ಸಂಘಟನೆಯ ಹೆಸರಿನಲ್ಲಿ ಶೋಚನೀಯ ಪರಿಸ್ಥಿತಿ ನಿರ್ಮಾಣ : ಶ್ರೀಈಶ್ವರಾನಂದಪುರಿ ಸ್ವಾಮೀಜಿ ವಿಷಾದ

Team Udayavani, Apr 4, 2022, 9:08 PM IST

ಸಂಘಟನೆಯ ಹೆಸರಿನಲ್ಲಿ ಶೂಚನೀಯ ಪರಿಸ್ಥಿತಿ ನಿರ್ಮಾಣ : ಶ್ರೀಈಶ್ವರಾನಂದಪುರಿ ಸ್ವಾಮೀಜಿ ವಿಷಾದ

ಕೊರಟಗೆರೆ : ಕರ್ನಾಟಕದಲ್ಲಿ ಸಂಘಟನೆಯ ಹೆಸರಿನಲ್ಲಿ ಶೋಚನೀಯ ಪರಿಸ್ಥಿತಿ ನಿರ್ಮಾಣ. ಕಾನೂನು ಸುವ್ಯವಸ್ಥೆ ಏನಾಗಿದೆ ಎಂಬುದೇ ಯಕ್ಷಪ್ರಶ್ನೆ. ರಾಜ್ಯದ ಎಲ್ಲಾ ಮಠಾಧೀಶರು ಒಂದಾಗಿ ರಾಜ್ಯ ಸರಕಾರ ಮತ್ತು ಸಂಘಟನೆಗಳಿಗೆ ಬುದ್ದಿವಾದ ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೊಸದುರ್ಗ ಕನಕ ಗುರುಪೀಠದ ಶ್ರೀಈಶ್ವರಾನಂದಪುರಿ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿದ್ದರಬೇಟ್ಟದ ಶ್ರೀರೇವಣ್ಣ ಸಿದ್ದೇಶ್ವರ ಕನಕಗುರು ಶ್ರೀಮಠದಲ್ಲಿ ಜಿಪಂ ಮತ್ತು ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆಯ 3ಕೋಟಿ  35ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಸೋಮವಾರ ಶಂಕುಸ್ಥಾಪನೆ ಮಾಡಿದ ನಂತರ ಮಾತನಾಡಿದರು.

ಕನಕಗುರು ಮಠದಲ್ಲಿ ಜಯಂತಿ ಆದರೇ ಅಲ್ತಾಪ್ ತೋರಣ ಕಟ್ತಾನೇ.. ಕ್ರಿಶ್ಚಿಯನ್ ಹುಡುಗ ಭಕ್ತರಿಗೆ ಊಟ ಬಡಿಸ್ತಾನೇ.. ಯುಗಾದಿ ಹಬ್ಬದ ಊಟದ ವಿಚಾರದಲ್ಲಿ ಸಂಘಟನೆಯಿಂದ ಒಂದು ವರ್ಗದ ಜನರನ್ನು ದೂರುವಿಡುವ ಹುನ್ನಾರ ನಡೆಯುತ್ತಿದೆ. ರಾಜ್ಯದಲ್ಲಿ ಹಿಂದು – ಮುಸ್ಲಿಂ ಸಮುದಾಯದ ನಡುವೆ ಗೊಂದಲ ಮೂಡಿಸುವ ಪ್ರಯುತ್ನ ನಡೆಯುತ್ತಿದೆ. ರಾಜ್ಯ ಸರಕಾರ ಮಧ್ಯ ಪ್ರವೇಶ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಆಗ್ರಹ ಮಾಡಿದರು.

ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ ಕೊರಟಗೆರೆ ಕ್ಷೇತ್ರದ ಪ್ರತಿ ಹೋಬಳಿಯಲ್ಲಿ ತಲಾ ಎರಡು ಮಠಗಳಿವೆ. ಮಠಮಂದಿರ ಹೆಚ್ಚಾದಂತೆ ಸ್ವಾಮರಸ್ಯ ಒಂದಾಗಿ ಸಮಾಜದಲ್ಲಿ ಶಾಂತಿ ನೆಲೆಸಲಿದೆ. ಸಿದ್ದರಬೆಟ್ಟದ ಕನಕ ಶ್ರೀಮಠಕ್ಕೆ ಈಗಾಗಲೇ 10 ಲಕ್ಷದ ಕೌಪೌಂಡು ಮತ್ತು ಕೊಳವೆಬಾವಿಗೆ ಅನುಧಾನ ನೀಡಿದ್ದೇನೆ. ಶ್ರೀಮಠಕ್ಕೆ ಬೇಕಾದ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲು ನಾನು ಸಿದ್ದನಿದ್ದೇನೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ : ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸದೆ ಭೂಮಿ ಹಕ್ಕು ನೀಡಿ, ಇಲ್ಲದಿದ್ದರೆ ರಾಜ್ಯಾದ್ಯಂತ ಧರಣಿ

ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯಾಧ್ಯಕ್ಷ ಎಸ್.ನಾಗಣ್ಣ, ಮಧುಕರ್, ತಹಶೀಲ್ದಾರ್ ನಾಹೀದಾ, ತಾಪಂ ಇಓ ದೊಡ್ಡಸಿದ್ದಯ್ಯ, ಜಿಪಂ ಎಇಇ ರವಿಕುಮಾರ್, ಸಿದ್ದರಬೆಟ್ಟ ಗ್ರಾಪಂ ಅಧ್ಯಕ್ಷೆ ವಿನೋದ, ಕುರುಬರ ಸಂಘದ ಅಧ್ಯಕ್ಷ ಮೈಲಾರಪ್ಪ, ಮುಖಂಡರಾದ ರಂಗಧಾಮಯ್ಯ, ನಾಗಭೂಷನ್, ಲಕ್ಷ್ಮೀಕಾಂತ , ಗಂಗಯ್ಯ, ರಂಗರಾಜು ಸೇರಿದಂತೆ ಇತರರು ಇದ್ದರು.

