ಪೊಲೀಸ್‌, ಅರಣ್ಯ ಅಧಿಕಾರಿಗಳ ಎದುರೇ ಚಿರತೆಯ ಹತ್ಯೆ

Team Udayavani, Jul 3, 2019, 3:12 PM IST

ಸಾಂದರ್ಭಿಕ ಚಿತ್ರ ಮಾತ್ರ

ಚಿತ್ರದುರ್ಗ: ಹೊಸದುರ್ಗ ತಾಲೂಕಿನ ಕುರುಬರ ಹಳ್ಳಿ ಎಂಬಲ್ಲಿ ಚಿರತೆಯೊಂದನ್ನು ಅರಣ್ಯ ಅಧಿಕಾರಿಗಳ ಎದುರೇ ಹತ್ಯೆಗೈದ ಘಟನೆ ಬುಧವಾರ ನಡೆದಿದೆ.

ಜನರ ಮೇಲೆ ದಾಳಿ ನಡೆಸುವ ಮೂಲಕ ಭೀತಿ ಹುಟ್ಟಿಸಿದ್ದ ಚಿರತೆಯನ್ನು ಗ್ರಾಮದ ನೂರಾರು ಜನ ಸೇರಿ ದೊಣ್ಣೆಗಳಿಂದ ಬಡಿದು ಕೊಂದಿದ್ದಾರೆ.

ಬೆಳಗ್ಗೆ ಇಬ್ಬರ ಮೇಲೆ ದಾಳಿ ನಡೆಸಿತ್ತು, ಬಳಿಕ ಮರವೊಂದನ್ನು ಏರಿ ಕುಳಿತಿದ್ದ ಚಿರತೆಯ ಮೇಲೆ ನೂರಾರು ಜನರು ಕಲ್ಲು ತೂರಾಟ ನಡೆಸಿದ್ದಾರೆ. ಮರದಿಂದ ಕೆಳಕ್ಕೆ ಬಿದ್ದ ಚಿರತೆ ಮತ್ತೆ ದಾಳಿ ನಡೆಸಲು ಮುಂದಾದಾಗ ದೊಣ್ಣೆಯಿಂದ ಹೊಡೆದು ನೆಲಕ್ಕುರುಳಿಸಲಾಗಿದೆ.

ಸ್ಥಳದಲ್ಲಿದ್ದ ಬೆರಳೆಣಿಕೆಯ ಅರಣ್ಯ ಸಿಬಂದಿ ಮತ್ತು ಪೊಲೀಸರು, ಉದ್ರಿಕ್ತ ನೂರಾರು ಜನರ ಗುಂಪಿನಿಂದ ಚಿರತೆಯ ಹತ್ಯೆಯನ್ನು ತಡೆಯುವಲ್ಲಿ ವಿಫ‌ಲರಾದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