ಮಾರ್ಕೋನಹಳ್ಳಿ ಜಲಾಶಯ ಭರ್ತಿ: ರೈತರಲ್ಲಿ ಮಂದಹಾಸ, ಜಲಾಶಯದ ಒಳಹರಿವು 2200 ಕ್ಯೂಸೆಕ್ಸ್
Team Udayavani, May 18, 2022, 9:24 PM IST
ಕುಣಿಗಲ್: ಇತಿಹಾಸ ಪ್ರಸಿದ್ದ ಮಾರ್ಕೋನಹಳ್ಳಿ ಜಲಾಶಯ ಮಳೆ ನೀರಿನಿಂದ ಭರ್ತಿಯಾಗಿ ಬುಧವಾರ ಕೋಡಿ ಬಿದ್ದು ರೈತ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಕಳೆದ ಹಲವು ದಿನಗಳಿಂದ ಸತತವಾಗಿ ಮಳೆಯಾಗುತ್ತಿರುವ ಕಾರಣ ಮಾರ್ಕೋನಹಳ್ಳಿ ಜಲಾಶಯದ ಮೇಲ್ಬಾಗದ ಕೆರೆಗಳಾದ ತುರುವೇಕೆರೆ ಮಲ್ಲಾಘಟ್ಟ ಕೆರೆ ಸೇರಿದಂತೆ ಹಲವಾರು ಕೆರೆಗಳು ತುಂಬಿಕೊಂಡು ಮಾರ್ಕೋನಹಳ್ಳಿಗೆ ನೀರು ಹರಿದು ಬರುತ್ತಿದೆ. ಮುಂಗಾರಿನ ಮಳೆ ಪ್ರಾರಂಭವಾಗುವ ಮುನ್ನವೇ ಮಾಕೋನಹಳ್ಳಿ ಜಲಾಶಯ ತುಂಬಿರುವುದು ರೈತರ ಮೋಗದಲ್ಲಿ ಸಂತಸ ಮೂಡಿದೆ,
ಎಚ್ಚರಿಕೆ : ಜಲಾಶಯದ ಸಾಮರ್ಥ್ಯ 2.4 ಟಿಎಂಸಿ ಇದ್ದು ಒಳಹರಿವು 2200 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಸ್ವಯಂ ಚಾಲಿತ ಸೈಫೋನ್ ಹಾಗೂ ಕೋಡಿಯಿಂದ ೨೦೦ ಕ್ಯೂಸೆಕ್ಸ್ ನೀರು ಹೊರ ಹರಿದು ಹೋಗುತ್ತಿದೆ. ದಿನವೂ ಮಳೆ ಆಗುತ್ತಿರುವ ಕಾರಣ ಹಾಗೂ ಮೇಲ್ಬಾಗದ ಎಲ್ಲಾ ಕೆರೆಗಳು ತುಂಬಿಕೊಂಡು ಮಾರ್ಕೋನಹಳ್ಳಿ ಜಲಾಶಯಕ್ಕೆ ಒಳ ಹರಿವು ಇನ್ನೂ ಹೆಚ್ಚಾಗುವ ಸಾಧ್ಯತೆ ಇರುವದರಿಂದ ನದಿ ಪಾತ್ರದ ಗ್ರಾಮಗಳ ಗ್ರಾಮಸ್ಥರು ಹಾಗೂ ಆಮೃತೂರು ಹೋಬಳಿ ಗ್ರಾಮಸ್ಥರುಗಳ ಎಚ್ಚರಿಕೆಯಿಂದ ಇರಬೇಕೆಂದು ಎಡೆಯೂರು ತಹಶೀಲ್ದಾರ್ ಮಹಬಲೇಶ್ವರ ಗ್ರಾಮಸ್ಥರಿಗೆ ಸೂಚನೆ ನೀಡಿದ್ದಾರೆ.
ಕಳೆದ ನಾಲ್ಕು ವರ್ಷದಿಂದಲೂ ಮಾರ್ಕೋನಹಳ್ಳಿ ಜಲಾಶಯ ಭರ್ತಿಯಾಗಿ ಕೋಡಿಯಾಗುತ್ತಿರುವುದು ಈ ಭಾಗದ ರೈತರ ಸಂತೋಷವನ್ನು ಇಮ್ಮೆಡಿಗೊಳಿಸಿದೆ.
