ಹೆದ್ದಾರಿಯಲ್ಲಿ ಕಾರು ನಿಲ್ಲಿಸಿ ರೀಲ್ಸ್ ಮಾಡಿದ ಯುವತಿಗೆ 17 ಸಾವಿರ ದಂಡ
Team Udayavani, Jan 23, 2023, 4:07 PM IST
ಸೋಶಿಯಲ್ ಮೀಡಿಯಾಗಳಲ್ಲಿ ರೀಲ್ಸ್ ಗಳದ್ದೇ ಹವಾ ಕೈಯಲ್ಲೊಂದು ಮೊಬೈಲ್ ಇದ್ದರೆ ಸಾಕು ಅಲ್ಲೇ ರೀಲ್ಸ್ ಮಾಡಿ ಬಿಡುತ್ತಾರೆ, ಇಂದಿನ ಆಧುನಿಕ ಯುಗದಲ್ಲಿ ಯುವಕರು ಬಿಡಿ ವಯಸ್ಸಾದವರೂ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ರೀಲ್ಸ್, ವಿಡಿಯೋ ರೆಕಾರ್ಡಿಂಗ್ ಅಂತ ಹೇಳಿ ಬ್ಯುಸಿಯಾಗಿರುತ್ತಾರೆ.
ಈ ರೀಲ್ಸ್ ಅನ್ನೋದು ಎಷ್ಟರ ಮಟ್ಟಿಗೆ ಜನರನ್ನು ಹಿಡಿದಿಟ್ಟಿದೆ ಎಂದರೆ ತಾವು ಹೋದ ಪ್ರದೇಶದ 30 ಸೆಕಂಡುಗಳ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದು.
ಈ ರೀಲ್ಸ್ ನಿಂದಾಗಿ ಜನರು ತಮ್ಮ ಪ್ರಾಣವನ್ನು ಅಪಾಯಕ್ಕೆ ಸಿಲುಕಿಸಿಕೊಂಡಿದ್ದೂ ಉಂಟು ಮಾತ್ರವಲ್ಲದೆ ಕೆಲವರ ಜೀವಕ್ಕೆ ಮಾರಕ ಆಗಿದ್ದು ಉಂಟು, ಅದೇ ರೀತಿ ಉತ್ತರ ಪ್ರದೇಶದ ಗಾಜಿಯಾಬಾದ್ನ ಇಸ್ಟಾಗ್ರಾಮ್ ರೀಲ್ಸ್ ನಲ್ಲಿ ಖ್ಯಾತಿ ಪಡೆದ ಯುವತಿಯೊಬ್ಬಳು ಹೆದ್ದಾರಿ ಮಧ್ಯದಲ್ಲಿ ಕಾರು ನಿಲ್ಲಿಸಿ ರೀಲ್ಸ್ ಮಾಡಲು ಹೋಗಿ 17 ಸಾವಿರ ದಂಡ ಕಟ್ಟಿದ ಪ್ರಸಂಗ ನಡೆದಿದೆ.
ಇನ್ಸ್ಟಾಗ್ರಾಮ್ನಲ್ಲಿ 6,52,000 ಫಾಲೋವರ್ಸ್ ಹೊಂದಿರುವ ವೈಶಾಲಿ ಚೌಧರಿ ಖುಟೈಲ್ ಎಂದು ಗುರುತಿಸಲಾದ ಯುವತಿ, ತನ್ನ ಕಾರನ್ನು ಹೆದ್ದಾರಿಯಲ್ಲಿ ನಿಲ್ಲಿಸಿ ರೀಲ್ಸ್ ಮಾಡಿರುವ ವಿಡಿಯೋ ಇನ್ಸ್ಟಾ ಗ್ರಾಮ್ ನಲ್ಲಿ ವೈರಲ್ ಆಗುತ್ತಿದ್ದಂತೆ ಗಾಜಿಯಾಬಾದ್ ಪೊಲೀಸರು ವೈಶಾಲಿ ಚೌಧರಿ ವಿರುದ್ಧ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಹದಿನೇಳು ಸಾವಿರ ದಂಡ ವಸೂಲಿ ಮಾಡಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಂಪುರ್: ಸಂಪೂರ್ಣವಾಗಿ ವಿವಸ್ತ್ರಗೊಂಡ ನಿಗೂಢ ಯುವತಿಯ ವಿಡಿಯೋ ವೈರಲ್, ಪೊಲೀಸರಿಗೆ ಸಿಗದ ಸುಳಿವು!
50 ಹುಡುಗಿಯರ ಜೊತೆ ಪರೀಕ್ಷೆಗೆ ಕೂತ ಏಕೈಕ ವಿದ್ಯಾರ್ಥಿ: ಅಷ್ಟೂ ಹುಡುಗಿಯರನ್ನು ನೋಡಿ ಮೂರ್ಛೆ ಹೋದ.!
‘ವಿದ್ಯಾರ್ಥಿ ಭವನ್’ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಅಧಿಕಾರಿಯ ಆಹಾರ ಕದ್ದು ತಿಂದ ಆರೋಪ: ಆರೋಪಿಯಾದ ಪೊಲೀಸ್ ಡಾಗ್ ಫೋಟೋ ವೈರಲ್
ಫೇಸ್ಬುಕ್ ಲವ್… ಉತ್ತರ ಪ್ರದೇಶದ ಯುವಕನನ್ನ ವರಿಸಲು ಸ್ವೀಡನ್ನಿಂದ ಬಂದಳು!