ಬಿಸಿ ರಕ್ತಕ್ಕೆ ಛಲ ತುಂಬಿದ ಕವಿ


Team Udayavani, Jun 12, 2021, 6:55 AM IST

ಬಿಸಿ ರಕ್ತಕ್ಕೆ ಛಲ ತುಂಬಿದ ಕವಿ

ಬಸವಮೂರ್ತಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠ ಚಿತ್ರದುರ್ಗ ಕನ್ನಡದ ಕವಿ ಡಾ| ಸಿದ್ದಲಿಂಗಯ್ಯ ನಮ್ಮೆಲ್ಲರನ್ನೂ ಬಿಟ್ಟು ಹೊರಟು ಹೋಗಿದ್ದಾರೆ. ಇಡೀ ಜಗತ್ತು ಇದ್ಯಾವುದು? ಹೇಗಿದೆ? ಎಂದು ತಿಳಿಯಲು ಮತ್ತು ಇದನ್ನು ಹೇಗೆ ಮಟ್ಟ ಹಾಕುವುದೆಂದು ಹಗಲಿರುಳು ಶ್ರಮಿಸುತ್ತಿರುವಾಗ ಯಾರಿಗೂ ಕಾಣ ದ ಕೊರೊನಾ ಎಂಬ ಮಹಾಮಾರಿ ಅವರನ್ನು ಬಲಿ ಪಡೆದಿದೆ. ಭೌತಿಕವಾಗಿ ಅವರೀಗ ನಮ್ಮೊಂದಿಗಿಲ್ಲ. ಆದರೆ ಅವರು ದಲಿತ ಹೋರಾಟಗಳಿಗೆ ಹಚ್ಚಿದ ಕಿಚ್ಚು, ಬಿಸಿರಕ್ತದ ಹುಡುಗರ ಹುಮ್ಮಸ್ಸಿಗೆ ಛಲ ತುಂಬಿದ ಅವರ ಹಾಡುಗಳು ಎಂದಿಗೂ ನಮ್ಮೊಂದಿಗಿರುತ್ತವೆ.

ಡಾ| ಸಿದ್ದಲಿಂಗಯ್ಯನವರ ಬದುಕು ಆರುಮುಕ್ಕಾಲು ದಶಕಕ್ಕೆ ಅಂತ್ಯ ಕಂಡಿದೆ. ಅವರೊಂದಿಗಿನ ನಮ್ಮ ಶ್ರೀಮಠದ ಒಡನಾಟ ಕೇವಲ ಒಂದೂವರೆ ದಶಕದ್ದು. ಆದರೆ ನಾನು ಪ್ರೌಢ ಶಿಕ್ಷಣದಲ್ಲಿದ್ದಾಗಲೇ ಕೇಳಿ ಆನಂದಿಸುತ್ತಿದ್ದ ಹಾಡುಗಳು ಮುಂದೆ ಅದೇ ಹಾಡುಗಳನ್ನು ಬರೆದ ಸಿದ್ದಲಿಂಗಯ್ಯನವರು ನಮ್ಮೊಂದಿಗೆ ಆತ್ಮೀಯ ಸಂಬಂಧ ಇಟ್ಟುಕೊಳ್ಳುತ್ತಾರೆಂದು ಅಂದುಕೊಂಡಿರಲಿಲ್ಲ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಮ್ಮ ಶ್ರೀ ಮಠಕ್ಕೆ ಬಂದು ಭೇಟಿ ಕೊಟ್ಟವರು ಮತ್ತೆ ಎಲ್ಲೂ ಭೇಟಿಯಾಗಿರಲಿಲ್ಲ. ಅನೇಕ ಸಂದರ್ಭಗಳಲ್ಲಿ ದೂರವಾಣಿ ಮೂಲಕ ಮಾತನಾಡಿಸಿದ ಅವರು ಆಸ್ಪತ್ರೆಗೆ ಹೋದವರು ಮತ್ತೆ ಬರುತ್ತಾರೆ ಎಂದುಕೊಂಡಿದ್ದ ನಮಗೆ ಮತ್ತು ಬಹಳಷ್ಟು ಅಭಿಮಾನಿ ಗೆಳೆಯರಿಗೆ ಹೇಳದೆ ಹಾಗೆಯೇ ಹೋಗಿಬಿಟ್ಟಿದ್ದಾರೆ.

