
ಜೆಡಿಎಸ್ ದ್ವಿತೀಯ ಪಟ್ಟಿ ಬಿಡುಗಡೆಗೆ ಸಿದ್ಧತೆ: ಫೆ. 8ರ ಆಸುಪಾಸು ಬಹಿರಂಗ ಸಾಧ್ಯತೆ
Team Udayavani, Feb 2, 2023, 7:00 AM IST

ಬೆಂಗಳೂರು: ಚುನಾವಣೆಗೆ ಬಿಜೆಪಿ, ಕಾಂಗ್ರೆಸ್‌ಗಿಂತ ಮುನ್ನವೇ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಿಸಿದ್ದ ಜೆಡಿಎಸ್ ಈಗ 2ನೇ ಪಟ್ಟಿ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
3ನೇ ಹಂತದ ಪಂಚರತ್ನ ಯಾತ್ರೆ ಫೆ. 8ರಂದು ಆರಂಭಗೊಳ್ಳಲಿದ್ದು, ಅದರ ಅಸುಪಾಸಿನಲ್ಲಿ 2ನೇ ಪಟ್ಟಿ ಘೋಷಣೆ ಆಗಲಿದೆ ಎನ್ನಲಾಗುತ್ತಿದೆ.
ಬಳ್ಳಾರಿಯಲ್ಲಿ ಹೇಳಿಕೆ ನೀಡಿರುವ ಎಚ್.ಡಿ. ಕುಮಾರಸ್ವಾಮಿ, ಹಾಸನದ ಏಳು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಫೆ. 3ರಂದು ಸಮಸ್ಯೆಗಳಿಲ್ಲದೆ ಅಂತಿಮಗೊಳಿಸಲಾಗುವುದು, ಅಭ್ಯರ್ಥಿ ಗಳ ಎರಡನೇ ಪಟ್ಟಿಯನ್ನು ಫೆ. 10ರಂದು ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.
ಕಲ್ಯಾಣ ಕರ್ನಾಟಕದ ಬೀದರ್ ಜಿಲ್ಲೆಯಿಂದ ಜ. 5ರಂದು ಆರಂಭಿಸ ಲಾಗಿದ್ದ ಪಂಚರತ್ನ ಯಾತ್ರೆ ಫೆ. 1ರಂದು ಮುಕ್ತಾಯಗೊಂಡಿದ್ದು, 2 ದಿನ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಬಾಗೇಪಲ್ಲಿ, ಸಿಂದಗಿ, ಭದ್ರಾವತಿಗೆ ಪ್ರವಾಸ ಕೈಗೊಳ್ಳಲಿರುವ ಕುಮಾರಸ್ವಾಮಿ ಫೆ. 4ರಂದು ಪಕ್ಷದ ರಾಜ್ಯ ಕಚೇರಿ ಜೆ.ಪಿ. ಭವನದಲ್ಲಿ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಟಿಕೆಟ್ ಘೋಷಣೆಯಾದ 93 ಅಭ್ಯರ್ಥಿಗಳ ಈವರೆಗಿನ “ಪ್ರಗತಿ ಪರಿಶೀಲನೆ’ ನಡೆಯಲಿದೆ. 2ನೇ ಪಟ್ಟಿಯ ಬಗ್ಗೆಯೂ ಚರ್ಚೆ ನಡೆಯಲಿದ್ದು, 2ನೇ ಹಂತದಲ್ಲಿ 50ರಿಂದ 60 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಲಾಗುವುದು ಎನ್ನಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಮೋದಿಯನ್ನೇ ಟೀಕಿಸಿದ ರಾಯಚೂರು ನಗರ ಬಿಜೆಪಿ ಶಾಸಕ: ಆಡಿಯೊ ವೈರಲ್

ದಕ್ಷಿಣ ಆಗ್ನೇಯ ರೈಲ್ವೆ…ಒಂದು ವರ್ಷದಲ್ಲಿ 1ಕೋಟಿಗೂ ಅಧಿಕ ದಂಡ ವಸೂಲಿ ಮಾಡಿದ ಟಿಕೆಟ್ ಪರೀಕ್ಷಕ

ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಆಯ್ಕೆ: ನಳಿನ್ ಕುಮಾರ್ ಕಟೀಲ್

ಇಬ್ಬರು ಶಾಸಕರ ರಾಜೀನಾಮೆ? ಶಿರಸಿಯತ್ತ ಎಲ್ಲರ ಚಿತ್ತ!

ಮುಂಬೈ-ಚೆನ್ನೈ ಅಲ್ಲ, ಐಪಿಎಲ್ ವಿಜೇತರ ಬಗ್ಗೆ ಭವಿಷ್ಯ ನುಡಿದ ಮೈಕಲ್ ವಾನ್