Udayavni Special

ಹೊರಗೆ ಥಳಕು, ಒಳಗೆ ವಿಷ : ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನ ಆರೋಪಕ್ಕೆ ಭಾರತ ಖಡಕ್‌ ಜವಾಬ್‌


Team Udayavani, Sep 27, 2020, 7:15 AM IST

ಹೊರಗೆ ಥಳಕು, ಒಳಗೆ ವಿಷ : ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನ ಆರೋಪಕ್ಕೆ ಭಾರತ ಖಡಕ್‌ ಜವಾಬ್‌

ವಿಶ್ವಸಂಸ್ಥೆ: “ಪಾಕಿಸ್ಥಾನದ್ದು ಯಾವತ್ತಿದ್ದರೂ ಮುಕುಟಾಲಂಕಾರದ ಜೀವನ. ಮೇಲೆಲ್ಲಾ ಥಳಕು ತೋರ್ಪಡಿಸುವ ಆ ರಾಷ್ಟ್ರ, ಆಂತರ್ಯದಲ್ಲಿ ಭಯೋತ್ಪಾದನೆಯಂಥ ವಿಷವನ್ನು ತುಂಬಿರುವಂಥ ದೇಶ.”
ಪಾಕಿಸ್ಥಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ಭಾರತದ ವಿರುದ್ಧ ಮಾಡಿದ್ದ ಆರೋಪಗಳಿಗೆ ಭಾರತ, ಶನಿವಾರ ಸಭೆಯಲ್ಲಿ ತಾನು ಸಲ್ಲಿಸಬೇಕಿರುವ ರೈಟ್‌ ಟು ರಿಪ್ಲೆ„(ಪ್ರತಿಕ್ರಿಯಿಸುವ ಹಕ್ಕು) ಅಡಿ ನೀಡಿದ ಖಡಕ್‌ ಉತ್ತರವಿದು.

ಶುಕ್ರವಾರದ ಸಭೆಯಲ್ಲಿ ಮಾತನಾಡಿದ್ದ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌, ಜಮ್ಮು ಕಾಶ್ಮೀರ ವಿಚಾರವನ್ನು ಪ್ರಸ್ತಾವಿಸಿ ಪುಂಖಾನುಪುಖವಾಗಿ ಆರೋಪ ಮಾಡಿದ್ದರು. ಅದರಿಂದ ಕೆರಳಿದ ವಿಶ್ವಸಂಸ್ಥೆಯಲ್ಲಿರುವ ಭಾರತದ ಶಾಶ್ವತ ಪ್ರತಿನಿಧಿಗಳ ತಂಡದ ಕಾರ್ಯದರ್ಶಿಯಾಗಿರುವ ಮಿಜಿಟೊ ವಿನಿಟೊ ಸಭಾತ್ಯಾಗ ನಡೆಸಿದ್ದರಲ್ಲದೆ, ಶನಿವಾರದಂದು ಪ್ರತ್ಯುತ್ತರ ನೀಡುವುದಾಗಿ ತಿಳಿಸಿದ್ದರು.

ಶನಿವಾರದ ಸಮ್ಮೇಳನದಲ್ಲಿ ಮಾತನಾಡಿದ ಅವರು, “”ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ಸಾಧನೆ ಮಾಡದವರಿಂದ ಏನನ್ನು ನಿರೀಕ್ಷಿಸಬಹುದೋ, ಅದು ಖಾನ್‌ ಅವರಿಂದ ವ್ಯಕ್ತವಾಗಿದೆಯಷ್ಟೇ. ಜಾಗತಿಕ ಉಗ್ರರೆಂದು ಪರಿಗಣಿಸಲ್ಪಟ್ಟಿರುವ ಲಷ್ಕರ್‌ ನಾಯಕ, ಉಗ್ರ ಹಫೀಜ್‌ ಸಯೀದ್‌, ಜೈಶ್‌ ಉಗ್ರ ಮಸೂದ್‌ ಅಜರ್‌ಗೆ ಆ ದೇಶ ಆಶ್ರಯತಾಣವಾಗಿದೆ” ಎಂದರು.