ಡಾ| ಸಿದ್ದಲಿಂಗಯ್ಯನವರನ್ನು ಹತ್ತಿರದಿಂದ ಕಂಡ ನಮ್ಮ ಹಾಗೆ ಎಷ್ಟೋ ಮಂದಿಗೆ ಸಹೃದಯ ಮತ್ತು ಸ್ನೇಹಮಯಿ ವ್ಯಕ್ತಿಯಾಗಿ ಮೃದು ಸ್ವಭಾವದವರಾಗಿ, ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆರೆಯುತ್ತಿದ್ದರು. ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಒಂದಿಷ್ಟು ಸಾಮಾಜಿಕ ಮನ್ನಣೆ, ಪುರಸ್ಕಾರ, ಸಮ್ಮಾನ ಪಡೆದ ಸಾಹಿತಿಗಳನ್ನೋ ಅಥವಾ ಕವಿಗಳನ್ನು ಗಮನಿಸಿ ಕೆಲವರನ್ನು ಮಾತನಾಡಿಸಿದರೆ ಮಾತ ನಾಡುವುದೂ ಕಷ್ಟ. ಆದರೆ, ಸಿದ್ದಲಿಂಗಯ್ಯನವರು ಅದಕ್ಕೆ ತದ್ವಿರುದ್ಧ ವಾಗಿದ್ದರು. ಎಲ್ಲರೊಂದಿಗೂ ಬೆರೆಯುವಂತಹ ಸ್ವಭಾವದವರಾಗಿ ದ್ದರು. ಒಂದು ಚಿಕ್ಕ ಸಮಾರಂಭ, ಚಿಕ್ಕ ಕವನ ಸಂಕಲನ, ಸಣ್ಣ ದೊಂದು ಸಮ್ಮಾನ ಸಮಾರಂಭ ಇಟ್ಟುಕೊಂಡು ಯಾವುದೇ ಅಹಂ ಇಲ್ಲದೆ ಭಾಗವಹಿಸುತ್ತಿದ್ದ, ವ್ಯಕ್ತಿಗತ ಗಾತ್ರದಲ್ಲಿ
ಅವರು ಒಂದಿಷ್ಟು ಚಿಕ್ಕವರೇ. ಆದರೆ ಅವರ ಪ್ರತಿಭೆ ಅಜಾನುಬಾಹು.

“ಎಲ್ಲಿದ್ದರೋ ತಮ್ಮ, ಹೇಗಿದ್ದರೋ ತಮ್ಮ ಎಚ್ಚೆತ್ತ ಸಿಂಹಗಳು ನನ್ನ ಜನರು, ಬಿದ್ದ ಬಿರುಗಾಳಿಗಳು ನಮ್ಮ ಜನರು..’ ಈ ಕ್ರಾಂತಿಕಾರಿ ಹಾಡನ್ನು ಎಂಬತ್ತರ ದಶಕದಲ್ಲಿ ಕೇಳಿದ ಯುವಕರು ಇಂದು ಮುಪ್ಪಿನ ಹೊಸ್ತಿಲಲ್ಲಿದ್ದಾರೆ. ಆದರೆ ಈ ಹಾಡನ್ನು ಇದೀಗ ನೆನಪಿಸಿಕೊಂಡವರು ಮತ್ತೆ ಬಿಸಿರಕ್ತದ ಹುಡುಗ ರಂತಾಗುತ್ತೇವೆ ಎಂಬುದು ಅವರನ್ನು ಹತ್ತಿರದಿಂದ ಕಂಡವರು ಹೇಳುವ ಮಾತು. ಅಂತಹ ಕೆಚ್ಚೆದೆಯ ಹೋರಾಟಕ್ಕೆ ಸ್ಫೂರ್ತಿಯ ಹಾಡುಗಳನ್ನು ಬರೆದವರು ಸಿದ್ದಲಿಂಗಯ್ಯನವರು.

