BJPಯವರು ಪ್ರಾಯಶ್ಚಿತ್ತ ಯಾತ್ರೆ ಮಾಡಲಿ’: ಎಂಎಲ್‌ಸಿ ಐವನ್‌ ಡಿ’ಸೋಜಾ

Team Udayavani, Aug 4, 2024, 12:33 AM IST

Ivan-Dsoza

ಮಂಗಳೂರು: ಬಿಜೆಪಿಯವರು ಕಾಂಗ್ರೆಸ್‌ ಸರಕಾರದ ವಿರುದ್ಧ ಪಾದಯಾತ್ರೆ ಮಾಡುವ ಬದಲು ತಮ್ಮ ಆಡಳಿತ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರ, ಹಗರಣಗಳಿಗೆ ಪ್ರಾಯಶ್ಚಿತ್ತ ಯಾತ್ರೆ ಮಾಡಲಿ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸರಕಾರದ ಅವಧಿಯಲ್ಲಿ ಬೋವಿ ನಿಗಮದಲ್ಲಿ 87 ಕೋ. ರೂ., ಅಂಬೇಡ್ಕರ್‌ ನಿಗಮದಲ್ಲಿ 4.95 ಕೋ.ರೂ., ದೇವರಾಜ್‌ ಟ್ರಕ್‌ ಟರ್ಮಿನಲ್‌ನಲ್ಲಿ 47 ಕೋ. ರೂ., ಕೆಐಎಡಿಬಿಯಲ್ಲಿ 60 ಕೋ. ರೂ., ಕೊರೊನಾ ಅವಧಿಯಲ್ಲಿ 2,000 ಕೋ.ರೂ.ಗಳಿಗೂ ಅಧಿಕ ಹಗರಣಗಳಾಗಿವೆ.

ಬಿಜೆಪಿಯವರು ಈ ಹಗರಣಗಳಿಗೆ ಸಂಬಂಧಿಸಿ ಆಗ ಮುಖ್ಯಮಂತ್ರಿ, ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌, ಡಾ| ಸುಧಾಕರ್‌, ಕೋಟ ಶ್ರೀನಿವಾಸ ಪೂಜಾರಿ ಮನೆಗೆ ಪಾದಯಾತ್ರೆ ನಡೆಸಲಿ ಎಂದರು.
ಸಿದ್ದರಾಮಯ್ಯ ಹೆಸರಿನಲ್ಲಿ ಪಾದಯಾತ್ರೆ ಮಾಡಿದರೆ, ನಾವು ಸುಮ್ಮನೆ ಬಿಡುವುದಿಲ್ಲ. ಜನರ ಬಳಿ ಹೋಗಿ ಬಿಜೆಪಿಯ ಭ್ರಷ್ಟಾಚಾರವನ್ನು ತೆರೆದಿಡುತ್ತೇವೆ. ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಗೆ ಈ ಜನ್ಮ ಮಾತ್ರ ಅಲ್ಲ ಮುಂದಿನ ಜನ್ಮದಲ್ಲೂ ಸಾಧ್ಯ ಇಲ್ಲ ಎಂದರು.

ರಾಜ್ಯಪಾಲರಿಂದ ಸಂವಿಧಾನ ವಿರೋಧಿ ನಡೆ
ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಆಯ್ಕೆಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ನೊಟೀಸ್‌ ನೀಡುವ ಮೂಲಕ ರಾಜ್ಯಪಾಲರು ಸಂವಿಧಾನ ವಿರೋಧಿ ನಡೆ ಅನುಸರಿಸಿದ್ದಾರೆ. ಆದ್ದರಿಂದ ರಾಜ್ಯಪಾಲರು ತತ್‌ಕ್ಷಣ ನೋಟಿಸನ್ನು ಹಿಂಪಡೆಯಬೇಕು. ಇಲ್ಲವಾದರೆ ಕಾನೂನು ಹೋರಾಟದ ಜತೆಗೆ ಬೀದಿಗಿಳಿದೂ ಹೋರಾಟ ಮಾಡಲಿದ್ದೇವೆ ಎಂದು ಐವನ್‌ ಡಿ’ಸೋಜಾ ಹೇಳಿದರು.

