ನಂಬಿದ ದೇವರೇ ನನ್ನನ್ನು ಸರಿಯಾದ ಸಮಯಕ್ಕೆ ಊರಿಗೆ ಕಳುಹಿಸಿದ್ದಾರೆ : ಮಲ್ಪೆಯ ಜಾನ್ ಜತ್ತನ್
Team Udayavani, Aug 21, 2021, 7:50 AM IST
ಮಲ್ಪೆ : ನಾವು ನಂಬಿದ ದೇವರೇ ನನ್ನನ್ನು ಸರಿಯಾದ ಸಮಯಕ್ಕೆ ಊರಿಗೆ ಕಳುಹಿಸಿದ್ದಾರೆ. ಇದು ದೇವರು ಬಂದು ಮಾಡಿದ ಕಾರ್ಯವಲ್ಲದೆ ಬೇರಾರು ಅಲ್ಲ ಎಂದು ಅಫ್ಘಾನಿಸ್ಥಾನದ ಕಾಬೂಲ್‌ನ ವಿಮಾನ ನಿಲ್ದಾಣದ ಪೆಟ್ರೋಲಿಯಂ ಕಂಪೆನಿಯಲ್ಲಿ ಸುಪರ್‌ವೈಸರ್ ಕೆಲಸ ಮಾಡುತ್ತಿದ್ದ ಮಲ್ಪೆ ವಡಬಾಂಡೇಶ್ವರದ ಜಾನ್ ಜತ್ತನ್ ಅವರು ಹೇಳಿದ್ದಾರೆ.
ಹಲವಾರು ವರ್ಷಗಳಿಂದ ಅಫ್ಘಾನಿಸ್ಥಾನದಲ್ಲಿ ಕೆಲಸ ನಿರ್ವಹಿಸುತ್ತಿದ್ದೆ. 15 ದಿನಗಳ ಹಿಂದೆ ರಜೆ ಮುಗಿಸಿ ಅಫ್ಘಾನಿಸ್ಥಾನಕ್ಕೆ ಹೋಗಿದ್ದೆ. ತಾಲಿಬಾನ್‌ಗಳು ಪ್ರತಿಯೊಂದು ವಿಮಾನ ನಿಲ್ದಾಣವನ್ನು ವಶಪಡಿಸಿಕೊಳ್ಳುತ್ತಿದ್ದರು. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಭದ್ರತೆ ಇರುವುದರಿಂದ ಅವರಿಗೆ ವಶಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಕಂಪೆನಿ ಮುಖ್ಯಸ್ಥರು ಕೂಡಲೇ ಅಲ್ಲಿಂದ ತೆರಳಲು ಸೂಚನೆ ನೀಡಿದ್ದು, ಅದರಂತೆ ಆ.15ರಂದು ನಾವು ಭಾರತೀಯ ವಾಯುಸೇನೆ ಏರ್‌ಲಿಫ್ಟ್ ಮಾಡಿದ್ದರಿಂದ ಸುರಕ್ಷಿತವಾಗಿ ಊರಿಗೆ ಬಂದೆವು ಎಂದು ಜಾನ್ ಜತ್ತನ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕರಾವಳಿಯಲ್ಲಿ ಬಿರುಸಿನ ಮಳೆ ; ಮೇ 20 ಕ್ಕೆ ಆರೆಂಜ್ ಅಲರ್ಟ್: ಹವಾಮಾನ ಇಲಾಖೆಯ ಮುನ್ಸೂಚನೆ
ಭಾರಿ ಮಳೆ ಹಿನ್ನೆಲೆ ಉಡುಪಿ, ಶಿವಮೊಗ್ಗ ಶಾಲೆಗಳಿಗೆ ನಾಳೆ ರಜೆ ಘೋಷಣೆ
ಕಾಪು : ವಿದೇಶದಿಂದ ಬಂದಿದ್ದ ವ್ಯಕ್ತಿ ಬಾವಿಯ ಹಗ್ಗಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣು
ಉಡುಪಿ: ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ವಿದ್ಯಾರ್ಥಿಗೆ 625 ಅಂಕ
ಕಾಪು: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಮೂರು ಕಾರುಗಳು ಜಖಂ