28 ಲೋಕಸಭಾ ಕ್ಷೇತ್ರಗಳಲ್ಲಿ ಶೇ.68.62ರಷ್ಟು ಮತದಾನ

Team Udayavani, Apr 25, 2019, 3:46 AM IST

ಬೆಂಗಳೂರು: ದೇಶದ 17ನೇ ಲೋಕಸಭೆಗೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ನಡೆದ ಚುನಾವಣೆ ಮಂಗಳವಾರ ಮುಗಿದಿದ್ದು, ರಾಜಾÂದ್ಯಂತ ಶೇ.68.62ರಷ್ಟು ಮತದಾನ ಆಗಿದೆ.

ಕಳೆದ ಲೋಕಸಭೆ ಚುನಾವಣೆಗೆ ಹೊಲಿಕೆ ಮಾಡಿದರೆ ಒಟ್ಟಾರೆ ಮತ ಪ್ರಮಾಣದಲ್ಲಿ ಶೇ.1.42ರಷ್ಟು ಏರಿಕೆ ಕಂಡಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ಒಟ್ಟಾರೆ ಶೇ.67.20ರಷ್ಟು ಮತದಾನ ದಾಖಲಾಗಿತ್ತು.

2019ರ ಲೋಕಸಭೆಗೆ ರಾಜ್ಯದಲ್ಲಿ 2 ಹಂತದಲ್ಲಿ ಮತದಾನ ನಡೆದಿತ್ತು. ಮೊದಲ ಹಂತದಲ್ಲಿ ದಕ್ಷಿಣ ಕರ್ನಾಟಕ ಭಾಗದ 14 ಕ್ಷೇತ್ರಗಳಲ್ಲಿ ಏ.18ರಂದು ಮತದಾನ ನಡೆದಿತ್ತು. ಈ 14 ಕ್ಷೇತ್ರಗಳಲ್ಲಿ ಒಟ್ಟಾರೆ ಶೇ. 68.80ರಷ್ಟು ಮತದಾನ ಆಗಿತ್ತು. ಅದೇ ರೀತಿ, ಎರಡನೇ ಹಂತದಲ್ಲಿ ಏ.23ಕ್ಕೆ 14 ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಅಂತಿಮವಾಗಿ ಶೇ.68.43ರಷ್ಟು ಮತದಾನ ಆಗಿದೆ.

ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿ ನಡೆದ ಮತದಾನದಲ್ಲಿ ಒಟ್ಟು 5.10 ಕೋಟಿ ಮತದಾರರ ಪೈಕಿ 1.79 ಕೋಟಿ ಪುರುಷರು, 1.70 ಕೋಟಿ ಮಹಿಳೆಯರು, ಇತರರು 556 ಸೇರಿ ಒಟ್ಟು 3.50 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಚುನಾವಣೆ ನಡೆದ 28 ಕ್ಷೇತ್ರಗಳ ಪೈಕಿ ಮಂಡ್ಯದಲ್ಲಿ ಅತಿ ಹೆಚ್ಚು ಶೇ.80.23 ರಷ್ಟು ಮತದಾನ ಆಗಿದ್ದರೆ, ಅತಿ ಕಡಿಮೆ ಶೇ.53.47ರಷ್ಟು ಮತದಾನ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಆಗಿದೆ. ಉಳಿದಂತೆ ದಕ್ಷಿಣ ಕನ್ನಡದಲ್ಲಿ ಶೇ.77.90, ತುಮಕೂರು ಶೇ.77.21, ಹಾಸನ ಮತ್ತು ಕೋಲಾರ ತಲಾ ಶೇ.77.11, ಶಿವಮೊಗ್ಗ ಶೇ.76.43 ಈ ಬಾರಿ ಅತಿ ಹೆಚ್ಚು ಮತದಾನ ಆಗಿರುವ ಮೊದಲ 5 ಕ್ಷೇತ್ರಗಳಾಗಿವೆ.

