2ನೇ ಅಲೆಯಿಂದ ಕಲಿತ ಪಾಠಗಳನ್ನು ಮರೆಯಬಾರದು

Team Udayavani, Jun 7, 2021, 6:55 AM IST

2ನೇ ಅಲೆಯಿಂದ ಕಲಿತ ಪಾಠಗಳನ್ನು ಮರೆಯಬಾರದು

ಆಸ್ಪತ್ರೆಗಳಲ್ಲಿ ಕೊರೊನಾದ ರೋಗಿಗಳಿಗೆ ನ್ಯೂನತೆ ಇಲ್ಲದೆ ಚಿಕಿತ್ಸೆಯ ದೊರೆಯುವಂತೆ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಬೇಕಿದೆ. ಹಾಸಿಗೆಗಳಿಗಾಗಿ, ಆಮ್ಲಜನಕಕ್ಕೆ ಅಥವಾ ವೆಂಟಿಲೇಟರ್‌ಗಳಿಗಾಗಿ ರೋಗಿಗಳು ಪರದಾಡುವಂತಾಗಬಾರದು. ಹೆಚ್ಚಿನ ಕಡೆ ಸರಕಾರಗಳು ಇವುಗಳ ಸಿದ್ಧತೆಯಲ್ಲಿವೆ.

ನಮ್ಮಲ್ಲಿ ಕೊರೊನಾದ ಎರಡನೇ ಅಲೆಯ ತೀವ್ರತೆಯು ಕಡಿಮೆ ಯಾಗುತ್ತಿದೆ. ಜುಲೈ ತಿಂಗಳ ಕೊನೆಗೆ ಇದರ ಪ್ರಭಾವ ನಮ್ಮ ದೇಶದಲ್ಲಿ ಕೊನೆಗೊಳ್ಳಬಹುದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದಾದ 6 ರಿಂದ 8 ತಿಂಗಳ ಬಳಿಕ ಮೂರನೇ ಅಲೆ ಕಾಣಿಸಿಕೊಳ್ಳಬಹುದೆಂದು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲು ಸಲಹೆ ನೀಡಲಾಗಿದೆ. ಈ ಎರಡನೇ ಅಲೆಯು ನಮಗೆ ಕಲಿಸಿರುವ ಪಾಠಗಳನ್ನು ಎಂದಿಗೂ ಮರೆಯಬಾರದು.

ಕಳೆದ ಸೆಪ್ಟಂಬರ್‌ ತಿಂಗಳ ಮಧ್ಯ ಭಾಗದಿಂದ ದೇಶದಲ್ಲಿ ಕೊರೊನಾದ ಮೊದಲನೇ ಅಲೆ ಇಳಿಮುಖವಾಗಿ ಡಿಸೆಂಬರ್‌ ತಿಂಗಳ ಕೊನೆಗೆ ಕೊರೊನಾ ದಿಂದ ನಾವು ಶಾಶ್ವತವಾಗಿ ಮುಕ್ತ ರಾದೆವೆಂದು ಭಾವಿಸಿದ್ದೆವು. ಆ ಸಮಯದಲ್ಲಿ ವಿದೇಶಗಳಲ್ಲಿ ಎರಡನೇ ಅಲೆಯು ಉತ್ತುಂಗದಲ್ಲಿದ್ದು, ಮೊದಲನೇ ಅಲೆಗಿಂತ ಕ್ರೂರವಾಗಿ ಉಪಟಳ ಕೊಡುತ್ತಿದ್ದರೂ ನಮ್ಮನ್ನು ಅದು ಎಚ್ಚರಿಸಲಿಲ್ಲ. ಎರಡನೇ ಅಲೆ ನಮ್ಮನ್ನು ಆವರಿಸಿಕೊಳ್ಳಲಾರದೆಂಬ ಭ್ರಮೆ ನಮ್ಮನ್ನು ಪೂರ್ತಿಯಾಗಿ ಕತ್ತಲೆಯಲ್ಲಿ ಇರಿಸಿತು. ನಾವು ಯಾವುದೇ ತಯಾರಿ ಮಾಡಿರಲಿಲ್ಲ. ಮಾಸ್ಕ್ ಧರಿಸುವುದು, ಬಹಳ ಜನ ಸೇರದಿರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಇತ್ಯಾದಿ ಮೂಲ ಸೂತ್ರಗಳನ್ನು ಮರೆತೇ ಬಿಟ್ಟೆವು. ಹಾಗಾಗಿ ಸಂಕಷ್ಟ ಅನುಭವಿಸಬೇಕಾಯಿತು. ವಿದೇಶಗಳಲ್ಲಿ ಮೂರನೇ ಅಲೆಯು ಕೊರೊನಾದ ಎರಡನೇ ಅಲೆಗಿಂತ ಮಾರಕವಾಗಿತ್ತು. ವಿದೇಶಗಳಲ್ಲಿ ಅದೂ ಈಗ ಕುಗ್ಗತೊಡಗಿದೆ. ಕೊರೊನಾ ವೈರಾಣುವಿನ ಈ ಸಾಂಕ್ರಾಮಿಕ ಪಿಡುಗು ಮೂರನೇ ಅಲೆಗೆ ಕೊನೆಗೊಳ್ಳುತ್ತದೆಯೋ ಅಥವಾ ಮುಂದೆಯೂ ಅಲೆ ಅಲೆಯಾಗಿ ಕಾಡಬಹುದೋ ಎಂಬುದನ್ನು ಇನ್ನೂ ಕಾದು ನೋಡಬೇಕಿದೆ.

