ರವಿವಾರ ಐಪಿಎಲ್‌ ಆಡಳಿತ ಮಂಡಳಿಯಿಂದ ನಡೆಯಲಿದೆ ಮಹತ್ವದ ಸಭೆ

ವೇಳಾಪಟ್ಟಿ, ಎಸ್‌ಒಪಿ ನಿರ್ಧಾರ ಸೇರಿ ಹಲವು ಕುತೂಹಲಗಳಿಗೆ ಉತ್ತರ ನಿರೀಕ್ಷೆ

Team Udayavani, Aug 1, 2020, 6:46 PM IST

ರವಿವಾರ ಐಪಿಎಲ್‌ ಆಡಳಿತ ಮಂಡಳಿಯಿಂದ ನಡೆಯಲಿದೆ ಮಹತ್ವದ ಸಭೆ

ಮುಂಬಯಿ: ಐಪಿಎಲ್‌ ಆಡಳಿತ ಮಂಡಳಿಯ ಸಭೆ ರವಿವಾರ ನಡೆಯಲಿದೆ. ಸೆ. 19ರಿಂದ ನ. 8ರ ವರೆಗೆ ಯುಎಇಯಲ್ಲಿ ನಡೆಸಲು ಉದ್ದೇಶಿಸಲಾಗಿರುವ 13ನೇ ಆವೃತ್ತಿ ಐಪಿಎಲ್‌ ಹಿನ್ನೆಲೆಯಲ್ಲಿ ಇದು ಅತ್ಯಂತ ಮಹತ್ವದ ಪೂರ್ವಭಾವಿ ಸಭೆ. ಇಲ್ಲಿ 8 ಫ್ರಾಂಚೈಸಿಗಳು ಕಾತರದಿಂದ ಕಾಯುತ್ತಿರುವ ಹಲವಾರು ಪ್ರಶ್ನೆಗಳಿಗೆ ಉತ್ತರ ಸಿಗುವ ನಿರೀಕ್ಷೆ ಇದೆ. ಹಾಗೆಯೇ ಬಿಸಿಸಿಐ ಕೂಡ ಕೆಲವು ವಿಷಯಗಳಲ್ಲಿ ಸ್ಪಷ್ಟ ನಿಲುವಿಗೆ ಬರಲು ಸಾಧ್ಯವಾಗಲಿದೆ. ಸಭೆಯಲ್ಲಿ ಚರ್ಚೆಗೊಳಗಾಗುವ ಕೆಲವು ಮಹತ್ವದ ಸಂಗತಿಗಳು ಹೀಗಿವೆ…

 ವೇಳಾಪಟ್ಟಿ
ಕೂಟದ ದಿನಾಂಕ ಈಗಾಗಲೇ ಅಂತಿಮಗೊಂಡಿದೆ. ಆದರೆ ವೇಳಾಪಟ್ಟಿ ಇನ್ನಷ್ಟೇ ಪ್ರಕಟಗೊಳ್ಳಬೇಕು. ಇದು ಖಚಿತಗೊಂಡರೆ ಫ್ರಾಂಚೈಸಿಗಳಿಗೆ ಎಲ್ಲ ರೀತಿಯ ಸಿದ್ಧತೆ ಆರಂಭಿಸಲು ಅನುಕೂಲವಾಗುತ್ತದೆ. ಯುಎಇಯಲ್ಲಿರುವ 3 ಮೈದಾನಗಳಲ್ಲಿ ಪಂದ್ಯಗಳನ್ನು ಆಯೋಜಿಸಲು ಫ್ರಾಂಚೈಸಿಗಳಿಗೆ ಪೂರ್ವಸಿದ್ಧತೆ ಅನಿವಾರ್ಯ.

ನೀತಿ, ನಿಯಮಗಳು
ಎಲ್ಲ ಫ್ರಾಂಚೈಸಿಗಳಿಗೆ ಹಾಗೂ ಬಿಸಿಸಿಐಗೆ ಇರುವ ದೊಡ್ಡ ತಲೆನೋವು ಕೊರೊನಾ. ಸಾಮಾನ್ಯವಾಗಿ ಐಪಿಎಲ್‌ ನಡೆಸಲು ಬಿಸಿಸಿಐ ತನ್ನದೇ ಆದ ಪ್ರಮಾಣೀಕೃತ ಕಾರ್ಯಾಚರಣೆ ಪದ್ಧತಿಯನ್ನು (ಎಸ್‌ಒಪಿ) ಹೊಂದಿರುತ್ತದೆ. ಈಗ ಕೊರೊನಾ ಇರುವುದರಿಂದ ಅದಕ್ಕೆ ತಕ್ಕಂತೆ ಹೊಂದಾಣಿಕೆಯನ್ನೂ ಮಾಡಿಕೊಳ್ಳಬೇಕಾಗುತ್ತದೆ. ಜೈವಿಕ ಸುರಕ್ಷಾ ವಲಯ, ಯುಎಇಯ ಏಕಾಂತವಾಸದ ನಿಯಮ, ಅಭ್ಯಾಸ ಹಾಗೂ ಪಂದ್ಯದ ವೇಳೆ ಎಷ್ಟು ಜನರಿಗೆ ಒಟ್ಟಿಗೆ ಇರಬಹುದು, ಕೂಟದ ವೇಳೆ ಬಿಸಿಸಿಐನ ವೈದ್ಯರ ಮಾತೇ ಅಂತಿಮವೇ ಅಥವಾ ಫ್ರಾಂಚೈಸಿಗಳ ಪ್ರತ್ಯೇಕ ವೈದ್ಯರಿಗೆ ಅಧಿಕಾರವಿರುತ್ತದೆಯೇ… ಇಂತಹ ಹಲವು ಪ್ರಶ್ನೆಗಳು ಫ್ರಾಂಚೈಸಿಗಳ ಮುಂದಿವೆ.

