August15:ದೊಡ್ಡವರ ಗೋಳು-ಬರೋಡಾ ಮಹಾರಾಣಿ ರಾಧಿಕಾರಾಜೆಗೆ ಪಾತ್ರೆ ಮಾರುವ ಸ್ಥಿತಿ ಬಂದಿತ್ತೇ?

ಕೆಲವರು ತಮ್ಮ ಅರಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಿದ್ದರು...

Team Udayavani, Aug 14, 2024, 1:11 PM IST

August15:ದೊಡ್ಡವರ ಗೋಳು-ಬರೋಡಾ ಮಹಾರಾಣಿ ರಾಧಿಕಾರಾಜೆಗೆ ಪಾತ್ರೆ ಮಾರುವ ಸ್ಥಿತಿ ಬಂದಿತ್ತೇ?

ಸ್ವಾತಂತ್ರ್ಯ ಸಿಕ್ಕಾಗ ಭಾರತದ ನಡುವೆ 560ಕ್ಕೂ ಹೆಚ್ಚು ಚಿಕ್ಕ- ದೊಡ್ಡ ಸಂಸ್ಥಾನಗಳಿದ್ದವು. ಈ ಸಂಸ್ಥಾನಗಳನ್ನು ತುಂಡರಸರು ಆಳುತ್ತಿದ್ದರು. ಭಾರತ ಸರಕಾರ ಇವುಗಳಲ್ಲಿ ಹೆಚ್ಚಿನ ಸಂಸ್ಥಾನಗಳನ್ನು 1949ರ ಒಳಗೆ ಭಾರತದೊಡನೆ ವಿಲಿನೀಕರಿಸಿತ್ತು. ಅರಮನೆ, ಭೂ ಹಿಡುವಳಿ ಮುಂತಾದ ಖಾಸಗಿ ಆಸ್ತಿಗಳು ಆಯಾ ಸಂಸ್ಥಾನದ ರಾಜಕುಟುಂಬಗಳ ಬಳಿಯೇ ಉಳಿದುಕೊಂಡವು. ಇದಲ್ಲದೆ ಈ ರಾಜರಿಗೆ ರಾಜ್ಯದ ಬದಲು “ಪ್ರಿವೀ ಪರ್ಸ್‌’ (ರಾಜಭತ್ಯೆ) ಎಂಬ ಹೆಸರಿನಲ್ಲಿ ಮಾಸಾಶನ ನಿಗದಿಪಡಿಸಲಾಗಿತ್ತು. ಈ ಹಣದಲ್ಲಿ ರಾಜರು ಐಷಾರಾಮದಿಂದ ಜೀವನ ಸಾಗಿಸುತ್ತಿದ್ದರು.

1971ರಲ್ಲಿ ಇಂದಿರಾಗಾಂಧಿ ಸರಕಾರ ಸಂವಿಧಾನದಲ್ಲಿ 26ನೆಯ ತಿದ್ದುಪಡಿಯ ಮೂಲಕರಾಜರಿಗೆ ಸಿಗುತ್ತಿದ್ದ ಇವೆಲ್ಲ ರಾಜಭತ್ಯೆಯನ್ನು ರದ್ದುಪಡಿಸಿತು. ಇವರ ಬಳಿ ಸಾಕಷ್ಟು ಆಸ್ತಿಪಾಸ್ತಿಗಳಿದ್ದು , ಅವುಗಳ ಆದಾಯವೇ ಗಮ್ಮತ್ತಿನ ಜೀವನ ಸಾಗಿಸಲು ಸಾಕಿತ್ತು. ಕೆಲವರು ತಮ್ಮ ಅರಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸಿದರೆ, ಇನ್ನೂ ಕೆಲವರು ಫೈವ್‌ ಸ್ಟಾರ್‌ ಹೊಟೇಲುಗಳಿಗೆ ನಡೆಸಲು ಕೊಟ್ಟರು.

ಇತ್ತೀಚೆಗೆ ಮಾಜಿ ಬರೋಡಾ ಸಂಸ್ಥಾನದ ರಾಜಮಾತೆ ರಾಧಿಕಾರಾಜೆ ಗಾಯಕ್‌ವಾಡ್‌ ತಮ್ಮ ಬದುಕಿನ ಬವಣೆಯ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. “”ಪ್ರಿವೀ ಪರ್ಸ್‌ ರದ್ದಾದ ಬಳಿಕ ನಾವು ಭಾರೀ ಕಷ್ಟದಲ್ಲಿ ದಿನ ಸಾಗಿಸುತ್ತಿದ್ದೆವು. ಹಲವು ಬಾರಿ ಅವಮಾನದ ಪರಿಸ್ಥಿತಿ ಎದುರಿಸಬೇಕಾಗಿತ್ತು. ಅರಮನೆಯ ಕೆಲಸ-ಕಾರ್ಯಗಳನ್ನು ನಡೆಸಲು
ಮನೆಯ ಬಂಗಾರದ ಪಾತ್ರೆಗಳನ್ನು ಗುಟ್ಟಿನಲ್ಲಿ ಮಾರಿದ್ದೆವು. ಕೆಲವರು ಆಸ್ಥಾನದ ಸಿಂಹಾಸನವನ್ನು ಕೂಡ ಮಾರಬೇಕಾಗಿ ಬಂತು” ಎಂದು ಅಲವತ್ತಿದ್ದರು.

