ಸರ್ವೋದಯ ಧರ್ಮತೀರ್ಥದ ಪ್ರವರ್ತಕ ಮಹಾವೀರ

ಇಂದು ಭ| ಮಹಾವೀರ ಸ್ವಾಮಿಯ ಜಯಂತಿ

Team Udayavani, Apr 25, 2021, 6:30 AM IST

ಸರ್ವೋದಯ ಧರ್ಮತೀರ್ಥದ ಪ್ರವರ್ತಕ ಮಹಾವೀರ

ಭವ್ಯ ಭಾರತವು ಸನಾತನ ಪರಂಪರೆಯ ವೈದಿಕ ಹಾಗೂ ಶ್ರಮಣ ಪರಂಪರೆಯ ಋಷಿ- ಮುನಿಗಳ ತಪೋಭೂಮಿ. ಸದಾಚಾರ, ಸದ್ವಿ ಚಾರ, ಸದಾಶಯಗಳ ಮೇರು ಸಂಸ್ಕೃತಿಯ ಭದ್ರ ಬುನಾದಿಯನ್ನು ನೆಲೆಗೊಳಿಸಿದ ಧರ್ಮ ನೇತಾರರು ಮತಾಚಾರ್ಯರು, ತಪೋನಿಗಳಿಂದ ಸಕಲ ಜೀವಿಗಳ ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತಿದ್ದ, ಪ್ರಾರ್ಥಿಸುತ್ತಿರುವ ಮಹಾನ್‌ ದೇಶ. ಈ ಪವಿತ್ರ ಭೂಮಿಯಲ್ಲಿ ಈಗಿನ ಬಿಹಾರ ರಾಜ್ಯದ ವೈಶಾಲಿ ಕುಂಡ ಗ್ರಾಮದಲ್ಲಿ ವೀರಕ್ಷತ್ರಿಯ ಕಾಶ್ಯಪ ಗೋತ್ರದ ಜ್ಞಾತೃ ವಂಶದ ಸಿದ್ಧಾರ್ಥ ರಾಜ, ತ್ರಿಶಲಾ ದೇವಿಯ ಪುತ್ರನಾಗಿ ಚೆ„ತ್ರ ಶುಕ್ಲ ತ್ರಯೋದಶಿ ಉತ್ತರ ಫಾಲ್ಗುಣಿ ನಕ್ಷತ್ರ ಸೋಮವಾರ ಕ್ರಿ. ಪೂ. 27-03-598ರಂದು ಜನಿಸಿದರು.

ವೈಶಾಲಿ ರಾಜ್ಯವು ಭಾರತದ ಪ್ರಾಚೀನ ಶ್ರೀಮಂತ ನಗರವಾಗಿತ್ತು ಎಂಬುದನ್ನು ಲಲಿತವಿಸ್ತಾರ ಎಂಬ ಗ್ರಂಥದಲ್ಲಿ ಉಲ್ಲೇಖೀಸಿದ್ದಾರೆ. ಅದೇ ಸಂದರ್ಭದಲ್ಲಿ ಭಾರತದ ವಿವಿಧ ಭಾಗಗಳಲ್ಲಿ ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಜೀವಹಿಂಸೆ, ಮೂಢ ಭಕ್ತಿ, ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವ ಕೆಲಸವನ್ನು ಭಗವಾನ್‌ ಮಹಾ ವೀರರು ಮಾಡಿದರು.

ಮಹಾವೀರರು ಪ್ರಾಣಿಹಿಂಸೆ, ಕರ್ಮಕಾಂಡಗಳ ಅಸ್ಪೃಶ್ಯತೆ ಆಚರಣೆಯನ್ನು, ಆತ್ಮದ ಪುನರ್ಜನ್ಮದ ನಿರಾಕರಣೆಯನ್ನು ಅವರ ಸಮಕಾಲೀನ ಪೂರಣ ಕಾಶ್ಯಪ, ಮಕ್ಕಲಿ ಗೋಶಾಲಿ ಪುತ್ತ, ಸಂಜಯ ಬೆಲಾಟಪುತ್ತ ಮೊದಲಾದವರು ತಮ್ಮನ್ನು ತಾವೇ ದೇವರೆಂದು ತೀರ್ಥಂಕರರೆಂದೂ ಅವರಿಗಿಂತ ಪೂರ್ವದ ಪಾರ್ಶ್ವನಾಥರ ಅನುಯಾಯಿಗಳ ತಣ್ತೀಗಳಿಗೆ ತೀರಾ ವಿರುದ್ಧವಾದ ಸಿದ್ಧಾಂತಗಳನ್ನು ಬೋಧಿ ಸಿ ಜನರಲ್ಲಿ ಗೊಂದಲವನ್ನು ನಿರ್ಮಾಣ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಋಜುಕುಲ ನದೀದಡದಲ್ಲಿ ಕ್ರಿ.ಪೂ. 26.04.567ರಂದು ಶನಿವಾರ ಶಾಲವೃಕ್ಷದ ಬುಡದಲ್ಲಿ ವೈಶಾಖ ಶುದ್ಧ ನವಮಿಯಂದು ಉತ್ತರ ಹಸ್ತಾ ನಕ್ಷತ್ರ ಶುಭ ಗಳಿಗೆ ಮಹಾವೀರರಿಗೆ ಕೇವಲಜ್ಞಾನ ಉಂಟಾಯಿತು. ಭಗವಂತರಾದ ಮಹಾವೀರರು ತತ್ಕಾಲೀನ ಸಮಾಜದಲ್ಲಿ ರೂಢಿಯಲ್ಲಿದ್ದ ಅನೇಕ ಅಜ್ಞಾನ, ಕಂದಾಚಾರ, ವೈಭವೋಪೇತ ಪೂಜೆಗಳನ್ನೂ ಭಗವಂತನನ್ನು ಒಲಿಸಿಕೊಳ್ಳಲು ಮಾಡಬೇಕಾಗಿಲ್ಲ; ಸದಾಚಾರ, ಸರಳತೆ, ಸಮ್ಯಗªರ್ಶನ, ಜ್ಞಾನ, ಚಾರಿತ್ರ, ಮೋಕ್ಷಮಾರ್ಗದ ಸೂತ್ರವಾಗಿದೆ, ಕ್ಲಿಷ್ಟಕರವಾದ ಮಂತ್ರಗಳನ್ನು ತಪ್ಪುತಪ್ಪಾಗಿ ಉಚ್ಚರಿಸುತ್ತಾ ಭಗ ವಂತನನ್ನು ಒಲಿಸುವ ಬದಲು ಸರಳ, ಸ್ವತ್ಛ ಭಾಷೆಯ ಮೂಲಕ ಅರ್ಥೈಸಿಕೊಂಡು ಜೀವನದ ಸಾರವನ್ನು ಭಗವಂತನ ಮಹಿಮೆಯನ್ನೂ ತಿಳಿದು ಕೊಳ್ಳಬೇಕೆಂದೂ ಎಲ್ಲ ಜೀವಿಗಳೂ ದ್ರವ್ಯ, ಕ್ಷೇತ್ರ, ಕಾಲ, ಭವ ಮತ್ತು ಭಾವ ಎನ್ನುವ ಪಂಚ ಪರಾ ವರ್ತನೆಯ ಪುರುಷಾರ್ಥ ಪ್ರಾಪ್ತಿಸಿ ಕೊಂಡಲ್ಲಿ ಭಗವಂತನಾಗಬಹುದು ಎಂಬುದನ್ನು ತಿಳಿಸಿದರು.