ಇದಲ್ಲದೇ ಬೆಂಗಳೂರು ದಕ್ಷಿಣದಲ್ಲಿ ಶೇ.53.47, ಬೆಂಗಳೂರು ಕೇಂದ್ರ ಶೇ.54.29, ಬೆಂಗಳೂರು ಉತ್ತರ ಶೇ.54.66, ರಾಯಚೂರು ಶೇ.57.91, ಕಲಬುರಗಿ ಶೇ.60.88 ಕಡಿಮೆ ಮತದಾನ ಆಗಿರುವ ಮೊದಲ ಐದು ಕ್ಷೇತ್ರಗಳಾಗಿವೆ. 2014ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಶೇ.77.15ರಷ್ಟು ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ.55.64ರಷ್ಟು ಮತದಾನ ಆಗಿತ್ತು.

ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ, ಕೊಪ್ಪಳ, ಹಾವೇರಿ, ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರದಲ್ಲಿ 2014ರ ಲೋಕಸಭಾ ಚುನಾವಣೆಗಿಂತ ಹೆಚ್ಚು ಮತದಾನ ಆಗಿದ್ದರೆ, ಬೆಳಗಾವಿ, ರಾಯಚೂರು, ಬಳ್ಳಾರಿ, ದಾವಣಗೆರೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲಿ ಕಳೆದ ಬಾರಿಗಿಂತ ಕಡಿಮೆ ಮತದಾನ ಆಗಿದೆ.

28 ಕ್ಷೇತ್ರಗಳ ಮತ ಪ್ರಮಾಣ
ಕ್ಷೇತ್ರ ಶೇಕಡವಾರು ಮತ 2014ರ ಮತ ಪ್ರಮಾಣ
ಚಿಕ್ಕೋಡಿ- ಶೇ.75.52 ಶೇ.74.29
ಬೆಳಗಾವಿ- ಶೇ.67.31 ಶೇ.68.25
ಬಾಗಲಕೋಟೆ- ಶೇ.70.59 ಶೇ.68.81
ವಿಜಯಪುರ- ಶೇ.61.70 ಶೇ.59.58
ಕಲಬುರಗಿ- ಶೇ.60.88 ಶೇ.57.96
ರಾಯಚೂರು- ಶೇ.57.91 ಶೇ.58.32
ಬೀದರ- ಶೇ.62.69 ಶೇ.60.16
ಕೊಪ್ಪಳ- ಶೇ.68.41 ಶೇ.65.63
ಬಳ್ಳಾರಿ- ಶೇ.69.59 ಶೇ.70.29
ಹಾವೇರಿ- ಶೇ.73.99 ಶೇ.71.62
ಧಾರವಾಡ- ಶೇ.70.13 ಶೇ.65.99
ಉತ್ತರ ಕನ್ನಡ- ಶೇ.74.10 ಶೇ.69.04
ದಾವಣಗೆರೆ- ಶೇ.73.03 ಶೇ.73.23
ಶಿವಮೊಗ್ಗ- ಶೇ.76.43 ಶೇ.72.36
ಉಡುಪಿ-ಚಿಕ್ಕಮಗಳೂರು- ಶೇ.75.91 ಶೇ.74.56
ಹಾಸನ- ಶೇ.77.11 ಶೇ.73.49
ದಕ್ಷಿಣ ಕನ್ನಡ- ಶೇ.77.90 ಶೇ.77.15
ಚಿತ್ರದುಗ9- ಶೇ.70.65 ಶೇ.66.07
ತುಮಕೂರು- ಶೇ.77.21 ಶೇ.72.57
ಮಂಡ್ಯ- ಶೇ.80.23 ಶೇ.71.47
ಮೈಸೂರು- ಶೇ.6930 ಶೇ.67.30
ಚಾಮರಾಜನಗರ- ಶೇ.75.22 ಶೇ.72.85
ಬೆಂಗಳೂರು ಗ್ರಾಮಾಂತರ ಶೇ.64.89 ಶೇ.66.45
ಬೆಂಗಳೂರು ಉತ್ತರ- ಶೇ.54.66 ಶೇ.56.53
ಬೆಂಗಳೂರು ಕೇಂದ್ರ- ಶೇ.54.29 ಶೇ.55.64
ಬೆಂಗಳೂರು ದಕ್ಷಿಣ- ಶೇ.53.47 ಶೇ.55.75
ಚಿಕ್ಕಬಳ್ಳಾಪುರ- ಶೇ.76.61 ಶೇ.76.21
ಕೋಲಾರ- ಶೇ.77.11 ಶೇ.75.51


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