ರವಿ ಶಾಸ್ತ್ರೀ, ಹರ್ಷ ಬೋಗ್ಲೆಯಲ್ಲ.. ಈತನೇ ನನ್ನ ನೆಚ್ಚಿನ ಕಾಮೆಂಟೇಟರ್ ಎಂದ ವಿರಾಟ್
Team Udayavani, Apr 7, 2020, 11:45 AM IST
ಮುಂಬೈ: ಕ್ರಿಕೆಟ್ ನಲ್ಲಿ ವೀಕ್ಷಕ ವಿವರಣೆಗೆ ಅದರದ್ದೇ ಆದ ಸ್ಥಾನವಿದೆ. ರವಿ ಶಾಸ್ತ್ರೀ, ಹರ್ಷ ಬೋಗ್ಲೆ,ಸಂಜಯ್ ಮಾಂಜ್ರೇಕರ್, ಇಯಾನ್ ಬಿಷಪ್, ಮೈಕಲ್ ಅಥರ್ಟನ್ ಮುಂತಾದವರು ವೀಕ್ಷಕ ವಿವರಣೆಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನೊತ್ತಿದ್ದಾರೆ. ಇವರ ವೀಕ್ಷಕ ವಿವರಣೆಗೆ ಅಭಿಮಾನಿ ಬಳಗವೂ ಇದೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸದ್ಯದ ವಿಶ್ವ ಶ್ರೇಷ್ಠ ಆಟಗಾರ. ವಿಶ್ವದ ಎಲ್ಲಾ ವೀಕ್ಷಕ ವಿವರಣೆಗಾರರು ವಿರಾಟ್ ಬ್ಯಾಟಿಂಗ್ ಖದರ್ ಗೆ ಮಾರು ಹೋದವರೇ. ಸದ್ಯ ವಿರಾಟ್ ಕೊಹ್ಲಿ ತನ್ನ ನೆಚ್ಚಿನ ಕಾಮೆಂಟೇಟರ್ ನನ್ನು ಹೆಸರಿಸಿದ್ದಾರೆ.
ಇಂಗ್ಲೆಂಡ್ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಜೊತೆಗೆ ಬಡೆದ ಲೈವ್ ಚಾಟ್ ನಲ್ಲಿ ಕೊಹ್ಲಿ ಈ ವಿಷಯವನ್ನು ಹೇಳಿದ್ದಾರೆ. ನನ್ನ ಫೇವರೇಟ್ ಕಾಮೆಂಟೇಟರ್ ಖಂಡಿತ ನೀನಲ್ಲ ( ಪೀಟರ್ಸನ್). ನನ್ನ ನೆಚ್ಚಿನ ವೀಕ್ಷಕ ವಿವರಣೆಗಾರ ನಾಸೀರ್ ಹುಸೇನ್ ಎಂದು ಕೊಹ್ಲಿ ಹೇಳಿದ್ದಾರೆ.
ನಾಸೀರ್ ಹುಸೇನ್ ಇಂಗ್ಲೆಂಡ್ ನ ಮಾಜಿ ನಾಯಕ. ಇಂಗ್ಲೆಂಡ್ ನ ಯಶಸ್ವಿ ನಾಯಕರಲ್ಲಿ ಒಬ್ಬನಾದ ನಾಸೀನ್ ಹುಸೇನ್ ಸದ್ಯ ಕಾಮೇಂಟ್ರಿಯಲ್ಲಿ ತೊಡಗಿದ್ದಾರೆ.