಮಾ ಇಲ್ಲ !
ಗೋವಾ ಚಿತ್ರೋತ್ಸವದಲ್ಲಿ ಪ್ರಿಯದರ್ಶನ್ ಅಭಿಪ್ರಾಯ
Team Udayavani, Nov 22, 2019, 9:37 AM IST
ಪಣಜಿ: ಚಿತ್ರಕಥೆ, ಸಿನೆ ಛಾಯಾಗ್ರಹಣ ಹಾಗೂ ವಿನ್ಯಾಸವೇ ಸಿನಿಮಾದ ಅಂತಃಸತ್ತ್ವ. ಅದೇ ಇಂದಿನ ಸಿನಿಮಾಗಳಲ್ಲಿ ಕಾಣೆಯಾಗುತ್ತಿದೆ !
ಇದನ್ನು ಹುಡುಕುವುದೇ ಸವಾಲಿನ ಕೆಲಸವಾಗಿದೆ ಎಂದವರು ಭಾರತೀಯ ಪನೋರಮಾ ವಿಭಾಗದ ಆಯ್ಕೆ ಸಮಿತಿ. ಇದರ ಅಧ್ಯಕ್ಷರಾದ ಪ್ರಿಯದರ್ಶನ್ ಸಿನಿಮಾ ಆಯ್ಕೆ ಕುರಿತು ವಿವರಿಸುವಾಗ ಆತಂಕ ವ್ಯಕ್ತಪಡಿಸಿದ್ದು ಇದೇ ನೆಲೆಯಲ್ಲಿ.
‘ಭಾರತೀಯ ರಿಯಲಿಸ್ಟಿಕ್ ಸಿನಿಮಾಗಳು ತಮ್ಮ ಬಣ್ಣ ಕಳೆದುಕೊಳ್ಳುತ್ತಿವೆ. ಗುಣಮಟ್ಟ ಗಣನೀಯವಾಗಿ ಕುಸಿಯುತ್ತಿದೆ. ಇದು ಸಮಿತಿಗೆ ಈ ಬಾರಿಯ ಆಯ್ಕೆಗೆ ಬಂದ ಸಿನಿಮಾಗಳು ಕಂಡು ಬಂದಾಗ ಅನಿಸಿದ್ದು’ ಎಂದರು ಪ್ರಿಯದರ್ಶನ್.
ಒಂದು ಸಿನಿಮಾದ ಗುಣಮಟ್ಟವನ್ನು ನೋಡುವುದೇ ಅದರ ಚಿತ್ರಕಥೆ, ಸಿನೆ ಛಾಯಾಗ್ರಹಣ ಹಾಗೂ ವಿನ್ಯಾಸದಿಂದ. ಅವುಗಳೇ ಇಂದಿನ ಹಲವು ಸಿನಿಮಾಗಳಲ್ಲಿ ಕಾಣೆಯಾಗಿವೆ. ಹಾಗಾದರೆ ಒಳ್ಳೆಯ ಸಿನಿಮಾ ಎಂದರೆ ಏನು ಎಂಬುದು ಅವರ ಪ್ರಶ್ನೆಯಾಗಿತ್ತು.
ಬಹಳ ಕಷ್ಟವಾಗಲಿಲ್ಲ
ಒಟ್ಟು 314 ಸಿನಿಮಾಗಳನ್ನು ವೀಕ್ಷಿಸುವ ಮೊದಲು ಸಂಖ್ಯೆಯನ್ನು ಕಂಡು ಕಷ್ಟವೆಂದಕೊಂಡಿದ್ದೆವು. ಸೀಮಿತ ಅವಧಿಯಲ್ಲಿ ಎಲ್ಲವನ್ನೂ ವೀಕ್ಷಿಸಿ, ಅಭಿಪ್ರಾಯ ಸಂಗ್ರಹಿಸಿ ನಿರ್ಧರಿಸುವುದು ಕಷ್ಟ. ಆದರೆ, ಸಿನಿಮಾಗಳ ಗುಣಮಟ್ಟ ಕಂಡ ಬಳಿಕ ಆಯ್ಕೆ ಬಹಳ ಕಷ್ಟವೆನಿಸಲಿಲ್ಲ ಎಂದರು ಪ್ರಿಯದರ್ಶನ್ ಮತ್ತು ಹರೀಶ್ ಬಿಮಾನಿ.