“ಅಮೆರಿಕದ ಮೇಲಿನ ದಾಳಿಕೋರ ಒಸಾಮಾ ಬಿನ್‌ ಲಾಡೆನ್‌ನನ್ನು ಹುತಾತ್ಮ ಎಂದು ಪರಿಗಣಿಸಲು ಪಾಕಿಸ್ಥಾನದ ಸಂಸತ್ತು ಜುಲೈನಲ್ಲಿ ನಿರ್ಧಾರ ಕೈಗೊಂಡಿದೆ. 39 ವರ್ಷಗಳ ಹಿಂದೆ ದಕ್ಷಿಣ ಏಷ್ಯಾದಲ್ಲಿ ತನ್ನ ಜನರನ್ನೇ ಬರ್ಬರವಾಗಿ ಕೊಂದು ದೊಡ್ಡ ನರ ಮೇಧ ನಡೆಸಿರುವ ಆ ದೇಶ ಇಂದು ನಾಚಿಕೆ ಇಲ್ಲದಂತೆ ಬೇರೆ ದೇಶಗಳ ಮೇಲೆ ಆರೋಪ ಮಾಡುತ್ತಿದೆ” ಎಂದು ವಿನಿಟೊ, ಕಟುವಾಗಿ ಟೀಕಿಸಿದರು.

“”ವಿಶ್ವ ಸಂಸ್ಥೆಯ ಅಂಗಳದಲ್ಲಿ ಕೇವಲ ವಿಷವನ್ನೇ ಚೆಲ್ಲುವ ಮೂಲಕ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ ನಂಜು ಪಸರಿಸುವ ಕೆಲಸ ಮಾಡುತ್ತಿರುವ ಇದೇ ಇಮ್ರಾನ್‌ ಖಾನ್‌, 2019ರಲ್ಲಿ ಪಾಕಿಸ್ಥಾನದಲ್ಲಿನ್ನೂ 30,000ದಿಂದ 40,000 ಉಗ್ರರು ಇದ್ದಾರೆಂದು ಹೇಳಿದ್ದರು. ಅವರಲ್ಲಿ ಹಲವಾರು ಉಗ್ರರು ಜಮ್ಮು ಕಾಶ್ಮೀರದಲ್ಲಿ ಸಕ್ರಿಯರಾಗಿದ್ದಾರೆಂದು ಹೇಳಿದ್ದರು. ಸದಾ ಬೇರೆ ರಾಷ್ಟ್ರದ ಕಡೆ ಬೆರಳು ಮಾಡಿ ತೋರಿಸುವ ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾಕರ ನಾಶಕ್ಕಾಗಿಯೇ ಸೃಷ್ಟಿಯಾಗಿರುವಂಥ ವಾತಾವರಣವಿದೆ. ಅಷ್ಟೇ ಅಲ್ಲ, ತಮ್ಮದು ಕಟ್ಟಾ ಮುಸ್ಲಿಂ ರಾಷ್ಟ್ರ ಎಂದು ಹೇಳಿಕೊಳ್ಳುವ ಅದು, ತನ್ನದೇ ದೇಶದ ಮುಸ್ಲಿಂ ಪ್ರಜೆಗಳನ್ನು ಅವರು ಇಸ್ಲಾಂ ಧರ್ಮದ ಬೇರೆ ಪಂಗಡದವರು ಎಂಬ ಕಾರಣಕ್ಕಾಗಿ ಕೊಲ್ಲುವ ಹೇಯತನ ಪ್ರದರ್ಶಿಸುತ್ತದೆ” ಎಂದು ವಿನಿ ಟೊ ಝಾಡಿಸಿದರು.
ಅಲ್ಲದೆ, ಜಮ್ಮು ಕಾಶ್ಮೀರ ನಮ್ಮ ಅವಿಭಾಜ್ಯ ಅಂಗ. ತಾನು ಆಕ್ರಮಿಸಿಕೊಂಡಿರುವ ಕಾಶ್ಮೀರದ ಪ್ರಾಂತ್ಯಗಳಿಂದ ಅದು ಹಿಂದೆ ಸರಿಯಬೇಕು” ಎಂದು ಆಗ್ರಹಿಸಿದರು.

