ಸಂಗೀತ ತಪಸ್ವಿ ,ಸ್ವರ ಸಾಮ್ರಾಜ್ಞಿ ಚಿರಾಯು


Team Udayavani, Feb 7, 2022, 7:00 AM IST

ಸಂಗೀತ ತಪಸ್ವಿ ,ಸ್ವರ ಸಾಮ್ರಾಜ್ಞಿ ಚಿರಾಯು

ಕಲೆ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಚಲನಶೀಲತೆಯೇ ಜೀವಾಳ. ಹೊಸ ನೀರು ಹರಿದು ಹಳೆನೀರು ಪಲ್ಲಟಗೊಳ್ಳುವುದೇ ಇಲ್ಲಿನ ದೈನಂದಿನ ಚಟುವಟಿಕೆ. ಯಾರಿಗಾದರೂ ನಿರಂತರ ಒಂದು ಅಥವಾ ಎರಡು ದಶಕಗಳ ವೃತ್ತಿ ಜೀವನ ಪ್ರಾಪ್ತವಾದರೆ ಅದೊಂದು ಗಣನೀಯ ಸಾಧನೆಯೇ. ಅಂಥದ್ದರಲ್ಲಿ ಸಿನೆಮಾ ಹಾಡುಗಾರಿಕೆಯಂತಹ ಅತೀ ಚಂಚಲ ಕ್ಷೇತ್ರದಲ್ಲಿ ಐದಾರು ದಶಕ ನಿರಂತರ ಚಾಲ್ತಿಯಲ್ಲಿರುವುದೆಂದರೆ ಅದು ಯುಗಕ್ಕೊಮ್ಮೆ ಯಾರೋ ಒಂದಿಬ್ಬರಿಗೆ ಸಿದ್ಧಿಸಬಹುದಾದ ಸಾಧನೆ. ಅಂತಹ ಮೇರು ಸಾಧಕಿಯೇ ನಮ್ಮ ಲತಾ ದೀನನಾಥ್‌ ಮಂಗೇಶ್ಕರ್‌.

ಕಲೆಗಾರರ ಕುಟುಂಬದಲ್ಲಿ ಹುಟ್ಟಿದ ಹೇಮಾ ಮಂಗೇಶ್ಕರ್‌ ತನ್ನ 13ನೇ ವಯಸ್ಸಿನಲ್ಲೇ ಸೊಗಸಾಗಿ ಹಾಡಲು ಆರಂಭಿಸಿ ಏಳು ದಶಕಗಳ ಕಾಲ 36 ಭಾಷೆಗಳಲ್ಲಿ 36 ಸಾವಿ ರಕ್ಕೂ ಹೆಚ್ಚು ಹಾಡುಗಳನ್ನು ಹಾಡಿ, ಅಮೋಘ ದಂತಕಥೆ ಎನಿಸಿಕೊಂಡ ಲತಾ ಮಂಗೇಶ್ಕರ್‌ ಆಗಿ ಬೆಳೆದಿದ್ದು ಅತ್ಯಂತ ಮಧುರಾತಿಮಧುರ ಸಂಗೀತ ಯಾನ. ಸ್ವಾತಂತ್ರ್ಯ ಪೂರ್ವದಲ್ಲೇ ಹಾಡಲು ಪ್ರಾರಂಭಿ ಸಿದ್ದ ಇವರು ಸ್ವಾತಂತ್ರ್ಯದ ಬಳಿಕದ ಆರೇಳು ದಶಕಗಳಲ್ಲಿ ಸಿನೆಮಾ ಗಾಯನ ಕ್ಷೇತ್ರವನ್ನು ನಿರಂತರ ಆವರಿಸಿ ವಯೋ ಸಹಜವಾಗಿ ಶರೀರದ ಶಕ್ತಿ ಉಡುಗಿ ಹೋಗುವವರೆಗೂ ಹಾಡುತ್ತಲೇ ಬದುಕಿದ್ದು ಪರಮ ಅದ್ಭುತ. ಕೆಲವೇ ಕೆಲವು ಸಾಧಕರು ತಾವು ಆರಿಸಿಕೊಂಡ ಕ್ಷೇತ್ರದ ಮುಖವಾಗಿ, ಸಂಕೇತವಾಗಿ, ಹೆಗ್ಗಳಿಕೆಯಾಗಿ ಆ ಕ್ಷೇತ್ರದ ನಡೆದಾಡುವ ಪ್ರತಿರೂಪವೇನೋ ಎಂಬಂತೆ ಬೆಳೆದು ನಿಲ್ಲುತ್ತಾರೆ. ಡಾ| ರಾಜಕುಮಾರ್‌, ಎಸ್‌. ಪಿ. ಬಾಲಸುಬ್ರಹ್ಮಣ್ಯಂ, ಸಚಿನ್‌ ತೆಂಡುಲ್ಕರ್‌ ಮುಂತಾದ ಕೆಲವೇ ಕೆಲವು ಸಾಧಕರ ಸಾಲಿನಲ್ಲಿ ಸಲ್ಲುವವರು ನಮ್ಮ ಲತಾ ದೀದಿ.