ಜನರು ಪ್ರಮಾದಗಳನ್ನು ಮಾಡದಿರಲಿ, ನಿರ್ಲಕ್ಷ್ಯ ಹಾಗೂ ತಪ್ಪು ತಿಳಿವಳಿಕೆಗಳಿಂದ ನಾವು ಕರ್ಮ ಬಂಧನದಲ್ಲಿ ಸಿಲುಕಿಕೊಳ್ಳುತ್ತೇವೆ, ಅನೇಕ ಕಷ್ಟಗ ಳನ್ನು ಅನುಭವಿಸುತ್ತೇವೆ. ನಾವು ವಿವೇಕಿಗಳಾದಲ್ಲಿ ಪ್ರಮಾದಗಳನ್ನು ಮಾಡದಿರುವ ಶ್ರೇಷ್ಠರಾಗಿ ಕ್ರಮ ದಿಂದ ಸನ್ಯಾಸತ್ವವನ್ನು ಸ್ವೀಕರಿಸಿ ಪುರುಷಾರ್ಥ ಚತುಷ್ಟಯವನ್ನು ಸಾಧಿಸಿ ಮೋಕ್ಷವನ್ನು ಪಡೆಯ ಬಹುದು ಎಂದು ಭಗವಾನ್‌ ಮಹಾವೀರರು ನುಡಿದರು. ಕೇವಲಜ್ಞಾನಗೊಂಡ ಭಗವಂತನ ಧರ್ಮೋಪದೇಶಕ್ಕಾಗಿ ಸೌಧರ್ಮೇಂದ್ರನು ಕುಬೇರ ನಿಗೆ ಆಜ್ಞೆಯನ್ನು ನೀಡಿ ಸಮ ವಸರಣ ಎನ್ನುವ ಧರ್ಮರಥವನ್ನು, ಗಂಧಕುಟಿ ಎಂಬ ಮಂಟಪವನ್ನು ನಿರ್ಮಿಸಿ ನಾನಾ ರತ್ನಖಚಿತ ಸ್ಪಟಿಕಯುಕ್ತ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮಾನಸ್ತಂಭವಿದ್ದು 20,000 ಸ್ಪಟಿಕ ಸೋಪಾನಗಳಿದ್ದು ರತ್ನ ತೋರಣ, ಬಾಗಿಲು ಕಾಯುವ ಯಕ್ಷರ ಸಮೂಹ, ಮುನಿಗಳು, ಅಜ್ಜಿಕೆಯರು, ದೇವತೆಗಳು, ಪಶು-ಪಕ್ಷಿ ಪ್ರಾಣಿಗಳು, ಹನ್ನೆರಡು ಕೋಷ್ಟಕಗಳಿಂದ ನವನಿ  ನಾಟ್ಯಶಾಲೆ ಮನೋಹರ ದೃಶ್ಯಗಳಿಂದ, ಜ್ಯೋತಿರ್ಲೋಕದ ಸ್ತ್ರೀಯರು, ವ್ಯಂತರ, ಭವನವಾಸಿ ದೇವತೆಗಳು, ಅತ್ಯಂತ ಸುಂದರವಾದ ಕೋಷ್ಠಕಗಳಿದ್ದು, ಮನುಷ್ಯ, ದೇವ, ತಿರ್ಯಂಚ ಎಂಬ ಹನ್ನೆರಡು ಗಣಗಳು ಮೂರನೇ ಪೀಠದ ಮೇಲೆ ಕಮಲವನ್ನು ಸೋಕದೆ ಭಗವಾನ್‌ ವರ್ಧಮಾನರ ಸಮವಸರಣವು ಅತಿಶಯದಿಂದ ಕೂಡಿದೆ ಎಂದು ಸುಂದರವಾಗಿ ವ್ಯಾಖ್ಯಾನಿಸಲಾಗಿದೆ.

ಭಗವಾನ್‌ ಮಹಾವೀರರು ತಮಗಿಂತ ಪೂರ್ವದ ಭಗವಾನ್‌ ಆದಿನಾಥರೇ ಮೊದಲಾದ 23 ತೀರ್ಥಂಕರರು ಬೋ ಧಿಸಿದ ನಿಗ್ಗಂಠ ಧರ್ಮ ಅರ್ಥಾತ್‌ ಶ್ರಮಣ ಪರಂಪರೆಯನ್ನು ಬೋ ಧಿಸಿದರು. ನಾಭಿಸುತ ವೃಷಭ ತೀರ್ಥಂಕರರು ಪ್ರಥಮ ತೀರ್ಥಂಕರರಾಗಿದ್ದು ಮಹಾವೀರರು ಜೈನಧರ್ಮದ ವರ್ತಮಾನ ಕಾಲದ ಕೊನೆಯ ತೀರ್ಥಂಕರರು.

