ಆವಿಷ್ಕಾರಗಳ ಶಿಲ್ಪಿಯಾಗಿದ್ದ ಕೆ. ಕೆ. ಪೈ

Team Udayavani, Jun 27, 2022, 6:10 AM IST

ಆವಿಷ್ಕಾರಗಳ ಶಿಲ್ಪಿಯಾಗಿದ್ದ ಕೆ. ಕೆ. ಪೈ

ಕೆ. ಕೆ. ಪೈ ಅವರು ಬದುಕಿರುತ್ತಿದ್ದರೆ ಅವರಿಗೆ 101 ವರ್ಷ ಪೂರ್ತಿಯಾಗಿ ಜೂ. 26ರಂದು 102ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಈ ಸಂದರ್ಭದಲ್ಲಿ ಕೆ. ಕೆ. ಪೈ ಅವರ ಬ್ಯಾಂಕಿಂಗ್‌ ಮತ್ತು ಬ್ಯಾಂಕಿಂಗೇತರ ಆವಿಷ್ಕಾರಗಳ ಕುರಿತು ಈ ಲೇಖನ.

1970ರ ದಶಕದಲ್ಲಿ ಭಾರತದ ದೊಡ್ಡ ದೊಡ್ಡ ಬ್ಯಾಂಕ್‌ಗಳು ಆಡಳಿತ ವಿಕೇಂದ್ರೀಕರಣಕ್ಕೆ ಒತ್ತು ನೀಡಲಾರಂಭಿಸಿದವು. ಇದರಂತೆ ಆ ಬ್ಯಾಂಕ್‌ಗಳು ಪ್ರಾದೇಶಿಕ ಕಚೇರಿಗಳನ್ನು ಮತ್ತು ಕ್ಷೇತ್ರೀಯ ಕಚೇರಿಗಳನ್ನು ತೆರೆಯಲಾರಂಭಿಸಿದವು.

ವಿಶಿಷ್ಟ ವಿಕೇಂದ್ರೀಕರಣ
ಕೆ. ಕೆ. ಪೈ ಅವರು ಇತರ ಬ್ಯಾಂಕ್‌ಗಳಂತೆ ಆಡಳಿತ ವಿಕೇಂದ್ರೀಕರಣಕ್ಕೆ ಮುಂದಾಗಲಿಲ್ಲ. ಅವರು ಒತ್ತು ನೀಡಿದ್ದ ಕೇಂದ್ರೀಕೃತ ಸಿಬಂದಿ ನಿರ್ವಹಣೆ ಮತ್ತು ವಿಕೇಂದ್ರೀಕೃತ ಬ್ಯಾಂಕಿಂಗ್‌ ಕಾರ್ಯಾಚರಣೆ (Centralised Personel management and Decentrelised Banking Operations) ನಿಲುವಿಗೆ ಬಲವಾಗಿ ಅಂಟಿ ಕೊಂಡಿದ್ದರು. ಅದರಂತೆ ಅವರು ಬ್ಯಾಂಕಿನ ಅಭಿವೃದ್ಧಿ ಕಾರ್ಯಗಳನ್ನು ಮಾತ್ರ ವಿಕೇಂದ್ರೀ ಕರಿಸಿದರು. ಇದಕ್ಕಾಗಿ ಅವರು ಪ್ರಾದೇಶಿಕ ಅಭಿವೃದ್ಧಿ ಕಚೇರಿಗಳನ್ನು ಆರಂಭಿಸಿದರು. 1971ರಲ್ಲಿ ಅವರು ದೇಶದ ಎಂಟು ಕೇಂದ್ರಗಳಲ್ಲಿ ಪ್ರಾದೇಶಿಕ ಅಭಿವೃದ್ಧಿ ಕಚೇರಿಗಳನ್ನು (Regional Development Offices) ತೆರೆದರು. ಈ ಕಚೇರಿಗಳಿಗೆ ಮುಖ್ಯಸ್ಥ ರನ್ನಾಗಿ ಬಹಳಷ್ಟು ಹಿರಿಯ ಅಧಿಕಾರಿಗಳನ್ನು ನೇಮಿಸಿದರು. ಪ್ರತಿಯೊಬ್ಬ ಪ್ರಾದೇಶಿಕ ಅಭಿವೃದ್ಧಿ ನಿರ್ವಾಹಕರ ಕೈಕೆಳಗೆ 70-80 ಶಾಖೆಗಳಿದ್ದವು. ಪ್ರಾದೇಶಿಕ ಅಭಿವೃದ್ಧಿ ಕಚೇರಿಗಳ ಮುಖ್ಯಾಧಿಕಾರಿಗಳನ್ನು ಪ್ರಾದೇಶಿಕ ಅಭಿವೃದ್ಧಿ ನಿರ್ವಾಹಕ (Regional Development Managers)ರೆಂದು ಕರೆಯ ಲಾಗುತ್ತಿತ್ತು. ಪ್ರಾದೇಶಿಕ ಅಭಿವೃದ್ಧಿ ನಿರ್ವಾಹಕರ ಕೈಕೆಳಗೆ ಅಭಿವೃದ್ಧಿ ಆಡಳಿತ ಸಮರ್ಪಕವಾಗಿ ನಡೆಯಲು ಜಿಲ್ಲಾ ಅಭಿವೃದ್ಧಿ ನಿರ್ವಾಹಕರನ್ನು (District Development Managers) ನೇಮಿಸಲಾಯಿತು.

