ಪರ್ಯಾಯೋತ್ಸವ: ಕಂಗೊಳಿಸುತ್ತಿರುವ ಉಡುಪಿ
10 ಸಾವಿರ ಮೀಟರ್ ಬಂಟಿಂಗ್ಸ್ ; 300 ಕೇಸರಿ ಧ್ವಜ
Team Udayavani, Jan 16, 2022, 1:57 AM IST
ಉಡುಪಿ: ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯೋತ್ಸವಕ್ಕೆ ಇಡೀ ನಗರ ಸಂಭ್ರಮ ಸಡಗರದಿಂದ ಸಜ್ಜಾಗುತ್ತಿದ್ದು, ಬಗೆ ಬಗೆಯ ಅಲಂಕಾರದಿಂದ ಉಡುಪಿ ಕಂಗೊಳಿಸುತ್ತಿದೆ.
ಬರೋಬ್ಬರಿ 10 ಸಾವಿರ ಮೀಟರ್ ಕೇಸರಿ ಬಂಟಿಂಗ್ಸ್ ಮತ್ತು 300 ಕೇಸರಿ ಧ್ವಜಗಳಿಂದ ನಗರವನ್ನು ಶೃಂಗರಿಸಲಾಗಿದೆ. ಬಂಟಿಂಗ್ಸ್ ಮತ್ತು ವಿದ್ಯುತ್ ಅಲಂಕಾರದಿಂದ ನಗರದ ಸೌಂದರ್ಯ ಹೆಚ್ಚಿದೆ.
ಕಿನ್ನಿಮೂಲ್ಕಿಯಿಂದ ಜೋಡುಕಟ್ಟೆ ಪರ್ಯಾಯ ಮೆರವಣಿಗೆ ರಸ್ತೆ ಕೋರ್ಟ್ ರೋಡ್, ಡಯಾನ ವೃತ್ತ, ತೆಂಕಪೇಟೆ ಐಡಿಯಲ್ ಸರ್ಕಲ್ ಮೂಲಕ ರಥಬೀದಿವರೆಗೆ, ರಥಬೀದಿ ಸುತ್ತಲೂ, ಕರಾವಳಿ ಜಂಕ್ಷನ್‌ನಿಂದ ಕುಂಜಿಬೆಟ್ಟು ಓಶಿಯನ್ ಪರ್ಲ್ ಹೊಟೇಲ್‌ವರೆಗೆ ಬಂಟಿಂಗ್ಸ್ ಮತ್ತು ಕೇಸರಿ ಧ್ವಜ ಅಳವಡಿಸಲಾಗಿದ್ದು, ಎಲ್ಲರನ್ನು ಆಕರ್ಷಿಸುತ್ತಿದೆ.
ಹಿಂದೂ ಜಾಗರಣ ವೇದಿಕೆಯ ಮಹೇಶ್ ಬೈಲೂರು, ಸತೀಶ್ ಕುಮಾರ್ ನೇತೃತ್ವದ 20 ಕಾರ್ಯಕರ್ತರು ಕಳೆದ ಮೂರು ದಿನಗಳಿಂದ ರಾತ್ರಿ ವೇಳೆ ಬಂಟಿಂಗ್ಸ್ ಅಲಂಕಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ:ಪರ್ಯಾಯೋತ್ಸವಕ್ಕೆ: ದಾಖಲೆ ಹೊರೆಕಾಣಿಕೆ ಸಂಗ್ರಹ
13 ಕಡೆಗಳಲ್ಲಿ ಸ್ವಾಗತ ಕಮಾನು
ಬಂಟಿಂಗ್ಸ್ ನಡುವೆ 300 ಕೇಸರಿ ಧ್ವಜಗಳನ್ನು ಅಳವಡಿಸಲಾಗಿದ್ದು, ಪರ್ಯಾಯೋತ್ಸವ ಸಂಭ್ರಮಕ್ಕೆ ಮತ್ತಷ್ಟು ಕಳೆ ನೀಡಿದೆ. ಜೋಡು ಕಟ್ಟೆಯಿಂದ ರಥಬೀದಿವರೆಗೆ 13 ಕಡೆಗಳಲ್ಲಿ ಬೃಹತ್ ಆಕಾರದ ಆಕರ್ಷಕ ರೀತಿಯಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದೆ. ಕೃಷ್ಣಾಪುರ ಮಠದಲ್ಲಿಯೂ ಸಡಗರ ಮನೆ ಮಾಡಿದ್ದು, ರಥಬೀದಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಮಠದ ಒಳಾಂಗಣ, ಕೊಠಡಿಗಳನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿದೆ. ಮಠದ ಹೊರಭಾಗ ವಿವಿಧ ಬಗೆಯ ವಿದ್ಯುತ್ ಅಲಂಕಾರಗಳಿಂದ ಕಣ್ಮನ ಸೆಳೆಯುತ್ತಿದೆ. ರಥಬೀದಿ ಸಂಪರ್ಕಿಸುವ ತೆಂಕಪೇಟೆ, ಬಡುಗಪೇಟೆ ಸಹಿತ 4 ಇಕ್ಕೆಲದ ರಸ್ತೆಗಳು, ರಥಬೀದಿಯು ಎಲ್‌ಇಡಿ, ವಿವಿಧ ಬಣ್ಣಗಳಿಂದ ಕೂಡಿದ ವಿದ್ಯುತ್ ಅಲಂಕಾರದಿಂದ ಸ್ವಾಗತಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಪು ತಾಲೂಕು ಮಟ್ಟದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ
“ಇನ್ಸ್ಪೆಕ್ಟರ್ ಕರೆಯುತ್ತಿದ್ದಾರೆ’ ಎಂದು ಕರೆದು ಜೈಲಿಗೆ ಅಟ್ಟಿದರು: ಶ್ರೀನಿವಾಸ ಕಾಮತ್
1947ರ ಸ್ವಾತಂತ್ರ್ಯೋತ್ಸವದಲ್ಲಿ ಆರೋಹಣಗೊಂಡ ರಾಷ್ಟ್ರಧ್ವಜ ಕಲ್ಮಾಡಿ ಮನೆಯಲ್ಲಿ ಸುರಕ್ಷಿತ
ಸರಣಿ ರಜೆ: ಮಲ್ಪೆ ಬೀಚ್ನಲ್ಲಿ ಜನಸಂದಣಿ, ವಾಹನ ದಟ್ಟಣೆ
ಉಡುಪಿ: ಚಿತ್ತರಂಜನ್ ಸರ್ಕಲ್ “ಚಾರ್ಲಿ” ಸಾವು; ಅಂತಿಮ ಗೌರವದೊಂದಿಗೆ ಅಂತ್ಯಸಂಸ್ಕಾರ
MUST WATCH
ಹೊಸ ಸೇರ್ಪಡೆ
ಸ್ವಾತಂತ್ರ್ಯ ಹೋರಾಟಕ್ಕಾಗಿ ಬೊಮ್ಮಾಯಿ ಜೈಲುವಾಸ ಅನುಭವಿಸಿದ್ದರಾ?: ಸಿದ್ದರಾಮಯ್ಯ ಪ್ರಶ್ನೆ
ಶಿವಮೊಗ್ಗ ಸ್ಮಾರ್ಟ್ಸಿಟಿ ಯೋಜನಾ ನೋಟ
ಬಿಗಿ ಪೊಲೀಸ್ ಬಂದೋಬಸ್ತ್; ಭಾಗವತ್, ನಾಗ್ಪುರ್ ಆರ್ ಎಸ್ ಎಸ್ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ
ಜಾನಪದ ಕಲಾವಿದರೊಂದಿಗೆ ಹೆಜ್ಜೆಹಾಕಿದ ಮಮತಾ ಬ್ಯಾನರ್ಜಿ: ವಿಡಿಯೋ ನೋಡಿ
ಕೊಟ್ಟಿಗೆಹಾರದಲ್ಲಿ ಆನೆ ದಾಳಿಗೆ ರೈತ ಬಲಿ: ಮೃತದೇಹವನ್ನ ಕಾಡಿನಲ್ಲಿ ಎಳೆದಾಡಿದ ಒಂಟಿ ಸಲಗ