ಕಡಲೂರ ಕಣ್ಮಣಿಗಳು! ಟೀಸರ್ ಮತ್ತು ಹಾಡು ಬಿಡುಗಡೆ
ನಿಶಾ ಯಾಲಿನಿ ಜೋಡಿಯಾಗಿ ಕಾಣಿಸಿಕೊಂಡಿರುವ ಚಿತ್ರಕ್ಕೆ ಆರ್. ಪಿ ಸಂಗೀತ ನಿರ್ದೇಶನವಿದೆ.
Team Udayavani, Aug 19, 2022, 1:05 PM IST
ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸುತ್ತಿರುವ “ಕಡಲೂರ ಕಣ್ಮಣಿ’ ಸಿನಿಮಾದ ಟೀಸರ್ ಮತ್ತು ಹಾಡುಗಳು ಇತ್ತೀಚೆಗೆ ಹೊರಬಂದಿದೆ. “ಕಿಸ್’ ಚಿತ್ರದ ನಾಯಕ ವಿರಾಟ್ ಮತ್ತು ನಟಿ ನೇಹಾ ಸಕ್ಸೇನಾ ಮುಖ್ಯ ಅತಿಥಿಗಳಾಗಿ ಆಗಮಿಸಿ, “ಕಡಲೂರ ಕಣ್ಮಣಿ’ ಸಿನಿಮಾದ ಟೀಸರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
“ರಾಮ್ ಪ್ರೊಡಕ್ಷನ್ಸ್’ ಬ್ಯಾನರ್ನಲ್ಲಿ ವಿನೋದ್ ರಾಮ್, ಶೈಲೇಶ್ ಆರ್. ಪೂಜಾರಿ ಹಾಗೂ ಬಸವರಾಜ ಗಜ್ಜಿ ಜಂಟಿಯಾಗಿ ನಿರ್ಮಿಸಿರುವ “ಕಡಲೂರ ಕಣ್ಮಣಿ’ ಸಿನಿಮಾಕ್ಕೆ ರಾಮ್ ಪ್ರಸನ್ನ ಹುಣಸೂರು ನಿರ್ದೇಶನವಿದೆ. ಅರ್ಜುನ್ ನಗರ್ಕರ್, ನಿಶಾ ಯಾಲಿನಿ ಜೋಡಿಯಾಗಿ ಕಾಣಿಸಿಕೊಂಡಿರುವ ಚಿತ್ರಕ್ಕೆ ಆರ್. ಪಿ ಸಂಗೀತ ನಿರ್ದೇಶನವಿದೆ.
ಇದೇ ವೇಳೆ ಮಾತನಾಡಿದ ನಿರ್ದೇಶಕ ರಾಮ್ ಪ್ರಸನ್ನ ಹುಣಸೂರು, “ಒಂದು ವಿಭಿನ್ನ ಕಥೆಯನ್ನು ಈ ಸಿನಿಮಾದಲ್ಲಿ ತೆರೆಮೇಲೆ ತರುತ್ತಿದ್ದೇವೆ. “ಕಡಲೂರ ಕಣ್ಮಣಿ’ ಎಂದರೆ ವಜ್ರ ಎಂಬ ಅರ್ಥ ಬರುತ್ತದೆ. ಈಗಾಗಲೇ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ದಸರಾ ಹಬ್ಬಕ್ಕೆ ಸಿನಿಮಾವನ್ನು ಬಿಡುಗಡೆ ಮಾಡುವ ಯೋಚನೆಯಿದೆ’ ಎಂದರು.
ನಿರ್ಮಾಪಕ ವಿನೋದ್ ರಾಮ್, ಶೈಲೇಶ್ ಆರ್. ಪೂಜಾರಿ ಹಾಗೂ ಬಸವರಾಜ ಗಜ್ಜಿ ನಾಯಕ ಅರ್ಜುನ್ ನಗರ್ಕರ್, ನಾಯಕಿ ನಿಶಾ ಯಾಲಿನಿ ಸೇರಿದಂತೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಚಿತ್ರದ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯ ಹಂಚಿಕೊಂಡರು.