ಸೋತರೂ ಈ ಮೂವರಿಗಂತೂ ಮಂತ್ರಿ ಸ್ಥಾನ

ರಮೇಶ್‌, ವಿಶ್ವನಾಥ್‌, ಎಂಟಿಬಿಗೆ ಸಚಿವ ಸ್ಥಾನ ಖಾತ್ರಿ ಸಾಧ್ಯತೆ' ಸೋತರೆ ಪರಿಷತ್‌ಗೆ ಕಳುಹಿಸಿ ಮಂತ್ರಿ ಮಾಡುವ ಸಂಭವ

Team Udayavani, Dec 7, 2019, 6:30 AM IST

ಬೆಂಗಳೂರು: ಉಪಚುನಾವಣೆಯಲ್ಲಿ ಎರಡಂಕಿ ಸ್ಥಾನ ಗೆದ್ದು ಸರ್ಕಾರ ಸುಭದ್ರಗೊಳಿಸುವ ವಿಶ್ವಾಸದಲ್ಲಿರುವ ಬಿಜೆಪಿ, ಆಯ್ದ ಪ್ರಮುಖ ಕ್ಷೇತ್ರಗಳಲ್ಲಿ ವ್ಯತಿರಿಕ್ತ ಫ‌ಲಿತಾಂಶ ಬಂದರೂ ಆ ಅಭ್ಯರ್ಥಿಗಳನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ ಸಚಿವ ಸ್ಥಾನ ನೀಡುವುದು ಖಚಿತ! ಹಿಂದಿನ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವನ್ನು “ಅತೃಪ್ತಿ’ ಆಧಾರದಲ್ಲಿ ಪತನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹುಣಸೂರಿನ ಎಚ್‌. ವಿಶ್ವನಾಥ್‌, ಗೋಕಾಕ್‌ನ ರಮೇಶ್‌ ಜಾರಕಿಹೊಳಿ ಮತ್ತು ಹೊಸಕೋಟೆಯ ಎಂ.ಟಿ. ಬಿ. ನಾಗರಾಜ್‌ಗೆ ಸಚಿವ ಸ್ಥಾನ ಗ್ಯಾರಂಟಿ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಹಿರಿಯ ನಾಯಕರ ಹಂತದಲ್ಲಿ ಚರ್ಚೆಯಾಗಿದೆ. ಅಷ್ಟೇ ಅಲ್ಲ, ಕೆ.ಆರ್‌.ಪೇಟೆಯ ನಾರಾಯಣಗೌಡರು ಪರಾಭವಗೊಂಡರೂ ಮಂತ್ರಿ ಸ್ಥಾನ ನೀಡಲಾಗುತ್ತದೆ ಎಂದು ಬಲ್ಲ ಮೂಲಗಳು ಹೇಳಿವೆ.ಜತೆಗೆ ವಿಶ್ವನಾಥ್‌, ರಮೇಶ್‌ ಜಾರಕಿಹೊಳಿ ಮತ್ತು ಎಂಟಿಬಿಗೆ ಮಾಜಿ ಪ್ರಧಾನಿ ಎಚ್‌.ಡಿ.
ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಸಮರ್ಥವಾಗಿ ಎದುರಿಸುವ, ಮಾತಿನಲ್ಲೇ ಹಣಿಯುವ ಚಾಕಚಕ್ಯತೆ ಇರುವುದರಿಂದ ಅದನ್ನು ಬಳಸಿಕೊಳ್ಳುವುದೂ ಹಿರಿಯ ನಾಯಕರ ಲೆಕ್ಕಾಚಾರವಾಗಿದೆ.

ಲಾಬಿ ಶುರು: ಇತ್ತ ಹಿರಿಯ ನಾಯಕರು ಸೋಲು-
ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದರೆ, ಸಚಿವ ಸ್ಥಾನ ಹಾಗೂ ಇತರೆ ಸ್ಥಾನಮಾನದ ಆಕಾಂಕ್ಷಿಗಳು ಲಾಬಿ ಶುರು ಮಾಡಲು ಅಣಿಯಾಗುತ್ತಿದ್ದಾರೆ. ಅದರ ಜತೆಯಲ್ಲೇ ಅನರ್ಹ ಶಾಸಕರ ಹಿತ ಕಾಪಾಡುವ ವಾಗ್ಧಾನ ಪಾಲನೆ ಬಗ್ಗೆಯೂ
ಮಾತುಕತೆ ಶುರುವಾಗಿದೆ.

