ಅಫ್ಘಾನ್‌ ವಿರುದ್ಧದ ಹಣಾಹಣಿ; ಭಾರತದ ಪ್ರಮುಖ 4 ವಿಕೆಟ್‌ ಪತನ

Team Udayavani, Jun 22, 2019, 2:54 PM IST

ಸೌತಾಂಪ್ಟನ್‌: ವಿಶ್ವಕಪ್‌ ಪಂದ್ಯಾವಳಿಯ ಶನಿವಾರ ನಡೆಯುತ್ತಿರುವ ಅಫ್ಘಾನಿಸ್ಥಾನ ಎದುರಿನ ಪಂದ್ಯದಲ್ಲಿ ಭಾರತ ಆರಂಭಿಕ ಅಘಾತ ಅನುಭವಿಸಿತು.

ಟಾಸ್‌ ಗೆದ್ದು ಭಾರತ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಕೊಹ್ಲಿ ಪಡೆ 7 ರನ್‌ ಆಗುವಷ್ಟರಲ್ಲಿ ರೋಹಿತ್‌ ಶರ್ಮಾ ಅವರು ಕ್ಲೀನ್‌ ಬೌಲ್ಡ್‌ ಆದರು. 1 ರನ್‌ಗಳಿಸಿದ್ದ ಅವರನ್ನು ಮುಜೀಬ್‌ ಪೆವಿಲಿಯನ್‌ಗೆ ಕಳುಹಿಸಿದರು.

ತಂಡ 64 ರನ್‌ಗಳಿಸಿದ್ದ ವೇಳೆ ತಾಳ್ಮೆಯ ಆಟವಾಡುತ್ತಿದ್ದ  ಎಲ್‌ ರಾಹುಲ್‌ ಕ್ಯಾಚಿತ್ತು ನಿರ್ಗಮಿಸಿದರು.30 ರನ್‌ಗೆ ಅವರು ನಿರ್ಗಮಿಸಿದರು.

29 ರನ್‌ಗಳಿಸಿದ್ದ ವಿಜಯ್‌ ಶಂಕರ್‌ ಅವರನ್ನು ರಹಮತ್‌ ಎಲ್‌ಬಿಡಬ್ಲ್ಯೂ ಮಾಡಿದರು.

31 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 136 ರನ್‌ಗಳಿಸಿದೆ.

67 ರನ್‌ಗಳಿಸಿದ್ದ ನಾಯಕ ವಿರಾಟ್‌ ಕೊಹ್ಲಿ ಕ್ಯಾಚಿತ್ತು ಪೆವಿಲಿಯನ್‌ಗೆ ಮರಳಿದರು.

ಧೋನಿ ಮತ್ತು ಕೆದಾರ್‌ ಜಾಧವ್‌ ಕ್ರೀಸ್‌ನಲ್ಲಿದ್ದಾರೆ.

ಅಫ್ಘಾನಿಸ್ಥಾನ ಆಡಿರುವ ಎಲ್ಲಾ ಪಂದ್ಯಗಳಲ್ಲಿ ಸೋತು ಈಗಾಗಲೇ ಸರಣಿಯಿಂದ ಹೊರ ಬಿದ್ದಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