Live Updates::ಲೋಕಸಮರ: ಮೂರನೇ ಹಂತದಲ್ಲಿ ದೇಶಾದ್ಯಂತ 51.41% ಮತದಾನ
Team Udayavani, Apr 23, 2019, 10:37 AM IST
ಉತ್ತರ ಕರ್ನಾಟಕ: ಪ್ರಜಾಪ್ರಭುತ್ವದ ಅತೀ ದೊಡ್ಡ 2ನೇ ಹಂತದ ಮತ ಸಂಭ್ರಮ ಉತ್ತರಾರ್ಧದ 14 ಲೋಕಸಭಾ ಕ್ಷೇತ್ರಗಳಲ್ಲಿ ಮಂಗಳವಾರ ಬೆಳಗ್ಗೆ 7ಗಂಟೆಯಿಂದ ಆರಂಭವಾಗಿದೆ. ಕರ್ನಾಟಕ ಸೇರಿದಂತೆ ದೇಶದ 157 ಲೋಕಸಭಾ ಕ್ಷೇತ್ರಗಳಲ್ಲಿಯೂ ಮತದಾನ ನಡೆಯುತ್ತಿದೆ. ಕೆಲವು ಕಡೆ ಇವಿಎಂಗಳಲ್ಲಿ ದೋಷ ಕಂಡುಬಂದಿದ್ದರಿಂದ ಮತದಾನ ಸ್ಥಗಿತಗೊಂಡಿದೆ.
ಮಧ್ಯಾಹ್ನ 04 ಗಂಟೆಯವರೆಗಿನ ಲೆಕ್ಕಾಚಾರದಂತೆ ದೇಶಾದ್ಯಂತ 51.41% ಮತದಾನ ದಾಖಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಮತದಾರರ ಉತ್ಸಾಹದ ಪಾಲ್ಗೊಳ್ಳುವಿಕೆಯಿಂದ 68.25% ಮತದಾನವಾಗಿದ್ದರೆ ಅಸ್ಸಾಂನಲ್ಲಿ 62.13% ಮತದಾನವಾಗಿದೆ. ಜಮ್ಮು-ಕಾಶ್ಮೀರದಲ್ಲಿ ಅತೀ ಕಡಿಮೆ ಅಂದರೆ 11.22% ಮತದಾನವಾಗಿದೆ. ಇನ್ನುಳಿದಂತೆ ಉತ್ತರಪ್ರದೇಶದಲ್ಲಿ 47.41%, ಮಹಾರಾಷ್ಟ್ರದಲ್ಲಿ 44.63%, ದಾದ್ರಾ ಮತ್ತು ನಗರ ಹವೇಲಿಗಳಲ್ಲಿ 56.81%, ಛತ್ತೀಸ್ ಗಢದಲ್ಲಿ 55.29%, ಗುಜರಾತ್ ನಲ್ಲಿ 50.34%, ಕರ್ನಾಟಕದಲ್ಲಿ 50.03% ಮತದಾನವಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಇನ್ನು ಬಿಹಾರದಲ್ಲಿ 46.94%, ಗೋವಾದಲ್ಲಿ 58.92%, ಕೇರಳದಲ್ಲಿ 55.95%, ಒಡಿಸ್ಸಾದಲ್ಲಿ 46.44%, ತ್ರಿಪುರಾದಲ್ಲಿ 66.25% ಹಾಗೂ ದಾಮನ್ ಮತ್ತು ದಿಯೂನಲ್ಲಿ 55.02% ಮತದಾನವಾಗಿದೆ.
ಮಧ್ಯಾಹ್ನ 03 ಗಂಟೆಯವರೆಗಿನ ವರದಿಗಳ ಪ್ರಕಾರ ಶಿವಮೊಗ್ಗದಲ್ಲಿ 54.88% ಮತದಾನವಾಗಿದೆ. ಇನ್ನುಳಿದಂತೆ, ಬಳ್ಳಾರಿಯಲ್ಲಿ 51.86%, ಉತ್ತರ ಕನ್ನಡದಲ್ಲಿ 53.48%, ಚಿಕ್ಕೋಡಿ 53.50%, ಧಾರವಾಡದಲ್ಲಿ 51.59% ಮತದಾನವಾಗಿದೆ. ಹಾವೇರಿಯಲ್ಲಿ 50.24% ಹಾಗೂ ಗುಲ್ಬರ್ಗಾದಲ್ಲಿ 42.01% ಮತದಾನವಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಇನ್ನುಳಿದಂತೆ ಬೆಳಗಾವಿ 48.66%, ಬಾಗಲಕೋಟೆ 52.09%, ಬಿಜಾಪುರ 43.83%, ರಾಯಚೂರು 44.86%, ಬೀದರ್ 47.07%, ಕೊಪ್ಪಳ 52.17%, ದಾವಣಗೆರೆ 53.90% ಮತದಾನವಾಗಿದೆ.
ರಾಜ್ಯ ಹಾಗೂ ದೇಶದ ಮತದಾನ ಪ್ರಕ್ರಿಯೆಯ ಹೈಲೈಟ್ಸ್ ನ ಕ್ಷಣ, ಕ್ಷಣದ ಮಾಹಿತಿ ಇಲ್ಲಿದೆ…
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?