ಉಪಚುನಾವಣೆಯಲ್ಲಿ 9ರಿಂದ 10 ಸ್ಥಾನ ಗೆಲ್ಲುವ ವಿಶ್ವಾಸ ಬಿಜೆಪಿ ನಾಯಕರಲ್ಲಿದೆ. ಹುಣಸೂರು, ಕೆ.ಆರ್‌.ಪೇಟೆ, ಕಾಗವಾಡ, ಹೊಸಕೋಟೆ, ರಾಣಿಬೆನ್ನೂರು ಸೇರಿದಂತೆ ಕೆಲವೆಡೆ ತೀವ್ರ ಹಣಾಹಣಿ ನಡೆಯುವ ಸಾಧ್ಯತೆಯಿದ್ದು, ಯಾರೇ ಗೆದ್ದರೂ ಗೆಲುವಿನ ಅಂತರ ಕಡಿಮೆ ಎಂಬ
ಮಾತುಗಳಿವೆ.

ಕತ್ತಿಗೂ ಸ್ಥಾನ: ಪರಿಷತ್‌ನ ಹಲವು ಬಿಜೆಪಿ ಸದಸ್ಯರ ಅವಧಿ ಜೂನ್‌ಗೆ ಮುಕ್ತಾಯವಾಗಲಿದೆ. ಅಲ್ಲಿಯವರೆಗೆ ನಿರೀಕ್ಷಿಸಿ ಆಯ್ದ ಮಂದಿಯನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಿ ಮುಂದೆ ಸ್ಥಾನಮಾನ ನೀಡಬಹುದು. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಮೇಲ್ಮನೆಗೆ ಆಯ್ಕೆಯಾದರಷ್ಟೇ ಆ ಸ್ಥಾನದಲ್ಲಿ ಉಳಿಯಲಿದ್ದಾರೆ. ಎಂಟು ಬಾರಿ ಗೆದ್ದಿರುವ ಉಮೇಶ್‌ ಕತ್ತಿಯವರನ್ನು ಸಚಿವರನ್ನಾಗಿ ಮಾಡಬೇಕು ಎಂಬ ಚಿಂತನೆಯೂ ಇದೆ.

ಸಚಿವ ಸ್ಥಾನಕ್ಕೆ 11 ಮಂದಿ ಪರಿಗಣನೆ
ಉಪಚುನಾವಣೆ ನಡೆದ 15 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಷ್ಟೇ ಅನರ್ಹ ಶಾಸಕರು ಸ್ಪರ್ಧಿಸಿದ್ದಾರೆ.
ಶಿವಾಜಿನಗರ ಕ್ಷೇತ್ರದಿಂದ ಸ್ಪರ್ಧಿಸಿರುವ ಶರವಣ, ರಾಣಿಬೆನ್ನೂರಿನಿಂದ ಸ್ಪರ್ಧಿಸಿರುವ ಅರುಣ್‌ ಕುಮಾರ್‌
ಪೂಜಾರ್‌ ಅವರು ಒಂದೊಮ್ಮೆ ಗೆದ್ದರೂ ಸಚಿವರಾಗುವ ಸಾಧ್ಯತೆ ಕಡಿಮೆ. ಹಾಗಾಗಿ ಸಚಿವ ಸ್ಥಾನಕ್ಕೆ 11
ಮಂದಿಯನ್ನಷ್ಟೇ ಪರಿಗಣಿಸಬಹುದು. ಅದರಲ್ಲೂ ಕಡಿಮೆ ಬಾರಿ ಗೆದ್ದವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸದೆ
ಪ್ರಭಾವಿ ನಿಗಮ- ಮಂಡಳಿ ಅಧ್ಯಕ್ಷಗಿರಿ ಇಲ್ಲವೇ ಇತರೆ ಸ್ಥಾನಮಾನ ನೀಡಿ ಸಮಾಧಾನಪಡಿಸಬಹುದು.
ಆರ್‌.ಶಂಕರ್‌ಗೆ ಯಡಿಯೂರಪ್ಪನವರೇ ಸಚಿವ ಸ್ಥಾನದ ಭರವಸೆ ನೀಡಿರುವುದರಿಂದ, ಅವರನ್ನು
ಪರಿಷತ್‌ಗೆ ಕಳುಹಿಸಿ ಮಂತ್ರಿ ಪದವಿ ನೀಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಎಂ. ಕೀರ್ತಿಪ್ರಸಾದ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