ಈ ಹೇಳಿಕೆಗೆ ಟ್ವಿಟರ್‌ನಲ್ಲಿ ಉಗ್ರ ಪ್ರತಿಕ್ರಿಯೆ ಬಂದಿತ್ತು. “ಹಿಂದೆ ಇವರೆಲ್ಲ ಜನರನ್ನು ಸುಲಿದು ಅರಮನೆಯ ಕಾರುಬಾರು ಚಲಾಯಿಸುತ್ತಿದ್ದರು. ಸ್ವಾತಂತ್ರ್ಯದ ಬಳಿಕ ನಮ್ಮ ತೆರಿಗೆಯ ಹಣ ಇವರ ಐಷಾರಾಮಕ್ಕೆ ಹೋಗುತ್ತಿತ್ತು. ಇವರ ಬಂಗಾರದ ಪಾತ್ರೆಗಳು, ಸಿಂಹಾಸನ ಬಂದಿದ್ದು ನಮ್ಮ ಹಣದಿಂದ ತಾನೆ?” ಎಂದು ಹಲವರು ಪ್ರಶ್ನಿಸಿದ್ದರು.

“ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದವರು ಬಡತನದಲ್ಲಿ ಹೊಟ್ಟೆಗಿಲ್ಲದೆ ತೀರಿಕೊಂಡರು. ಇವರ ಬಳಿ ಬಂಗಾರದ ಪಾತ್ರೆ ಇತ್ತು. ಜನರು ಮಣ್ಣಿನ ತಟ್ಟೆಯಲ್ಲಿ ಉಣ್ಣುತ್ತಿದ್ದರು. ಇವರ ಐಷಾರಾಮಕ್ಕೆ ಸಿಂಹಾಸನ ಮಾರಿದರು ಎನ್ನುವುದು ದೊಡ್ಡ ಸಂಗತಿಯೆ? ಭಾರತದ ಅನೇಕ ಕಡೆಗಳಲ್ಲಿ ಬಡಪಾಯಿ ಜನರು ಮನೆಯ ಮಕ್ಕಳನ್ನು ಕೂಡ ಮಾರಿ ಜೀವನ ಸಾಗಿಸಿದ ದಾರುಣ ಘಟನೆಗಳಿವೆ! ” ಎಂದು ಜನರು ಟೀಕಿಸಿದರು.

ಬರೋಡಾ ಸಂಸ್ಥಾನ ಬ್ರಿಟಿಷರ ಬೆಂಬಲಿಗ ರಾಜ್ಯಗಳಲ್ಲಿ ಒಂದಾಗಿತ್ತು. ಈ ರಾಜಕುಟುಂಬದ ಬಳಿ ಈಗ ಇರುವ ಆಸ್ತಿಪಾಸ್ತಿಗಳ ಮೌಲ್ಯ 20 ಸಾವಿರ ಕೋಟಿಗೂ ಹೆಚ್ಚು. ಇವರ ವಾಸಸ್ಥಾನ “ಲಕ್ಷ್ಮೀವಿಲಾಸ ಪ್ಯಾಲೇಸ್‌’ ಜಗತ್ತಿನ ಅತ್ಯಂತ ದೊಡ್ಡ ಖಾಸಗಿ ನಿವಾಸವಾಗಿದೆ. ಲಂಡನ್‌ನ ಬಕಿಂಗ್‌ಹ್ಯಾಮ್‌ ಪ್ಯಾಲೇಸ್‌ಗಿಂತ ಮೂರು ಪಟ್ಟು ಹೆಚ್ಚು ದೊಡ್ಡದು ಇದು. ಇದರ ಕೆಲವು ಭಾಗಗಳನ್ನು ಈಗ ಮ್ಯೂಸಿಯಂ ಆಗಿ ಮಾಡಲಾಗಿದೆ. ಇದರೊಳಗೆ ಪ್ರವೇಶಕ್ಕಾಗಿ ಭಾರತೀಯ ಪ್ರವಾಸಿಗರು ತಲಾ 250 ರೂಪಾಯಿ ಟಿಕೇಟು ಖರೀದಿಸಬೇಕು. ತಿಂಗಳಿಗೆ ಇಲ್ಲಿಂದಲೇ ಸುಮಾರು 20 ಲಕ್ಷ ಆದಾಯ ಬರುತ್ತದೆ!