ಇಂತಹ ಹಾಡುಗಳನ್ನು ಬರೆಯಬೇಕು ಎಂದುಕೊಂಡವರಲ್ಲ. ಹುಟ್ಟು ಮತ್ತು ಬೆಳವಣಿಗೆಯ ಮಧ್ಯೆ ಅವರು ಕಂಡ ಅದೆಷ್ಟೋ ಜಾತೀಯತೆ, ಅಸ್ಪೃಶ್ಯತೆ, ಅವಮಾನ, ದೌರ್ಜನ್ಯಗಳು ಅವರ ಮನ ಸ್ಸಿನ ಮೇಲಾದ ಪರಿಣಾಮಗಳು ಸಿದ್ದಲಿಂಗಯ್ಯನವರ ಬರ ವಣಿಗೆಯಲ್ಲಿ ಇಂತಹ ಹಾಡುಗಳು ಹುಟ್ಟಲು ಕಾರಣವಾಯಿತು. ಇಂಥ ಹಾಡುಗಳನ್ನೇ ಕೇಳಿದ ನಾವು ಅವರಿಗೆ ಮೊತ್ತಮೊದಲನೇ ದಲಿತ ಕವಿ. ಅವರೆಂದೂ ದಲಿತನಾಗಿ ಹುಟ್ಟಿದ್ದೇನೆಂಬ ಕಾರಣಕ್ಕೆ ದಲಿತರಿಗಾಗಿಯೇ ಹಾಡುಗಳನ್ನು ಬರೆಯ ಬೇಕೆಂದುಕೊಂಡವರಲ್ಲ. ಅಂದಿನ ಸಾಮಾಜಿಕ ಸ್ಥಿತಿಗತಿಗಳು ದಲಿತರ ಪರ ಹೋರಾಟದ ಕಿಚ್ಚಿನ ಹಾಡುಗಳ ರಚನೆಗೆ ಮೊದಲಾಯಿತು.

ಇಷ್ಟೆಲ್ಲ ವೈಜ್ಞಾನಿಕತೆ, ವೈಚಾರಿಕತೆಯಲ್ಲಿಂದು ಬಹಿಷ್ಕರಿಸುವ ಅದೆಷ್ಟೋ ವರದಿಗಳನ್ನು ಮಾಧ್ಯಮಗಳಲ್ಲಿ ನೋಡುತ್ತಿರುತ್ತೇವೆ. ಅಂದರೆ ಸಿದ್ದಲಿಂಗಯ್ಯನವರ ಯೌವನಾವಸ್ಥೆಯ ಎಪ್ಪತ್ತರ ದಶಕದಲ್ಲಿ ಎಷ್ಟೆಲ್ಲ ದಲಿತರ ಮೇಲೆ ದೌರ್ಜನ್ಯಗಳು ನಡೆದಿರಬಹುದು? ಅಂತಹ ಯಾವುದೋ ಒಂದು ದಬ್ಟಾಳಿಕೆಯ ಘಟನೆಯನ್ನು ಸಿದ್ದಲಿಂಗಯ್ಯನವರು ಕಂಡು ಬರೆದ ಕಿಚ್ಚಿನ ಹಾಡೇ “ದೊಡ್ಡಗೌಡರ ಬಾಗಿಲಿಗೆ ನಮ್ಮ ಮೂಳೆಯ ತೋರಣ, ಅವರ ಬಂಗಲೆಯ ಅಂಗಳಕೆ ನಮ್ಮ ರಕ್ತದ ರಂಗೋಲಿ’ ಬಹುಶಃ ಈ ಹಾಡನ್ನು ಕೇಳಿದವರು ಅಂದಿನ ಜಾತಿಯಲ್ಲಿ ಶ್ರೇಷ್ಠರೆಂಬುವವರು ಯಾವ ಮಟ್ಟದಲ್ಲಿ ದೌರ್ಜನ್ಯ ಎಸಗಿರಬಹುದು. ಬರವಣಿಗೆಯ ಮೂಲಕ ಶೋಷಿತರ ಧ್ವನಿಯಾಗಿ ಈ ರೀತಿ ಹೋರಾಟಕ್ಕೆ ನಿಂತವರು ಸಿದ್ದಲಿಂಗಯ್ಯ. ಅವರೊಬ್ಬ ದಲಿತ ಕವಿ ಎಂಬ ವಾದವನ್ನು ಇಂದಿಗೂ ಮಂಡಿಸುವವರಿದ್ದಾರೆ.