ಸ್ವಭಾವಿಕವಾಗಿ ಜಲಾಶಯ ತಿಂಬಿರುವ ಜೊತೆಗೆ ಜಲಾಶಯದಲ್ಲಿ ರೈತರ ಬೆಳೆಗೆ ಕಳೆದ ವರ್ಷ ನೀರು ಬಿಟ್ಟು ಸ್ವಲ್ಪ ಪ್ರಮಾಣದಲ್ಲಿ ನೀರು ಖಾಲಿಯಾದರೂ ವರ್ಣನ ಕೃಪೆಯಿಂದ್ದಾಗಿ ಹಲವು ದಿನಗಳಿಂದ ಎಡೆ ಬಿಡದೇ ಸುರಿಯುತ್ತಿರುವ ಮಳೆಯಿದ್ದಾಗಿ ತುರುವೇಕೆರೆಯ ಹಲವು ಕೆರೆಗಳಿಂದ ಹಾಗೂ ಬಯಲಿನಿಂದ್ದಾದ ಸುಮಾರು ೨೨೦೦ ಕ್ಯೂಸೆಕ್ಸ್ ನೀರು ಜಲಾಶಯಕ್ಕೆ ಒಳ ಹರಿವು ಇದೆ, ಇದರಿಂದ ಈ ಭಾಗದ ರೈತರಿಗೆ ಹೆಚ್ಚು ಅನಕೂಲವಾಗಲಿದೆ ಎಂದು ರೈತರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಸ್ವಯಂ ಚಾಲಿತ ಎರಡು ಸೈಫೋನ್ ಹಾಗೂ ಕೋಡಿ ಮೂಲಕ ಜಲಾಶದಿಂದ ಹೋರ ಹೋಗುವ ದೃಶ್ಯ ಮನಮೋಹಕವಾಗಿದೆ.
ಇದನ್ನೂ ಓದಿ : ಟಿವಿಎಸ್ ನಿಂದ ಹೊಸ ಮಾದರಿಯ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಗಳ ಬಿಡುಗಡೆ
ಶಾಸಕರ ಹರ್ಷ : ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತದೊಂದಿಗೆ ಹೋರಾಟ ಅಥವಾ ಪ್ರಕೃತಿ ದಾಹಿಕವಾಗಿ ಸತತ ನಾಲ್ಕು ವರ್ಷಗಳ ಕಾಲ ಮಾರ್ಕೋನಹಳ್ಳಿ ಜಲಾಶಯ ತುಂಬಿರುವುದು ನನ್ನಗೆ ಅತಿ ಸಂತಸ ತಂದಿದೆ ಎಂದು ಪ್ರತಿಕ್ರಿಯಿಸಿದ ಶಾಸಕ ಡಾ.ಹೆಚ್.ಡಿ.ರಂಗನಾಥ್ ಮುಂಗಾರು ಮಳೆ ಪ್ರಾರಂಭವಾಗುವ ಮುನ್ನವೇ ತಾಲೂಕಿನ ಕೆಲವು ಕೆರೆ ಕಟ್ಟೆಗಳಿಗೆ ನೀರು ಹರಿದು ಬರುತ್ತಿದ್ದು ರೈತರಿಗೆ ವರದಾನವಾಗಲಿದೆ, ಜತೆಗೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಮಳೆ ವಿವರ : ಕಳೆದ ರಾತ್ರಿ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಕುಣಿಗಲ್ 73.3 ಮೀ.ಮೀ, ಹುಲಿಯೂರುದುರ್ಗ 37 ಮೀ.ಮೀ, ಸಂತೆಪೇಟೆ 43.2 ಮೀ.ಮೀ, ಅಮೃತೂರು 54.3 ಮೀ.ಮೀ, ಕೆ.ಹೊನ್ನಮಾಚನಹಳ್ಳಿ 43.2 ಮೀ.ಮೀ, ನಿಡಸಾಲೆ 28.4 ಮೀ.ಮೀ ಮಳೆಯಾಗಿದೆ ಅತ್ಯಧಿಕ ಮಳೆ ಕುಣಿಗಲ್ ಪಟ್ಟಣದಲ್ಲಿ ೭೩.೩ ಮೀ.ಮೀ ಮಳೆಯಾಗಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಸ್ವಗ್ರಾಮದಲ್ಲಿ ನಾಳೆ ಅಂತ್ಯಕ್ರಿಯೆ
ಕಾಂಗ್ರೆಸ್ ನಲ್ಲಿ ಕುರ್ಚಿಗಾಗಿ ಇಬ್ಬರು ನಾಯಕರ ಪೈಪೋಟಿ : ಸಚಿವ ಬಿ ಶ್ರೀರಾಮುಲು ಲೇವಡಿ
ಪೊಲೀಸರ ಮಿಂಚಿನ ಕಾರ್ಯಾಚರಣೆ: ಚಂದ್ರಶೇಖರ ಗುರೂಜಿ ಹಂತಕರ ಬಂಧನ
ಚಿಕ್ಕೋಡಿ: ಸಾಕಲಾಗುವುದಿಲ್ಲವೆಂದು ಮಗಳನ್ನು ಹತ್ಯೆಗೈದ ತಂದೆಗೆ ಜೀವಾವಧಿ ಶಿಕ್ಷೆ
ಮಳೆಯ ನಡುವೆಯೂ ವಿದ್ಯುತ್ ತಂತಿ ದುರಸ್ತಿಗೊಳಿಸಿ ಜೆಸ್ಕಾಂ ಸಿಬ್ಬಂದಿಗಳ ಕರ್ತವ್ಯ ಪ್ರಜ್ಞೆ