Udayavni Special

ಐಸ್ ಕ್ರೀಮ್ ಸೇವಿಸಿ ಮಗ,ಸಹೋದರಿ ಸಾವು:ನೈಜ ಕಾರಣ ಗೊತ್ತಿದ್ರೂ ತಾಯಿ ಸುಮ್ಮನಿದ್ದಿದ್ದೇಕೆ ?  

Team Udayavani, Feb 25, 2021, 10:00 PM IST

Ice

ಕೇರಳ : ತಾಯಿಯೋರ್ವಳು ಆತ್ಮಹತ್ಯೆಗೆಂದು ತಂದಿಟ್ಟಿದ್ದ ವಿಷಮಿಶ್ರಿತ ಐಸ್ ಕ್ರೀಮ್ ಸೇವಿಸಿ ಆಕೆಯ ಪುತ್ರ ಹಾಗೂ ಸಹೋದರಿ ಪ್ರಾಣ ಕಳೆದುಕೊಂಡ ಘಟನೆ ಕೇರಳದ ಕಾಸರಗೋಡಿನ ಕನ್ಹಂಗಡ್ ನಲ್ಲಿ ನಡೆದಿದೆ.

ಫೆ.11 ರಂದು 25 ವರ್ಷ ವಯಸ್ಸಿನ ವರ್ಷಾ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಳು. ಐಸ್ ಕ್ರೀಮ್ ನಲ್ಲಿ ಇಲಿ ಪಾಷಾಣ ಬೇರೆಸಿ ಸ್ವಲ್ಪ ಸೇವಿಸಿ ಟೇಬಲ್ ಮೇಲಿಟ್ಟು ಬಾತ್ ರೂಂಗೆ ತೆರಳಿದ್ದಳು. ಈ ವೇಳೆ ಆಕೆಯ 5 ವರ್ಷದ ಪುತ್ರ ಅದ್ವೈತ್ ಹಾಗೂ ಆಕೆಯ ಸಹೋದರಿ 19 ವರ್ಷದ ದೃಶ್ಯಾ ಅದೇ ಐಸ್ ಕ್ರೀಮ್ ತಿಂದಿದ್ದರು. ಬಳಿಕ ಮನೆಯವರೆಲ್ಲರು ಬಿರಿಯಾನಿ ತಿಂದು ಮಲಗಿದ್ದರು.

ರಾತ್ರಿ ವೇಳೆ ಅದ್ವೈತ್ ಹಾಗೂ ದೃಶ್ಯಾ ಆರೋಗ್ಯದಲ್ಲಿ ಏರುಪೇರಾಗಿ ವಾಂತಿ ಶುರುವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ ಫೆ.12 ರ ಮುಂಜಾನೆ ಆ ಬಾಲಕ ಸಾವನ್ನಪ್ಪಿದ್ದ. ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದ ದೃಶ್ಯಾ ನಿನ್ನೆ (ಫೆ.24) ಮುಂಜಾನೆ ಅಸುನೀಗಿದ್ದಳು. ಬಿರಿಯಾನಿ ತಿಂದಿದ್ದರಿಂದಲೇ ಈ ಸಾವು ಸಂಭವಿಸಿರಬಹುದು ಎಂದು ಎಲ್ಲರ ಊಹೆಯಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ಇಲಿ ಪಾಷಾಣ ಕಾರಣ ಎನ್ನುವುದು ಬೆಳಕಿಗೆ ಬಂದಿದೆ.

ಸುಮ್ಮನಿದ್ದಳೇಕೆ ವರ್ಷಾ :  