ಎಪ್ಪತ್ತರ ದಶಕದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ “ಉತ್ತರ ದಿಕ್ಕಿನ ರಾಣಿಯೊಬ್ಬರು ಇದ್ದಳು ಬಲುಹಿಗ್ಗಿ…. ನೋಡು ಕಣ್ಣುಗಳಿಗೆ ಸುಗ್ಗಿಯೇ ಸುಗ್ಗಿ….! ಹೀಗೆ ಇಂದಿರಾ ಗಾಂಧಿ ಅವರನ್ನು ಕುರಿತು ಬರೆವ ಶಕ್ತಿ ರೂಢಿಸಿಕೊಂಡಿದ್ದವರು ಸಿದ್ದಲಿಂಗಯ್ಯ. ಇಂಥ ದೇಶ, ಭಾಷೆಗೋಸ್ಕರ ಬರೆದ ಹಾಡುಗಳಿಗೆ ಲೆಕ್ಕವಿಲ್ಲ. ಅವುಗಳ ಜತೆಗೆ ಇಂದಿಗೂ ಕೇಳಿದರೆ ಮನಸ್ಸಿಗೆ ಮುದ ನೀಡುವ ಹತ್ತಾರು ಚಲನ ಚಿತ್ರಗಳಲ್ಲಿನ ಪ್ರಣಯ ಗೀತೆಗಳೂ ಇವೆ. ಪ್ರೌಢಶಿಕ್ಷಣದಿಂದ ಪೀಠಕ್ಕೆ ಬಂದು ಸುಮಾರು ಎರಡು ದಶಕಗಳಾದರೂ ವಚನಗಳಿಗಿಂತಲೂ ಕೇಳಿದ ಆನಂದಿಸಿದ ಅವರ ಹಾಡು “ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡ ಬೇಡ ಗೆಳತಿ, ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ ಸುಟ್ಟಾವು ಬೆಳ್ಳಿಕಿರಣ’ ಇಂತಹ ಅದ್ಭುತ ಹಾಡುಗಳನ್ನೂ ಕೊಟ್ಟ ಕವಿ ಸಿದ್ದಲಿಂಗಯ್ಯನಂಥವರನ್ನು ನಮ್ಮ ಜೀವನದಲ್ಲಿ ಕಾಣಲು ಸಾಧ್ಯವಿಲ್ಲ. ಅವರು ಮತ್ತು ಅವರ ಸಾಹಿತ್ಯ ಎಂದಿಗೂ ಅಮರ.

ಊರು ಕೇರಿ ನಡುವೆ ಬಂಡಾಯದ ಕೂಗು..
ಡಾ|ಸಿದ್ದಲಿಂಗಯ್ಯ ಅವರು 1954ರ ಫೆಬ್ರವರಿ 3ರಂದು ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಮಂಚನಬೆಲೆ ಯಲ್ಲಿ ದೇವಯ್ಯ ಮತ್ತು ವೆಂಕಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಊರಿನಲ್ಲಿ ಬಾಲ್ಯ ಶಿಕ್ಷಣ ಪೂರೈಸಿ ಅವರು ಬಳಿಕ ಬೆಂಗಳೂರಿನ ಸರಕಾರಿ ಕಲಾ ಕಾಲೇಜಿನಲ್ಲಿ ಬಿ.ಎ. ಆನರ್ಸ್‌ (ಐಚ್ಛಿಕ ಕನ್ನಡ) ಪದವಿ ಪಡೆದರು.

1976ರಲ್ಲಿ ಬೆಂಗಳೂರು ವಿಶ್ವ ವಿದ್ಯಾನಿಲಯದಿಂದ ಸ್ವರ್ಣಪದಕ ದೊಂದಿಗೆ ಎಂ.ಎ. ಪದವಿ, ಪ್ರೊ| ಜಿ. ಎಸ್‌. ಶಿವರುದ್ರಪ್ಪನವರ ಮಾರ್ಗ ದರ್ಶನದಲ್ಲಿ “ಗ್ರಾಮದೇವತೆಗಳು’ ಎಂಬ ಪ್ರೌಢ ಪ್ರಬಂಧದ ಮೇಲೆ 1989ರಲ್ಲಿ ಪಿಎಚ್‌.ಡಿ. ಪದವಿ ಪಡೆದರು. ಬೆಂಗಳೂರು ವಿಶ್ವವಿದ್ಯಾನಿಲ ಯದಲ್ಲಿ ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ರಾಗಿಯೂ ಕಾರ್ಯನಿರ್ವಹಿಸಿದ್ದರು.