ಯಾವುದೇ ಯಾಂತ್ರಿಕ ಪರಿಷ್ಕರಣೆಯು ಸಾಧ್ಯವಿಲ್ಲದ ಕಾಲದಲ್ಲಿ, ಅಪ್ಪಟ ಆಗ್ಯಾìನಿಕ್‌ ಆಗಿ ನೂರಾರು ಸಂಗೀತಗಾರರ ಜತೆ ಹತ್ತಾರು ತಾಲೀಮುಗಳ ಬಳಿಕ ಒಂದೇ ಗುಕ್ಕಿಗೆ ಹಾಡುಗಳನ್ನು ಹಾಡಿ ರೆಕಾರ್ಡಿಂಗ್‌ ಮಾಡಿಕೊಳ್ಳುತ್ತಿದ್ದ ದಿನಗಳಲ್ಲಿ ಲತಾ ಮಂಗೇಶ್ಕರ್‌ ಅವರು ಹಾಡಿ ಮುಗಿಸಿದ ಹಾಡುಗಳ ಸಂಖ್ಯೆಯೇ ಒಂದು ರೀತಿಯಲ್ಲಿ ನಂಬಲಸಾಧ್ಯ ಹಾಗೂ ಬೆರಗು ಹುಟ್ಟಿಸುವಂಥದ್ದು. ಅದು ಸಾಧ್ಯವಾಗುವುದು ಅಂತಿಂಥ ಸಾಧಕರಿಗಲ್ಲ, ಕೇವಲ ಸಾಧನೆಗಾಗಿಯೇ ತಮ್ಮನ್ನು ಇಡಿಯಾಗಿ ಅರ್ಪಿಸಿಕೊಂಡು ಬದುಕನ್ನೇ ಮುಡಿಪಾಗಿಟ್ಟ ತಪಸ್ವಿಗಳಿಗೆ ಮಾತ್ರ. ಲತಾ ದೀದಿ ಅಂಥ ಅಪ್ಪಟ ಸಂಗೀತ ತಪಸ್ವಿ ಆಗಿದ್ದರು. ಅಷ್ಟು ಮೇರು ಮಟ್ಟದ ಸಾಧಕಿಯಾದರೂ ಅದೊಂದು ಸಂದರ್ಶನದಲ್ಲಿ ಅವರು ಹೇಳಿದ ಮಾತು.

ನನ್ನ ಹಾಡುಗಳನ್ನು ನಾನು ಮರಳಿ ಕೇಳುವುದಿಲ್ಲ. ನನಗೆ ತಪ್ಪುಗಳು ಕಾಣಿಸಿ ಮುಜುಗರವಾಗಿ ಬಿಡುತ್ತದೆ. ಈ ಒಂದು ಮಾತು ಅವರಿಗೆ ಸಂಗೀತದ ಪೂರ್ಣತೆಯ ಬಗ್ಗೆ, ನಿರಂತರ ಕಲಿಕೆ ಬಗ್ಗೆ ಅದೆಂಥ ಅದಮ್ಯ ಬದ್ಧತೆ ಇತ್ತೆಂಬುದನ್ನು ಸಾರಿ ಹೇಳುತ್ತದೆ. ಕೊನೆಯದಾಗಿ ಇಂದು ಲತಾ ದೀದಿ ದೈಹಿಕವಾಗಿ ನಮ್ಮನ್ನು ಅಗಲಿದರು ಎಂದಾಗ ನೋವಿನೊಂದಿಗೆ ನನ್ನ ನೆನಪಿಗೆ ಬಂದ ಮಾತು. Legends never die They became a part of you
ಮೇರು ವ್ಯಕ್ತಿತ್ವಗಳಿಗೆ ಸಾವಿಲ್ಲ ಅವರು ನಮ್ಮದೇ ಭಾಗವಾಗಿ ಬದುಕಿರುತ್ತಾರೆ. ಎಂದಿನಂತೆ ಮುಂದೆಯೂ ನಮ್ಮ ಖುಷಿ, ನೋವು, ಪ್ರೀತಿ, ಸ್ನೇಹ ಮುಂತಾದ ಎಲ್ಲ ಭಾವನೆಗಳಲ್ಲಿ ಹಾಡಾಗಿ ಲತಾ ಮಂಗೇಶ್ಕರ್‌ ನಮ್ಮ ಜತೆ ಇದ್ದೇ ಇರುತ್ತಾರೆ . ಸ್ವರಸಾಮ್ರಾಜಿn ಚಿರಾಯು.

-ಕವಿರಾಜ್‌, ಚಿತ್ರ ಸಾಹಿತಿ, ನಿರ್ದೇಶಕ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.