ಭಗವಾನ್‌ ಮಹಾವೀರರ ಧರ್ಮೋಪದೇಶ
ಜೈನ ಧರ್ಮದಲ್ಲಿ ವ್ಯಕ್ತಿಪೂಜೆಯ ಬದಲು ಗುಣಗಳ ಆರಾಧನೆಗೆ ಹೆಚ್ಚಿನ ಮಹತ್ವ. ಯಾವ ವ್ಯಕ್ತಿಯು ಸಂಸ್ಕಾರವಂತನಾಗಿ ಆತ್ಮವು ಮಹಾತ್ಮನಾಗಿ ಪರಮಾತ್ಮನಾಗುತ್ತದೆ. ಆತ್ಮೋನ್ನತಿಯ ದಾರಿಯಲ್ಲಿ ಗಮನಾರ್ಹ ಸಾಧನೆ ಮಾಡಿ ಐದು ಹಂತಗಳನ್ನು ಏರಿದ ಜೀವ ಸಿದ್ಧರಾಗುತ್ತಾರೆ. ದೇವರು ಹೊರಗೆ ಇಲ್ಲ, ದೂರವೂ ಇಲ್ಲ, ದೇವರಾಗುವ ಅರ್ಹತೆ ಉಳ್ಳ ಚೆ„ತನ್ಯಾತ್ಮ ಎಲ್ಲರಲ್ಲೂ ಇದೆ. ಅಂಗುಷ್ಠದಿಂದ ನೆತ್ತಿಯ ವರೆಗೆ ಸವಾಂìಗ ಸಂಪೂರ್ಣ ಉತ್ತುಂಗ ಜ್ಞಾನಮಯ, ಸುದರ್ಶನಮಯ, ಚಾರಿತ್ರ ತೇಜೋ
ಮಯ, ಮಾಂಗಲ್ಯಂ, ಮಹಿಮಂ, ಸ್ವಯಂಭೂ, ಸುಖೀ, ನಿರ್ಬಾಧಂ, ನಿರಾಪೇಕ್ಷಿ, ನಿಮ್ಮಂಗಂ, ಬೋಳ್ಪರಮಾತ್ಮನೆಂದರಪಿದೈ ಎಂದು ಸಾಂಗತ್ಯ ಕವಿ ಚಕ್ರವರ್ತಿ ರತ್ನಾಕರವರ್ಣಿ ನಮ್ಮೊಳಗೆ ಇರುವ ಆತ್ಮನ ವಿಕಸಿತ ಸ್ವರೂಪವನ್ನು ದೇವರೆಂದರೆ ಏನೆಂದು ವಿವರಿಸುತ್ತಾರೆ.

ವಿಶ್ವಶಾಂತಿಯ ಮಾರ್ಗೋಪಾಯ
ಮಹಾವೀರರು ಸರಳವಾದ, ಸುಲಭವಾದ ಆ ಸಂದರ್ಭದಲ್ಲಿ ಪ್ರಚಲಿತದಲ್ಲಿದ್ದ ಅರ್ದ ಮಾಗ  ಎನ್ನುವ ಪ್ರಾಕೃತ ಭಾಷೆಯಲ್ಲಿ ಕೇವಲಜ್ಞಾನವಾದ ಅನಂತರ ತಮ್ಮ 30ನೇ ವಯಸ್ಸಿನಿಂದ 32 ವರ್ಷಗಳ ಕಾಲ ಧರ್ಮೋಪದೇಶವನ್ನು ನಿರಂತರ ನೀಡಿದರು. ಮಹಾವೀರರ ಒಟ್ಟು ಜೀವಿತಾವ ಧಿ 72 ವರ್ಷಗಳು, ಅಂದರೆ 15. 10. 527ರ ಅಮಾವಾಸ್ಯೆಯಂದು ಅವರು ಮೋಕ್ಷವನ್ನು ಪಡೆದರು.

