ಕೊರೊನಾ ಭೀತಿ ಎಫೆಕ್ಟ್; ಮಾ.14ರಿಂದ ಬಂದ್ ಅನ್ವಯ- ಏನಿರುತ್ತೆ, ಏನಿರಲ್ಲ?
ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಏನೇನು ಇರಲಿದೆ, ಯಾವುದೆಲ್ಲಾ ಬಂದ್ ಆಗಲಿದೆ ಎಂಬ ಮಾಹಿತಿ ಇಲ್ಲಿದೆ…
Team Udayavani, Mar 13, 2020, 7:02 PM IST
ಬೆಂಗಳೂರು: ಕೊರೊನಾ ವೈರಸ್ ತೀವ್ರಗತಿಯಲ್ಲಿ ಹರಡುತ್ತಿರುವ ಭೀತಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಒಂದು ವಾರಗಳ ಕಾಲ ಶಾಪಿಂಗ್ ಮಾಲ್, ಮಲ್ಟಿಫ್ಲೆಕ್ಸ್, ಚಿತ್ರಮಂದಿರಗಳನ್ನು ಒಂದು ವಾರಗಳ ಕಾಲ ಮುಚ್ಚುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಏನೇನು ಇರಲಿದೆ, ಯಾವುದೆಲ್ಲಾ ಬಂದ್ ಆಗಲಿದೆ ಎಂಬ ಮಾಹಿತಿ ಇಲ್ಲಿದೆ…
ನಾಳೆಯಿಂದ ಅನ್ವಯವಾಗುವಂತೆ ಪಬ್, ಜಾತ್ರೆ, ಸೆಮಿನಾರ್, ಕ್ರೀಡಾ ಚಟುವಟಿಕೆ, ವಿವಾಹ ಕಾರ್ಯಕ್ರಮ ಬಂದ್. ಅದ್ದೂರಿ ನಿಶ್ಚಿತಾರ್ಥ , ಅದ್ದೂರಿ ಮದುವೆ, ಸಮಾರಂಭಗಳು, ಕ್ರೀಡಾ ಕಾರ್ಯಕ್ರಮಗಳು, ಮಾಲ್, ಥಿಯೇಟರ್ ಬಂದ್, ಶಾಲಾ ಕಾಲೇಜುಗಳು ಬಂದ್, ನೂರು ಜನ ಮೀರದಂತೆ ಮದುವೆ ಕಾರ್ಯಕ್ರಮ ನೆರವೇರಿಸಲು ಸೂಚನೆ ನೀಡಲಾಗಿದೆ.
ಯಾವುದೆಲ್ಲ ಇರಲಿದೆ:
ಮೆಟ್ರೋ ಸೇವೆ, ಬಸ್ ಸಂಚಾರ, ರೈಲು, ವಿಮಾನ, ಬ್ಯಾಂಕ್, ಅಂಗಡಿಗಳು, ತರಕಾರಿ, ಪೇಪರ್ ಹಾಲು, ಹೋಟೆಲ್, ಮೆಡಿಕಲ್ ಸ್ಟೋರ್ ಎಂದಿನಂತೆ ಸದ್ಯ ಸೇವೆ ಸಲ್ಲಿಸಲಿವೆ. ಒಂದು ವಾರದ ಪರಿಸ್ಥಿತಿ ಪರಿಶೀಲನೆಯ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