ಸಾಹಿತ್ಯಿಕ ಕೊಡುಗೆ: ಕವಿ ಸಿದ್ದಲಿಂಗಯ್ಯ ಅವರು ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಸೇರಿ ಹಲವು ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿ ಕನ್ನಡ ಸಾಹಿತ್ಯ ಲೋಕ ವನ್ನು ಬೆಳಗಿದ್ದಾರೆ. “ಊರು ಕೇರಿ’ ಆತ್ಮಕಥೆಯ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಅಜರಾಮರವಾಗಿ ರುವ ಸಿದ್ದಲಿಂಗಯ್ಯ, 1975ರಲ್ಲಿ “ಹೊಲೆಮಾದಿಗರ ಹಾಡು’ ಎಂಬ ಕವನ ಸಂಕಲನ ಹೊರತಂದಿದ್ದರು.

“ಸಾವಿರಾರು ನದಿಗಳು’, “ಕಪ್ಪುಕಾಡಿನ ಹಾಡು’, “ಮೆರವಣಿಗೆ’, “ನನ್ನ ಜನಗಳು ಮತ್ತು ಇತರ ಕವಿತೆ ಗಳು’, “ಆಯ್ದ ಕವನಗಳು’, “ಅಲ್ಲೆ ಕುಂತವರು’ ಮುಂತಾದ ಕವನ ಸಂಕಲನಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದರು. ಜತೆಗೆ “ಪಂಚಮ’, “ನೆಲಸಮ’, “ಏಕ ಲವ್ಯ’ ಅವರು ಬರೆದ ಪ್ರಮುಖ ನಾಟಕಗಳು. “ಅವತಾರಗಳು’ “ರಸಗಳಿಗೆಗಳು’, “ಎಡಬಲ’, “ಹಕ್ಕಿನೋಟ’, “ಜನ ಸಂಸ್ಕೃತಿ’ , “ಉರಿಕಂಡಾಯ’ ಮುಂತಾದ ಲೇಖನ ಸಂಗ್ರಹಗಳನ್ನೂ ಪ್ರಕಟಿಸಿ ದರು. “ಸದನದಲ್ಲಿ ಸಿದ್ದಲಿಂಗಯ್ಯ ಭಾಗ 1 ಮತ್ತು 2′ ಸೇರಿದಂತೆ ವಿವಿಧ ಕೃತಿಗಳನ್ನು ರಚಿಸಿದ್ದಾರೆ.

ಅವರ ಆತ್ಮಕಥೆ “ಊರು ಕೇರಿ’ ಎರಡು ಭಾಗಗಳಲ್ಲಿ ಪ್ರಕಟಗೊಂಡಿದೆ. ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಸಾ ರಾಂಗಕ್ಕಾಗಿ ಅವರು “ಸಮ ಕಾಲೀನ ಕನ್ನಡ ಕವಿತೆಗಳು’ ಭಾಗ-3 ಮತ್ತು ಭಾಗ-4ನ್ನು ಸಂಪಾದಿಸಿಕೊಟ್ಟಿ ದ್ದಾರೆ. “ಊರು ಕೇರಿ’ ಆತ್ಮಕಥೆ ಇಂಗ್ಲಿಷ್‌ ಹಾಗೂ ತಮಿಳು ಭಾಷೆಗೂ ಅನುವಾದ ಗೊಂಡಿದೆ. ಕನ್ನಡ ಸಾಹಿತ್ಯ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಹಂಪಿ ವಿಶ್ವವಿದ್ಯಾನಿಲಯದ ನಾಡೋಜ ಪ್ರಶಸ್ತಿ, ಪಂಪ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಸಿದ್ದಲಿಂಗಯ್ಯ ಅವರು ಭಾಜನರಾಗಿದ್ದಾರೆ.