ಭಗವಾನ್‌ ಮಹಾವೀರರ ತತ್ವಗಳು, ಬೋಧನೆಗಳು ಸಾರ್ವಕಾಲಿಕ ಸತ್ಯ ಹಿತಕಾರಿಗಳಾಗಿತ್ತು. ಅವರ ಧರ್ಮಬೋಧನೆಗಳನ್ನು ಅವರ ಗಣಧರ ರಾದ ವೈದಿಕ ಶ್ರೇಷ್ಠ ಗೌತಮರು ಸರ್ವರಿಗೂ ತಿಳಿಸುತ್ತಿದ್ದರು. ಕ್ಷತ್ರಿಯ ರಾಜ ಶ್ರೇಣಿಕ, ಬಿಂಬಸಾರ ಮೊದಲಾದವರು ಈ ಬೋಧನೆಗಳಿಂದ ಆಕರ್ಷಿ ತರಾಗಿದ್ದರು. ವೃತ್ತಿಧರ್ಮದ ಭೇದವಿಲ್ಲದೆ ಎಲ್ಲರೂ ಅವರ ಅನುಯಾಯಿಗಳಾಗಿದ್ದರು. ಸತ್ಯ, ಅಹಿಂಸೆ, ಅಚೌರ್ಯ, ಅಪರಿಗ್ರಹ, ಬ್ರಹ್ಮಚರ್ಯ ಎಂಬ ಪಂಚಶೀಲಗಳನ್ನು ಬೋ ಧಿಸಿದರು. ಇವು ಮಾನವೀಯ ಗುಣಮೌಲ್ಯಗಳೆಂದು ತಿಳಿಸಿ ಸ್ವಕಲ್ಯಾಣ ಪರಕಲ್ಯಾಣದ ಆತ್ಮಸಾಧನೆಯು ಸರ್ವರಿಗೂ ಸುಖ ಮತ್ತು ಶಾಂತಿಯನ್ನು ನೀಡುತ್ತದೆ. ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಎಂದು ನುಡಿದರು. ಪ್ರಾಣಿದಯೆ, ಕರುಣೆ, ಸಹಬಾಳ್ವೆ, ಕ್ಷಮೆ, ಮೃದು ಸ್ವಭಾವ, ಸರಳ ಸಾತ್ವಿಕ ಜೀವನ, ಶ್ರದ್ಧಾವಂತ, ವಿವೇಕವಂತ ಸಾಧಕರ ಲಕ್ಷಣ ಎಂದರು. ಧರ್ಮದಲ್ಲಿ ಒಳಸುಳಿದಿದ್ದ ಶಿಥಿಲಾಚಾರವನ್ನು ಹೋಗಲಾಡಿಸಿದರು. “ಭಕ್ತ ಹಾಗೂ ಭಗವಂತನ ನಡುವೆ ಕಂದರ ಸಲ್ಲದು’ ಎಂದರು.

ಜೀವಹಿಂಸೆಯಿಂದ, ರಕ್ತಪಾತದಿಂದ, ಪ್ರಾಣಿಗ ಳನ್ನು ನೋಯಿಸುವುದರಿಂದ, ಅತೀ ಭಾರಾರೋಪಣೆ ಮಾಡುವುದರಿಂದ, ಮೂಕಪ್ರಾಣಿಗಳ ವೇದನೆಯು ಭವ ಭವದಲ್ಲಿ ನಮ್ಮ ದುಃಖವನ್ನು ಹೆಚ್ಚಿಸುತ್ತದೆ. ಜೀವದಯಾಪರವಾದ ಅಹಿಂಸೆಯೇ ಪರಮ ಧರ್ಮವೆಂದು ಬೋಧಿಸಿದರು. “ನೀವೂ ಬದುಕಿ, ಇತರರನ್ನೂ ಬದುಕಗೊಡಿ’ ಎಂಬುದು ಅವರ ಜನಪ್ರಿಯ ಸಂದೇಶವಾಗಿತ್ತು.
ಅನಾದಿ ಕಾಲದಿಂದಲೂ ಪಂಚಶೀಲಗಳ ಅನುಸರಣೆಯನ್ನೂ ಆತ್ಮೋನ್ನತಿಗಾಗಿ ಸರ್ವರೂ ಮಾಡಬೇಕೆಂದರು. ಆಕ್ರಮಣ ಮನೋಭಾವ, ವಂಚನೆ, ಕೋಪ, ತಾಪ, ಕಲಹ, ನಿಂದನೆ, ಕಪಟತನ, ವೈರ, ಪರನಿಂದೆ, ಕ್ರೂರಭಾವನೆ, ಕ್ಷತ್ರಿಯರಿಗೆ, ಸಭ್ಯ ರಾಜಕಾರಣಿಗೆ ಭೂಷಣವಾಗಲಾರದು. ಸುಳ್ಳು, ಮೋಸ, ಕಲಬೆರಕೆ, ವಂಚನೆ, ಸ್ವಪ್ರಶಂಸೆ, ಉತ್ತಮ ವ್ಯಾಪಾರಕ್ಕೆ ಹಾನಿ.