3ಕೋಟಿ 35ಲಕ್ಷದ ಕಾಮಗಾರಿಗೆ ಚಾಲನೆ..
ಕೊರಟಗೆರೆ ಜಿಪಂ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆಯಿಂದ 3ಕೋಟಿ 35ಲಕ್ಷದ ಸಿದ್ದರಬೆಟ್ಟದ ಮುಖ್ಯರಸ್ತೆಯಿಂದ ರೇವಣ್ಣ ಸಿದ್ದೇಶ್ವರ ಕನಕಗುರು ಮಠದ ಸಂಪರ್ಕದ 1.2ಕೀಮೀ ರಸ್ತೆ ಕಾಮಗಾರಿ. ಸಿಮೆಂಟ್ ಕಾಂಕ್ರಿಟ್ ರಸ್ತೆ-1230ಮೀ, ಆರ್‌ಸಿಸಿ ಸೇತುವೆ-10.3ಮೀ, ಆರ್‌ಸಿಸಿ ಸೇತುವೆ-2ಮೀ, ಆರ್‌ಸಿಸಿ ಚರಂಡಿ-50ಮೀ, ಆರ್‌ಸಿಸಿ ಪೈಪ್ ಸೇತುವೆ-600ಎಂಎA, ಆರ್‌ಸಿಸಿ ರಕ್ಷಣಾ ಗೋಡೆ-40ಮೀ, ಹೈಮಾಸ್ಕ್ ದ್ವೀಪ-4, ಸಂಪರ್ಕ ಸೇತುವೆ-600ಎಂಎA ಕಾಮಗಾರಿ ನಡೆಯಲಿದೆ.

ಕರ್ನಾಟಕ ರಾಜ್ಯದ ದಲಿತ ಸಿಎಂ ಕನಸು..
ಕರ್ನಾಟಕ ರಾಜ್ಯದಲ್ಲಿ ಲಿಂಗಾಯಿತ, ಬ್ರಾಹ್ಮಣ, ಕುರುಬ, ಒಕ್ಕಲಿಗ ಸಮುದಾಯದಿಂದ ಈಗಾಗಲೇ ಸಿಎಂ ಆಗಿ ರಾಜ್ಯದ ಆಡಳಿತ ನಡೆಸಿದ್ದಾರೆ. ಕರ್ನಾಟಕ ರಾಜಕೀಯ ರಂಗದಲ್ಲಿ ಡಾ.ಜಿ.ಪರಮೇಶ್ವರ್ ಅಜಾತಶತ್ರು. ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ದಲಿತ ಸಿಎಂ ಆದರೇ ಸಾಮಾಜಿಕ ನ್ಯಾಯ ದೊರೆಯುವ ಕನಸು ನನಸಾಗಲಿದೆ. ಸದಾ ಜನತೆಯ ಮಧ್ಯೆ ಇರುವಂತಹ ಸರಳತೆಯ ರಾಜಕಾರಣಿ ಮತ್ತೇ ಕೊರಟಗೆರೆ ಕ್ಷೇತ್ರದಿಂದ ಜಯಗಳಿಸಿ ರಾಜ್ಯದ ಸಿಎಂ ಆಗಲಿ ಎಂದು ಶ್ರೀಈಶ್ವರಾನಂದಪುರಿ ಮಹಾಸ್ವಾಮಿಗಳು ಆರ್ಶಿವಾದ ಮಾಡಿದರು.

ಸಾಧುಸಂತರು ತಪಸ್ಸು ಮಾಡಿರುವ ತಪೋಭೂಮಿ, ರೇವಣ್ಣ ಸಿದ್ದೇಶ್ವರ ತಪಸ್ಸು ಮಾಡಿರುವ ಪವಿತ್ರಸ್ಥಳ ಸಿದ್ದರಬೆಟ್ಟ ಶ್ರೀಕ್ಷೇತ್ರ. ಹಾಲುಮತದ ಕುಲಗುರು ರೇವಣ್ಣ ಸಿದ್ದೇಶ್ವರ. ಹತ್ತಾರು ವರ್ಷಗಳ ಹಾಲುಮತಸ್ಥರ ಸಮುದಾಯದ ಕನಸು ಈಗ ನನಸಾಗುವ ಕಾಲ ಹತ್ತಿರ ಬರುತ್ತೀದೆ. ಸಿದ್ದರಬೆಟ್ಟದ ಶ್ರೀಕನಕಗುರು ಪೀಠ ಮಠದ ಸ್ಥಾಪನೆಗೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಪಾತ್ರ ಅನನ್ಯವಾಗಿದೆ.
– ಶ್ರೀಈಶ್ವರಾನಂದಪುರಿ ಮಹಾಸ್ವಾಮಿಗಳು. ಕನಕಗುರು ಪೀಠಶಾಖಾಮಠ. ಹೊಸದುರ್ಗ.

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Congress party: ಮಾಲೀಕಯ್ಯ ಗುತ್ತೇದಾರ್‌ ಇಂದು ಕಾಂಗ್ರೆಸ್‌ ಸೇರ್ಪಡೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.