ಇದುವರೆಗೆ ಅಷ್ಟೊಂದು ಬಾಧಿಸದ 18 ವರ್ಷ ವಯಸ್ಸಿಗಿಂತ ಕೆಳಗಿನವರನ್ನು ಮೂರನೇ ಅಲೆ ಕಾಡೀತೆಂಬ ಭೀತಿ ಇದೆ. ಅವರಿಗೆ ಸೋಂಕಿನಿಂದ ತೊಂದರೆಯಾಗುವುದಕ್ಕಿಂತ ಅವರು ಇತರರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಪರೋಕ್ಷವಾಗಿ ಎಲ್ಲ ವಯಸ್ಸಿನವರಿಗೂ ನೋವು ಬಾಧಿಸಬಹುದು.

ಈ ಹಿನ್ನೆಲೆಯಲ್ಲಿ ನಾವೀಗ ಸೂಕ್ತವಾದ ತಯಾರಿ ಮಾಡಬೇಕಿದೆ. ಆಸ್ಪತ್ರೆಗಳಲ್ಲಿ ಕೊರೊನಾದ ರೋಗಿಗಳಿಗೆ ನ್ಯೂನತೆ ಇಲ್ಲದೆ ಚಿಕಿತ್ಸೆಯು ದೊರೆಯುವಂತೆ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಬೇಕಿದೆ. ಹಾಸಿಗೆಗಳಿಗಾಗಿ, ಆಮ್ಲಜನಕಕ್ಕೆ ಅಥವಾ ವೆಂಟಿಲೇಟರ್‌ಗಳಿಗಾಗಿ ರೋಗಿಗಳು ಪರದಾಡುವಂತಾಗಬಾರದು. ಹೆಚ್ಚಿನ ಕಡೆ ಸರಕಾರಗಳು ಇವುಗಳ ಸಿದ್ಧತೆಯಲ್ಲಿವೆ.

