ವನಿತಾ ಟೆಸ್ಟ್ : ಭಾರತಕ್ಕೆ ನೂತನ ಜೆರ್ಸಿ
Team Udayavani, May 30, 2021, 11:37 PM IST
ಮುಂಬಯಿ: ಭಾರತದ ವನಿತಾ ಟೆಸ್ಟ್ ತಂಡದ ನೂತನ ಜೆರ್ಸಿಯನ್ನು ಹರ್ಮನ್ಪ್ರೀತ್ ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿ ಸಿದ್ದಾರೆ. ಮುಂಬರುವ ಇಂಗ್ಲೆಂಡ್ ಪ್ರವಾಸದ ವೇಳೆ ಆಡಲಾಗುವ ಏಕೈಕ ಟೆಸ್ಟ್ ಪಂದ್ಯದ ವೇಳೆ ಮಿಥಾಲಿ ಪಡೆ ಈ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ.
ಇದು ಪುರುಷರ ಟೆಸ್ಟ್ ಜೆರ್ಸಿಯನ್ನೇ ಹೋಲುತ್ತದೆ. ಕಳೆದ ಆಸ್ಟ್ರೇಲಿಯ ಪ್ರವಾಸ ಹಾಗೂ ಇಂಗ್ಲೆಂಡ್ ಎದುರಿನ ತವರಿನ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಇಂಥದೇ ಜೆರ್ಸಿ ಧರಿಸಿತ್ತು. ಬಿಳಿ ಬಣ್ಣದ ಮೇಲಂಗಿಯಲ್ಲಿ ಬಿಸಿಸಿಐ, ಎಂಪಿಎಲ್ ಮತ್ತು ಬೈಜೂಸ್ ಲಾಂಛನವಿದೆ.
ಹಿಂಭಾಗದಲ್ಲಿ ಆಟಗಾರ್ತಿಯರ ಹೆಸರು ಮತ್ತು ಅವರ ಸಂಖ್ಯೆಯನ್ನು ನಮೂದಿಸಲಾಗಿದೆ. ಕೌರ್ ಜೆರ್ಸಿಯಲ್ಲಿ “ಹರ್ಮನ್’ ಎಂದು ಬರೆಯಲಾಗಿದ್ದು, ಇದು 7ನೇ ನಂಬರ್ ಹೊಂದಿದೆ.