ಸೈಟ್‌ ನೀಡಿರುವುದು ಬಿಜೆಪಿ ಅವಧಿಯಲ್ಲಿ
ಮುಡಾ ಪ್ರಕರಣದಲ್ಲಿ ಜಾಗ ಕಳೆದುಕೊಂಡಿದ್ದ ಸಿದ್ದರಾಮಯ್ಯ ಅವರ ಪತ್ನಿಗೆ ಸೈಟ್‌ ನೀಡಿರುವುದು ಬಿಜೆಪಿ ಅವಧಿಯಲ್ಲಿ. ಒಂದು ವೇಳೆ ಅಕ್ರಮ ಆಗಿದೆ ಎಂದಾದರೆ ನೋಟಿಸ್‌ ನೀಡಬೇಕಿರುವುದು ಸಿದ್ಧರಾಮಯ್ಯರ ಪತ್ನಿಗೆ, ಮುಡಾ ಅಧಿಕಾರಿಗಳಿಗೆ ಹಾಗೂ ಆ ಅವಧಿಯಲ್ಲಿ ಅಧಿಕಾರದಲ್ಲಿದ್ದವರಿಗೆ. ಅದು ಬಿಟ್ಟು ಕೇಂದ್ರ ಸರಕಾರದ ಅಣತಿಯಂತೆ ಕಾನೂನು ಪರಿಮಿತಿ ತಿಳಿಯದೆ ರಾಜ್ಯಪಾಲರು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಖಂಡರಾದ ಎಂ.ಶಶಿಧರ್‌ ಹೆಗ್ಡೆ, ಅಶ್ರಫ್ ಕೆ., ಪ್ರಕಾಶ್‌ ಸಾಲಿಯಾನ್‌, ಅಪ್ಪಿ, ಕಿರಣ್‌ ಬುಡ್ಲೆಗುತ್ತು, ಸತೀಶ್‌ ಪೆಂಗಲ್‌, ಭಾಸ್ಕರ ರಾವ್‌, ಪ್ರೇಮನಾಥ್‌, ಮೀನಾ ಟೆಲ್ಲಿಸ್‌, ವಿಕಾಸ್‌ ಶೆಟ್ಟಿ, ಇಮ್ರಾನ್‌, ಅಬ್ದುಲ್‌ ಸಲೀಂ ಮೊದಲಾದವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-aaa

Haryana; ಭರ್ಜರಿ ಪ್ರಚಾರ ಆರಂಭಿಸಿದ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್

Vijayapura; ಯಾರನ್ನೂ ತೆಗೆದು ಸಿಎಂ ಆಗುವ ಆಸೆ ನಮ್ಮಲ್ಲಿ ಇಲ್ಲ: ಎಂ.ಬಿ.ಪಾಟೀಲ್

Vijayapura; ಯಾರನ್ನೂ ತೆಗೆದು ಸಿಎಂ ಆಗುವ ಆಸೆ ನಮ್ಮಲ್ಲಿ ಇಲ್ಲ: ಎಂ.ಬಿ.ಪಾಟೀಲ್

22-food

UV Fusion: ಬನ್ನಿ ಅಡುಗೆ ಮಾಡೋಣ!

Bihar: ಯೂಟ್ಯೂಬ್‌ ನೋಡಿ ಶಸ್ತ್ರ ಚಿಕಿತ್ಸೆ: ನಕಲಿ ವೈದ್ಯನ ಸಾಹಸಕ್ಕೆ 15ರ ಬಾಲಕ ಬಲಿ

Bihar: ಯೂಟ್ಯೂಬ್‌ ನೋಡಿ ಶಸ್ತ್ರ ಚಿಕಿತ್ಸೆ: ನಕಲಿ ವೈದ್ಯನ ಸಾಹಸಕ್ಕೆ 15ರ ಬಾಲಕ ಬಲಿ

1-

Udupi; ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ; ಸವಾರ ಗಂಭೀರ

21-uv-fusion

UV Fusion: ನೆನಪುಗಳನ್ನು ಹಸಿರಾಗಿಸುವ ಮಳೆ

Kolkata hospital Case; ಮಮತಾ ಸರ್ಕಾರದ ಕ್ರಮ ವಿರೋಧಿಸಿ ಟಿಎಂಸಿ ಸಂಸದ ಜವಾಹರ್ ರಾಜೀನಾಮೆ

Kolkata hospital Case; ಮಮತಾ ಸರ್ಕಾರದ ಕ್ರಮ ವಿರೋಧಿಸಿ ಟಿಎಂಸಿ ಸಂಸದ ಜವಾಹರ್ ರಾಜೀನಾಮೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drinking Water198 ಕೋ.ರೂ.ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆ: ಇಂದು ಪ್ರಾಯೋಗಿಕ ಚಾಲನೆ