ಈ ರೀತಿ ಅಭಿವೃದ್ಧಿ ಕೆಲಸಗಳನ್ನು ಮಾತ್ರ ವಿಕೇಂದ್ರೀಕರಿಸಿದ ಪೈಯವರ ಈ ನವ್ಯ ಪ್ರಯೋಗ ಒಂದು ಪ್ರಮುಖ ಬ್ಯಾಂಕಿಂಗ್‌ ಆವಿಷ್ಕಾರವಾಗಿ ಪರಿಗಣಿಸಲ್ಪಟ್ಟಿತು.
ಪ್ರಾದೇಶಿಕ ಅಭಿವೃದ್ಧಿ ಕಚೇರಿಗಳು ತಂತಮ್ಮ ಅಭಿವೃದ್ಧಿ ಆಡಳಿತವಿರುವ ಪ್ರದೇಶಗಳಲ್ಲಿ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡಿದವು ಮತ್ತು ಬ್ಯಾಂಕಿಂಗ್‌ ಪ್ರಗತಿಯಲ್ಲಿ ವೇಗೋತ್ಕರ್ಷ ಸಾಧಿಸಿದವು.

ಪ್ರಾದೇಶಿಕ ಅಭಿವೃದ್ಧಿ ನಿರ್ವಾಹಕರ ಮೇಲ್ವಿಚಾರಣೆಗಾಗಿ ಮತ್ತು ಸಮನ್ವಯ (Co-ordination) ಸಾಧಿಸಲು ಪ್ರಧಾನ ಕಚೇರಿಯಲ್ಲಿ ಪ್ರಧಾನ ಅಭಿವೃದ್ಧಿ ನಿರ್ವಾಹಕರನ್ನೂ (Chief Development Manager) ಕೆ. ಕೆ. ಪೈ ನೇಮಿಸಿದರು. ಅಭಿವೃದ್ಧಿ ಕ್ಷೇತ್ರದಲ್ಲಿ ಇವರು ನಡೆಸಿದ ಈ ಪ್ರಯೋಗದಿಂದ ಅಭಿವೃದ್ಧಿ ತ್ವರಿತಗೊಂಡಿತು.

