ಮೈತ್ರಿಯಲ್ಲಿ ನಮ್ಮ ಮನಸ್ಸುಗಳು ಒಂದಾಗಲೇ ಇಲ್ಲ: ಕೆ ಸುಧಾಕರ್

Team Udayavani, Nov 14, 2019, 12:49 PM IST

ಬೆಂಗಳೂರು: ನಾವು ದೇಶದಲ್ಲಿ ಮೋದಿಯವರ ನಾಯಕತ್ವ, ರಾಜ್ಯದಲ್ಲಿ ಯಡಿಯೂರಪ್ಪ ಅವರ ಸ್ಥಿರ ಸರ್ಕಾರವನ್ನು ಬೆಂಬಲಿಸಲು ಬಂದಿದ್ದೇವೆ ಎಂದು ಬಿಜೆಪಿಗೆ ಸೇರ್ಪಡೆಯಾದ ಚಿಕ್ಕಬಳ್ಳಾಪುರದ ಮಾಜಿ ಶಾಸಕ ಕೆ ಸುಧಾಕರ್ ಹೇಳಿದ್ದಾರೆ.

ಬಿಜೆಪಿ ಸೇರ್ಪಡೆ ನಂತರ ಮಾತನಾಡಿದ ಡಾ.ಕೆ ಸುಧಾಕರ್, ಈ ಹಿಂದೆ  ರಾಜ್ಯದಲ್ಲಿ ಬಿಜೆಪಿಯನ್ನು ದೂರ ಇಡುವ ಏಕೈಕ ಉದ್ದೇಶದಿಂದ ಮೈತ್ರಿ ಮಾಡಿಕೊಳ್ಳಲಾಯಿತು. ಹೀಗಾಗಿ ನಮ್ಮ ಮನಸ್ಸುಗಳು ಒಗ್ಗೂಡಲೇಯಿಲ್ಲ. ಈಗ ಮೈತ್ರಿ ಸರ್ಕಾರ ಪತನವಾದ ಮೇಲೆ ಎರಡೂ ಪಕ್ಷಗಳ ನಾಯಕರು ಬೀದಿಯಲ್ಲಿ ವ್ಯಾಜ್ಯ ಮಾಡುತ್ತಿದ್ದಾರೆ ಎಂದರು.

ನಾವೆಲ್ಲಾ ಯಾರದೋ ಕೃಪೆಯಿಂದ ಗೆದ್ದವರಲ್ಲ. ಜನರ ಬೆಂಬಲ ಹಾಗೂ ಸ್ವಯಂ ಕೃಷಿಯಿದೆ. ನಮಗೆ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಹೀಗಾಗಿ ಕುರ್ಚಿ ಇದ್ದರೆಷ್ಟು ಇಲ್ಲದಿದ್ದರೆಷ್ಟು. ನಾವು ಒಳ್ಳೆಯ ಉದ್ದೇಶಕ್ಕೆ ಬಿಜೆಪಿಯನ್ನು ಸೇರಿದ್ದೇವೆ ಎಂದು ಅಭಿಪ್ರಾಯಪಟ್ಟರು.

ಈ ದೇಶದಲ್ಲಿ ರಮೇಶ್ ಕುಮಾರ್ ಅವರಂತಹ ಸ್ಪೀಕರ್ ಭವಿಷ್ಯದಲ್ಲಿ ಯಾರೂ ಬರಬಾರದು. ಈ ಸರ್ಕಾರದ ಭವಿಷ್ಯ ಚುನಾವಣೆಯ ಫಲಿತಾಂಶದ ಮೇಲೆ ನಿಂತಿದೆ. ಇನ್ನೂ ಮೂರು ವರ್ಷ ಸ್ಥಿರ ಸರ್ಕಾರ ನಡೆದು ದೇಶದಲ್ಲಿ ಕರ್ನಾಟಕ ನಂಬರ್ ಒನ್ ಮಾಡಲು ಹಾಗೂ ದಕ್ಷಿಣ ದ ಇತರ ರಾಜ್ಯಗಳಿಗೆ ಬಿಜೆಪಿ ವಿಸ್ತರಿಸಲು ಎಲ್ಲರೂ ಶ್ರಮಿಸಬೇಕು ಎಂದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