ನಿರಂತರ ಓದು, ಆಲಸ್ಯವನ್ನು ಬಿಡುವುದು, ನೀತಿಯುಕ್ತ ಧರ್ಮಗ್ರಂಥಗಳ ಪಠನ, ಸದಾಚಾರದಿಂದ ಸರ್ವರೂ ಬ್ರಾಹ್ಮಣರೂ ಜಗತ್ತಿನ ಜೀವಿಗಳೊಂದಿಗೆ ಮೈತ್ರಿಯಿಂದ ಇರುವುದು, ಹಿರಿಯರಿಗೆ ಗುರುಗಳಿಗೆ ಗೌರವಿಸುವುದು, ದೀನರಿಗೆ ಸಹಕರಿಸುವುದು ಪ್ರತಿಯೊಬ್ಬನ ಕರ್ತವ್ಯ. ದೇವ ಪೂಜೆ, ಗುರುಗಳಲ್ಲಿ ವಿನಯ, ಕರ್ಮದಿಂದ ಬಿಡುಗಡೆಗೊಳಿಸುವ, ಮೋಕ್ಷದ ಮಾರ್ಗವನ್ನು ತಿಳಿಸುವ ಗ್ರಂಥಗಳ ಓದು, ಪಂಚೇಂದ್ರಿಯಗಳ ಸಂಯಮ, ನಡೆದಾಡುವಾಗ, ವಸ್ತುಗಳನ್ನು ತೆಗೆದುಕೊಳ್ಳುವಾಗ ಪ್ರಾಣಿಗಳಿಗೆ ನೋವಾಗದಂತೆ ವರ್ತಿಸುವುದು, ಚಂಚಲತೆಯ ನಿಗ್ರಹ, ಸಮತಾ ಭಾವದ ತಪಸ್ಸು, ಅಭಯದಾನ, ಔಷಧ ದಾನ, ವಿದ್ಯಾದಾನ, ಅನ್ನದಾನ, ನಿರಂತರ ಮಾಡುತ್ತಿರಬೇಕೆಂದು ತಮ್ಮ ಅನುಯಾಯಿಗಳಿಗೆ ಬೋಧಿಸಿದರು.

ಹತ್ತು ವಿಧಗಳ ಪರಿಗ್ರಹಗಳ ಬಗ್ಗೆ ಆಸಕ್ತಿಯನ್ನು ಮಾಡದೆ ಅಂತರಂಗ ಬಹಿರಂಗ ಎನ್ನುವ ಅಪರಿಗ್ರಹ ವ್ರತವು ಸುಖವನ್ನು ನೀಡುತ್ತದೆ. ಬಹುವಾದ ಪರಿಗ್ರಹವು ವಿಕೃತ ಭಾವಗಳಿಗೆ, ಅನಾವಶ್ಯಕ ಸ್ಪರ್ಧೆ, ವೈರ, ಯುದ್ಧ ಹಾಗೂ ಜೀವಭೀತಿಗೆ ಕಾರಣವಾಗುತ್ತದೆ. ನರಕಾಯುಷ್ಯದ ಆಸ್ರವಕ್ಕೆ ಕಾರಣವಾಗುತ್ತದೆ. ವಿಕೃತ ಭಾವಗಳು ಅಂತರಂಗದ ಪರಿಗ್ರಹ, ಕುಪ್ಯ, ಭಾಂಡ, ಸುವರ್ಣ, ರಜತ, ಭೂಮಿ, ರತ್ನ, ದಾಸ, ದಾಸಿ, ಆನೆ, ಕುದುರೆ ಇವೆಲ್ಲ ಬಹಿರಂಗ ಪರಿಗ್ರಹಗಳಾಗಿದ್ದು ಅತಿಯಾದ ಪರಿಗ್ರಹದಿಂದ ಸ್ವಜನರು, ಇಷ್ಟಮಿತ್ರರು, ಬಂಧುಗಳು, ಮಕ್ಕಳು ಅದನ್ನು ಪಡೆಯುವ ಲಾಲಸೆಯಲ್ಲಿ ದ್ವೇಷಾಸೂಯೆ ಮಾಡಬಹುದು.