Drinking Water198 ಕೋ.ರೂ.ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆ: ಇಂದು ಪ್ರಾಯೋಗಿಕ ಚಾಲನೆ

ಈಗ ಮಂಗಳೂರಿನ ಗಾಳಿಯೂ ಕಲುಷಿತ! ಬೆಂಗಳೂರು, ಮೈಸೂರಿನಲ್ಲೂ ಮಾಲಿನ್ಯ ಅಪಾಯಕಾರಿ ಮಟ್ಟದಲ್ಲಿ

ಈಗ ಮಂಗಳೂರಿನ ಗಾಳಿಯೂ ಕಲುಷಿತ! ಬೆಂಗಳೂರು, ಮೈಸೂರಿನಲ್ಲೂ ಮಾಲಿನ್ಯ ಅಪಾಯಕಾರಿ ಮಟ್ಟದಲ್ಲಿ

Surathkal ನಾಲ್ಕು ತಿಂಗಳ ಮಗುವಿಗೆ ಥೈರಾಯ್ಡ್ ಎಂದ ವೈದ್ಯರು!

Surathkal ನಾಲ್ಕು ತಿಂಗಳ ಮಗುವಿಗೆ ಥೈರಾಯ್ಡ್ ಎಂದ ವೈದ್ಯರು!

Rain ಕರಾವಳಿಯಲ್ಲಿ ಎಲ್ಲೋ ಅಲರ್ಟ್‌

Rain ಕರಾವಳಿಯಲ್ಲಿ ಎಲ್ಲೋ ಅಲರ್ಟ್‌

Campco ಸದಸ್ಯತ್ವ ಚೀಟಿ ದುರ್ಬಳಕೆ ಮಾಡಿ ಕಳಪೆ ಅಡಿಕೆ ಮಾರಾಟ ಯತ್ನ

Campco ಸದಸ್ಯತ್ವ ಚೀಟಿ ದುರ್ಬಳಕೆ ಮಾಡಿ ಕಳಪೆ ಅಡಿಕೆ ಮಾರಾಟ ಯತ್ನ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

1-aaa

Haryana; ಭರ್ಜರಿ ಪ್ರಚಾರ ಆರಂಭಿಸಿದ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್

9

Kota: ಗರಿಕೆಮಠ ಕ್ಷೇತ್ರದಲ್ಲಿ ಅದ್ದೂರಿ ಗಣೇಶ ಚತುರ್ಥಿ ಸಂಪನ್ನ

Vijayapura; ಯಾರನ್ನೂ ತೆಗೆದು ಸಿಎಂ ಆಗುವ ಆಸೆ ನಮ್ಮಲ್ಲಿ ಇಲ್ಲ: ಎಂ.ಬಿ.ಪಾಟೀಲ್

Vijayapura; ಯಾರನ್ನೂ ತೆಗೆದು ಸಿಎಂ ಆಗುವ ಆಸೆ ನಮ್ಮಲ್ಲಿ ಇಲ್ಲ: ಎಂ.ಬಿ.ಪಾಟೀಲ್

22-food

UV Fusion: ಬನ್ನಿ ಅಡುಗೆ ಮಾಡೋಣ!

Bihar: ಯೂಟ್ಯೂಬ್‌ ನೋಡಿ ಶಸ್ತ್ರ ಚಿಕಿತ್ಸೆ: ನಕಲಿ ವೈದ್ಯನ ಸಾಹಸಕ್ಕೆ 15ರ ಬಾಲಕ ಬಲಿ

Bihar: ಯೂಟ್ಯೂಬ್‌ ನೋಡಿ ಶಸ್ತ್ರ ಚಿಕಿತ್ಸೆ: ನಕಲಿ ವೈದ್ಯನ ಸಾಹಸಕ್ಕೆ 15ರ ಬಾಲಕ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.