ಫ‌ಲಪ್ರದ ಪ್ರಯೋಗ
ಅಭಿವೃದ್ಧಿ ಕೆಲಸಗಳ ವಿಕೇಂದ್ರೀಕರಣೋತ್ತರ ಅಭಿವೃದ್ಧಿಯಲ್ಲಿ ಠೇವಣಿ ಹೆಚ್ಚಳದ ದರ ಶೇ.25ಕ್ಕಿಂತಲೂ ಜಾಸ್ತಿಯಾಯಿತು. ಆಗ ರಾಷ್ಟ್ರೀಯ ಸರಾಸರಿ ಠೇವಣಿ ಹೆಚ್ಚಳದ ದರ ಶೇ.16-17 ಇರುತ್ತಿತ್ತು. ವಿಕೇಂದ್ರೀಕರಣದ ಪ್ರಥಮ ವರ್ಷವಾದ 1971ರಲ್ಲಿ ಠೇವಣಿ ಹೆಚ್ಚಳದ ದರ ಶೇ.30.95 ಆಯಿತು. 1972ರಲ್ಲಿ ಶೇ.23.18ರಷ್ಟು, 1973ರಲ್ಲಿ ಶೇ.28.78ರಷ್ಟು, 1974ರಲ್ಲಿ ಶೇ.22.06ರಷ್ಟು, 1975ರಲ್ಲಿ ಶೇ.26.05ರಷ್ಟೂ, 1976ರಲ್ಲಿ ಶೇ.26.68ರಷ್ಟು ಮತ್ತು 1977ರಲ್ಲಿ ಶೇ. 22.28ರಷ್ಟು ಮತ್ತು 1977ರಲ್ಲಿ ಶೇ. 22.28ರಷ್ಟು ಆಯಿತು. ಠೇವಣಿ ಸಂಗ್ರಹಣೆ ಮತ್ತು ಅಭಿವೃದ್ಧಿ ಇತರ ಪ್ರಾದೇಶಿಕ ಅಭಿವೃದ್ಧಿ ಸಾಧನೆಯಲ್ಲಿ ಪ್ರತೀ ಪ್ರಾದೇಶಿಕ ಅಭಿವೃದ್ಧಿ ಕಚೇರಿ ಇತರ ಪ್ರಾದೇಶಿಕ ಅಭಿವೃದ್ಧಿ ಕಚೇರಿಗಳೊಂದಿಗೆ ಪೈಪೋಟಿ ನಡೆಸುವಂತಾಯಿತು. ಹೊಸ ಸಾಲದ ಪ್ರೊಪೋಸಲ್‌ಗ‌ಳನ್ನು ತರುವಲ್ಲಿ ಮತ್ತು ಶಾಖಾ ವಿಸ್ತರಣೆಯಲ್ಲಿ ಕೂಡ ಕಚೇರಿಗಳು ಮಹತ್ತರ ಪ್ರಗತಿ ಸಾಧಿಸಿದವು. ಈ ರೀತಿ ಕೆ.ಕೆ. ಪೈ ನಡೆಸಿದ ಅಭಿವೃದ್ಧಿ ವಿಕೇಂದ್ರೀಕರಣ ಫ‌ಲಪ್ರದವಾಯಿತು.

ಅವರ ಮತ್ತೂಂದು ಪ್ರಮುಖ ಆವಿಷ್ಕಾರ ಫಾರ್ಮ್ ಕ್ಲಿನಿಕ್‌ ಯೋಜನೆ (Farm Clinic Project). ಇದು ಸಮಗ್ರ ಸಾಲ ಮತ್ತು ವಿಸ್ತರಣ ಸೇವೆಗಳ (Integrated Credit and Extention Services) ಅನುಷ್ಠಾನಕ್ಕಾಗಿ ರೂಪಿಸಲ್ಪಟ್ಟ ಯೋಜನೆ ಆಗಿತ್ತು. 1973ರಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಒಂದು ಗ್ರಾಮದಲ್ಲಿ ಪ್ರಾಯೋಗಿಕ ವಾಗಿ ಇದನ್ನು ಅನುಷ್ಠಾನಗೊಳಿಸಲಾಯಿತು. ಪ್ರಥಮ ವರ್ಷದಲ್ಲೇ ಈ ಯೋಜನೆ ಬಹಳ ಯಶಸ್ವಿಯಾಯಿತು. ಆ ಬಳಿಕ ಇದನ್ನು ಇತರ ಪ್ರದೇಶಗಳಿಗೂ ವಿಸ್ತರಿಸಲಾಯಿತು.
ದೇಶದ ಪ್ರಪ್ರಥಮ ಗ್ರಾಮೀಣ ಬ್ಯಾಂಕನ್ನು ಸ್ಥಾಪಿಸಿದವರೂ ಕೆ. ಕೆ. ಪೈ ಅವರೇ. 1975ರ ಅಕ್ಟೋಬರ್‌ 2ರಂದು ಮೊರದಾಬಾದಿನಲ್ಲಿ ಪ್ರಥಮ ಗ್ರಾಮೀಣ ಬ್ಯಾಂಕನ್ನು ಅವರು ಆರಂಭಿಸಿದರು.