ಭಾರತಕ್ಕೆ ಭೂತಾನ್‌ ಬೆಂಬಲ
ವಿಶ್ವಸಂಸ್ಥೆಯ ಭದ್ರತಾ ಕೌನ್ಸಿಲ್‌(ಯುಎನ್‌ಎಸ್‌ಸಿ)ನಲ್ಲಿ ಭಾರತ ಶಾಶ್ವತ ರಾಯಭಾರಿಯಾಗಿರುವುದನ್ನು ಭೂತಾನ್‌ ಸದಾ ಬೆಂಬಲಿಸುತ್ತದೆ ಎಂದು ಆ ದೇಶದ ಪ್ರಧಾನಿ ಲೊಟಾಯ್‌ ಶೆರಿಂಗ್‌ ತಿಳಿಸಿದ್ದಾರೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪ್ರಣಾಳಿಕೆಯಲ್ಲಿ ಉಚಿತ ಲಸಿಕೆ ಸದ್ದು; ರಂಗೇರಿದ ಬಿಹಾರ ಚುನಾವಣೆ ಕಣ

ಪ್ರಣಾಳಿಕೆಯಲ್ಲಿ ಉಚಿತ ಲಸಿಕೆ ಸದ್ದು; ರಂಗೇರಿದ ಬಿಹಾರ ಚುನಾವಣೆ ಕಣ

ಸುರೇಂದ್ರ ಬಂಟ್ವಾಳ್‌ ಹತ್ಯೆ ಮಾಡಿದ್ದು ನಾನೇ; ಗೊಂದಲ ಸೃಷ್ಟಿಸಿದ ಆಪ್ತನ ವಾಯ್ಸ ರೆಕಾರ್ಡ್

ಸುರೇಂದ್ರ ಬಂಟ್ವಾಳ್‌ ಹತ್ಯೆ ಮಾಡಿದ್ದು ನಾನೇ; ಗೊಂದಲ ಸೃಷ್ಟಿಸಿದ ಆಪ್ತನ ವಾಯ್ಸ ರೆಕಾರ್ಡ್

ಗ್ರಾಮೀಣ ರಸ್ತೆ ಅಭಿವೃದ್ಧಿಗೆ “ಸಡಕ್‌ ಕೃಪೆ’

ಗ್ರಾಮೀಣ ರಸ್ತೆ ಅಭಿವೃದ್ಧಿಗೆ “ಸಡಕ್‌ ಕೃಪೆ’

ಸಂಜನಾ ಜಾಮೀನು ಅರ್ಜಿ ಮುಂದಕ್ಕೆ

ಸಂಜನಾ ಜಾಮೀನು ಅರ್ಜಿ ಮುಂದಕ್ಕೆ

ದೇವರ ಹೆಸರು ಬಳಸಿ ಆನ್‌ಲೈನ್‌ ಬೆಟ್ಟಿಂಗ್‌!

ದೇವರ ಹೆಸರು ಬಳಸಿ ಆನ್‌ಲೈನ್‌ ಬೆಟ್ಟಿಂಗ್‌!

IPL-2

IPL 2020: ಪಾಂಡೆ-ಶಂಕರ್‌ ಅಬ್ಬರ; ಹೈದರಾಬಾದ್‌ಗೆ 8 ವಿಕೆಟ್‌ ಜಯ

ಪೊಲೀಸ್‌ ಇಲಾಖೆ ಸಮಗ್ರ ಅಭಿವೃದ್ಧಿ; ಡಿಜಿಪಿ ನೇತೃತ್ವದಲ್ಲಿ ಸಮಿತಿ ರಚನೆ: ಬೊಮ್ಮಾಯಿ

ಪೊಲೀಸ್‌ ಇಲಾಖೆ ಸಮಗ್ರ ಅಭಿವೃದ್ಧಿ; ಡಿಜಿಪಿ ನೇತೃತ್ವದಲ್ಲಿ ಸಮಿತಿ ರಚನೆ: ಬೊಮ್ಮಾಯಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸರ್ಜಿಕಲ್ ದಾಳಿ ನಡೆದು 18 ತಿಂಗಳ ಬಳಿಕ ಬಾಲಾಕೋಟ್ ನಲ್ಲಿ ಮತ್ತೆ ತಲೆಎತ್ತಿದ ಉಗ್ರರ ಶಿಬಿರ

