ಪೇಟೆಯಿಂದ ಖರೀದಿಸಿ ತಂದ ಟೊಮೇಟೋದೊಳಗಿತ್ತು ಚಾವಿ ! ಶಿರಸಿಯಲ್ಲೊಂದು ಅಚ್ಚರಿಯ ಸಂಗತಿ
Team Udayavani, Jan 6, 2022, 10:45 PM IST
ಶಿರಸಿ: ಪೇಟೆಯಿಂದ ಖರೀದಿಸಿ ತಂದ ಅಕ್ಕಿಯಲ್ಲಿ ಟಾಚಿಣಿ, ಮೊಳೆ, ಕಬ್ಬಿಣದ ತುಂಡು ಇರೋದು ಗೊತ್ತಿತ್ತು. ಆದರೆ, ಇಲ್ಲೊಬ್ಬರು ಖರೀದಿಸಿದ ತರಕಾರಿಯಲ್ಲೇ ಚಾವಿ ಕೂಡ ತರಕಾರಿ ಒಳಗೇ ಇದ್ದು ಬಂದ ಘಟನೆ ನಡೆದಿದೆ.
ತಾಲೂಕಿನ ಕೆರೆಕೊಪ್ಪದ ರೈತ ಆನಂದ ಹೆಗಡೆ ಸಮೀಪದ ತಾರಗೋಡ ಪೇಟೆಯಿಂದ ಟೊಮೇಟೊ ಖರೀದಿಸಿ ತಂದಿದ್ದರು. ಅದರಲ್ಲಿ ಒಂದು ಟೊಮೇಟೋ ಕತ್ತರಿಸುವಾಗ ಏನೋ ಹಿಡಿದಂತೆ ಆಯಿತು. ಅದನ್ನು ಬಿಡಿಸಿ ನೋಡಿದರೆ ಅರೆ, ಚಾವಿ! ಅಡಗಿತ್ತು.
ಒಮ್ಮೆ ಸೋಜಿಗ ಎನಿಸಿದರೂ ತುಂಬು ಹಣ್ಣಾದ ಟೊಮೇಟೋದಲ್ಲಿ ಚಾವಿ ಸೇರಿದ್ದು ಹೇಗೆ ಎಂಬುದೇ ಯಕ್ಷ ಪ್ರಶ್ನೆ ಆಯಿತು. ಚಾವಿ ತೂಕಕ್ಕೂ ಹಣ ಕೊಟ್ಟು ತರಕಾರಿ ಖರೀದಿಸಿದ್ದಂತೂ ಸುಳ್ಳಲ್ಳ….
ಇನ್ನು ಹಲವರಿಗೆ ತರಕಾರಿ ನೇರ ತಿಂದು ರೂಢಿ. ಹಾಗೇ ಟೊಮೇಟೋ ಕೂಡ ಯಾರಾದರೂ ತಿಂದಿದ್ದರೆ ಅಪಾಯ ದೇಹಕ್ಕೂ ಅಂಟಿಕೊಳ್ಳುತ್ತಿತ್ತು! ಡಾಕ್ಟರ್ ಮನೆಗೆ ಓಡಬೇಕಿತ್ತು.
‘ಈವರೆಗೆ ಎಷ್ಟೇ ಸಲ ತರಕಾರಿ ಖರೀದಿಸಿದ್ದರೂ ಇಂಥದ್ದು ಸಿಕ್ಕಿರಲಿಲ್ಲ. ಇದು ಅಚ್ಚರಿ ಮೂಡಿಸಿದೆ’ ಎನ್ನುತ್ತಾರೆ ಆನಂದ ಹೆಗಡೆ.
ಇದನ್ನೂ ಓದಿ : ಮೋದಿಗಾಗಿ ಬಿಜೆಪಿ ಕಾರ್ಯಕರ್ತರಿಂದ ದೇಶಾದ್ಯಂತ ಯಾಗ : ಸಚಿವ ಅನುರಾಗ್ ಠಾಕೂರ್ ಮಾಹಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ
ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ
ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ
ಶಂಕರನಾರಾಯಣ : ಶಾಲಾರಂಭದ ದಿನದಂದೇ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ
ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?
ಹೊಸ ಸೇರ್ಪಡೆ
ಮಾಜಿ ಕೇಂದ್ರ ಸಚಿವ ಚಿದಂಬರಂ ಆಸ್ತಿ ಮೇಲೆ ಸಿಬಿಐ ದಾಳಿ; ಪುತ್ರನ ವಿರುದ್ಧ ಹೊಸ ಕೇಸ್
‘777 ಚಾರ್ಲಿ’…. ಮನಮುಟ್ಟುವ ಅನುಬಂಧ ಅನಾವರಣ
ಜಮ್ಮು ಕಾಶ್ಮೀರ ಹಿಂಸಾಚಾರಕ್ಕೆ ದಿ ಕಾಶ್ಮೀರ ಫೈಲ್ ಚಿತ್ರವೇ ಕಾರಣ: ಮೆಹಬೂಬಾ ಮುಫ್ತಿ
ಭಾರತ-ನೇಪಾಲ ಸ್ನೇಹ ಹಿಮಾಲಯದಷ್ಟು ಗಾಢ; ಬುದ್ಧನ ನಾಡಿನಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ
ರಾಜ್ಯ ವಿಪತ್ತು ಸ್ಪಂದನ ದಳಕ್ಕೆ ಮಾಜಿ ಸೈನಿಕರೇ ಗತಿ