ಕೊರೊನಾ ವೈರಾಣುವಿನ ವಿರುದ್ಧ ಈಗ ಲಸಿಕೆ ಲಭ್ಯವಿದೆ. ವಿದೇಶಗಳಲ್ಲಿ ಕೊರೊನಾದ ಮೂರನೇ ಅಲೆಯು ಶೀಘ್ರವಾಗಿ ಕೊನೆಗೊಳ್ಳಲು ಲಸಿಕೆಯ ಬಳಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ನಮ್ಮಲ್ಲೂ ಕೊರೊನಾದ ಮೊದಲನೇ ಅಲೆಯ ಅನಂತರ ಲಸಿಕೆ ಪಡೆದವರಲ್ಲಿ ಹೆಚ್ಚಿನವರಿಗೆ ಎರಡನೇ ಅಲೆಯಲ್ಲಿ ಹಾನಿಯಾಗಲಿಲ್ಲ. ಕರ್ನಾಟಕದಲ್ಲಿ ಕಳೆದ ಡಿಸೆಂಬರ್‌ ಕೊನೆಗೆ 12,585 ಮಂದಿ ಕೊರೊನಾದಿಂದ ಅಸುನೀಗಿದ್ದು ಅವರಲ್ಲಿ 329 ಮಂದಿ ವೈದ್ಯರಿದ್ದರು. ಎರಡನೇ ಅಲೆಯ ಪ್ರಭಾವ ಆರಂಭವಾಗುವ ಮೊದಲೇ ವೈದ್ಯರಿಗೆ ಕೊರೊನಾ ಲಸಿಕೆ ಪಡೆಯಲು ಸಾಧ್ಯವಾಯಿತು. ಎರಡನೇ ಅಲೆಯಲ್ಲಿ ಕರ್ನಾಟಕದಲ್ಲಿ 17,946 ಮಂದಿ ಇಂದಿನವರೆಗೆ ಮೃತಪಟ್ಟಿದ್ದು ಇವರಲ್ಲಿ ವೈದ್ಯರು 8 ಮಂದಿ ಮಾತ್ರ. ಸೂಕ್ತ ಸಮಯದಲ್ಲಿ ಲಸಿಕೆ ಹಾಕಿಸಿಕೊಂಡದ್ದೇ ಇದಕ್ಕೆ ಕಾರಣ. ಲಸಿಕೆ ಪಡೆದ ವೈದ್ಯರಲ್ಲಿ ಹಲವರಿಗೆ ಸೋಂಕು ತಗಲಿತ್ತಾ ದರೂ ತೀವ್ರವಾದ ಕಾಯಿಲೆಗೆ ತುತ್ತಾದವರು ಕೆಲವೇ ಮಂದಿ. ಲಸಿಕೆಯು ಪ್ರಭಾವಶಾಲಿ ಎಂಬುದಕ್ಕೆ ಇದೊಂದೇ ಉದಾಹರಣೆ.

ಪ್ರಸ್ತುತ 18 ವಯಸ್ಸಿನ ಮೇಲಿನವರಿಗೆಲ್ಲ ಲಸಿಕೆ ಕೊಡಲಾಗುತ್ತದೆ. ಮುಂದೆ ಮಕ್ಕಳಿಗೂ ಲಸಿಕೆ ದೊರೆಯಲಿದೆ. ಲಸಿಕೆಯ ಬಗ್ಗೆ ಇಲ್ಲ-ಸಲ್ಲದ ಮಾಹಿತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಕಾರಣ, ಅನೇಕರು ಲಭ್ಯವಿದ್ದರೂ ಹಾಕಿಸಿಕೊಳ್ಳಲಿಲ್ಲ. ನಮ್ಮ ದೇಶದಲ್ಲಿ ಈಗ ಕೊಡಲಾಗುತ್ತಿರುವ ಲಸಿಕೆಗಳು ಉತ್ತಮ ವಾಗಿದ್ದು, ಸದ್ಯಕ್ಕೆ ಕೊರೊನಾ ಸೋಂಕಿನ ಅನಾಹುತಗಳಿಂದ ರಕ್ಷಣೆ ಕೊಡುತ್ತವೆ ಎಂಬುದು ಸಾಬೀತಾಗಿದೆ. ನಮ್ಮ ಜಿಲ್ಲೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ, ಮೆಡಿಕಲ್‌ ಕಾಲೇಜುಗಳಲ್ಲಿ ಲಸಿಕೆಯನ್ನು ಕೊಡಲಾಗುತ್ತದೆ.