*ತುಕಾರಾಮ್‌ ಶೆಟ್ಟಿ
ಕೃಪೆ: ತರಂಗ ವಾರಪತ್ರಿಕೆ

ಟಾಪ್ ನ್ಯೂಸ್

13-

ಮಡಾಮಕ್ಕಿ: ವೃದ್ದ ವಿಷ ಸೇವಿಸಿ ಚಿಕಿತ್ಸೆ ಫಲಿಸದೆ ಸಾವು

Haryana Assembly Election: 2nd list of AAP candidates released

Haryana Assembly Election: ಆಪ್‌ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ

Kangana Ranaut sells her bungalow for Rs 32 crore

Kangana Ranaut: 32 ಕೋಟಿ ರೂ.ಗೆ ಬಂಗಲೆ ಮಾರಿದ ಸಂಸದೆ ಕಂಗನಾ

Manipur1

Manipur: ಮತ್ತೆ ಉದ್ವಿಗ್ನ, ಇಂಟರ್ನೆಟ್ ಸ್ಥಗಿತ, ಕರ್ಫ್ಯೂ ಜಾರಿಗೊಳಿಸಿದ ಸರಕಾರ

12-bidar

Bidar: ಲಂಚ ಸ್ವೀಕರಿಸುತ್ತಿದ್ದ ವೇಳೆ ಇಬ್ಬರು‌ ಅಧಿಕಾರಿಗಳು‌ ಲೋಕಾಯುಕ್ತ ಬಲೆಗೆ

11-bigg-boss

Bigg Boss Kannada-11: ಬಿಗ್ ಬಾಸ್.. ಪ್ರೋಮೊ ರಿಲೀಸ್: ಆ್ಯಂಕರ್ ಯಾರೆಂಬುದೇ ಕುತೂಹಲ !

10-hubli

Hubballi: ಕರ್ತವ್ಯದಲ್ಲಿದ್ದ ಎಎಸ್‌ಐ ತಲೆ ಮೇಲೆ ಬಿದ್ದ ಕಬ್ಬಿಣದ ರಾಡ್; ತೀವ್ರ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Today World Suicide Prevention Day ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ

Today World Suicide Prevention Day ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ

ತೋಳ ಬಂತು ಜೀವ ತಿಂತು! ಉತ್ತರ ಪ್ರದೇಶ, ಮಧ್ಯ ಪ್ರದೇಶದಲ್ಲಿ ತೋಳಗಳ ದಾಳಿ, ಜನರಲ್ಲಿ ಭೀತಿ

ತೋಳ ಬಂತು ಜೀವ ತಿಂತು! ಉತ್ತರ ಪ್ರದೇಶ, ಮಧ್ಯ ಪ್ರದೇಶದಲ್ಲಿ ತೋಳಗಳ ದಾಳಿ, ಜನರಲ್ಲಿ ಭೀತಿ

ganapa

Ganesha Festival: ಇಂದು ಗಣೇಶ ಚತುರ್ಥಿ; ವಿಘ್ನ ನಿವಾರಕ ವಿನಾಯಕ ವಿಶ್ವನಾಯಕನೂ ಹೌದು

ETTINAHOLE

Ettinahole Drinking Water Project: ದಶಕದ ಬಳಿಕ ಎತ್ತಿನಹೊಳೆ ಯೋಜನೆ ಸಾಕಾರ

Gouri-Puja-

Gowri Festival: ಇಂದು ಗೌರಿ ತದಿಗೆ: ಭಾದ್ರಪದ ಶುಕ್ಲ ತೃತೀಯಾ ಹರಿತಾಲಿಕಾ ವ್ರತಂ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Despite the Supreme Court’s directive, the protest of junior doctors continues!

Kolkata: ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದರೂ ಮುಂದುವರಿದ ಕಿರಿಯ ವೈದ್ಯರ ಪ್ರತಿಭಟನೆ!

13-

ಮಡಾಮಕ್ಕಿ: ವೃದ್ದ ವಿಷ ಸೇವಿಸಿ ಚಿಕಿತ್ಸೆ ಫಲಿಸದೆ ಸಾವು

Haryana Assembly Election: 2nd list of AAP candidates released

Haryana Assembly Election: ಆಪ್‌ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ

Kangana Ranaut sells her bungalow for Rs 32 crore

Kangana Ranaut: 32 ಕೋಟಿ ರೂ.ಗೆ ಬಂಗಲೆ ಮಾರಿದ ಸಂಸದೆ ಕಂಗನಾ

Manipur1

Manipur: ಮತ್ತೆ ಉದ್ವಿಗ್ನ, ಇಂಟರ್ನೆಟ್ ಸ್ಥಗಿತ, ಕರ್ಫ್ಯೂ ಜಾರಿಗೊಳಿಸಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.