ಇಂದು ಎಲ್ಲರ ಕೈಯಲ್ಲೂ ಕ್ಯಾಮರಾ ಬಂದಿದೆ. ಎಲ್ಲರೂ ವಿಡಿಯೋ ಚಿತ್ರೀಕರಿಸುತ್ತಾರೆ. ಆದರೆ ಅದಕ್ಕೊಂದು ವಿನ್ಯಾಸ ಮತ್ತು ಕಥೆ ಕಟ್ಟುವಿಕೆ ಇರುವುದಿಲ್ಲ. ಹಾಗಾಗಿಯೇ ಸಿನಿಮಾಗಳೆನಿಸುವುದಿಲ್ಲ ಎಂಬುದು ಸಮಿತಿಯ ಅಭಿಪ್ರಾಯ.
ಎಲ್ಲರೂ ತಮ್ಮ ಮನಸ್ಸಿನೊಳಗಿರುವುದನ್ನು ಕಟ್ಟಿಕೊಡಲು ಪ್ರಯತ್ನಿಸುತ್ತಿದ್ದಾರೆ. ಅದು ಸರಿಯೇ. ಆದರೆ ಅದಕ್ಕೊಂದು ತರಬೇತಿ ಅವಶ್ಯವಿದೆ ಎಂಬುದು ಪ್ರಿಯದರ್ಶನ್ ಅಭಿಪ್ರಾಯ.
ಈ ಬಾರಿ ಭಾರತೀಯ ಪನೋರಮಾ ವಿಭಾಗದ ಕಥಾ ವಿಭಾಗದಲ್ಲಿ 26 ಸಿನಿಮಾಗಳು ಹಾಗೂ ಕಥೇತರ ವಿಭಾಗದಲ್ಲಿ 15 ಸಿನಿಮಾಗಳು ಪ್ರದರ್ಶಿತವಾಗುತ್ತಿವೆ. ಕನ್ನಡದ ರಂಗನಾಯಕಿ ಘದಯಾಳ್ ಪದ್ಮನಾಭನ್ ನಿರ್ದೇಶನ] ಇದೇ ವಿಭಾಗದಲ್ಲಿ ಪ್ರದರ್ಶಿತವಾಗುತ್ತಿದೆ.
ಕಾಶ್ಮೀರಿ ಭಾಷೆಯ ನೂರೆ, ಮರಾಠಿಯ ಫೋಟೋ ಫ್ರೇಮ್, ಬೋಗ್ರಾ ಅಲ್ಲದೇ ಮಲಯಾಳಂ, ಬಂಗಾಳಿ, ಖಾಸಿ ಮತ್ತಿತರ ಭಾರತೀಯ ಭಾಷಾ ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಈ ವಿಭಾಗದಿಂದ ಇನ್ನಷ್ಟು
-
ಪಣಜಿ(ಉದಯವಾಣಿ ಪ್ರತಿನಿಧಿಯಿಂದ): ಗೋವಾದಪಣಜಿಯಲ್ಲಿ ನ.೨೦ ರಿಂದಆರಂಭವಾಗಿದ್ದ ೫೦ ನೇಭಾರತೀಯಅಂತಾರಾಷ್ಟ್ರೀಯಚಿತ್ರೋತ್ಸವಕ್ಕೆಗುರುವಾರತೆರೆಬಿದ್ದಿದ್ದು,...
-
ಪಣಜಿ: ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದೊಂದಿಗೆ ನಡೆಯುತ್ತಿರುವ ಎನ್ಎಫ್ ಡಿಸಿ ಯ 13ನೇ ವರ್ಷದ ಫಿಲ್ಮ್ ಬಜಾರ್ ರವಿವಾರ ಸಮಾಪನಗೊಂಡಿದ್ದು, ಕನ್ನಡದ ಯುವ ನಿರ್ದೇಶಕರು...