ಆರೋಗ್ಯದ ಸಮಸ್ಯೆ ಇದ್ದವರಿಗೆ ಕೊರೊನಾ ಸೋಂಕು ಹೆಚ್ಚು ಅಪಾಯ ಕಾರಿ. ಆದುದರಿಂದ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯ, ಮೂತ್ರ ಜನಕಾಂಗ ನಮಸ್ಯೆ ಮುಂತಾದ ಕಾಯಿಲೆಗಳಿಂದ ಬಳಲುತ್ತಿರುವವರು ಯಾವುದೇ ಹಿಂಜರಿಕೆ ಇಲ್ಲದೆ ಮೊದಲು ಲಸಿಕೆ ಪಡೆಯಬೇಕು. ನಮ್ಮ ಜಿಲ್ಲೆಗಳಲ್ಲಿ ಸಾವಿರಾರು ಮಂದಿ ಲಸಿಕೆ ಹಾಕಿಸಿ ಕೊಂಡಿದ್ದಾರೆ. ಇವರಲ್ಲಿ ಆರೋಗ್ಯದ ಸಮಸ್ಯೆ ಇದ್ದವರು ಅನೇಕ ಮಂದಿ ಇದ್ದರೂ ಯಾರಿಗೂ ಅನಾಹುತವಾಗಿಲ್ಲ.

ನಾವು ಮೂರನೇ ಅಲೆಯ ನಿರೀಕ್ಷಣೆಯಲ್ಲೇ ಮುಂದಿನ ಕೆಲವು ತಿಂಗಳು ಇರಬೇಕಾಗಿದೆ. ಮೂರನೇ ಅಲೆಯು ಯಾವುದೇ ಮುನ್ಸೂಚನೆ ಇಲ್ಲದೆ ಬರಬಹುದು. ತಜ್ಞರು ಸೂಚಿಸುವವರೆಗೆ ನಾವು ನಮ್ಮ ರಕ್ಷಣೆಯನ್ನು ಮಾಡಬೇಕಾಗಿದೆ. ಮುಖ್ಯವಾಗಿ ಮನೆಯಲ್ಲೇ ಇರುವುದು, ಮನೆಯಿಂದ ಹೊರಗೆ ಹೋಗಲೇ ಬೇಕಾದಾಗ ಮಾಸ್ಕ್ ಧರಿಸುವುದು, ಅನೇಕ ಮಂದಿ ಸೇರುವಂತಹ ಸನ್ನಿವೇಶಗಳನ್ನು ತಪ್ಪಿಸುವುದು, ಮಾರ್ಕೆಟ್‌, ಮಾಲ್‌, ಅಂಗಡಿ ಮುಂತಾದ ಜನ ಸೇರುವ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಅಗತ್ಯವಾಗಿದೆ. ಕೊರೊನಾ ವೈರಸ್‌ನ ಹಾವಳಿ ಕಡಿಮೆಯಾಗುವ ತನಕ ನಾವು ಮುಂಜಾಗ್ರತೆ ವಹಿಸಬೇಕಾಗಿದೆ. ಸ್ವಲ್ಪ ಅಜಾಗರೂಕತೆಗೆ ಬಹಳ ಬೆಲೆ ತೆರ ಬೇಕಾಗಬಹುದೆಂಬ ಎಚ್ಚರ ನಮಗಿರಲಿ.

- ಡಾ| ಎಡ್ವರ್ಡ್‌ ಎಲ್‌. ನಜ್ರೆತ್‌, ಆಥೊìಪೆಡಿಕ್‌ ಸರ್ಜರಿ ವಿಭಾಗದ ಪ್ರೊಫೆಸರ್‌, ಕಣಚೂರು ಮೆಡಿಕಲ್‌ ಕಾಲೇಜು, ನಾಟೆಕಲ್‌, ಮಂಗಳೂರು

ಟಾಪ್ ನ್ಯೂಸ್

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

Lok Sabha Election; ಕಾಂಗ್ರೆಸ್‌ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

OBC ವರ್ಗಕ್ಕೆ ಕಾಂಗ್ರೆಸ್‌ನಿಂದ ಅನ್ಯಾಯ: ಸುನಿಲ್‌ ಕುಮಾರ್‌

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ

ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್‌ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.