ವರ್ಷಾ ವಿಷಮಿಶ್ರಿತ ಐಸ್ ‍ಕ್ರೀಮ್ ಹೆಚ್ಚು ತಿಂದಿರಲಿಲ್ಲ. ಹೀಗಾಗಿ ಅವಳಿಗೆ ಏನೂ ತೊಂದರೆ ಯಾಗಿರಲಿಲ್ಲ. ತನ್ನ ಮಗ ಹಾಗೂ ತಂಗಿ ಐಸ್ ಕ್ರೀಮ್ ತಿಂದು ಅಸ್ವಸ್ಥಗೊಂಡಿದ್ದರೂ ಕೂಡ ವರ್ಷಾ ಸತ್ಯ ಬಾಯಿ ಬಿಟ್ಟಿರಲಿಲ್ಲ. ತಾನು ಆತ್ಮಹತ್ಯೆಗೆ ಪ್ರಯತ್ನಿಸಿದ ವಿಷಯ ಬಹಿರಂಗವಾದೀತು ಎನ್ನುವ ಭಯದಲ್ಲಿ ಸುಮ್ಮನಿದ್ದಳು. ಮಗ ಹಾಗೂ ಸಹೋದರಿಯ ಪೋಸ್ಟ್ ಮಾರ್ಟಂ ವರದಿ ನಂತರ ಐಸ್ ಕ್ರೀಮ್ ನಲ್ಲಿ ಇಲಿ ಪಾಷಾಣ ಬೇರೆಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಗಿ ಪೊಲೀಸರ ಎದುರು ಹೇಳಿಕೊಂಡಿದ್ದಾರೆ. ಆದರೆ, ಆತ್ಮಹತ್ಯೆ ಯತ್ನಕ್ಕೆ ಕಾರಣ ಏನು ಎಂಬುದನ್ನು ಹೊರಹಾಕಿಲ್ಲ.

ಗಂಡನ ಮನೆಯಿಂದ ತಾಯಿ ಜತೆಗೆ ಇರಲು ಕನ್ಹಂಗಡ್ ಗೆ ಬಂದಿದ್ದ ವರ್ಷಾ ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ದು ಏಕೆ ಎನ್ನುವ ಪ್ರಶ್ನೆ ಅವರ ಮನೆಯವರಲ್ಲಿ ಉದ್ಭವಿಸಿದೆ. ಸದ್ಯ ಪೊಲೀಸರು ವರ್ಷಾ ವಿರುದ್ಧ ದೂರು ದಾಖಲಿಸಿಕೊಂಡು ತಮ್ಮ ವಶಕ್ಕೆ ಪಡೆದಿದ್ದಾರೆ.

ಟಾಪ್ ನ್ಯೂಸ್

ಕನ್ನಡಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಕನ್ನಡದಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

fdgdfgd

ಬೇವು-ಬೆಲ್ಲದ ಬದುಕಿನಲ್ಲಿ ಸಿಹಿ-ಕಹಿ ನೆನಪು

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ

ಜಾರಕಿಹೊಳಿ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್:ಸಿಡಿ ಲೇಡಿಯ ಮತ್ತೊಂದು ವಿಡಿಯೋ, ರಮೇಶ್ ಗೆ ಸಂಕಷ್ಟ

ಜಾರಕಿಹೊಳಿ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್:ಸಿಡಿ ಲೇಡಿಯ ಮತ್ತೊಂದು ವಿಡಿಯೋ, ರಮೇಶ್ ಗೆ ಸಂಕಷ್ಟ

ಶಾಸಕ ಜಿ.ಎಚ್. ತಿಪ್ಪಾರೆಡ್ಡಿಗೆ ಕೋವಿಡ್ ಸೋಂಕು: ಆಸ್ಪತ್ರೆಗೆ ದಾಖಲು

ಶಾಸಕ ಜಿ.ಎಚ್. ತಿಪ್ಪಾರೆಡ್ಡಿಗೆ ಕೋವಿಡ್ ಸೋಂಕು: ಆಸ್ಪತ್ರೆಗೆ ದಾಖಲು

ಇಂದಿನ ಗ್ರಹಬಲ:ಈ ರಾಶಿಯವರಿಗೆ ಬಂಧುಗಳ ಸಮಾಗಮದಿಂದ ಮಾನಸಿಕ ಸಮಾಧಾನ ಸಿಗಲಿದೆ.

ಇಂದಿನ ಗ್ರಹಬಲ:ಈ ರಾಶಿಯವರಿಗೆ ಬಂಧುಗಳ ಸಮಾಗಮದಿಂದ ಮಾನಸಿಕ ಸಮಾಧಾನ ಸಿಗಲಿದೆ.
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಿರ್ಬಂಧಗಳ ಬಿಸಿ ಕೈಗಾರಿಕೆಗೆ ತಟ್ಟದಿರಲಿ: ಸಿಇಒಗಳ ಮನವಿ