ಸರ್ಜಿಕಲ್ ದಾಳಿ ನಡೆದು 18 ತಿಂಗಳ ಬಳಿಕ ಬಾಲಾಕೋಟ್ ನಲ್ಲಿ ಮತ್ತೆ ತಲೆಎತ್ತಿದ ಉಗ್ರರ ಶಿಬಿರ

vaccine

ಕೋವಿಡ್-19 ಲಸಿಕೆ: ಆಸ್ಟ್ರಾಜೆನಾಕ ಔಷಧಿ ಪ್ರಯೋಗದ ವೇಳೆ ಸ್ವಯಂಸೇವಕ ಸಾವು

noodles

ಫ್ರೀಜರ್ ನಲ್ಲಿಟ್ಟ ನೂಡಲ್ಸ್ ತಿಂದು ಒಂದೇ ಕುಟುಂಬದ 9 ಮಂದಿ ಸಾವು: 3ಮಕ್ಕಳು ಅಪಾಯದಿಂದ ಪಾರು

ಚೀನದಲ್ಲಿ ಉದ್ದಿಮೆ ನಡೆಸಲೆತ್ನಿಸಿದ್ದ ಟ್ರಂಪ್‌

ಚೀನದಲ್ಲಿ ಉದ್ದಿಮೆ ನಡೆಸಲೆತ್ನಿಸಿದ್ದ ಟ್ರಂಪ್‌

ಪಾಕ್ ನಲ್ಲಿ ಹಿಂಸಾಚಾರ ಸ್ಪೋಟ: 10 ಪೊಲೀಸರ ಹತ್ಯೆ, ಸೇನೆ ವಿರುದ್ಧ ದಂಗೆಯೆದ್ದ ಜನ

ಪಾಕ್ ನಲ್ಲಿ ಹಿಂಸಾಚಾರ ಸ್ಪೋಟ: 10 ಪೊಲೀಸರ ಹತ್ಯೆ, ಪಾಕ್ ನಲ್ಲೀಗ ಸೇನೆ ವರ್ಸಸ್ ಪೊಲೀಸ್

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

ಪ್ರಣಾಳಿಕೆಯಲ್ಲಿ ಉಚಿತ ಲಸಿಕೆ ಸದ್ದು; ರಂಗೇರಿದ ಬಿಹಾರ ಚುನಾವಣೆ ಕಣ

ಪ್ರಣಾಳಿಕೆಯಲ್ಲಿ ಉಚಿತ ಲಸಿಕೆ ಸದ್ದು; ರಂಗೇರಿದ ಬಿಹಾರ ಚುನಾವಣೆ ಕಣ

ಸುರೇಂದ್ರ ಬಂಟ್ವಾಳ್‌ ಹತ್ಯೆ ಮಾಡಿದ್ದು ನಾನೇ; ಗೊಂದಲ ಸೃಷ್ಟಿಸಿದ ಆಪ್ತನ ವಾಯ್ಸ ರೆಕಾರ್ಡ್

ಸುರೇಂದ್ರ ಬಂಟ್ವಾಳ್‌ ಹತ್ಯೆ ಮಾಡಿದ್ದು ನಾನೇ; ಗೊಂದಲ ಸೃಷ್ಟಿಸಿದ ಆಪ್ತನ ವಾಯ್ಸ ರೆಕಾರ್ಡ್

ಯಕ್ಷ ಪ್ರತಿಭೆ ಚಿತ್ತರಂಜನ್‌ಗೆ ಅಭಿನಂದನೆ

ಯಕ್ಷ ಪ್ರತಿಭೆ ಚಿತ್ತರಂಜನ್‌ಗೆ ಅಭಿನಂದನೆ

ಗ್ರಾಮೀಣ ರಸ್ತೆ ಅಭಿವೃದ್ಧಿಗೆ “ಸಡಕ್‌ ಕೃಪೆ’

ಗ್ರಾಮೀಣ ರಸ್ತೆ ಅಭಿವೃದ್ಧಿಗೆ “ಸಡಕ್‌ ಕೃಪೆ’

ಕಾರವಾರ ನೌಕಾನೆಲೆಗೆ ಅಡ್ಮಿರಲ್‌ ಭೇಟಿ

ಕಾರವಾರ ನೌಕಾನೆಲೆಗೆ ಅಡ್ಮಿರಲ್‌ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.