ಮನ್ಸೂರ್‌ ಬಾಂಬ್‌ ಹೊಸ ಹೆಸರು ಲಿಂಕ್‌

ಐಎಂಎ ವಂಚನೆ ಪ್ರಕರಣಕ್ಕೆ ತಿರುವು

Team Udayavani, Jun 24, 2019, 6:00 AM IST

Mohammed-Mansoor-Khan-IMA

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಆರೋಪ ಪ್ರಕರಣ ಮತ್ತೂಂದು ತಿರುವು ಪಡೆದುಕೊಂಡಿದೆ. ಐಎಂಎ ಮಾಲೀಕ ಮೊಹಮದ್‌ ಮನ್ಸೂರ್‌ ಖಾನ್‌ನದು ಎನ್ನಲಾದ ಯೂಟ್ಯೂಬ್‌ ವಿಡಿಯೋದಲ್ಲಿ, ಪ್ರಮುಖ ರಾಜಕೀಯ ನಾಯಕರು ಮಾತ್ರವಲ್ಲದೆ ಉಗ್ರ ಚಟುವಟಿಕೆಯ ವ್ಯಕ್ತಿಯೂ ವಂಚನೆ ಪ್ರಕರಣದಲ್ಲಿ ಇದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾನೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಡಲಾಗಿರುವ ಮನ್ಸೂರ್‌ನದು ಎನ್ನಲಾದ ವಿಡಿಯೋದಲ್ಲಿ ಜೆಡಿಎಸ್‌ ಎಂಎಲ್ಸಿ ಶರವಣ, ರಾಜ್ಯ ಸಭೆ ಮಾಜಿ ಸದಸ್ಯ, ಕಾಂಗ್ರೆಸ್‌ ಮುಖಂಡ ರೆಹಮಾನ್‌ ಖಾನ್‌ ಸೇರಿದಂತೆ ಹಲವರಿಂದ ವಂಚನೆಯಾಗಿದೆ ಎಂಬ ಗಂಭೀರ ಆರೋಪಮಾಡಿದ್ದಾನೆ.

ಸಾಲ ಪಡೆಯುವ ಸಂಬಂಧ ಐಎಎಸ್‌ ಅಧಿಕಾರಿಯೊಬ್ಬರು 10 ಕೋಟಿ ರೂ. ಬೇಡಿಕೆಯಿಟ್ಟಿದ್ದರು. ಕಂಪೆನಿಯ ಮ್ಯಾನೇಜ್‌ಮೆಂಟ್ ಹಾಗೂ ಸಹಚರರೇ ನನಗೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿದ್ದಾನೆ.

ನನಗೆ ವಂಚನೆ ಮಾಡಿದವರು ಹಣ ಪಡೆದವರ ಹೆಸರುಗಳ ಪಟ್ಟಿ ನನ್ನ ಬಳಿಯಿದೆ. ನನ್ನ ಕುಟುಂಬ ಹಾಗೂ ನನಗೆ ಪ್ರಾಣಭೀತಿಯಿದೆ.ನನ್ನ ಕುಟುಂಬದ ಪ್ರಾಣ ರಕ್ಷಣೆ ಸಲುವಾಗಿ ಆ ಹೆಸರುಗಳನ್ನು ಈಗ ಬಹಿರಂಗಪಡಿಸುವುದಿಲ್ಲ. ಪೊಲೀಸ್‌ ವಿಚಾರಣೆ ಹಾಗೂ ನ್ಯಾಯಾಲಯದ ಮುಂದೆ ಎಲ್ಲವನ್ನೂ ಹೇಳುತ್ತೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾನೆ.

ನಾನು ಯಾವುದೇ ಪೋಂಜಿ ಸ್ಕೀಂ ನಡೆಸಿಲ್ಲ. ಇದು ಜನರ ಹಣವಾಗಿರುವುದರಿಂದ ಅದನ್ನು ಮರಳಿಸಬೇಕಿದೆ ಎಂದಿದ್ದಾನೆ.