ಸಂಸ್ಕಾರವನ್ನು ಪಡೆಯುವುದರಿಂದ ಧರ್ಮಾಧಾರಿತ ಬದುಕಿನಿಂದ ಈ ಎಲ್ಲ ಅಪಾಯಗಳಿಂದ ಸರ್ವರೂ ಪಾರಾಗಬಹುದೆಂದು ನುಡಿದರು. ಅಪರಿಗ್ರಹ ವ್ರತವು ಆತ್ಮಶುದ್ಧಿಗೆ ಕಾರಣ. ತನ್ನನ್ನು ತಾನೇ ಇಂದ್ರಿಯದಮನ ಮಾಡಿಕೊಳ್ಳಬೇಕು. ಮನಸ್ಸಿನ ವಿಕಾರಗಳನ್ನು ನಿರ್ನಾಮ ಮಾಡಬೇಕು. ಶತ್ರುಗಳು ಹೊರಗೆ ಎಲ್ಲೂ ಇಲ್ಲ. ನಮ್ಮೊಳಗೇ ಇರುವ ಕಾಮ, ಕ್ರೋಧ, ಮದ, ಮತ್ಸರ, ಮೋಹ ಎಂಬ ಶತ್ರುಗಳನ್ನು ಅಣುವ್ರತ, ಗುಣವ್ರತ, ಶಿಕ್ಷಾವ್ರತ ಆಚರಿಸುವ ಮೂಲಕ ಜೀವನದ ನಿಜವಾದ ಸಂತೋಷವನ್ನು ಕಾಣೋಣ. ಶರೀರವು ನೌಕೆಯಂತಿದೆ. ಆತ್ಮ ನಾವಿಕ ನಂತಿದೆ. ಸಂಸಾರವನ್ನು ಸಮುದ್ರ ಎನ್ನಲಾಗಿದೆ. ಈ ಸಂಸಾರ ಸಾಗರ¨ ದುಃಖದ ಪ್ರಯಾಣವನ್ನು ಯೋಗ್ಯ ಜ್ಞಾನ ತಪಸ್ಸಿನ ಸದ್ವಿವೇಕದ ಮೂಲಕ ಅಪಾಯವಿಲ್ಲದೆ ಸುಖವಾಗಿ ದಾಟೋಣ ಎಂದು ನುಡಿದ ಭಗವಾನ್‌ ಮಹಾವೀರರ ಜಯಂತಿ ಮತ್ತೂಮ್ಮೆ ಬಂದಿದೆ. ಆ ಯುಗಪುರುಷರ ಸಹಸ್ರ ಸಹಸ್ರ ವರ್ಷಗಳ ಹಿಂದಿನ ವಿಚಾರಧಾರೆ ಇಂದಿಗೂ ಪ್ರಸ್ತುತ. ಸರ್ವೋದಯ ಧರ್ಮತೀರ್ಥದ ಪ್ರವ ರ್ತಕ ಭಗವಾನ್‌ ಮಹಾವೀರರ ಸಂದೇಶಗಳನ್ನು ಸಾಧ್ಯವಾದಷ್ಟು ಪಾಲಿಸುವ ಮೂಲಕ ಅವರಿಗೆ ಭಕ್ತಿಯ ಕುಸುಮವನ್ನು ಸಮರ್ಪಿಸೋಣ.

– ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ, ಮೂಡುಬಿದಿರೆ

ಟಾಪ್ ನ್ಯೂಸ್

90 ದಿನಗಳಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

90 ದಿನದಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ದೂರದೃಷ್ಟಿಯ ನಾಯಕತ್ವಕ್ಕೆ ಮಾದರಿ ಎಸ್‌.ಆರ್‌. ಬೊಮ್ಮಾಯಿ

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ನವ ನಾಮ, ನವ ರೂಪ ಧಾರಿಣೀ ನಮೋಸ್ತುತೇ

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ

ಸಮಗ್ರ ಕರ್ನಾಟಕದ ಸಾಕ್ಷಿ ಪ್ರಜ್ಞೆ ಕಯ್ಯಾರ ರ ಕಿಂಞಣ್ಣ ರೈ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

ಸತ್ಯಜ್ಞಾನದ ಶಕ್ತಿಯಿಂದ ರಾರಾಜಿಸುತ್ತಿದ್ದ ಯತೀಶ್ವರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

90 ದಿನಗಳಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

90 ದಿನದಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.