-
ಪಣಜಿ: ಸಾಕ್ಷ್ಯಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವುದೇ ಇಂದಿನ ತುರ್ತು ಅವಶ್ಯ. ಸಾಕ್ಷ್ಯಚಿತ್ರ ರೂಪಿಸುವವರಿಗೆ ಕೊರತೆ ಇಲ್ಲ, ಆದರೆ ಆವುಗಳನ್ನು ಪ್ರೇಕ್ಷಕರಿಗೆ...
-
ಪಣಜಿ: ಕನ್ನಡದಲ್ಲಿ ಸಮಕಾಲೀನ ಸಂಗತಿಗಳನ್ನು ಕಥಾವಸ್ತುವನ್ನಾಗಿ ಸ್ವೀಕರಿಸಿ ಸಿನಿಮಾ ಮಾಡುವ ಪ್ರಯತ್ನಗಳೇ ಬಹಳ ಕಡಿಮೆ. ನನ್ನ ಸಿನಿಮಾ ಅಧುನಿಕ ಬದುಕಿಗೆ ಸಂಬಂಧಿಸಿದ್ದೇ....
-
ಪಣಜಿ: ನಾನು ಯಾವಾಗಲೂ ಬದುಕನ್ನು ಆಶಾವಾದದಿಂದ ಸ್ವೀಕರಿಸಿದವಳು. ಅರ್ಧ ಲೋಟ ತುಂಬಿದೆ ಎಂಬ ದೃಷ್ಟಿಕೋನದಿಂದಲೇ ಬೆಳೆದವಳು, ಎಂದಿಗೂ ನನಗೆ ಅರ್ಧ ಲೋಟ ಖಾಲಿ ಇದೆ...
ಹೊಸ ಸೇರ್ಪಡೆ
-
ವಿಜಯಪುರ : ಕಿಡಿಗೇಡಿಗಳು ಕಲ್ಲೆಸೆದ ಪರಿಣಾಮ ಹೆಜ್ಜೇನು ದಾಳಿ ನಡೆಸಿ ಮಕ್ಕಳು, ಮಹಿಳೆಯರು ಸೇರಿ 20ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ಮುದ್ದೇಬಿಹಾಳ ಪಟ್ಟಣದಲ್ಲಿ...
-
ಕುಮಟಾ: ಅರ್ಹ 38 ಫಲಾನುಭವಿಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರಾದ 12 ಲಕ್ಷ ರೂ.ಗಳ ಚೆಕ್ ಗಳನ್ನು ಶಾಸಕ ದಿನಕರ ಶೆಟ್ಟಿ ತಹಶೀಲ್ದಾರ್ ಕಚೇರಿ ಆವಾರದಲ್ಲಿ...
-
ಕುಷ್ಟಗಿ: ಹಿಂದಿನ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್ಗೆ ಪಟ್ಟಣದಲ್ಲಿ ಕೊನೆಗೂ ಜಾಗೆ ಸಿಕ್ಕಿದೆ. ಕುಷ್ಟಗಿ ಪಟ್ಟಣ ವ್ಯಾಪ್ತಿಯಲ್ಲಿ ಇಂದಿರಾ...
-
ಮಣಿಪಾಲ: 21 ದಿನದಲ್ಲಿ ಅತ್ಯಾಚಾರಿಗಳಿಗೆ ಶಿಕ್ಷೆ ವಿಧಿಸುವ ದಿಶಾ ಕಾಯ್ದೆಯನ್ನು ದೇಶಾದ್ಯಂತ ಜಾರಿಗೊಳಿಸುವ ಅಗತ್ಯ ಇದೆಯೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು...
-
ಹೊಸದಿಲ್ಲಿ: ಹಣ್ಣು, ತರಕಾರಿಗಳ ಸೀಸನ್ ಆರಂಭವಾದರೂ, ಸಾಕಷ್ಟು ಮಾರುಕಟ್ಟೆಗೆ ಆವಕವಾಗುತ್ತಿಲ್ಲ ಇದರಿಂದ ಈ ಬಾರಿ ತರಕಾರಿ ಬೆಲೆ ಕಳೆದ ವರ್ಷ ಚಳಿಗಾಲಕ್ಕಿಂತಲೂ...