ನಿರ್ಬಂಧಗಳ ಬಿಸಿ ಕೈಗಾರಿಕೆಗೆ ತಟ್ಟದಿರಲಿ: ಸಿಇಒಗಳ ಮನವಿ

ಕ್ವಾರಂಟೈನ್‌ನಲ್ಲಿರುವವರ ಮೇಲೆ ಕಣ್ಣಿಡಲು CCTV ಅಳವಡಿಕೆಗೆ ಸೂಚನೆ

ಕ್ವಾರಂಟೈನ್‌ನಲ್ಲಿರುವವರ ಮೇಲೆ ಕಣ್ಣಿಡಲು CCTV ಅಳವಡಿಕೆಗೆ ಸೂಚನೆ

ವಿರಾಟ್ ನೌಕೆಯನ್ನು ಗುಜರಿಗೆ ಹಾಕದಂತೆ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂ

ವಿರಾಟ್ ನೌಕೆಯನ್ನು ಗುಜರಿಗೆ ಹಾಕದಂತೆ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂ

ದೇಶೀಯ ವಿಮಾನಗಳಲ್ಲಿ ಲಂಚ್‌ಗೆ “ಬ್ರೇಕ್‌’! ಕೇಂದ್ರ ಸರ್ಕಾರ ಸೂಚನೆ

ದೇಶೀಯ ವಿಮಾನಗಳಲ್ಲಿ ಲಂಚ್‌ಗೆ “ಬ್ರೇಕ್‌’! ಕೇಂದ್ರ ಸರ್ಕಾರ ಸೂಚನೆ

ಜೈವಿಕ ತಂತ್ರಜ್ಞಾನ ಸಂಸ್ಥೆ ಬಯೋಕಾನ್‌ಗೆ ಜಾಗತಿಕ ಮಾನ್ಯತೆ

ಜೈವಿಕ ತಂತ್ರಜ್ಞಾನ ಸಂಸ್ಥೆ ಬಯೋಕಾನ್‌ಗೆ ಜಾಗತಿಕ ಮಾನ್ಯತೆ

MUST WATCH

udayavani youtube

Kanchipuram ಸೀರೆಗಳ ನಿಮ್ಮ Favorite Spot

udayavani youtube

ಹೆದ್ದಾರಿ ದರೋಡೆ ಸಂಚು ತಡೆದ ಮಂಗಳೂರು ಪೊಲೀಸರು: ಕುಖ್ಯಾತ T.B ಗ್ಯಾಂಗ್ ನ 8 ಆರೋಪಿಗಳ ಬಂಧನ

udayavani youtube

ಸಾವಿರ ಮಂದಿಗೆ ಕೇವಲ 2 ಫ್ಯಾನ್!

udayavani youtube

ಸಾರಿಗೆ ನೌಕರರ ಕುಟುಂಬದ ಸದಸ್ಯರಿಂದ ತಟ್ಟೆ, ಲೋಟ ಪ್ರತಿಭಟನೆ

udayavani youtube

ಇಲ್ಲಿ ಮನುಷ್ಯರಂತೆ ಕೋಣಗಳಿಗೂ ಇದೆ Swimming Pool

ಹೊಸ ಸೇರ್ಪಡೆ

ಕನ್ನಡಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಕನ್ನಡದಲ್ಲಿ ಟ್ವೀಟ್ ಮಾಡಿ ಯುಗಾದಿ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

ಪತಿಯ ಕುತ್ತಿಗೆಯ ಮೇಲೆ ಕಾಲಿಟ್ಟು ಕೊಂದ ಪತ್ನಿ!

fdgdfgd

ಬೇವು-ಬೆಲ್ಲದ ಬದುಕಿನಲ್ಲಿ ಸಿಹಿ-ಕಹಿ ನೆನಪು

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ

ಡಾ.ರಾಜ್ ತೆರೆ ಹಿಂದಿನ ಅಪರೂಪದ ಕಥೆಗಳು: ಕಲಾವಿದರ ಸಂಘಕ್ಕೆ ರಾಜ್ ಮುನ್ನುಡಿ

ಜಾರಕಿಹೊಳಿ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್:ಸಿಡಿ ಲೇಡಿಯ ಮತ್ತೊಂದು ವಿಡಿಯೋ, ರಮೇಶ್ ಗೆ ಸಂಕಷ್ಟ

ಜಾರಕಿಹೊಳಿ ಪ್ರಕರಣಕ್ಕೆ ಮತ್ತೆ ಟ್ವಿಸ್ಟ್:ಸಿಡಿ ಲೇಡಿಯ ಮತ್ತೊಂದು ವಿಡಿಯೋ, ರಮೇಶ್ ಗೆ ಸಂಕಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.