ನಾನು ಭಾರತಕ್ಕೆ ವಾಪಾಸ್‌ ಬರಲು ಸಿದ್ಧನಿದ್ದೇನೆ. ಜೂನ್‌ 14ರಂದು ವಾಪಾಸ್‌ ಬರಲು ಬಂದಿದ್ದೆ. ಆದರೆ ನನ್ನ ಪಾಸ್‌ಪೋರ್ಟ್‌ ಜಪ್ತಿಯಾಗಿತ್ತು ಎಂದಿದ್ದಾನೆ.

ಐಎಂಎ ಕಂಪೆನಿ 13 ವರ್ಷಗಳಿಂದ 21 ಸಾವಿರ ಕುಟುಂಬಗಳಿಗೆ ಆದಾಯ ನೀಡುತ್ತಿದೆ. 1800 ಮಕ್ಕಳ ಶೈಕ್ಷಣಿಕ ಸೌಲಭ್ಯ ನೋಡಿಕೊಳ್ಳುತ್ತಿದೆ. 7300 ಮನೆಗಳಿಗೆ ರೇಷನ್‌ ನೀಡುತ್ತಿದೆ. ಐಎಂಎ ಇದುವರೆಗೂ 12 ಸಾವಿರ ಕೋಟಿ ರೂ. ಲಾಭ ಗಳಿಸಿದ್ದು, 2 ಸಾವಿರ ಕೋಟಿ ಕ್ಯಾಪಿಟಲ್ ಇನ್‌ವೆಸ್ಟ್‌ಮೆಂಟ್ ವಾಪಾಸ್‌ ನೀಡಿದ್ದೇವೆ.ನಮ್ಮ ಬಳಿ 1350 ಕೋಟಿ ರೂ.ಮೌಲ್ಯದ ಆಸ್ತಿಗಳಿವೆ. ಅದನ್ನು ಜನರಿಗೆ ಹಂಚಬೇಕು. ಶೇ 99ರಷ್ಟು ಜನರು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ.ನನ್ನ ಉದ್ಯಮದ ಕುಸಿತದ ಹಿಂದೆ ಕೇಂದ್ರ ರಾಜ್ಯಮಟ್ಟದ ಭ್ರಷ್ಟಾಚಾರಗಳು ನನ್ನನ್ನು ದಿವಾಳಿಯನ್ನಾಗಿಸಲು ಯತ್ನಿಸಿ ಯಶಸ್ವಿಯಾದವು ಎಂದಿದ್ದಾರೆ.

ಸತ್ಯವನ್ನು ಬಿಚ್ಚಿಡುತ್ತೇನೆ!: ‘ಅಲೋಕ್‌ ಕುಮಾರ್‌ ಬಳಿ ನಾನು ಮನವಿ ಮಾಡುತ್ತೇನೆ. ಅವರ ಮೇಲೆ ನನಗೆ ಭರವಸೆಯಿದೆ. ಅಲೋಕ್‌ ಕುಮಾರ್‌ ಅವರೇ…. (9902129090) ನಂಬರ್‌ಗೆ ಕರೆ ಮಾಡಿ. ನನಗೆ ವ್ಯವಸ್ಥೆಯ ಬಗ್ಗೆ ನಂಬಿಕೆಯಿದೆ, ನಾನು ವಾಪಾಸ್‌ ಬಂದು ನ್ಯಾಯ ಪಡೆಯುತ್ತೇನೆ, ಸತ್ಯವನ್ನು ಬಿಚ್ಚಿಡುತ್ತೇನೆ. ನಂತರ ಕಾನೂನು ಅದರ ಕೆಲಸ ಮಾಡುತ್ತದೆ. ಈ ಹಿಂದೆ ನಾನು ನಗರ ಪೊಲೀಸ್‌ ಆಯುಕ್ತರಿಗೆ ಕಳುಹಿಸಿದ್ದ ಆಡಿಯೋದಲ್ಲಿ ಕ್ಲಿಪ್ಪಿಂಗ್‌ನಲ್ಲಿ ನಮ್ಮ ಜೀವ ಹೇಗೆ ರಕ್ಷಣೆ ಮಾಡಿಕೊಂಡು ಪಲಾಯನಗೊಂಡೆವು ಎಂಬುದನ್ನು ಹೇಳಿದ್ದೇನೆ ಎಂದಿದ್ದಾರೆ.