ಸ್ವಂತ ಉದ್ಯೋಗ ಯತ್ನ
ಕೆ. ಕೆ. ಪೈ ಅವರ ಮತ್ತೂಂದು ನವ್ಯ ಪ್ರಯೋಗ ಜೇಸಿ ಸಂಸ್ಥೆಯ ಸಹಭಾಗಿತ್ವದೊಂದಿಗೆ ಆರಂಭಿಸಲ್ಪಟ್ಟ ಸ್ವಂತ ಉದ್ಯೋಗ ಯತ್ನ (self Employment Endeavour). ಈ ಯೋಜನೆಯ ಅನುಷ್ಠಾನದ ಫ‌ಲವಾಗಿ 1,400 ನಿರುದ್ಯೋಗಿ ಯುವಕರಿಗೆ ತಮ್ಮದೇ ಆದ ಸಣ್ಣ ಉದ್ದಿಮೆಗಳನ್ನು ಆರಂಭಿಸಲು ಸಾಧ್ಯವಾಯಿತು. ಇದರ ಫ‌ಲವಾಗಿ 4,200 ಇತರ ಉದ್ಯೋಗಗಳೂ ಸೃಷ್ಟಿಸಲ್ಪಟ್ಟವು.

ಕೆ.ಕೆ. ಪೈ ಅವರ ಇನ್ನೊಂದು ಆವಿಷ್ಕಾರ ಆದರ್ಶ ಠೇವಣಿ ಯೋಜನೆ. ಇದಕ್ಕೆ ಹೆಸರು ಸೂಚಿಸಿದ್ದು ನಾನೇ. ಇದು ಪಿಗ್ಮಿ ಯೋಜನೆ ಗಿಂತಲೂ ಹೆಚ್ಚು ಜನಪ್ರಿಯವಾಯಿತು. ಮತ್ತು ಯಾವಾಗಲೂ ಆದರ್ಶ ಠೇವಣಿ ಮೊತ್ತ ಪಿಗ್ಮಿ ಠೇವಣಿ ಮೊತ್ತಕ್ಕಿಂತ ಜಾಸ್ತಿ ಇರುತ್ತಿತ್ತು.

ಹೆಚ್ಚುವರಿ ಆಯಾಮ
ಕೆ. ಕೆ. ಪೈ ಅವರು ನಗರಸಭಾಧ್ಯಕ್ಷರಾಗಿದ್ದಾಗ ಉಡುಪಿ ಪರ್ಯಾಯ ಮಹೋತ್ಸವಕ್ಕೆ ಒಂದು ಹೆಚ್ಚುವರಿ ಆಯಾಮ ನೀಡಿದ್ದಾರೆ. ಕೃಷ್ಣ ಮಠದ ಪೂಜೆ ಮತ್ತು ಆಡಳಿತಾಧಿಕಾರವನ್ನು ವಹಿಸಿಕೊಳ್ಳಲಿರುವ ಸ್ವಾಮೀಜಿಯವರನ್ನು ಸ್ವಾಗತಿಸಿ, ಅಭಿನಂದಿಸಿ ಪೌರ ಸಮ್ಮಾನ ನೀಡುವ ಕಾರ್ಯಕ್ರಮ ಮತ್ತು ಎರಡು ವರ್ಷಗಳ ಪರ್ಯಾಯ ವನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿ ಹೊಸ ಸ್ವಾಮೀಜಿಯವರಿಗೆ ಅಧಿಕಾರ ಹಸ್ತಾಂತರಿಸಿ ಹೊರ ನಡೆಯುವ ಸ್ವಾಮೀಜಿಯವರನ್ನು ಅವರ ಯಶಸ್ಸು ಮತ್ತು ಸಾಧನೆಗಳಿಗಾಗಿ ಅಭಿನಂದಿಸಿ ಕೃತಜ್ಞತೆ ಸಲ್ಲಿಸಿ ಅವರಿಗೆ ನಾಗರಿಕ ಸಮ್ಮಾನ ನೀಡುವ ಕಾರ್ಯಕ್ರಮವನ್ನು ಆರಂಭಿಸಿದರು. ಇದು ಕೆ. ಕೆ. ಪೈ ನಡೆಸಿದ ಒಂದು ಮಹತ್ವದ ಬ್ಯಾಂಕಿಗೇತರ ಆವಿಷ್ಕಾರವೆಂದೂ ಹೇಳಬಹುದು.
ಈ ರೀತಿ ಕೆ. ಕೆ. ಪೈ ಅವರು ಆವಿಷ್ಕಾರಗಳಿಗೆ ಒತ್ತು ನೀಡಿದರು ಮತ್ತು ಸೂಕ್ತ ಮತ್ತು ಸಮರ್ಪಕವಾದ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಕೃತಿಗಿಳಿಸಿದರು. ಅವರೊಬ್ಬ ಆವಿಷ್ಕಾರ ಶಿಲ್ಪಿ ಎಂದು ಹೇಳಬಹುದು.