ವಿದೇಶಿ ಆಟಗಾರರ ಲಭ್ಯತೆ?
ಟಿ20 ವಿಶ್ವಕಪ್‌ ರದ್ದಾಗುತ್ತಿದ್ದಂತೆಯೆ ಎಲ್ಲ ದೇಶಗಳಲ್ಲಿ ಟಿ20 ಲೀಗ್‌ ದಿಢೀರನೆ ಆರಂಭವಾಗಿವೆ. ಆದ್ದರಿಂದ ಐಪಿಎಲ್‌ನಲ್ಲಿ ವಿದೇಶಿ ಆಟಗಾರರು ಸಮಯಕ್ಕೆ ಸರಿಯಾಗಿ ಲಭ್ಯರಾಗುವುದು, ಅವರು ಯುಎಇಯ ಕೊರೊನಾ ನಿಯಮಗಳನ್ನು ದಾಟಿ ಆಟಕ್ಕೆ ಲಭ್ಯವಾಗುವುದು… ಇವೆಲ್ಲ ವಿಮರ್ಶಿಸಬೇಕಾದ ಸಂಗತಿಗಳಾಗಿವೆ.

ವಿಂಡೀಸ್‌ ಆಟಗಾರರು ಸೆ. 10ಕ್ಕೆ ಸಿಪಿಎಲ್‌ ಮುಗಿಸಿ ಐಪಿಎಲ್‌ಗೆ ಬರಬೇಕು. ಹಾಗೆಯೇ ಚೊಚ್ಚಲ ಲಂಕಾ ಪ್ರೀಮಿಯರ್‌ ಲೀಗ್‌ ಇದೆ. ಆಸ್ಟ್ರೇಲಿಯ-ಇಂಗ್ಲೆಂಡ್‌ ನಡುವೆ ಸೀಮಿತ ಓವರ್‌ಗಳ ಸರಣಿ ಮುಗಿಯುವುದೇ ಸೆ. 15ಕ್ಕೆ. ಅವರು ಅದೇ ದಿನ ಯುಇಎಗೆ ಬಂದರೂ ಕನಿಷ್ಠ ಒಂದು ವಾರ ಕೂಟಕ್ಕೆ ಲಭ್ಯರಿರುವುದಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ಹೆಚ್ಚಿರುವುದರಿಂದ ಅಲ್ಲಿ ವಿಮಾನಗಳನ್ನು ನಿಷೇಧಿಸಲಾಗಿದೆ. ಆಫ್ರಿಕಾ ಆಟಗಾರರನ್ನು ಕರೆಸಿಕೊಳ್ಳಲು ಏನು ದಾರಿ ಎಂಬ ಪ್ರಶ್ನೆಗಳಿಗೆಲ್ಲ ಉತ್ತರ ಬೇಕಾಗಿದೆ.

ಕುಟುಂಬಕ್ಕೆ ಅವಕಾಶ ನೀಡಬೇಕೇ?
ಬಹುಮುಖ್ಯವಾಗಿರುವ ಇನ್ನೊಂದು ಪ್ರಶ್ನೆಯೆಂದರೆ, ಆಟಗಾರರು ತಮ್ಮೊಂದಿಗೆ ಕುಟುಂಬ ಸದಸ್ಯರನ್ನು ಒಯ್ಯಲು ಅವಕಾಶವಿದೆಯೇ ಎನ್ನುವುದು. ಕೋವಿಡ್ ನಿಂದಾಗಿ ಈ ಪ್ರಶ್ನೆ ಉದ್ಭವಿಸಿದೆ. ಕುಟುಂಬದವರನ್ನು ಒಯ್ಯದಿದ್ದರೆ 2 ತಿಂಗಳಿಗೂ ದೀರ್ಘ‌ ಕಾಲ ಆಟಗಾರರು ಪರಿವಾರದ ಸದಸ್ಯರಿಂದ ದೂರವಿರಬೇಕಾಗುತ್ತದೆ ಎನ್ನುವುದು ಒಂದು ಸಮಸ್ಯೆ. ಒಯ್ದರೆ ಕುಟುಂಬ ಸದಸ್ಯರು ಯುಎಇಯ ಹೊಟೇಲ್‌ ಕೊಠಡಿಗಳಲ್ಲಿ ಬಂಧಿಗಳಾಗಬೇಕಾಗುತ್ತದೆ ಎನ್ನುವ ಇಕ್ಕಟ್ಟು! ಈ ಬಗ್ಗೆ ರವಿವಾರದ ಸಭೆಯಲ್ಲಿ ಬಿಸಿಸಿಐ ಖಚಿತ ಉತ್ತರ ಕಂಡುಕೊಳ್ಳಬೇಕಾಗಿದೆ.

ಟಾಪ್ ನ್ಯೂಸ್

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.