ಸರಕಾರಕ್ಕೆ ಕಿವಿ, ಕಣ್ಣು, ಹೃದಯ ಇಲ್ವಾ: ಈಶ್ವರಪ್ಪ ಪ್ರಶ್ನೆ

ಐಎಂಎ ಕಂಪನಿ ಹೂಡಿಕೆದಾರರಿಗೆ ವಂಚನೆ ಪ್ರಕರಣ

Team Udayavani, Jun 12, 2019, 12:48 PM IST

ಶಿವಮೊಗ್ಗ : ಐಎಂಎ ಕಂಪನಿ ಹೂಡಿಕೆದಾರರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಕೆ.ಎಸ್ ಈಶ್ವರಪ್ಪ ಅವರು ಕಿಡಿ ಕಾರಿದ್ದು ಸರಕಾರಕ್ಕೆ ಕಿವಿ, ಕಣ್ಣು, ಹೃದಯ ಇಲ್ಲವೆ ಎಂದು ಪ್ರಶ್ನಿಸಿದ್ದಾರೆ.

ಬುಧವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಐಎಂಎ ಮೂಲಕ 10 ಸಾವಿರ ಕೋಟಿಗೂ ಅಧಿಕ ವಂಚನೆ ಆಗಿದೆ. ಇದರಲ್ಲಿ ಅನೇಕ ರಾಜಕಾರಣಿಗಳು ಪ್ರಭಾವಿ ಮಂತ್ರಿಗಳು ಪಾತ್ರವಿರುವುದು ಮಾದ್ಯಮದಲ್ಲಿ ಬರುತ್ತಿದೆ.  ಗೃಹ ಮಂತ್ರಿಗಳು ಇಂತಹವರ ವಿರುದ್ಧ ಕ್ರಮಕ್ಕೆ ತೆಗೆದುಕೊಳ್ಳಲು ಕಾನೂನು ಇಲ್ಲ ಎನ್ನುವ ಹೇಳಿಕೆಯಿಂದ ನೋವಾಗಿದೆ ಎಂದರು.

ಸರಕಾರ ಅಸಹಾಯಕತೆ ರೀತಿಯಲ್ಲಿ ವರ್ತನೆ ಮಾಡುತ್ತಿದೆ,
ಕೂಡಲೇ ವಂಚನೆ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಲಿ ಎಂದು ಆಗ್ರಹಿಸಿದರು.

ಬಡ ಮದ್ಯಮ ವರ್ಗದವರೂ ಬೀದಿಗೆ ಬಂದಿದ್ದಾರೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ. ಸರಕಾರಕ್ಕೆ ಕಿವಿ ಕಣ್ಣು ಹೃದಯ ಇಲ್ವಾ ಎಂದು ಪ್ರಶ್ನಿಸಿದರು.

ಸರಕಾರದ ಕೈಯಲ್ಲಿ ಆದ್ರೆ ಕ್ರಮಕ್ಕೆ ಮುಂದಾಗಲಿ. ಇಲ್ಲದಿದ್ದರೇ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಿ ಎಂದರು.

ಕರ್ನಾಟಕದಲ್ಲಿ ಇದೊಂದು ಅತೀ ದೊಡ್ಡ ಹಗರಣವಾಗಿದ್ದು,
ಇದರಿಂದ ಯಾವುದೇ ಸಂಸ್ಥೆಯಲ್ಲಿ ಜನರು ಹೂಡಿಕೆ ಮಾಡುವುದಕ್ಕೆ ಭಯ ಪಡುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