ಆದಾಯ ತೆರಿಗೆ ಬಲೆಗೆ ಆಟೋ ಚಾಲಕ !

Team Udayavani, May 2, 2019, 6:07 AM IST

ಮಹದೇವಪುರ/ಬೆಂಗಳೂರು: ಸಾಮಾನ್ಯ ಆಟೋ ಚಾಲಕರೊಬ್ಬರು ದಿಢೀರನೇ ವಿಲ್ಲಾ ಖರೀದಿಸಿ ಈಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ವೈಟ್‌ಫೀಲ್ಡ್‌ ಸಮೀಪದ ನಲ್ಲೂರಹಳ್ಳಿ ನಿವಾಸಿ ಸುಬ್ರಮಣಿ ಐಟಿ ದಾಳಿಗೊಳಗಾದ ಆಟೋ ಚಾಲಕ. ಸಾರ್ವಜನಿಕರ ಮಾಹಿತಿ ಮೇರೆಗೆ ಸುಬ್ರಮಣಿ ಖರೀದಿಸಿದ ವೈಟ್‌ಫೀಲ್ಡ್‌ ಸಮೀಪದಲ್ಲಿರುವ ವಿಲ್ಲಾ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಕೆಲವು ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದಾರೆ.

ಕೆಲವು ವರ್ಷಗಳ ಹಿಂದಷ್ಟೇ ಆಟೋ ಚಾಲನೆ ಆರಂಭಿಸಿ ಜೀವನ ನಡೆಸುತ್ತಿದ್ದ ಸುಬ್ರಮಣಿ ಏಕಾಏಕಿ ಕೋಟ್ಯಂತರ ರೂ. ಸಂಪಾದಿಸಿ, ದಿಢೀರ್‌ ಶ್ರೀಮಂತನಾಗಿರುವ ವಿಚಾರ ತಿಳಿದ ಸಾರ್ವಜನಿಕರು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ. ಈ ವೇಳೆ ಸುಬ್ರಮಣಿ ಕೆಲವು ಪ್ರಭಾವಿ ರಾಜ ಕೀಯ ಮುಖಂಡರು, ಉದ್ಯಮಿಗಳ ಜತೆ ನಿಕಟ ಸಂಪರ್ಕ ಹೊಂದಿದ್ದು, ಆ ಮೂಲಕವೇ ಹಣ ಸಂಪಾದನೆ ಮಾಡಿದ್ದಾರೆ ಎಂದು ಹೇಳಲಾಗಿದೆ. ದಾಳಿ ವೇಳೆ ವಿಲ್ಲಾದಲ್ಲಿ ಪತ್ತೆಯಾದ ದಾಖಲೆಗಳು ಬೇನಾಮಿ ಆಸ್ತಿ ಹೊಂದಿರುವುದು ತಿಳಿದು ಬಂದಿದೆ.

ಸುಬ್ರಮಣಿ ವಿದೇಶಿ ಮಹಿಳೆ ಯೊಬ್ಬರ ಜತೆ ಸಂಪರ್ಕದಲ್ಲಿದ್ದು, ಅವರಿಗೆ ಸಂಬಂಧಿಸಿದ ಬೇನಾಮಿ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ.

ಸುಬ್ರಮಣಿ ಬಡ್ಡಿ ವ್ಯವಹಾರ ಮತ್ತು ರಿಯಲ್‌ ಎಸ್ಟೇಟ್‌ ಕೂಡ ನಡೆಸುತ್ತಿದ್ದು, ತೆರಿಗೆ ಪಾವತಿಸ ದಿರುವುದು ಸಹ ಮೇಲ್ನೋಟಕ್ಕೆ ಕಂಡು ಬಂದಿದ್ದು, ವಿಚಾರಣೆ ಮುಂದುವರಿದಿದೆ.

ಹಣ, ವಿಲ್ಲಾ ಸಹಿತ ಇತರ ಆಸ್ತಿಗಳ ಮೂಲ ದಾಖಲೆ ಹಾಜರುಪಡಿಸಿ ವಿವರಣೆ ನೀಡುವಂತೆ ಐಟಿ ಇಲಾಖೆ ಸುಬ್ರಮಣಿಗೆ ನೋಟಿಸ್‌ ನೀಡಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