– ಡಾ| ಕೆ. ಕೆ. ಅಮ್ಮಣ್ಣಾಯ

ಟಾಪ್ ನ್ಯೂಸ್

ಕುಸಿದು ಬಿದ್ದ ಮೂರು ಅಂತಸ್ತಿನ ಕಟ್ಟಡ: ಅವಶೇಷಗಳಡಿ ಸಿಲುಕಿದ ಕಾರ್ಮಿಕರು, ರಕ್ಷಣಾ ತಂಡ ದೌಡು

ಕುಸಿದು ಬಿದ್ದ ಮೂರು ಅಂತಸ್ತಿನ ಕಟ್ಟಡ: ಅವಶೇಷಗಳಡಿ ಸಿಲುಕಿದ ಕಾರ್ಮಿಕರು, ರಕ್ಷಣಾ ತಂಡ ದೌಡು

Punjabi Singer Alfaaz Attacked In Mohali

ಪಂಜಾಬಿ ಗಾಯಕ ಅಲ್ಫಾಜ್ ಮೇಲೆ ದಾಳಿ; ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲು

Rohit Sharma, KL Rahul Go Past Star Pakistan Duo To Script T20I Record

ಬಾಬರ್ ಅಜಂ- ರಿಜ್ವಾನ್ ದಾಖಲೆ ಮುರಿದ ಕೆಎಲ್ ರಾಹುಲ್- ರೋಹಿತ್ ಜೋಡಿ

ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಹೊಂಡಕ್ಕೆ ಥರ್ಮೊಕೋಲ್‌ ಬೇಲಿ!

ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಹೊಂಡಕ್ಕೆ ಥರ್ಮೊಕೋಲ್‌ ಬೇಲಿ!

ಗುಂಡ್ಲುಪೇಟೆ: ಜಮೀನಿನಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ 510 ಚೀಲದ ರಸ ಗೊಬ್ಬರ ವಶ

ಗುಂಡ್ಲುಪೇಟೆ: ಜಮೀನಿನಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ 510 ಚೀಲದ ರಸ ಗೊಬ್ಬರ ವಶ

ಗಾಂಜಾದ ಮತ್ತಿನಲ್ಲಿ 6 ವರ್ಷದ ಬಾಲಕನ ಕತ್ತು ಸೀಳಿ ಕೊಲೆಗೈದ ಯುವಕರು

ಗಾಂಜಾದ ಮತ್ತಿನಲ್ಲಿ 6 ವರ್ಷದ ಬಾಲಕನ ಕತ್ತು ಸೀಳಿ ಕೊಲೆಗೈದ ಯುವಕರು

ಮಲ್ಪೆ ಬೀಚ್‌: ಗರಿಗೆದರಿದ ಚಟುವಟಿಕೆ : ಇನ್ನೂ ಆರಂಭಗೊಳ್ಳದ ದ್ವೀಪಯಾನ

ಮಲ್ಪೆ ಬೀಚ್‌: ಗರಿಗೆದರಿದ ಚಟುವಟಿಕೆ : ಇನ್ನೂ ಆರಂಭಗೊಳ್ಳದ ದ್ವೀಪಯಾನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕುಸಿದು ಬಿದ್ದ ಮೂರು ಅಂತಸ್ತಿನ ಕಟ್ಟಡ: ಅವಶೇಷಗಳಡಿ ಸಿಲುಕಿದ ಕಾರ್ಮಿಕರು, ರಕ್ಷಣಾ ತಂಡ ದೌಡು

ಕುಸಿದು ಬಿದ್ದ ಮೂರು ಅಂತಸ್ತಿನ ಕಟ್ಟಡ: ಅವಶೇಷಗಳಡಿ ಸಿಲುಕಿದ ಕಾರ್ಮಿಕರು, ರಕ್ಷಣಾ ತಂಡ ದೌಡು

Punjabi Singer Alfaaz Attacked In Mohali

ಪಂಜಾಬಿ ಗಾಯಕ ಅಲ್ಫಾಜ್ ಮೇಲೆ ದಾಳಿ; ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲು

Rohit Sharma, KL Rahul Go Past Star Pakistan Duo To Script T20I Record

ಬಾಬರ್ ಅಜಂ- ರಿಜ್ವಾನ್ ದಾಖಲೆ ಮುರಿದ ಕೆಎಲ್ ರಾಹುಲ್- ರೋಹಿತ್ ಜೋಡಿ

ಎಂಜಿನ್‌ ವೈಫಲ್ಯ: ಬೆಂಗಳೂರು- ಕಣ್ಣೂರು ರೈಲು 6 ತಾಸು ವಿಳಂಬ

ಎಂಜಿನ್‌ ವೈಫಲ್ಯ: ಬೆಂಗಳೂರು- ಕಣ್ಣೂರು ರೈಲು 6 ತಾಸು ವಿಳಂಬ

ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಹೊಂಡಕ್ಕೆ ಥರ್ಮೊಕೋಲ್‌ ಬೇಲಿ!

ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಹೊಂಡಕ್ಕೆ ಥರ್ಮೊಕೋಲ್‌ ಬೇಲಿ!

MUST WATCH

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

udayavani youtube

ಅಶಕ್ತರ ನೆರವಿಗಾಗಿ ಪ್ರೇತವಾದ ದೇವದಾಸ್..! ಇವರ ಕಾರ್ಯಕ್ಕೊಂದು ಮೆಚ್ಚುಗೆ ಇರಲಿ

udayavani youtube

ದಿನ7 | ಕಾಳರಾತ್ರಿ ದೇವಿ

udayavani youtube

ಮೂಳೂರಿನಲ್ಲಿ ತೊರಕೆ ಮೀನಿನ ಸುಗ್ಗಿ, ಮೀನುಗಾರರು ಫುಲ್ ಖುಷಿ ಮಾರ್ರೆ

udayavani youtube

ಉಚ್ಚಿಲದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಶತವೀಣಾವಲ್ಲರಿ ಕಾರ್ಯಕ್ರಮ

ಹೊಸ ಸೇರ್ಪಡೆ

ಕುಸಿದು ಬಿದ್ದ ಮೂರು ಅಂತಸ್ತಿನ ಕಟ್ಟಡ: ಅವಶೇಷಗಳಡಿ ಸಿಲುಕಿದ ಕಾರ್ಮಿಕರು, ರಕ್ಷಣಾ ತಂಡ ದೌಡು

ಕುಸಿದು ಬಿದ್ದ ಮೂರು ಅಂತಸ್ತಿನ ಕಟ್ಟಡ: ಅವಶೇಷಗಳಡಿ ಸಿಲುಕಿದ ಕಾರ್ಮಿಕರು, ರಕ್ಷಣಾ ತಂಡ ದೌಡು

Punjabi Singer Alfaaz Attacked In Mohali

ಪಂಜಾಬಿ ಗಾಯಕ ಅಲ್ಫಾಜ್ ಮೇಲೆ ದಾಳಿ; ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲು

Rohit Sharma, KL Rahul Go Past Star Pakistan Duo To Script T20I Record

ಬಾಬರ್ ಅಜಂ- ರಿಜ್ವಾನ್ ದಾಖಲೆ ಮುರಿದ ಕೆಎಲ್ ರಾಹುಲ್- ರೋಹಿತ್ ಜೋಡಿ

ಎಂಜಿನ್‌ ವೈಫಲ್ಯ: ಬೆಂಗಳೂರು- ಕಣ್ಣೂರು ರೈಲು 6 ತಾಸು ವಿಳಂಬ

ಎಂಜಿನ್‌ ವೈಫಲ್ಯ: ಬೆಂಗಳೂರು- ಕಣ್ಣೂರು ರೈಲು 6 ತಾಸು ವಿಳಂಬ

ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಹೊಂಡಕ್ಕೆ ಥರ್ಮೊಕೋಲ್‌ ಬೇಲಿ!

ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಹೊಂಡಕ್ಕೆ ಥರ್ಮೊಕೋಲ್‌ ಬೇಲಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.