ಜಮೀರ್‌ ನನಗೆ ಸಹಾಯ ಮಾಡಲು ಆಗೋಲ್ಲ !: ವಿಡಿಯೋದಲ್ಲಿ ಸಚಿವ ಜಮೀರ್‌ ಅಹ್ಮದ್‌ಖಾನ್‌ ಹೆಸರನ್ನು ಪ್ರಸ್ತಾಪಿಸಿರುವ ಮನ್ಸೂರ್‌, ” ನೀವು ಬನ್ನಿ ನಿಮ್ಮ ಜತೆಗೆ ನಾವಿದ್ದೇವೆ ಎಂದು ಜಮೀರ್‌ ಅಹ್ಮದ್‌ ಅವರು ಹೇಳಿರುವುದನ್ನು ಕೇಳಿದ್ದೇನೆ. ಆದರೆ, ಅವರು ನನಗೆ ಸಹಾಯ ಮಾಡಲು ಆಗುವುದಿಲ್ಲ. ಅದು ನನಗೆ ಗೊತ್ತಿದೆ” ಎಂದಿದ್ದಾನೆ.

ಯಾರ ಹೆಸರಿವೆ?

ಮನ್ಸೂರ್‌ನದು ಎನ್ನಲಾದ ವಿಡಿಯೋದಲ್ಲಿನ ಹೆಸರುಪಟ್ಟಿ ಇದು ರಾಜ್ಯ ಸಭೆಯ ಮಾಜಿ ಸದಸ್ಯರಾದ ಕೆ. ರೆಹಮಾನ್‌ ಖಾನ್‌, ಮೊಹಮದ್‌ ಉಬೈದುಲ್ಲಾ ಷರೀಪ್‌ ( ಕಾಂಗ್ರೆಸ್‌ ಕಾರ್ಯಕರ್ತ) ,ಮೊಹಮದ್‌ ಖಾಲೀದ್‌ ಅಹ್ಮದ್‌ (ಪತ್ರಕರ್ತ) , ‘ಉಗ್ರರೊಂದಿಗೆ ಸಂಬಂಧ ಹೊಂದಿದ್ದಾನೆ ಎನ್ನಲಾದ’ ಮುಕ್ತಿಯಾರ್‌ ಅಹ್ಮದ್‌ ಟಾಡಾ ,ಫೈರೋಜ್‌ ಅಬ್ದುಲ್ಲ ಸೇs್ ,ಪ್ರಸ್ಟೀಜ್‌ ಗ್ರೂಪ್‌ನ ಇರ್ಫಾನ್‌ ,ಜೆಡಿಎಸ್‌ ಎಂಎಲ್ಸಿ ಶರವಣ ,ಮುಫ್ತಿ ಇಫ್ತಿಕಾರ್‌ ಅಹ್ಮದ್‌ ಖಾಸ್ಮಿ ,ಶಂಶುದ್ದೀನ್‌,ಜೈನುಲ್ ಅಬಿದೀನ್‌
ಮನ್ಸೂರ್‌ ವಿಡಿಯೋ ಕುರಿ ತಾಗಿ ಸದ್ಯಕ್ಕೆ ಏನೂ ಕಮೆಂಟ್ ಮಾಡುವುದಿಲ್ಲ. ಪರಿಶೀಲನೆ ನಡೆಸಿ ಮಾತನಾಡುತ್ತೇನೆ.
-ಅಲೋಕ್‌ಕುಮಾರ್‌, ನಗರ ಪೊಲೀಸ್‌ ಆಯುಕ್ತ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.