ನನ್ನ ಕ್ಷೇತ್ರದ ಮೇಲೇಕೆ ಕಣ್ಣು: ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ
Team Udayavani, Feb 8, 2023, 10:30 PM IST
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಾವು ಪ್ರತಿನಿಧಿಸುತ್ತಿರುವ ಗುಲ್ಬರ್ಗಾ ಲೋಕಸಭಾ ಕ್ಷೇತ್ರದ ಮೇಲೆಯೇ ಕಣ್ಣು ಎಂದು ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಗೊತ್ತುವಳಿ ಮೇಲೆ ಮಾತನಾಡಿದ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರು ಅಭಿವೃದ್ಧಿ, ಆಡಳಿತದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಆದರೆ ಅವರು ಯಾವಾಗಲು ಚುನಾವಣ ಮೂಡ್‌ನಲ್ಲಿ ಇರುತ್ತಾರೆ. ಜನವರಿಯಲ್ಲಿ ನನ್ನ ಕ್ಷೇತ್ರ ಕಲಬುರಗಿಗೆ ಆಗಮಿಸಿ, ಎರಡೆರಡು ಸಮಾವೇಶ ಮತ್ತು ಸಭೆ ನಡೆಸಿದರು. ಅವರಿಗೆ ನನ್ನ ಕ್ಷೇತ್ರವೇ ಸಿಗುತ್ತದೆಯೇ? ಅವರಿಗೆ ನನ್ನ ಕ್ಷೇತ್ರದ ಮೇಲೆ ಯಾಕೆ ಕಣ್ಣು ಎಂದು ಹಾಸ್ಯವಾಗಿ ಪ್ರಶ್ನಿಸಿದರು.
ಖರ್ಗೆ ಮಾತಿಗೆ ಪ್ರಧಾನಿ ಮೋದಿ ಸಹಿತ ಇಡೀ ಸದನ ನಗೆಗಡಲಿನಲ್ಲಿ ತೇಲಿತು. ಖರ್ಗೆ ಆರೋಪಕ್ಕಿಂತ ಹಾಸ್ಯದ ರೀತಿಯಲ್ಲಿ ಹೇಳಿದ್ದು ನಗೆಗೆ ಕಾರಣವಾಗಿತ್ತು.
ಜ.19ರಂದು ಕಲಬುರಗಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರು ಸೇಡಂ ತಾಲೂಕಿನ ಮಳಖೇಡದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಲಂಬಾಣಿ ತಾಂಡಾಗಳ 51,900 ನಿವಾಸಿಗಳಿಗೆ ಭೂದಾಖಲೆಗಳನ್ನು ವಿತರಿಸಿದ್ದರು. ಅನಂತರ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದೇ ವೇಳೆ ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳ 3 ಲಕ್ಷ ರೈತರಿಗೆ ಉಪಯೋಗವಾಗುವ 4,700 ಕೋ. ರೂ. ವೆಚ್ಚದ ನಾರಾಯಣಪುರ ಎಡದಂಡೆ ಕಾಲುವೆ ವಿಸ್ತರಣೆ, ನವೀಕರಣ ಮತ್ತು ಆಧುನೀಕರಣ ಯೋಜನೆಯನ್ನು ಉದ್ಘಾಟಿಸಿ, ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚರಂಡಿ ಮೂಲಕ ಸುರಂಗ ತೋಡಿ…ಲಕ್ಷಾಂತರ ರೂಪಾಯಿ ಚಿನ್ನಾಭರಣ ದರೋಡೆ! ಪ್ರತಿಭಟನೆ
ಕರ್ನಾಟಕದ ನರಸಾಪುರದಲ್ಲಿ ಆರಂಭವಾಗಲಿದೆ ಹೊಂಡಾ ಎಲೆಕ್ಟ್ರಿಕ್ ವಾಹನ ತಯಾರಿಕಾ ಘಟಕ
ಬ್ಯಾಂಕ್ ಖಾತೆ ಆಧಾರಿತ UPI ಪಾವತಿಗಳಿಗೆ ಯಾವುದೇ ಶುಲ್ಕವಿಲ್ಲ: NPCI ಸ್ಪಷ್ಟನೆ
ಸಾಶಾ ಅಗಲುವಿಕೆಯ ಬೆನ್ನಲ್ಲೇ ನಾಲ್ಕು ಮರಿಗಳಿಗೆ ಜನ್ಮ ನೀಡಿದ ನಮೀಬಿಯಾದಿಂದ ತಂದ ಚೀತಾ
ಗೋವಾ ವಿಧಾನಸಭೆಯಲ್ಲಿ ಮಹಾದಾಯಿ ವಿಷಯದ ಕುರಿತು ಭಾರಿ ಚರ್ಚೆ