ಎಲ್ಲರನ್ನೂ ಒಳಗೊಳ್ಳುವ ಗುಣ
ಕವಿ ಸಿದ್ದಲಿಂಗಯ್ಯ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲ; ರಾಜಕೀಯದಲ್ಲೂ ತಮ್ಮ ಹೆಜ್ಜೆಗಳನ್ನು ಮೂಡಿಸಿದ್ದಾರೆ. ಅದರಲ್ಲೂ ಯಾವೊಂದು ಪಕ್ಷಕ್ಕೆ ಸೀಮಿತವಾಗಿ ಅಲ್ಲ, ಬೇರೆ ಬೇರೆ ಪಕ್ಷಗಳ ಆಡಳಿತದಲ್ಲಿ ಅವರು ಉನ್ನತ ಹುದ್ದೆಯಲ್ಲಿದ್ದು ಕೆಲಸ ಮಾಡಿದ್ದು ವಿಶೇಷ.

ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಗಳಾಗಿದ್ದಾಗ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದರು. ಅನಂತರದಲ್ಲಿ ಜೆ.ಎಚ್‌. ಪಟೇಲ್‌ ಮುಖ್ಯಮಂತ್ರಿಗಳಾಗಿದ್ದಾಗ ಎರಡನೇ ಅವಧಿಗೆ ಮೇಲ್ಮನೆ ಸದಸ್ಯರಾಗಿ ಮುಂದುವರಿದರು. ಬಿಜೆಪಿ ಅಧಿಕಾರಾವಧಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಮೇಲ್ಮನೆಯಲ್ಲಿ ಅವರು ಅತ್ಯಂತ ಸ್ಪಷ್ಟವಾಗಿ ವಿಚಾರಗಳನ್ನು ಮಂಡಿಸುತ್ತಿದ್ದರು. “ಸದನದಲ್ಲಿ ಸಿದ್ದಲಿಂಗಯ್ಯ’ ಎಂಬ ಕೃತಿಗಳು ಕೂಡ ಹೊರಬಂದವು.

“ಸಿದ್ದಲಿಂಗಯ್ಯ ಅವರು ರಾಜಕಾರಣ ಮತ್ತು ರಾಜಕೀಯ ಹುದ್ದೆಯನ್ನು ಹುಡುಕಿಕೊಂಡು ಹೋದವರಲ್ಲ. ಯಾವುದಾದರೂ ರಾಜಕಾರಣಿಗಳು, ತಾವು ರಾಜಕೀಯ ಪ್ರವೇಶಿಸಬೇಕೆಂದು ಆಫ‌ರ್‌ ನೀಡಿದಾಗ, ವಿನಯಪೂರ್ವಕವಾಗಿಯೇ ನಾನು ಚುನಾವಣ ರಾಜಕಾರಣ ಮಾಡುವುದಿಲ್ಲ ಎಂದು ಹೇಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಯಾವುದೇ ಪಕ್ಷದ ಸದಸ್ಯರಾಗದೆ, ವಿವಿಧ ಸರಕಾರಗಳ ಜತೆಗೆ ಅದರ ಭಾಗವಾಗಿ ಕೆಲಸ ಮಾಡಿದ್ದು ಕೂಡ ಒಂದು ಸಾಧನೆ ಮತ್ತು ಅವರ ಚಾಣಾಕ್ಷ ನಡೆಯೂ ಆಗಿದೆ’ ಎಂದು ನಟ “ಮುಖ್ಯಮಂತ್ರಿ’ ಚಂದ್ರು ಮೆಲುಕು ಹಾಕುತ್ತಾರೆ. “ಅವರು ಮೇಲ್ಮನೆ ಸದಸ್ಯರಾದಾಗ ನಾನೂ ಸದಸ್ಯನಾಗಿದ್ದೆ. ತಮ್ಮ ನಿಲುವನ್ನು ಸ್ಪಷ್ಟವಾಗಿ ಮಂಡಿಸುತ್ತಿದ್ದರು. ನನಗೂ ಹಲವು ವಿಚಾರಗಳಲ್ಲಿ ಅವರು ಬೆಂಬಲಿಸಿದ್ದುಂಟು’ ಎಂದೂ ಅವರು ಹೇಳಿದರು.

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.