ಮಂಡ್ಯ ಕೋವಿಡ್ ಸೋಂಕಿಗೆ ಓರ್ವ ಸಾವು, 274 ಹೊಸ ಪ್ರಕರಣ ದೃಢ, 64 ಮಂದಿ ಗುಣಮುಖ
Team Udayavani, Sep 27, 2020, 4:45 PM IST
ಮಂಡ್ಯ: ಭಾನುವಾರ ಕೋವಿಡ್ ಸೋಂಕಿಗೆ ಮತ್ತೊಬ್ಬ ಮೃತಪಟ್ಟಿದ್ದು, ಇದರಿಂದ ಸಾವಿನ ಸಂಖ್ಯೆ ಶತಕ ದಾಟಿದೆ. 274 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 64 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಮಂಡ್ಯ ತಾಲ್ಲೂಕಿನ 80 ವರ್ಷದ ವೃದ್ಧರೊಬ್ಬರು ಕೋವಿಡ್ ಸೋಂಕು, ಉಸಿರಾಟದ ತೊಂದರೆ ಹಾಗೂ ಇತರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದರಿಂದ ಸಾವಿನ ಸಂಖ್ಯೆ 100ಕ್ಕೇರಿದೆ.
264 ಮಂದಿಗೆ ಸುತ್ತಿಕೊಂಡ ಕೋವಿಡ್:
ಮಂಡ್ಯ 103, ಮದ್ದೂರು 35, ಮಳವಳ್ಳಿ 13, ಪಾಂಡವಪುರ 22, ಶ್ರೀರಂಗಪಟ್ಟಣ 27, ಕೆ.ಆರ್.ಪೇಟೆ 28 ಹಾಗೂ ನಾಗಮಂಗಲದ 48 ಮಂದಿ ಸೇರಿದಂತೆ ಜಿಲ್ಲೆಯಲ್ಲಿ ಭಾನುವಾರ 264 ಹೊಸ ಪ್ರಕರಣಗಳು ಪತ್ತೆಯಾಗಿವೆ. 10324 ಪ್ರಕರಣಗಳು ದಾಖಲಾಗಿವೆ.
721 ಮಂದಿಗೆ ಪರೀಕ್ಷೆ:
ಭಾನುವಾರ ರ್ಯಾಪಿಡ್ 480 ಹಾಗೂ ಆರ್ಟಿಪಿಸಿಆರ್ 241 ಮಂದಿ ಸೇರಿದಂತೆ 721 ಪರೀಕ್ಷೆಗೊಳಗಾಗಿದ್ದರು.
ಇದನ್ನೂ ಓದಿ:ವಿಜಯಪುರ ಭಾರಿ ಮಳೆಗೆ ಮನೆ ಕುಸಿದು ಬಾಲಕಿ ಸಾವು: ಕೃಷ್ಣಾ ನದಿಯಲ್ಲಿ ತೇಲಿಬಂತು ವ್ಯಕ್ತಿಯ ಶವ
65 ಮಂದಿ ಬಿಡುಗಡೆ:
ಮಂಡ್ಯ 25, ಮಳವಳ್ಳಿ 9, ಪಾಂಡವಪುರ 10, ಶ್ರೀರಂಗಪಟ್ಟಣ 8 ಹಾಗೂ ನಾಗಮಂಗಲದ 13 ಮಂದಿ ಸೇರಿದಂತೆ 65 ಕೊರೊನಾದಿಂದ ಮುಕ್ತರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೂ 8464 ಮಂದಿ ಗುಣಮುಖರಾಗಿದ್ದಾರೆ.
1759 ಸಕ್ರಿಯ ಪ್ರಕರಣಗಳು:
ಜಿಲ್ಲೆಯಲ್ಲಿ 1759 ಮಂದಿ ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಐಸೋಲೇಷನ್ನಲ್ಲಿ 623, ಖಾಸಗಿ ಆಸ್ಪತ್ರೆಗಳ ಐಸೋಲೇಷನ್ನಲ್ಲಿ 132, ಕೋವಿಡ್ ಕೇರ್ ಸೆಂಟರ್ 158 ಹಾಗೂ ಹೋಂ ಐಸೋಲೇಷನ್ನಲ್ಲಿ 846 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಟಿ.ಎನ್.ಧನಂಜಯ ತಿಳಿಸಿದ್ದಾರೆ.